ಬಿಸಿಸಿಐ ಹೊಸ ಪ್ಲಾನ್; ಮತ್ತೆ ಅಖಾಡಕ್ಕಿಳಿಯಲಿದ್ದಾರೆ ನಿವೃತ್ತ ಕ್ರಿಕೆಟಿಗರು..!

|

Updated on: Aug 13, 2024 | 7:23 PM

BCCI: ನಿವೃತ್ತ ಕ್ರಿಕೆಟಿಗರಿಗಾಗಿ ಹೊಸ ಲೀಗ್ ಅನ್ನು ಪ್ರಾರಂಭಿಸಲು ಅನೇಕ ಮಾಜಿ ಆಟಗಾರರು ಜೈ ಶಾ ಬಳಿ ಪ್ರಸ್ತಾಪಿಸಿದ್ದಾರೆ. ಬಿಸಿಸಿಐ ಕೂಡ ಈ ಬಗ್ಗೆ ಆಸಕ್ತಿ ವಹಿಸಿದ್ದು, ಈ ನಿಟ್ಟಿನಲ್ಲಿ ಕೆಸಲ ಮಾಡಲು ಶುರು ಮಾಡಿದೆ. ಅಲ್ಲದೆ ಮಾಜಿ ಕ್ರಿಕೆಟಿಗರು ಬಿಸಿಸಿಐಗೆ ಇಂತಹ ಪ್ರಸ್ತಾವನೆಯನ್ನು ನೀಡಿದ್ದು, ಅದನ್ನು ಪರಿಗಣಿಸಲಾಗುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.​

ಬಿಸಿಸಿಐ ಹೊಸ ಪ್ಲಾನ್; ಮತ್ತೆ ಅಖಾಡಕ್ಕಿಳಿಯಲಿದ್ದಾರೆ ನಿವೃತ್ತ ಕ್ರಿಕೆಟಿಗರು..!
ಮಾಜಿ ಕ್ರಿಕೆಟಿಗರು
Follow us on

ಭಾರತ ಕ್ರಿಕೆಟ್ ಧರ್ಮ ದೇಶ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಹೀಗಾಗಿಯೇ ಭಾರತದಲ್ಲಿ ಹಲವು ಮಾದರಿಯ ಕ್ರಿಕೆಟ್​ ಲೀಗ್​ಗಳನ್ನು ಆಡಲಾಗುತ್ತದೆ. ಇದರಲ್ಲಿ ಪ್ರಮುಖವಾದದ್ದು, ಐಪಿಎಲ್. ವರ್ಷದಿಂದ ವರ್ಷಕ್ಕೆ ಬಿಸಿಸಿಐ ಖಜಾನೆಯನ್ನು ದುಪ್ಪಾಟ್ಟಾಗಿಸುವಲ್ಲಿ ಐಪಿಎಲ್ ಪಾತ್ರ ಪ್ರಮುಖವಾಗಿದೆ. ಇದೀಗ ಈ ಲಾಭವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಇರಾದೆಯಲ್ಲಿರುವ ಬಿಸಿಸಿಐ ನೂತನ ಲೀಗ್ ಆರಂಭಿಸಲು ತಯಾರಿ ನಡೆಸಿದೆ. ಬಿಸಿಸಿಐನ ಈ ಹೊಸ ಲೀಗ್ ಕೊಂಚ ವಿಭಿನ್ನವಾಗಿದ್ದು, ಈ ಲೀಗ್​ನಲ್ಲಿ ನಿವೃತ್ತ ಕ್ರಿಕೆಟಿಗರು ಕಣಕ್ಕಿಳಿಯಲ್ಲಿದ್ದಾರೆ ಎಂದು ವರದಿಯಾಗಿದೆ.

