ಬಾಲಿವುಡ್ ಯುವ ನಟಿಯ ಹಿಂದೆ ಬಿದ್ರಾ ಹಾರ್ದಿಕ್ ಪಾಂಡ್ಯ?

ಹಾರ್ದಿಕ್ ಪಾಂಡ್ಯ ಅವರು ಎಲ್ಲಾ ಘಟನೆಗಳನ್ನು ಚಿಲ್​ ಆಗಿ ಸ್ವೀಕರಿಸುತ್ತಾರೆ. ಆದರೆ, ಇತ್ತೀಚೆಗೆ ಅವರ ಜೀವನದಲ್ಲಿ ನಡೆದ ಏರಿಳಿತ ಅವರನ್ನು ಕುಗ್ಗಿಸಿತ್ತು. ಈಗ ಅವರು ಮತ್ತೆ ಚಿಲ್​ ಮೋಡ್​ಗೆ ಬಂದ ರೀತಿಯಲ್ಲಿ ಕಾಣುತ್ತಿದೆ. ಅವರು ಬಾಲಿವುಡ್ ನಟಿಯರ ಜೊತೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ.

ಬಾಲಿವುಡ್ ಯುವ ನಟಿಯ ಹಿಂದೆ ಬಿದ್ರಾ ಹಾರ್ದಿಕ್ ಪಾಂಡ್ಯ?
ಹಾರ್ದಿಕ್
Follow us
ರಾಜೇಶ್ ದುಗ್ಗುಮನೆ
|

Updated on: Jul 22, 2024 | 10:48 AM

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ವಿಚ್ಛೇದನ ಪಡೆದಿದ್ದಾರೆ. ಸರ್ಬಿಯಾ ಮಾಡೆಲ್ ಆಗಿದ್ದ ನತಾಶಾ ಆ ಬಳಿಕ ಹಿಂದಿಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಹಾರ್ದಿಕ್ ಜೊತೆ ಇವರಿಗೆ ಪ್ರೀತಿ ಮೂಡಿತು. ಸದ್ಯ ನತಾಶಾ ಮತ್ತೆ ಸರ್ಬಿಯಾಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಹಾರ್ದಿಕ್ ಅವರು ಬಾಲಿವುಡ್​ ನಟಿಯ ಹಿಂದೆ ಬಿದ್ದರೇ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ. ಇದಕ್ಕೆ ಕಾರಣ ಆಗಿರೋದು ಇತ್ತೀಚೆಗೆ ನಡೆದ ಕೆಲವು ಘಟನೆಗಳು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಹಾರ್ದಿಕ್ ಪಾಂಡ್ಯ ಅವರು ಎಲ್ಲಾ ಘಟನೆಗಳನ್ನು ಚಿಲ್​ ಆಗಿ ಸ್ವೀಕರಿಸುತ್ತಾರೆ. ಆದರೆ, ಇತ್ತೀಚೆಗೆ ಅವರ ಜೀವನದಲ್ಲಿ ನಡೆದ ಏರಿಳಿತ ಅವರನ್ನು ಕುಗ್ಗಿಸಿತ್ತು. ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ಪಡೆದಿದ್ದರೆ ರೋಹಿತ್ ಶರ್ಮಾ ಅಭಿಮಾನಿಗಳಿಂದ ಟೀಕೆಗೆ ಒಳಗಾದರು. ಸ್ಟೇಡಿಯಂನಲ್ಲಿ ಫ್ಯಾನ್ಸ್ ಕಡೆಯಿಂದ ಛೀಮಾರಿ ಹಾಕಿಸಿಕೊಂಡರು. ಆ ಬಳಿಕ ಅವರು ವಿಶ್ವಕಪ್​ಗೆ ಆಯ್ಕೆ ಆದಾಗಲೂ ಟೀಕೆಗೆ ಗುರಿಯಾದರು. ಇದೇ ವೇಳೆ ಅವರು ಪತ್ನಿಯಿಂದ ವಿಚ್ಛೇದನ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡಿತು. ಆ ಬಳಿಕ ಅವರು ವಿಶ್ವಕಪ್ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇತ್ತೀಚೆಗೆ ಅವರು ವಿಚ್ಛೇದನ ವಿಚಾರ ಅಧಿಕೃತ ಮಾಡಿದ್ದಾರೆ. ಈಗ ಅವರ ಬಗ್ಗೆ ಹೊಸದೊಂದು ವಿಚಾರ ಹರಿದಾಡಿದೆ.

ಇತ್ತೀಚೆಗೆ ಹಾರ್ದಿಕ್ ಪಾಂಡ್ಯ ಅವರು ಅಂಬಾನಿ ಮನೆಯ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಅನನ್ಯಾ ಪಾಂಡೆ ಜೊತೆ ಇದ್ದರು. ಇಬ್ಬರ ಮಧ್ಯೆ ಏನೋ ನಡೆಯುತ್ತಿದೆಯಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿತ್ತು. ಈ ಬೆನ್ನಲ್ಲೇ ಹಾರ್ದಿಕ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಅನನ್ಯಾ ಅವರನ್ನು ಫಾಲೋ ಮಾಡಿದ್ದಾರೆ. ಈ ಸುದ್ದಿ ಸಖತ್ ಚರ್ಚೆ ಹುಟ್ಟುಹಾಕಿದೆ.

ಇದನ್ನೂ ಓದಿ: ಅಪರೂಪಕ್ಕೆ ತುಸು ಕಡಿಮೆ ಬೆಲೆಯ ಉಡುಪು ಧರಿಸಿದ ಅನನ್ಯಾ ಪಾಂಡೆ

ಅನನ್ಯಾ ಪಾಂಡೆ ಅವರ ಹೆಸರು ಈ ಮೊದಲು ಆದಿತ್ಯ ರಾಯ್ ಕಪೂರ್ ಜೊತೆ ಸೇರಿಕೊಂಡಿತ್ತು. ಕೆಲವು ಸಮಯದ ನಂತರ ಇಬ್ಬರೂ ಬೇರೆ ಆದರು ಎನ್ನಲಾಗಿದೆ. ಅನನ್ಯಾ ಸಿಂಗಲ್ ಆಗಿ ಇದ್ದಿದ್ದು ಕಡಿಮೆ.  ಹೀಗಾಗಿ ಹಾರ್ದಿಕ್ ಜೊತೆ ಸುತ್ತಾಟ ಆರಂಭಿಸಿದರಾ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.