AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs SL: ಲಂಕಾ ತಂಡಕ್ಕೆ ಮಾಜಿ ಆಂಗ್ಲ ಆಟಗಾರ ಬ್ಯಾಟಿಂಗ್ ಕೋಚ್; 3 ಪಂದ್ಯಗಳ ನಂತರ ಅಧಿಕಾರಾವಧಿ ಅಂತ್ಯ

ENG vs SL: . ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಇಯಾನ್ ಬೆಲ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕಾಗಿ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಬೆಲ್ ಅವರು ಕೇವಲ ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಮಾತ್ರ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ.

ENG vs SL: ಲಂಕಾ ತಂಡಕ್ಕೆ ಮಾಜಿ ಆಂಗ್ಲ ಆಟಗಾರ ಬ್ಯಾಟಿಂಗ್ ಕೋಚ್; 3 ಪಂದ್ಯಗಳ ನಂತರ ಅಧಿಕಾರಾವಧಿ ಅಂತ್ಯ
ಶ್ರೀಲಂಕಾ ಟೆಸ್ಟ್ ತಂಡ, ಇಯಾನ್ ಬೆಲ್
ಪೃಥ್ವಿಶಂಕರ
|

Updated on:Aug 13, 2024 | 10:47 PM

Share

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮಣಿಸಿದ್ದ ಶ್ರೀಲಂಕಾ ಕ್ರಿಕೆಟ್ ತಂಡ ಇದೀಗ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ಸರಣಿಯ ಮೊದಲ ಪಂದ್ಯ ಆಗಸ್ಟ್ 21 ರಿಂದ ನಡೆಯಲಿದೆ. ಈ ಟೆಸ್ಟ್ ಸರಣಿಗೂ ಮುನ್ನ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಇಯಾನ್ ಬೆಲ್ ಅವರನ್ನು ಇಂಗ್ಲೆಂಡ್ ಪ್ರವಾಸಕ್ಕಾಗಿ ರಾಷ್ಟ್ರೀಯ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಬೆಲ್ ಅವರು ಕೇವಲ ಇಂಗ್ಲೆಂಡ್‌ ವಿರುದ್ಧದ ಸರಣಿಗೆ ಮಾತ್ರ ತಂಡದ ಬ್ಯಾಟಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ.

ಬೆಲ್ ವೃತ್ತಿಜೀವನ

ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಇಯಾನ್ ಬೆಲ್ ಇಂಗ್ಲೆಂಡ್‌ ಪರ 118 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 42.69 ಸರಾಸರಿಯಲ್ಲಿ 7727 ರನ್ ಗಳಿಸಿದ್ದಾರೆ. ಇದರಲ್ಲಿ 22 ಶತಕಗಳೂ ಸೇರಿವೆ. ಇಯಾನ್ ಬೆಲ್ ಅವರು ಸ್ಥಳೀಯ ಪರಿಸ್ಥಿತಿಗಳ ಬಗ್ಗೆ ತಿಳಿದಿದ್ದಾರೆ. ಇಂಗ್ಲೆಂಡ್‌ನಲ್ಲಿ ಆಡಿದ ಅನುಭವ ಅವರಿಗಿದೆ. ಅವರ ಅನುಭವ ಈ ಪ್ರವಾಸದಲ್ಲಿ ನಮಗೆ ಉಪಯುಕ್ತವಾಗಲಿದೆ ಎಂದು ಶ್ರೀಲಂಕಾ ಕ್ರಿಕೆಟ್ ಸಿಇಒ ಆಶ್ಲೇ ಡಿ ಸಿಲ್ವಾ ಮಾಹಿತಿ ನೀಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಮೂರು ಟೆಸ್ಟ್

ಶ್ರೀಲಂಕಾ ಇಂಗ್ಲೆಂಡ್‌ನಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಬೇಕಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 21 ರಂದು ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಎರಡನೇ ಪಂದ್ಯ ಆಗಸ್ಟ್ 29 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಈ ಸರಣಿಯ ಮೂರನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಸೆಪ್ಟೆಂಬರ್ 6 ರಂದು ಓವಲ್‌ನಲ್ಲಿ ನಡೆಯಲಿದೆ.

ಟೆಸ್ಟ್ ಸರಣಿಗಾಗಿ ಶ್ರೀಲಂಕಾ ತಂಡ

ಧನಂಜಯ್ ಡಿ ಸಿಲ್ವಾ (ನಾಯಕ), ದಿಮುತ್ ಕರುಣಾರತ್ನೆ, ನಿಶಾನ್ ಮಧುಶಂಕ, ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್ (ಉಪನಾಯಕ), ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ಸದಿರ ಸಮರವಿಕ್ರಮ, ಅಸಿತ ಫೆರ್ನಾಂಡೊ, ವಿಶ್ವ ಫೆರ್ನಾಂಡೊ, ನಿಸ್ಲಾ ಥಾರ್ ರಜಿತ, ಲಹಿರುನ್ ಕುಮಾರ್, ಪ್ರಭಾತ್ ಜಯಸೂರ್ಯ, ರಮೇಶ್ ಮೆಂಡಿಸ್, ಜೆಫ್ರಿ ವಾಂಡರ್ಸೆ, ಮಿಲನ್ ರಥನಾಯಕೆ.

ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಂಡ

ಬೆನ್ ಸ್ಟೋಕ್ಸ್ (ನಾಯಕ), ಡೇನಿಯಲ್ ಲಾರೆನ್ಸ್, ಬೆನ್ ಡಕೆಟ್, ಆಲಿ ಪೋಪ್ (ಉಪನಾಯಕ), ಜೋ ರೂಟ್, ಜೋರ್ಡಾನ್ ಕಾಕ್ಸ್, ಹ್ಯಾರಿ ಬ್ರೂಕ್, ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ಶೋಯೆಬ್ ಬಶೀರ್, ಆಲಿ ಸ್ಟೋನ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:46 pm, Tue, 13 August 24