IPL 2022: ಐಪಿಎಲ್​ 2022ರ ಬಿಗ್ ಅಪ್ಡೇಡ್​: ಹೊಸ ತಂಡಗಳಿಗೆ ವಿಶೇಷ ಆಯ್ಕೆ

| Updated By: ಝಾಹಿರ್ ಯೂಸುಫ್

Updated on: Oct 14, 2021 | 10:21 PM

IPL 2022 New Teams: ಬಿಸಿಸಿಐ ಹೊಸ 2 ತಂಡಗಳಿಗೆ ಟೆಂಡರ್‌ಗೆ ಆಹ್ವಾನ ನೀಡಿದೆ. ಅಕ್ಟೋಬರ್ 20 ರೊಳಗೆ ಆಸಕ್ತಿದಾರರು ಹೊಸ ತಂಡಗಳಿಗಾಗಿ ಅರ್ಜಿ ಸಲ್ಲಿಸಬಹುದು.

IPL 2022: ಐಪಿಎಲ್​ 2022ರ ಬಿಗ್ ಅಪ್ಡೇಡ್​: ಹೊಸ ತಂಡಗಳಿಗೆ ವಿಶೇಷ ಆಯ್ಕೆ
ಹಾಗೆಯೇ ಯಾವುದೇ ಟ್ರಾನ್ಸ್​ಫರ್ ವಿಂಡೋ ಆಯ್ಕೆ ಕೂಡ ಇರುವುದಿಲ್ಲ. ಟ್ರಾನ್​ಫರ್ ವಿಂಡೋ ಅಂದರೆ ಆಟಗಾರರ ವರ್ಗಾವಣೆ. ಈ ಆಯ್ಕೆಯನ್ನು ನೀಡುವುದು ಸಾಮಾನ್ಯ ಹರಾಜಿಗೂ ಮುನ್ನ. ಅಂದರೆ ಮೆಗಾ ಹರಾಜು ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ಉಳಿದ ಎರಡು ವರ್ಷಗಳ ಅವಧಿಯಲ್ಲೂ ನಡೆಯುವ ಹರಾಜಿಗೂ ಮುನ್ನ ಬೇರೆ ತಂಡದಿಂದ ಆಟಗಾರರನ್ನು ವರ್ಗಾವಣೆ ಮಾಡಿಕೊಳ್ಳುವ ಆಯ್ಕೆ ಇರುತ್ತದೆ. ಹಾಗೆಯೇ ಐಪಿಎಲ್​ ಮೊದಲಾರ್ಧದ ಮುಕ್ತಾಯದ ಬಳಿಕ ಕೂಡ ಟ್ರಾನ್ಸ್​ಫರ್ ವಿಂಡೋ ಆಯ್ಕೆ ಇರುತ್ತದೆ. ಇದರ ಹೊರತಾಗಿ ಮೆಗಾ ಹರಾಜಿಗೂ ಮುನ್ನ ಯಾವುದೇ ಟ್ರಾನ್ಸ್​ಫರ್ ಆಯ್ಕೆ ಇರುವುದಿಲ್ಲ.
Follow us on

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ (IPL 2021) 14 ಮುಕ್ತಾಯ ಹಂತಕ್ಕೆ ಬಂದು ನಿಂತಿದೆ. ಇದರ ಬೆನ್ನಲ್ಲೇ ಬಿಸಿಸಿಐ ಮುಂದಿನ ಸೀಸನ್ ಐಪಿಎಲ್​ಗಾಗಿ (IPL 2022) ಸಿದ್ದತೆಗಳನ್ನು ಆರಂಭಿಸಿದೆ. ಈಗಾಗಲೇ ಘೋಷಿಸಿರುವಂತೆ ಮುಂದಿನ ಸೀಸನ್​ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿದೆ. ಆದರೆ ಅದಕ್ಕೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಇದಕ್ಕೆ ಬೇಕಾದ ರೂಪುರೇಷೆಗಳನ್ನು ಸಿದ್ಧಪಡಿಸುತ್ತಿದೆ. ಅದರಂತೆ ಹೊಸ ತಂಡಗಳಿಗಾಗಿ ಹರಾಜಿಗೂ ಮುನ್ನ ಆಟಗಾರರ ಡ್ರಾಫ್ಟ್​ಗಾಗಿ ವಿಶೇಷ ಆಯ್ಕೆಯನ್ನು ನೀಡಲು ಬಿಸಿಸಿಐ ಚರ್ಚೆ ನಡೆಸಿದೆ ಎಂದು ವರದಿಯಾಗಿದೆ.

ಅಂದರೆ ಮೆಗಾ ಹರಾಜಿಗೂ ಮುನ್ನ ಪ್ರಸ್ತುತ ಇರುವ ತಂಡಗಳಿಗೆ ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಆಯ್ಕೆ ಇರಲಿದೆ. ಆದರೆ ಹೊಸ ತಂಡಗಳ ಸೇರ್ಪಡೆಯಾದರೆ ಅವರಿಗೂ ಈ ಆಯ್ಕೆಯನ್ನು ನೀಡಬೇಕಾಗುತ್ತದೆ. ಅದರಂತೆ ಬಿಸಿಸಿಐ ಹೊಸ ಫ್ರಾಂಚೈಸಿಗಳಿಗಾಗಿ ಹರಾಜಿಗೂ ಮುನ್ನ ವಿಶೇಷ ಡ್ರಾಫ್ಟ್ ಆಯ್ಕೆಯನ್ನು ನೀಡಲು ನಿರ್ಧರಿಸಿದೆ. ಇದರಿಂದ ಪ್ರಾಂಚೈಸಿಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬಹುದು.

