AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2021 Video: ರಾಹುಲ್ ರನೌಟ್…ಕ್ರೀಡಾಸ್ಪೂರ್ತಿ ಮೆರೆದು ನಾಟೌಟ್ ಎಂದ ರೋಹಿತ್ ಶರ್ಮಾ

IPL 2021 Video: ಈ ಗೆಲುವಿನ ಹೊರತಾಗಿ ಮುಂಬೈ-ಪಂಜಾಬ್ ನಡುವಣ ಪಂದ್ಯವು ಎಲ್ಲರ ಗಮನ ಸೆಳೆದಿದ್ದು ರೋಹಿತ್ ಶರ್ಮಾ ಅವರ ನಡೆಯಿಂದ ಎಂಬುದು ವಿಶೇಷ.

IPL 2021 Video: ರಾಹುಲ್ ರನೌಟ್...ಕ್ರೀಡಾಸ್ಪೂರ್ತಿ ಮೆರೆದು ನಾಟೌಟ್ ಎಂದ ರೋಹಿತ್ ಶರ್ಮಾ
PBKS-MI
TV9 Web
| Edited By: |

Updated on: Sep 29, 2021 | 5:59 PM

Share

ಐಪಿಎಲ್​ನ (IPL 2021) 42ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ (MI vs PBKS) ಮುಖಾಮಖಿಯಾಗಿತ್ತು. ಈ ಪಂದ್ಯದಲ್ಲಿ ಕೆಎಲ್ ರಾಹುಲ್ (KL Rahul) ಪಡೆಯನ್ನು 6 ವಿಕೆಟ್​ಗಳಿಂದ ಮಣಿಸುವ ಮೂಲಕ ರೋಹಿತ್ ಶರ್ಮಾ (Rohit Sharma) ಪಡೆ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನ ಹೊರತಾಗಿ ಮುಂಬೈ-ಪಂಜಾಬ್ ನಡುವಣ ಪಂದ್ಯವು ಎಲ್ಲರ ಗಮನ ಸೆಳೆದಿದ್ದು ರೋಹಿತ್ ಶರ್ಮಾ ಅವರ ನಡೆಯಿಂದ ಎಂಬುದು ವಿಶೇಷ. ಹೌದು, ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಪಂಜಾಬ್ ಕಿಂಗ್ಸ್​ ಪರ ಕೆಎಲ್ ರಾಹುಲ್-ಮಂದೀಪ್ ಸಿಂಗ್ ಇನಿಂಗ್ಸ್​ ಆರಂಭಿಸಿದ್ದರು. ಮಂದೀಪ್ ಸಿಂಗ್ ಔಟಾದ ಬಳಿಕ ಕ್ರೀಸ್​ಗೆ ಆಗಮಿಸಿದ್ದು ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್.

ಇತ್ತ 6ನೇ ಓವರ್​ ಎಸೆದ ಕೃನಾಲ್ ಪಾಂಡ್ಯ ಎಸೆತಕ್ಕೆ ಸ್ಟ್ರೈಕ್​ನಲ್ಲಿದ್ದ ಕ್ರಿಸ್ ಗೇಲ್ ಭರ್ಜರಿ ಶಾಟ್ ಬಾರಿಸಿದ್ದರು. ಆದರೆ ಚೆಂಡು ನೇರವಾಗಿ ನಾನ್ ಸ್ಟ್ರೈಕ್ ಎಂಡ್ ನಲ್ಲಿದ್ದ ಕೆಎಲ್ ರಾಹುಲ್​ ಕಾಲಿಗೆ ಬಲವಾಗಿ ಬಡಿದು ಕೃನಾಲ್ ಪಾಂಡ್ಯ ಕೈ ಸೇರಿತು. ಇತ್ತ ರನ್​ಗಾಗಿ ಓಡಲು ಮುಂದಾಗಿದ್ದ ರಾಹುಲ್ ಅವರನ್ನು ಪಾಂಡ್ಯ ರನೌಟ್ ಮಾಡಿದರು. ಅಲ್ಲದೆ ಅಂಪೈರ್​ಗೆ ಬಲವಾದ ಮನವಿ ಮಾಡಿದ್ದರು.

ಅಷ್ಟರಲ್ಲೇ ಧಾವಿಸಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮನವಿಯನ್ನು ಹಿಂಪಡೆಯಲು ಕೃನಾಲ್ ಪಾಂಡ್ಯಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಮೂರನೇ ಅಂಪೈರ್​ಗೆ ಮನವಿ ಮಾಡದಂತೆ ಅಂಪೈರ್​ಗೆ ಸೂಚಿಸಿದ್ದಾರೆ. ರೋಹಿತ್ ಅವರ ಈ ಕ್ರೀಡಾ ಸ್ಪೂರ್ತಿಯ ನಡೆಗೆ ಥಂಬ್ಸ್ ಅಪ್​ನೊಂದಿಗೆ ಕೆಎಲ್ ರಾಹುಲ್ ಮೆಚ್ಚುಗೆ ಸೂಚಿಸಿದರು. ರೋಹಿತ್ ಶರ್ಮಾ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣ, ಚೆಂಡು ಬಲವಾಗಿ ಕೆಎಲ್ ರಾಹುಲ್​ ಕಾಲಿಗೆ ಬಡಿದಿರುವುದು. ಇದರಿಂದಾಗಿ ರಾಹುಲ್ ಕ್ರೀಸ್​ಗೆ ಹಿಂತಿರುಗಲು ಸಾಧ್ಯವಾಗಿರಲಿಲ್ಲ. ಹಾಗಾಗಿ ರನೌಟ್ ಅವಕಾಶವನ್ನು ಕೈ ಬಿಟ್ಟು ರೋಹಿತ್ ಶರ್ಮಾ ಕ್ರೀಡಾಸ್ಪೂರ್ತಿಯನ್ನು ಎತ್ತಿ ಹಿಡಿದಿದ್ದರು. ಇದೀಗ ರೋಹಿತ್ ಶರ್ಮಾ ಅವರ ಈ ಕ್ರೀಡಾ ಮನೋಭಾವದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಮುಂಬೈ ಇಂಡಿಯನ್ಸ್​ ನಾಯಕನ ನಡೆಗೆ ಮೆಚ್ಚುಗೆಗಳ ಮಹಾಪೂರ ಹರಿದು ಬರುತ್ತಿದೆ.

ಇದನ್ನೂ ಓದಿ: IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB

ಇದನ್ನೂ ಓದಿ: IPL 2021: RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು ಇವರೇ..!

ಇದನ್ನೂ ಓದಿ: Crime News: ತಾಯಿಗೆ ಅನೈತಿಕ ಸಂಬಂಧ: ಅದನ್ನೇ ಬಂಡವಾಳ ಮಾಡಿಕೊಂಡ ಮಗಳು

ಇದನ್ನೂ ಓದಿ: Mumbai Indians: ಸಾಲು ಸಾಲು ಪಂದ್ಯ ಸೋತು ಮುಂಬೈ ಪ್ಲೇ ಆಫ್ ಪ್ರವೇಶಿಸಿತ್ತು..!

(Ipl 2021 rohit sharma showing sportsmanship on punjab kings captain kl rahul run out)

Follow Us
Web contact
Web contact

TV9 Kannada

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​