ರಾಷ್ಟ್ರಾಭಿಮಾನ ಉಕ್ಕಿಸುವ ಅನಿತಾ ಸಾರಾ ಮಹೇಶ್ ಅವರ ‘ಮಾತೃಭೂಮಿ ನಮ್ಮ ಭಾರತ’ ದೇಶಭಕ್ತಿ ಗೀತೆ
ನಮ್ಮಲ್ಲಿ ಅನೇಕರು ಭಾರೀ ಪ್ರತಿಭಾವಂತರಾಗಿದ್ದರೂ ಯಾವುದೋ ಅನಿವಾರ್ಯತೆ, ತೊಡಕು, ಅಸಹಾಯಕತೆಯಿಂದ ಎಲೆಮರೆಯ ಕಾಯಿಯಂತೆ ಉಳಿದುಬಿಡುತ್ತಾರೆ. ಅನಿತಾ ಮಹೇಶ್ ಅವರ ಬಗ್ಗೆ ನಮಗೆ ಹೆಚ್ಚು ಗೊತ್ತಿರಲಿಲ್ಲ. 1993 ರಲ್ಲಿ ಹತ್ತನೇ ತರಗತಿ ಪಾಸು ಮಾಡಿದ್ದ ಅವರು 30 ವರ್ಷಗಳ ನಂತರ ಪಿಯು ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಪಾದು ಮಾಡಿದಾಗ ಸುದ್ದಿಯಲ್ಲಿದ್ದರು.
ಮೈಸೂರು: ಸ್ವಾತಂತ್ರ್ಯೋತ್ಸವ ದಿನಾಚರಣೆಯ ಮುನ್ನಾದಿನವಾಗಿರುವ ಇಂದು ದೇಶದ ಎಲ್ಲ ಭಾಗಗಳಲ್ಲಿ ಜನ ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನದ ಭಾವದೊಂದಿಗೆ ತಿರುಗಾಡುತ್ತಿದ್ದಾರೆ. ಮಾಜಿ ಸಚಿವ ಮತ್ತು ಜೆಡಿಎಸ್ ಹಾಲಿ ಶಾಸಕ ಸಾ ರಾ ಮಹೇಶ್ ಅವರ ಪತ್ನಿ ಅನಿತಾ ಮಹೇಶ್ ಅವರೊಬ್ಬ ಉತ್ತಮ ಗಾಯಕಿಯೆಂದು ಬಹಳ ಜನರಿಗೆ ಗೊತ್ತಿರಲಿಲ್ಲ. ಭಾರತ ತನ್ನ 78ನೇ ಸ್ವಾತಂತ್ರ್ಯೋತ್ಸವ ದಿನ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಅನಿತಾ ಅವರು ತಾವೇ ಒಂದು ದೇಶಭಕ್ತಿ ಗೀತೆಯನ್ನು ರಚಿಸಿ ಹಾಡಿರುವುದರ ಜೊತೆಗೆ ವಂದೇ ಮಾತರಂ ಹಾಡಿನ ಶೈಲಿಯಲ್ಲಿ ನೂರಾರು ಕಲಾವಿದರನ್ನು ಬಳಸಿಕೊಂಡು ಹಾಡಿನ ಚಿತ್ರೀಕರಣ ಸಹ ಮಾಡಿಸಿದ್ದಾರೆ. ಮಾತೃಭೂಮಿ ನಮ್ಮ ಭಾರತ, ಪುಣ್ಯಭೂಮಿ ಹೆಮ್ಮೆಯ ಭಾರತ ಎಂದು ಶುರುವಾಗುವ ಈ ಹಾಡು ನಿಸ್ಸಂದೇಹವಾಗಿ ಕೇಳುಗರಲ್ಲಿ ನೋಡುಗರಲ್ಲಿ ರಾಷ್ಟ್ರಾಭಿಮಾನವನ್ನು ಬಡಿದೆಬ್ಬಿಸುತ್ತದೆ. ಅನಿತಾ ಅವರು ಉತ್ತಮ ಕಲಾವಿದೆ ಮತ್ತು ಸಂಗೀತದ ಬಗ್ಗೆ ಅವರು ಚೆನ್ನಾಗಿ ತಿಳಿದುಕೊಂಡಿರುವಂತಿದೆ. ಹಾಡಿನ ಚಿತ್ರೀಕರಣ ಸಹ ಚೆನ್ನಾಗಿ ಮೂಡಿಬಂದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ, ಸಂವಿಧಾನ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಕಡ್ಡಾಯ
Published On - 10:46 am, Wed, 14 August 24