ಐಪಿಎಲ್ ಮಾಧ್ಯಮ ಹಕ್ಕು ಖರೀದಿಗೆ ಟೆಂಡರ್‌ ಕರೆದ ಬಿಸಿಸಿಐ! ಕ್ರಿಕೆಟ್ ಬಿಗ್​ಬಾಸ್​ಗಳ ಆತುರದ ನಿರ್ಧಾರಕ್ಕೆ ಕಾರಣವೇನು?

| Updated By: ಪೃಥ್ವಿಶಂಕರ

Updated on: Sep 29, 2021 | 4:22 PM

IPL Media Rights: 2017 ರಲ್ಲಿ, ಅವರು 16,000 ಕೋಟಿ ರೂ.ಗಳಿಗಿಂತ ಹೆಚ್ಚು ಖರ್ಚು ಮಾಡುವ ಮೂಲಕ 2022 ರವರೆಗೆ ಮಾಧ್ಯಮ ಹಕ್ಕುಗಳನ್ನು ಪಡೆದುಕೊಂಡಿದ್ದರು. ಮಾಧ್ಯಮ ಹಕ್ಕುಗಳ ಒತ್ತಡದಿಂದಾಗಿ ಬಿಸಿಸಿಐ ಕೊರೊನಾ ಅವಧಿಯಲ್ಲಿ ಐಪಿಎಲ್ ಅನ್ನು ರದ್ದುಗೊಳಿಸಲಿಲ್ಲ.

ಐಪಿಎಲ್ ಮಾಧ್ಯಮ ಹಕ್ಕು ಖರೀದಿಗೆ ಟೆಂಡರ್‌ ಕರೆದ ಬಿಸಿಸಿಐ! ಕ್ರಿಕೆಟ್ ಬಿಗ್​ಬಾಸ್​ಗಳ ಆತುರದ ನಿರ್ಧಾರಕ್ಕೆ ಕಾರಣವೇನು?
ಪ್ರಾತಿನಿಧಿಕ ಚಿತ್ರ
Follow us on

ಐಪಿಎಲ್ 2021 ರ ಮಧ್ಯದಲ್ಲಿ ಈ ಪಂದ್ಯಾವಳಿಯ ಮಾಧ್ಯಮ ಹಕ್ಕುಗಳನ್ನು ಮಾರಾಟ ಮಾಡಲು ಟೆಂಡರ್ ಕರೆಯಲು ಬಿಸಿಸಿಐ ಮುಂದಾಗಿದೆ. ಭಾರತೀಯ ಮಂಡಳಿಯು ಅಕ್ಟೋಬರ್ 25 ರಂದು 2023 ರಿಂದ 2027 ಐಪಿಎಲ್​ಗೆ ಮಾಧ್ಯಮ ಹಕ್ಕುಗಳಿಗಾಗಿ ಟೆಂಡರ್ ಕರೆದಿದೆ. ಈ ನಿರ್ಧಾರ ಸಂಚಲನ ಮೂಡಿಸಿದೆ. ಐಪಿಎಲ್​ನ ಮಾಧ್ಯಮ ಹಕ್ಕುಗಳನ್ನು ಪಡೆಯಲು ದೇಶ ಮತ್ತು ವಿದೇಶಗಳ ಕಂಪನಿಗಳು ಹೆಚ್ಚಿನ ಆಸಕ್ತಿವಹಿಸಿವೆ. ಇದೀಗ ಸ್ಟಾರ್ ಇಂಡಿಯಾ ಐಪಿಎಲ್ ಹಕ್ಕುಗಳನ್ನು ಹೊಂದಿದೆ. 2017 ರಲ್ಲಿ, ಅವರು 16,000 ಕೋಟಿ ರೂ.ಗಳಿಗಿಂತ ಹೆಚ್ಚು ಖರ್ಚು ಮಾಡುವ ಮೂಲಕ 2022 ರವರೆಗೆ ಮಾಧ್ಯಮ ಹಕ್ಕುಗಳನ್ನು ಪಡೆದುಕೊಂಡಿದ್ದರು. ಮಾಧ್ಯಮ ಹಕ್ಕುಗಳ ಒತ್ತಡದಿಂದಾಗಿ ಬಿಸಿಸಿಐ ಕೊರೊನಾ ಅವಧಿಯಲ್ಲಿ ಐಪಿಎಲ್ ಅನ್ನು ರದ್ದುಗೊಳಿಸಲಿಲ್ಲ. ಈಗ ಹೊಸ ಮಾಧ್ಯಮ ಹಕ್ಕುಗಳಿಗಾಗಿ ಪ್ರಸಾರಕರ ನಡುವೆ ಸ್ಪರ್ಧೆ ನಡೆಯಲಿದೆ. ಸ್ಟಾರ್ ಇಂಡಿಯಾ ಜೊತೆಗೆ, ಸೋನಿ-ಜಿ, ಅಮೆಜಾನ್ ನಂತಹ ಕಂಪನಿಗಳು ಐಪಿಎಲ್ ಹಕ್ಕುಗಳ ರೇಸ್​ನಲ್ಲಿರುತ್ತವೆ. ಇವುಗಳ ಜೊತೆಗೆ, ರಿಲಯನ್ಸ್ ಕೂಡ ಕ್ಲೈಮ್ ಮಾಡಬಹುದು.

