Team India Captain: ಮಂಗಳವಾರ ಬಿಸಿಸಿಐಯಿಂದ ಮಹತ್ವದ ಸಭೆ: ನಾಯಕತ್ವದ ಕುರಿತು ದೊಡ್ಡ ಘೋಷಣೆ ಸಾಧ್ಯತೆ

TV9 Digital Desk

| Edited By: Vinay Bhat

Updated on: Nov 07, 2021 | 9:12 AM

Rohit Sharma set to be given both ODI and T20 Captaincy: ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿಸುವ ಸಾಧ್ಯತೆ ಇದೆ. ತಂಡದ ಒಟ್ಟಾರೆ ಬೆಳವಣಿಗೆಗೂ ಇದು ಸಹಕಾರಿಯಾಗಲಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ.

Team India Captain: ಮಂಗಳವಾರ ಬಿಸಿಸಿಐಯಿಂದ ಮಹತ್ವದ ಸಭೆ: ನಾಯಕತ್ವದ ಕುರಿತು ದೊಡ್ಡ ಘೋಷಣೆ ಸಾಧ್ಯತೆ
BCCI and Virat Kohli

Follow us on

ಕ್ರಿಕೆಟ್ (Cricket) ವಲಯದಲ್ಲಿ ಅಚ್ಚರಿ ಎಂಬಂತ ಬೆಳವಣಿಗೆ ನಡೆಯುತ್ತಿದ್ದು ಇನ್ನು ಎರಡು ದಿನಗಳ ಒಳಗೆ ಭಾರತೀಯ ಕ್ರಿಕೆಟ್​ನ (Indian Cricket Team) ಏಕದಿನ ಮತ್ತು ಟಿ20 ತಂಡಕ್ಕೆ ಹೊಸ ನಾಯಕನ ಘೋಷಣೆ ಆಗಲಿದೆಯಂತೆ (India’s T20 AND ODI Captain). ಈ ಬಗ್ಗೆ ಬಿಸಿಸಿಐ (BCCI) ಮೂಲಗಳು ಮಾಹಿತಿ ನೀಡಿವೆ. ಇದರ ಭಾಗವಾಗಿ ಮಂಗಳವಾರ ಬಿಸಿಸಿಐ ಮಹತ್ವದ ಸಭೆ ಕರೆದಿದ್ದು, ಸಾಕಷ್ಟು ನಿರ್ಧಾರಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಚುಟುಕು ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿಯ (Virat Kohli) ನಾಯಕತ್ವದ ಅವಧಿ ಟಿ20 ವಿಶ್ವಕಪ್ (T20 World Cup)​ ಮುಗಿದ ಬೆನ್ನಲ್ಲೇ ಅಂತ್ಯಗೊಳ್ಳಲಿದೆ. ಏಕದಿನ ಕ್ರಿಕೆಟ್​ಗೆ ಕೊಹ್ಲಿಯೇ ನಾಯಕನಾಗಿ ಇರುತ್ತಾರೆ ಎನ್ನಲಾಗಿತ್ತು. ಆದರೆ, ಸದ್ಯದ ಮಾಹಿತಿಯ ಪ್ರಕಾರ ಕೊಹ್ಲಿ ಏಕದಿನ ಕ್ರಿಕೆಟ್​ ನಾಯಕತ್ವದಿಂದಲೂ ಹಿಂದೆ ಸರಿಯಲಿದ್ದಾರಂತೆ. ರೋಹಿತ್ ಶರ್ಮಾ (Rohit Sharma) ಅವರು ಏಕದಿನ ಮತ್ತು ಟಿ20 ಎರಡೂ ಮಾದರಿಯ ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಟಿ20 ವಿಶ್ವಕಪ್ ಮುಗಿದ ಬಳಿಕ ನ. 17 ರಿಂದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಈ ಸರಣಿಗೆ ಆಟಗಾರರ ಆಯ್ಕೆಗಾಗಿ ಬಿಸಿಸಿಐ ಇನ್ನೆರಡು ದಿನಗಳಲ್ಲಿ ಸಭೆ ಕರೆದಿದೆ. ಈ ಸಂದರ್ಭ ಟೀಮ್ ಇಂಡಿಯಾ ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ರೋಹಿತ್ ಶರ್ಮಾ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಿದೆಯಂತೆ.

