ಟೀಂ ಇಂಡಿಯಾ ಆಟಗಾರನ ಜೊತೆ ರೆಸಾರ್ಟ್ನಲ್ಲಿ ರಾತ್ರಿ ಕಳೆದ ಬ್ರಿಟನ್ ಗಾಯಕಿ
ಹಾರ್ದಿಕ್ ಪಾಂಡ್ಯ ಅವರು ಎಲ್ಲಾ ಘಟನೆಗಳನ್ನು ಚಿಲ್ ಆಗಿ ಸ್ವೀಕರಿಸುತ್ತಾರೆ. ಆದರೆ, ಇತ್ತೀಚೆಗೆ ಅವರ ಜೀವನದಲ್ಲಿ ನಡೆದ ಏರಿಳಿತ ಅವರನ್ನು ಕುಗ್ಗಿಸಿತ್ತು. ಈಗ ಅವರು ಮತ್ತೆ ಚಿಲ್ ಮೋಡ್ಗೆ ಬಂದ ರೀತಿಯಲ್ಲಿ ಕಾಣುತ್ತಿದೆ. ಅವರು ಬ್ರಿಟನ್ ಸಿಂಗರ್ ಜೊತೆ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ.
ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಅವರು ಇತ್ತೀಚೆಗಷ್ಟೇ ಪತ್ನಿ ನತಾಶಾ ಅವರಿಂದ ವಿಚ್ಛೇದನ ಪಡೆದರು. ಈಗಲೂ ಅವರು ಹಾಯಾಗಿ ಇದ್ದಾರೆ. ಈ ಕಾರಣದಿಂದಲೇ ಅವರ ಹೆಸರು ಅನೇಕ ಸೆಲೆಬ್ರಿಟಿಗಳ ಜೊತೆ ತಳುಕು ಹಾಕಿಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಅವರ ಹೆಸರು ಅನನ್ಯಾ ಪಾಂಡೆ ಜೊತೆ ಕೇಳಿ ಬಂದಿತ್ತು. ಈಗ ಹಾರ್ದಿಕ್ ಪಾಂಡ್ಯ ಹೆಸರು ಬ್ರಿಟನ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ತಳುಕು ಹಾಕಿಕೊಂಡಿದೆ. ಇಬ್ಬರೂ ಗ್ರೀಸ್ನ ರೆಸಾರ್ಟ್ನಲ್ಲಿ ಸಮಯ ಕಳೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾರ್ದಿಕ್ ಪಾಂಡ್ಯಾ ಹಾಗೂ ಜಾಸ್ಮಿನ್ ಅವರು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಗ್ರೀಸ್ನ ರೆಸಾರ್ಟ್ನಲ್ಲಿ ಇವರು ಸಮಯ ಕಳೆದಿದ್ದಾರೆ. ಇಬ್ಬರೂ ಪ್ರತ್ಯೇಕವಾಗಿ ಫೋಟೋ ಕ್ಲಿಕ್ಕಿಸಿ ಪೋಸ್ಟ್ ಮಾಡಿದ್ದು, ಬ್ಯಾಕ್ಗ್ರೌಂಡ್ ಒಂದೇ ರೀತಿ ಇದೆ. ಬಿಕಿನಿ ತೊಟ್ಟು ಜಾಸ್ಮಿನ್ ಗಮನ ಸೆಳೆದಿದ್ದಾರೆ. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಕೂಡ ಅಲ್ಲಿಯೇ ಇದ್ದರು ಎನ್ನಲಾಗಿದೆ.
ಈ ಮಧ್ಯೆ ಇನ್ಸ್ಟಾಗ್ರಾಮ್ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ಜಾಸ್ಮಿನ್ ಪರಸ್ಪರ ಫಾಲೋ ಮಾಡಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಪೋಸ್ಟ್ ಮಾಡಿರುವ ವಿಡಿಯೋನ ಅವರು ಲೈಕ್ ಮಾಡಿದ್ದಾರೆ. ಆದರೆ, ಜಾಸ್ಮಿನ್ ಅವರ ಬಿಕಿನಿ ಫೋಟೋಗಳನ್ನು ಹಾರ್ದಿಕ್ ಲೈಕ್ ಮಾಡಿಲ್ಲ. ಇನ್ನು, ಜಾಸ್ಮಿನ್ ಅವರ ಫೋಟೋಗೆ ಫ್ಯಾನ್ಸ್ ಅವರು ವಿವಿಧ ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ‘ಹಾರ್ದಿಕ್ ಎಲ್ಲಿ’ ಎಂದು ಪ್ರಶ್ನೆ ಮಾಡಿದ್ದಾರೆ.
View this post on Instagram
View this post on Instagram
ಇದನ್ನೂ ಓದಿ: ಬಾಲಿವುಡ್ ಯುವ ನಟಿಯ ಹಿಂದೆ ಬಿದ್ರಾ ಹಾರ್ದಿಕ್ ಪಾಂಡ್ಯ?
ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಅವರು ನಾಲ್ಕು ವರ್ಷಗಳ ಹಿಂದೆ ಸಂಸಾರ ಆರಂಭಿಸಿದರು. ಇತ್ತೀಚೆಗೆನವರೆಗೂ ಇವರು ಒಟ್ಟಿಗೆ ಇದ್ದರು. ಈಗ ಇವರು ಬೇರೆ ಆಗುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಅನೇಕರಿಗೆ ಶಾಕಿಂಗ್ ಎನಿಸಿದೆ. ವಿಚ್ಛೇದನ ಪಡೆಯುತ್ತಿದ್ದಂತೆ ಹಾರ್ದಿಕ್ ಪಾಂಡ್ಯ ಅವರು ಬೇರೆಯವರ ಜೊತೆ ಸುತ್ತಾಟ ಆರಂಭಿಸಿದರೇ ಎನ್ನುವ ಪ್ರಶ್ನೆ ಮೂಡಿದೆ. ಜಾಸ್ಮಿನ್ ಅವರು ಗಾಯಕಿ ಹಾಗೂ ನಟಿ. ಅವರು ಕೆಲವು ಸೀರಿಸ್ಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.