ಐಪಿಎಲ್ ಹಕ್ಕುಗಳನ್ನು ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಇದನ್ನು ಐದು ವರ್ಷಗಳ ಅವಧಿಗೆ ನೀಡಲಾಗುತ್ತದೆ. ಐಪಿಎಲ್‌ನ ಮಾಧ್ಯಮ ಹಕ್ಕುಗಳನ್ನು ಹಲವು ಸಣ್ಣ ಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಅಡಿಯಲ್ಲಿ, ಭಾರತದಲ್ಲಿ ಪ್ರಸಾರ ಹಕ್ಕುಗಳು, ಜಾಗತಿಕ ಪ್ರಸಾರ, ಟಿವಿ ಹಕ್ಕುಗಳು ಮತ್ತು ಡಿಜಿಟಲ್ ಹಕ್ಕುಗಳಿಗಾಗಿ ಬಿಡ್ಡಿಂಗ್ ಮಾಡಲಾಗುತ್ತದೆ. ಕಂಪನಿಗಳು ಇವುಗಳನ್ನು ಪ್ರತ್ಯೇಕವಾಗಿ ಬಿಡ್ ಮಾಡಬಹುದು ಮತ್ತು ಒಟ್ಟಾಗಿ ಎಲ್ಲಾ ಹಕ್ಕುಗಳನ್ನು ಕೂಡ ಖರೀದಿಸಬಹುದು. ಪ್ರಸ್ತುತ, ಐಪಿಎಲ್ ಪಂದ್ಯದ ಪ್ರಸಾರ ಹಕ್ಕುಗಳ ವೆಚ್ಚ 54.5 ಕೋಟಿ ರೂ. ಸ್ಟಾರ್ ಇಂಡಿಯಾ ಬಿಸಿಸಿಐಗೆ ಇಷ್ಟು ಹಣವನ್ನು ಮಾತ್ರ ನೀಡುತ್ತಿದೆ. ಇದು ಮುಂದಿನ ಟೆಂಡರ್‌ಗೆ ಮೂಲ ಬೆಲೆಯಾಗಿರುತ್ತದೆ ಎಂದು ನಂಬಲಾಗಿದೆ.

ಐಸಿಸಿಗೆ ಹೆದರಿತಾ ಬಿಸಿಸಿಐ?
ಏತನ್ಮಧ್ಯೆ, ಐಪಿಎಲ್ ಹಕ್ಕುಗಳ ಟೆಂಡರ್ ಘೋಷಣೆಯ ಬಗ್ಗೆ ವಿಭಿನ್ನ ಊಹಾಪೋಹಗಳು ಕೇಳಿಬರುತ್ತಿವೆ. ಇದರ ಅಡಿಯಲ್ಲಿ, ಐಸಿಸಿಯ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದೆ. ವಾಸ್ತವವಾಗಿ, ಐಸಿಸಿ ಕೆಲವು ಸಮಯದ ಹಿಂದೆ 2024 ರಿಂದ 2031 ರ ಅವಧಿಯಲ್ಲಿ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಿತ್ತು. ಐಸಿಸಿ ಪ್ರತಿ ವರ್ಷ 2024 ಮತ್ತು 2031 ರ ನಡುವೆ ಜಾಗತಿಕ ಪಂದ್ಯಾವಳಿಯನ್ನು ನಡೆಸಲು ಯೋಜಿಸಿದೆ. ಈ ಮೂಲಕ, ಅವರು ತಮ್ಮ ಪ್ರಸಾರ ಹಕ್ಕುಗಳಿಗಾಗಿ ಭಾರೀ ಮೊತ್ತವನ್ನು ನಿರೀಕ್ಷಿಸುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ, ಬಿಸಿಸಿಐ, ಒಂದು ದೊಡ್ಡ ಪ್ರಮಾಣದ ಹಣವನ್ನು ಕಳೆದುಕೊಳ್ಳಬಹುದು ಎಂದು ಹೆದರಿ, ಒಂದು ವರ್ಷದ ಹಿಂದೆ ಮಾಧ್ಯಮ ಹಕ್ಕುಗಳಿಗಾಗಿ ಟೆಂಡರ್ ತೆಗೆದುಕೊಳ್ಳಲು ನಿರ್ಧರಿಸಿತು. ಐಸಿಸಿಯ ಮುಂದಿನ ಚಕ್ರವು 2023 ರಿಂದ ಆರಂಭವಾಗಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಈ ವಿಷಯಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಿದೆ. ಹೀಗಾಗಿ ಬಿಸಿಸಿಐ ತನಗಾಗುವ ನಷ್ಟವನ್ನು ತಡೆಯಲು ಈ ನಿರ್ಧಾರ ತೆಗೆದುಕೊಂಡಿದೆ ಎಂಬುದು ಕೆಲವರ ವಾದವಾಗಿದೆ.