IND vs ZIM: ಟೀಮ್ ಇಂಡಿಯಾದಿಂದ ಮೂವರು ಔಟ್: ಯುವ ಆಟಗಾರರು ಇನ್

|

Updated on: Jul 02, 2024 | 2:57 PM

India tour of Zimbabwe: ಭಾರತ ಮತ್ತು ಝಿಂಬಾಬ್ವೆ ನಡುವಣ ಟಿ20 ಸರಣಿಯು ಜುಲೈ 6 ರಿಂದ ಶುರುವಾಗಲಿದೆ. ಹರಾರೆಯಲ್ಲಿ ನಡೆಯಲಿರುವ 5 ಪಂದ್ಯಗಳ ಈ ಸರಣಿಯ ಮೊದಲೆರಡು ಪಂದ್ಯಗಳು ಜುಲೈ 6 ಮತ್ತು ಜುಲೈ 7 ರಂದು ನಡೆಯಲಿದೆ. ಇನ್ನು ಮೂರನೇ ಪಂದ್ಯವು ಜುಲೈ 10 ರಂದು ನಡೆದರೆ, ಕೊನೆಯ ಎರಡು ಪಂದ್ಯಗಳು ಜುಲೈ 13 ಮತ್ತು 14 ರಂದು ಜರುಗಲಿದೆ.

IND vs ZIM: ಟೀಮ್ ಇಂಡಿಯಾದಿಂದ ಮೂವರು ಔಟ್: ಯುವ ಆಟಗಾರರು ಇನ್
Team India
Follow us on

ಝಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್, ಶಿವಂ ದುಬೆ ಹಾಗೂ ಯಶಸ್ವಿ ಜೈಸ್ವಾಲ್ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಈ ಮೂವರು ಆಟಗಾರರು ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದರು. ಅಲ್ಲದೆ ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ (Team India)  ಆಟಗಾರರು ಭಾರತಕ್ಕೆ ಮರಳದ ಕಾರಣ ಇದೀಗ ಈ ಮೂವರನ್ನು ಝಿಂಬಾಬ್ವೆ ವಿರುದ್ಧದ ಮೊದಲೆರಡು ಪಂದ್ಯಗಳಿಂದ ಕೈ ಬಿಡಲಾಗಿದೆ.

ಟೀಮ್ ಇಂಡಿಯಾ ಭಾರತಕ್ಕೆ ಹಿಂತಿರುಗದಿರಲು ಕಾರಣವೇನು?

ಟಿ20 ವಿಶ್ವಕಪ್ ಮುಗಿದು ಎರಡು ದಿನಗಳು ಕಳೆದಿವೆ. ಇದಾಗ್ಯೂ ಭಾರತ ತಂಡದ ಆಟಗಾರರು ಇನ್ನೂ ಸಹ ತವರಿಗೆ ಹಿಂತಿರುಗಿಲ್ಲ. ಇದಕ್ಕೆ ಕಾರಣ ಬಾರ್ಬಡೋಸ್​ನಲ್ಲಿ ಚಂಡಮಾರುತದೊಂದಿಗೆ ಭಾರೀ ಮಳೆಯಾಗುತ್ತಿರುವುದು. ಕೆರಿಬಿಯನ್ ದ್ವೀಪದಲ್ಲಿ  ಭಾರೀ ಮಳೆಯಾಗುತ್ತಿದ್ದು, ಹೀಗಾಗಿ ವಿಮಾನಯಾನ ಸೇವೆಗಳು ಬಂದ್ ಆಗಿವೆ. ಅತ್ತ ವಿಮಾನ ನಿಲ್ದಾಣಗಳು ಮುಚ್ಚಿರುವ ಕಾರಣ ಭಾರತೀಯ ಆಟಗಾರರಿಗೆ ತವರಿಗೆ ಮರಳಲು ಸಾಧ್ಯವಾಗಿಲ್ಲ.

ಹೀಗಾಗಿ ಝಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್, ಶಿವಂ ದುಬೆ ಹಾಗೂ ಯಶಸ್ವಿ ಜೈಸ್ವಾಲ್ ಭಾರತ ಟಿ20 ತಂಡವನ್ನು ಕೂಡಿಕೊಳ್ಳುವುದು ತಡವಾಗಲಿದೆ. ಹೀಗಾಗಿ ಮೊದಲೆರಡು ಪಂದ್ಯಗಳಿಗೆ ಬದಲಿ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಬದಲಿ ಆಟಗಾರರು ಯಾರು?

ಝಿಂಬಾಬ್ವೆ ವಿರುದ್ಧದ ಮೊದಲೆರಡು ಪಂದ್ಯಗಳಿಗೆ ಬದಲಿ ಆಟಗಾರರಾಗಿ ಎಡಗೈ ದಾಂಡಿಗ ಸಾಯಿ ಸುದರ್ಶನ್, ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಹಾಗೂ ಹರ್ಷಿತ್ ರಾಣಾ ಆಯ್ಕೆಯಾಗಿದ್ದಾರೆ. ಅದರಂತೆ ಈ ಮೂವರು ಆಟಗಾರರು ಶೀಘ್ರದಲ್ಲೇ ಝಿಂಬಾಬ್ವೆಗೆ ತೆರಳಲಿದ್ದಾರೆ.

ಝಿಂಬಾಬ್ವೆ ಸರಣಿಗೆ ಭಾರತ ಟಿ20 ತಂಡ:

ಮೊದಲೆರಡು ಪಂದ್ಯಗಳಿಗೆ: ಶುಭ್​ಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ , ಹರ್ಷಿತ್ ರಾಣಾ.

ಇದನ್ನೂ ಓದಿ: IPL 2025: RCB ತಂಡಕ್ಕೆ ವಿರಾಟ್ ಕೊಹ್ಲಿ ಕ್ಯಾಪ್ಟನ್..!

ಕೊನೆಯ ಮೂರು ಪಂದ್ಯಗಳಿಗೆ: ಶುಭ್​ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ , ಶಿವಂ ದುಬೆ.

Published On - 2:51 pm, Tue, 2 July 24