ಬಿಸಿಸಿಐಗೆ ಪ್ರಸ್ತಾವನೆ

ಮಾಧ್ಯಮ ವರದಿಗಳ ಪ್ರಕಾರ, ನಿವೃತ್ತ ಕ್ರಿಕೆಟಿಗರಿಗಾಗಿ ಹೊಸ ಲೀಗ್ ಅನ್ನು ಪ್ರಾರಂಭಿಸಲು ಅನೇಕ ಮಾಜಿ ಆಟಗಾರರು ಜೈ ಶಾ ಬಳಿ ಪ್ರಸ್ತಾಪಿಸಿದ್ದಾರೆ. ಬಿಸಿಸಿಐ ಕೂಡ ಈ ಬಗ್ಗೆ ಆಸಕ್ತಿ ವಹಿಸಿದ್ದು, ಈ ನಿಟ್ಟಿನಲ್ಲಿ ಕೆಸಲ ಮಾಡಲು ಶುರು ಮಾಡಿದೆ. ಅಲ್ಲದೆ ಮಾಜಿ ಕ್ರಿಕೆಟಿಗರು ಬಿಸಿಸಿಐಗೆ ಇಂತಹ ಪ್ರಸ್ತಾವನೆಯನ್ನು ನೀಡಿದ್ದು, ಅದನ್ನು ಪರಿಗಣಿಸಲಾಗುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.​

ದಿಗ್ಗಜರು ಮತ್ತೆ ಅಖಾಡಕ್ಕೆ?

ಪ್ರಸ್ತುತ, ವಿಶ್ವದಾದ್ಯಂತ ಇಂತಹ ಹಲವಾರು ಲೀಗ್‌ಗಳು ನಡೆಯುತ್ತಿವೆ, ಅದರಲ್ಲಿ ಮಾಜಿ ಕ್ರಿಕೆಟಿಗರು ಆಡುತ್ತಿದ್ದಾರೆ. ಇರ್ಫಾನ್ ಪಠಾಣ್, ಸುರೇಶ್ ರೈನಾ, ಯೂಸುಫ್ ಪಠಾಣ್, ಕ್ರಿಸ್ ಗೇಲ್, ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಮುಂತಾದ ಆಟಗಾರರು ಇಂತಹ ಲೀಗ್‌ಗಳ ಭಾಗವಾಗಿದ್ದಾರೆ. ಇವುಗಳಲ್ಲಿ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್, ಲೆಜೆಂಡ್ಸ್ ಲೀಗ್ ಕ್ರಿಕೆಟ್ ಮತ್ತು ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಸೇರಿವೆ. ಈಗ ಬಿಸಿಸಿಐ ಕೂಡ ಈ ರೀತಿಯ ಹೊಸ ಲೀಗ್ ಆರಂಭಿಸಿದರೆ, ಮಾಜಿ ಕ್ರಿಕೆಟಿಗರ ಅದೃಷ್ಟ ಮತ್ತೊಮ್ಮೆ ಬದಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಕೆಂದರೆ ಬಿಸಿಸಿಐ ಆಯೋಜಿಸಿರುವ ಯಾವುದೇ ಲೀಗ್​ಗಳು ಇದುವರೆಗೆ ವಿಫಲವಾಗದಿರುವುದೇ ಇದಕ್ಕೆ ಉದಾಹರಣೆಯಾಗಿದೆ.

ಒಂದು ವೇಳೆ ಈ ಲೀಗ್ ಆರಂಭವಾದರೆ, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಸುರೇಶ್ ರೈನಾ, ಕ್ರಿಸ್ ಗೇಲ್, ಹರ್ಭಜನ್ ಸಿಂಗ್ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ದಿಗ್ಗಜ ಆಟಗಾರರು ಮತ್ತೆ ಮೈದಾನದಲ್ಲಿ ಅಬ್ಬರಿಸುವುದನ್ನು ಕಾಣಬಹುದಾಗಿದೆ. ಈ ಲೀಗ್ ಸಂಪೂರ್ಣವಾಗಿ ಐಪಿಎಲ್ ಮಾದರಿಯಲ್ಲೇ ನಡೆಯಲಿದ್ದು, ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರುವ ಮತ್ತು ಐಪಿಎಲ್‌ನಲ್ಲಿ ಆಡದ ಆಟಗಾರರು ಮಾತ್ರ ಈ ಲೀಗ್​ನಲ್ಲಿ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