‘ಬಾಸ್ ಬಾಸ್’ ಎಂದು ಹೋಗಿದ್ದೇ ತಪ್ಪಾಯ್ತು; ಕೊಲೆ ಕೇಸ್​ನಲ್ಲಿ ಪ್ರದೋಶ್ ಸಿಕ್ಕಿಬಿದ್ದಿದ್ದೇ ವಿಚಿತ್ರ

‘ಬಾಸ್ ಬಾಸ್’ ಎಂದು ಹೋಗಿದ್ದೇ ತಪ್ಪಾಯ್ತು; ಕೊಲೆ ಕೇಸ್​ನಲ್ಲಿ ಪ್ರದೋಶ್ ಸಿಕ್ಕಿಬಿದ್ದಿದ್ದೇ ವಿಚಿತ್ರ

ರಾಜೇಶ್ ದುಗ್ಗುಮನೆ
|

Updated on: Jul 22, 2024 | 8:24 AM

ರೇಣುಕಾ ಸ್ವಾಮಿ ಕೊಲೆ ನಡೆಯುವ ಮುಂಚೆ ನಟ ದರ್ಶನ್ ಹಾಗೂ ಇನ್ನೂ ಕೆಲವರು, ಪ್ರಕರಣದ ಮತ್ತೊಬ್ಬ ಆರೋಪಿ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್​ನಲ್ಲಿ ಕುಡಿದು ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಸಹ ಇದ್ದರು. ನಟ ದರ್ಶನ್ ಪಟ್ಟಣಗೆರೆ ಶೆಡ್​ಗೆ ಹೋಗುವಾಗ ಚಿಕ್ಕಣ್ಣರನ್ನು ಸಹ ಕರೆದರಂತೆ. ಆದರೆ ಚಿಕ್ಕಣ್ಣ ದರ್ಶನ್​ ಜೊತೆ ಹೋಗಲು ಒಪ್ಪಿಲ್ಲ.

ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಆಗುವುದಕ್ಕೂ ಮೊದಲು ಬೆಂಗಳೂರಿನ ಆರ್​ಆರ್​ ನಗರದಲ್ಲಿರುವ ಸ್ಟೋನಿ ಬ್ರೂಕ್​ ​ ರೆಸ್ಟೋರೆಂಟ್​ನಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ಪಾರ್ಟಿಯಲ್ಲಿ ಚಿಕ್ಕಣ್ಣ, ಪ್ರದೋಶ್ ಸೇರಿ ಅನೇಕರು ಇದ್ದರು. ದರ್ಶನ್ ಅವರು ತಮಗೆ ವೈಯಕ್ತಿಕ ಕೆಲಸ ಇದೆ ಎಂದು ರೆಸ್ಟೋರೆಂಟ್​ನಿಂದ ಶೆಡ್​ನತ್ತ ಹೊರಡುವವರಿದ್ದರು. ಈ ವೇಳೆ ಚಿಕ್ಕಣ್ಣ ಅವರು ದರ್ಶನ್ ಕಾರು ಹತ್ತಲಿಲ್ಲ. ಆದರೆ, ಪ್ರದೋಶ್ ಮಾತ್ರ ‘ಬಾಸ್ ನಾನೂ ಬರ್ತಿನಿ’ ಎಂದು ಕಾರು ಏರಿದರು. ಈ ಕಾರಣಕ್ಕೆ ಅವರು ಕೂಡ ಲಾಕ್ ಆದರು. ದರ್ಶನ್ ಜೊತೆ ಇದ್ದಿದ್ದಕ್ಕೆ ಪ್ರದೋಶ್ ಕೂಡ ಈಗ ಅರೆಸ್ಟ್ ಆಗಿದ್ದಾರೆ. ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನೂ ಇವರೇ ತೆಗೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.