ಎಷ್ಟು ಆಟಗಾರರನ್ನು ಆಯ್ಕೆ ಮಾಡಬಹುದು?
ಪ್ರಸ್ತುತ ಮಾಹಿತಿ ಪ್ರಕಾರ ‘ವಿಶೇಷ ಆಯ್ಕೆ’ಗಳ ಸಂಖ್ಯೆಯನ್ನು ಇನ್ನೂ ನಿರ್ಧರಿಸಲಾಗಿಲ್ಲ. ಇದಾಗ್ಯೂ ಎರಡು ಫ್ರಾಂಚೈಸಿಗಳಿಗೆ ತಲಾ ಮೂರು ಆಟಗಾರರನ್ನು ಆಯ್ಕೆ ಮಾಡಬಹುದು. ಇದು ಪ್ರಸ್ತುತ ತಂಡಗಳಿಗೆ ನೀಡಲಾಗುವ ರಿಟೈನ್ ಆಯ್ಕೆಯನ್ನು ಅವಲಂಭಿಸಿರುತ್ತದೆ. ಅಂದರೆ ಈಗಿರುವ 8 ತಂಡಗಳಿಗೆ ತಲಾ 3 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ನೀಡಿದರೆ, ಹೊಸ ಫ್ರಾಂಚೈಸಿಗಳಿಗೆ ಹರಾಜಿಗಾಗಿ ನೋಂದಾಯಿತ ಆಟಗಾರರ ಪಟ್ಟಿಯಿಂದ 3 ಆಟಗಾರರನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಇರಲಿದೆ.

ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು?
ಸದ್ಯ ಮಾಹಿತಿ ಪ್ರಕಾರ, ಎಂಟು ಫ್ರಾಂಚೈಸಿಗಳಿಗೆ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಿದೆ ಎಂದು ತಿಳಿದು ಬಂದಿದೆ. ಅಂದರೆ ಮೂವರು ಭಾರತೀಯ ಆಟಗಾರರು ಮತ್ತು ಒಬ್ಬ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಬಹುದು. ಅಥವಾ ಇಬ್ಬರು ಭಾರತೀಯರು ಮತ್ತು ಇಬ್ಬರು ವಿದೇಶಿಯರು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಬಹುದು. ಒಂದು ವೇಳೆ ನಾಲ್ಕು ಆಟಗಾರರನ್ನು ರಿಟೈನ್ ಮಾಡುವ ಅವಕಾಶ ನೀಡಿದರೆ, ರೈಟ್ ಟು ಮ್ಯಾಚ್ (RTM) ಕಾರ್ಡ್‌ಗಳನ್ನು ರದ್ದುಗೊಳಿಸಬಹುದು.

10 ತಂಡಗಳು:
ಬಿಸಿಸಿಐ ಹೊಸ 2 ತಂಡಗಳಿಗೆ ಟೆಂಡರ್‌ಗೆ ಆಹ್ವಾನ ನೀಡಿದೆ. ಅಕ್ಟೋಬರ್ 20 ರೊಳಗೆ ಆಸಕ್ತಿದಾರರು ಹೊಸ ತಂಡಗಳಿಗಾಗಿ ಅರ್ಜಿ ಸಲ್ಲಿಸಬಹುದು. ಆ ಬಳಿಕ ತಂಡಗಳ ಬಿಡ್ಡಿಂಗ್ ನಡೆಯಲಿದೆ. ಇನ್ನು ಪ್ರತಿ ತಂಡಗಳಿಗೆ ಬಿಸಿಸಿಐ 1800 ಕೋಟಿ ರೂ. ನಿಗದಿಪಡಿಸಲಾಗಿದ್ದು, ಅದರಂತೆ ಎರಡು ತಂಡಗಳ ಹರಾಜಿನ ಮೂಲಕ 5000 ಕೋಟಿ ಆದಾಯಗಳಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ ಎಂದು ತಿಳಿದು ಬಂದಿದೆ.

2011 ರ ಐಪಿಎಲ್​ನಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿದಿದ್ದವು. ಡೆಕ್ಕನ್ ಚಾರ್ಜರ್ಸ್, ಡೆಲ್ಲಿ ಡೇರ್ ಡೆವಿಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್ ಇಂಡಿಯಾ, ಕೋಲ್ಕತಾ ನೈಟ್ ರೈಡರ್ಸ್, ಕೊಚ್ಚಿ ಟಸ್ಕರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಿದ್ದವು. ಇದೀಗ ಮತ್ತೊಮ್ಮೆ 10 ತಂಡಗಳನ್ನು ಪರಿಚಯಿಸಲು ಬಿಸಿಸಿಐ ಮುಂದಾಗಿದೆ.

ಇದನ್ನೂ ಓದಿ: 1985 ರಿಂದ 2021: 25 ಕ್ಕೂ ಹೆಚ್ಚು ಬಾರಿ ಬದಲಾದ ಟೀಮ್ ಇಂಡಿಯಾ ಜೆರ್ಸಿ

(BCCI could introduce ‘special picks’ for two new franchises)