IPL 2021: ಇದು ಅಂತಿಂಥ ಗೆಲುವಲ್ಲ…ಮುಂಬೈ ದಾಖಲೆಯನ್ನು ಅಳಿಸಿ ಹಾಕಿದ RCB
IPL 2021- RCB vs MI: ಕಳೆದ 13 ಸೀಸನ್ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೀಸನ್ವೊಂದರಲ್ಲಿ ಎರಡು ಬಾರಿ ಸೋಲಿಸಲು ಆರ್ಸಿಬಿಗೆ ಸಾಧ್ಯವಾಗಿರಲಿಲ್ಲ.
Updated on: Sep 27, 2021 | 2:33 PM

ಮುಂಬೈ ಇಂಡಿಯನ್ಸ್ ವಿರುದ್ದ ಆರ್‌ಸಿಬಿ ಗೆಲುವು ಸಾಧಿಸಿದೆ. ಆದರೆ ಇದು ಅಂತಿಂಥ ಗೆಲುವಲ್ಲ ಎಂಬುದು ವಿಶೇಷ. ಏಕೆಂದರೆ ಐಪಿಎಲ್ನಲ್ಲಿ ಬಲಿಷ್ಠ ತಂಡವೆಂದೇ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಈ ಬಾರಿ ಆರ್‌ಸಿಬಿ ವಿರುದ್ದ ಹೀನಾಯ ಸೋಲನುಭವಿಸಿದೆ. ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಆರ್‌ಸಿಬಿ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅಬ್ಬರದ ಅರ್ಧಶತಕದ ನೆರವಿನಿಂದ 165 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು.

ಪ್ಲೇಆಫ್ಗೆ ಎಂಟ್ರಿಕೊಟ್ಟ ಆರ್‌ಸಿಬಿ

ಕಳೆದ 13 ಸೀಸನ್ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೀಸನ್ವೊಂದರಲ್ಲಿ ಎರಡು ಬಾರಿ ಸೋಲಿಸಲು ಆರ್ಸಿಬಿಗೆ ಸಾಧ್ಯವಾಗಿರಲಿಲ್ಲ. ಇದೀಗ ಈ ಬಾರಿಯ ಐಪಿಎಲ್ನಲ್ಲಿ ಎರಡು ಸಲ ಸೋಲಿನ ರುಚಿ ತೋರಿಸುವ ಮೂಲಕ ಆರ್‌ಸಿಬಿ ಹೊಸ ಸಾಧನೆ ಮಾಡಿದೆ. ಇದಕ್ಕೂ ಮುನ್ನ ಮೊದಲಾರ್ಧದಲ್ಲಿ ಆರ್‌ಸಿಬಿ ಮುಂಬೈ ವಿರುದ್ದ 2 ವಿಕೆಟ್ಗಳ ರೋಚಕ ಜಯ ಸಾಧಿಸಿತ್ತು. ಇದೀಗ 54 ರನ್ಗಳ ಜಯದೊಂದಿಗೆ ಮುಂಬೈ ತಂಡವನ್ನು ಸೀಸನ್ವೊಂದರಲ್ಲಿ 2 ಬಾರಿ ಸೋಲಿಸಿದೆ. ಅಷ್ಟೇ ಅಲ್ಲದೆ ಈ ಸಲ ಆಲೌಟ್ ಮಾಡುವ ಮೂಲಕ ಆರ್‌ಸಿಬಿ ಮುಂಬೈ ತಂಡದ ದೀರ್ಘಕಾಲದ ದಾಖಲೆಯನ್ನು ಅಳಿಸಿಹಾಕಿದೆ.

ಹೌದು, ಕಳೆದ 14 ವರ್ಷದಿಂದ ಐಪಿಎಲ್ನಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ 28 ಬಾರಿ ಮುಖಾಮುಖಿಯಾಗಿತ್ತು. ಆದರೆ ಒಮ್ಮೆಯೂ ಕೂಡ ಆರ್‌ಸಿಬಿ ಬೌಲರುಗಳಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಆಲೌಟ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ದುಬೈನಲ್ಲಿ ನಡೆದ ಐಪಿಎಲ್ನ 39ನೇ ಪಂದ್ಯದಲ್ಲಿ ಹರ್ಷಲ್ ಪಟೇಲ್ ಹ್ಯಾಟ್ರಿಕ್ ಹಾಗೂ ಯುಜುವೇಂದ್ರ ಚಹಲ್ ಸ್ಪಿನ್ ಮ್ಯಾಜಿಕ್ನೊಂದಿಗೆ ಆರ್‌ಸಿಬಿ ಮುಂಬೈ ಇಂಡಿಯನ್ಸ್ ತಂಡವನ್ನು ಆಲೌಟ್ ಮಾಡಿದೆ.

RCB



















