ಕರ್ನಾಟಕದಲ್ಲಿ ಮಾತ್ರವಲ್ಲ ಮುಂಬೈ, ಹೈದರಾಬಾದ್​ನಲ್ಲೂ ‘ಭೀಮ’ ಚಿತ್ರಕ್ಕೆ ಬೇಡಿಕೆ

ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ್ದ ‘ಭೀಮ’ ಸಿನಿಮಾ ಮೊದಲ ದಿನ ಯಶಸ್ವಿ ಪ್ರದರ್ಶನ ಕಂಡಿದೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಪ್ರಯತ್ನ ಈ ಸಿನಿಮಾದಿಂದ ಆಗಿದೆ. ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ಮಾಡಿದೆ.

ಕರ್ನಾಟಕದಲ್ಲಿ ಮಾತ್ರವಲ್ಲ ಮುಂಬೈ, ಹೈದರಾಬಾದ್​ನಲ್ಲೂ ‘ಭೀಮ’ ಚಿತ್ರಕ್ಕೆ ಬೇಡಿಕೆ
|

Updated on: Aug 14, 2024 | 8:14 AM

‘ಭೀಮ’ ಸಿನಿಮಾ ಕರ್ನಾಟಕದಲ್ಲಿ ಮೆಚ್ಚುಗೆ ಪಡೆದಿದೆ. ಈ ಚಿತ್ರದ ಸಕ್ಸಸ್ ಮೀಟ್ ಆಗಸ್ಟ್ 13ರಂದು ನಡೆದಿದೆ. ಈ ವೇಳೆ ಇಡೀ ತಂಡ ಅಲ್ಲಿ ಹಾಜರಿ ಹಾಕಿತ್ತು. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ‘ಭೀಮ’ ಚಿತ್ರಕ್ಕೆ ಬೇಡಿಕೆ ಸೃಷ್ಟಿ ಆಗಿದೆ. ಈ ಬಗ್ಗೆ ನಟ, ನಿರ್ದೇಶಕ ದುನಿಯಾ ವಿಜಯ್ ಮಾತನಾಡಿದ್ದಾರೆ. ‘ನಮ್ಮ ಸಿನಿಮಾ ಕರ್ನಾಕಟದಲ್ಲಿ ಮಾತ್ರವಲ್ಲ ಮುಂಬೈ ಹಾಗೂ ಹೈದರಾಬದ್​ನಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಲ್ಲಿಯೂ ಜನರು ಸಿನಿಮಾನ ನೋಡುತ್ತಿದ್ದಾರೆ’ ಎಂದಿದ್ದಾರೆ ದುನಿಯಾ ವಿಜಯ್. ಈ ಚಿತ್ರವನ್ನು ಕೆಆರ್​ಜಿ ಸ್ಟುಡಿಯೋಸ್ ಹಂಚಿಕೆ ಮಾಡಿದೆ. ಅವರಿಗೆ ದುನಿಯಾ ವಿಜಯ್ ಧನ್ಯವಾದ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us