‘ಏಕದಿನ ಮತ್ತು ಟಿ20 ಕ್ರಿಕೆಟ್​ಗೆ ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿಸುವ ಸಾಧ್ಯತೆ ಇದೆ. ತಂಡದ ಒಟ್ಟಾರೆ ಬೆಳವಣಿಗೆಗೂ ಇದು ಸಹಕಾರಿಯಾಗಲಿದೆ. ಮುಂದಿನ ದಿನದಲ್ಲಿ ಸಭೆ ನಡೆಯಲಿದ್ದು ಈ ವಿಚಾರದ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ.

‘ಮೂರು ಮಾದರಿಯ ಕ್ರಿಕೆಟ್​ಗೆ ಮೂರು ನಾಯಕರಿದ್ದರೆ ಗೊಂದಲಗಳು ಉಂಟಾಗುತ್ತಿದೆ. ಟಿ20 ಮತ್ತು ಏಕದಿನ ದಿನಕ್ಕೆ ಒಬ್ಬರೆ ನಾಯಕನಾಗಬೇಕು, ಇದಕ್ಕೆ ರೋಹಿತ್ ಶರ್ಮಾ ಉತ್ತಮ ಆಯ್ಕೆ. ಅಂತಿಮ ನಿರ್ಧಾರವನ್ನು ಮುಂದಿನ ಸಭೆಯಲ್ಲಿ ತೆಗೆದುಕೊಳ್ಳುತ್ತೇವೆ. ನಾವು ಏನೆ ನಿರ್ಧಾರ ತೆಗೆದುಕೊಂಡರು ಅದು ಭಾರತ ತಂಡದ ಭವಿಷ್ಯಕ್ಕಾಗಿ, ಒಳಿತಿಗಾಗಿ’ ಎಂದು ಹೇಳಿದ್ದಾರೆ.

ಚುಟುಕು ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಅವರು, ಭಾರತ ಟಿ-20 ಕ್ರಿಕೆಟ್​ನಿಂದ ಟಿ-20 ವಿಶ್ವಕಪ್ ಬಳಿಕ ನಾಯಕತ್ವ ತ್ಯಜಿಸುವುದಾಗಿ ಘೋಷಣೆ ಮಾಡಿದ್ದರು. ನಾಯಕತ್ವ ಬಿಟ್ಟುಕೊಟ್ಟು ಬ್ಯಾಟ್ಸ್​ಮನ್​ ಆಗಿ ಮುಂದುವರೆಯುತ್ತೇನೆ. ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ನನ್ನ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದು ಕೊಹ್ಲಿ ಹೇಳಿದ್ದರು.

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕೊಹ್ಲಿಯ ನಂತರ ಭಾರತ ಟಿ-20 ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಲಿದ್ದಾರೆ. ಇದರ ಜೊತೆಗೆ ಏಕದಿನಕ್ಕೂ ನಾಯಕನಾಗಲಿದ್ದಾರೆ. ಸದ್ಯ ವೈಟ್ ಬಾಲ್ ಕ್ರಿಕೆಟ್​ನ ಉಪ ನಾಯಕನಾಗಿರುವ ಹಿಟ್​ಮ್ಯಾನ್ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಉಪ ನಾಯಕನ ಪಟ್ಟ ಕೆ. ಎಲ್ ರಾಹುಲ್​ಗೆ ನೀಡಲಿದ್ದಾರೆ ಎಂಬ ಮಾತುಗಳು ಕೂಡ ಇದೆ.

New Zealand vs Afghanistan: ಟೀಮ್ ಇಂಡಿಯಾ ಭವಿಷ್ಯ ಇಂದು ನಿರ್ಧಾರ: ರೋಚಕತೆ ಸೃಷ್ಟಿಸಿದ ನ್ಯೂಜಿಲೆಂಡ್-ಅಫ್ಘಾನ್ ಕದನ

Kagiso Rabada: ರಬಾಡ ಹ್ಯಾಟ್ರಿಕ್ ವಿಕೆಟ್ ಸಾಧನೆ: ಗೆದ್ದರೂ ಆಫ್ರಿಕಾ ಟೂರ್ನಿಯಿಂದ ಔಟ್: ಸೆಮೀಸ್​ಗೆ ಇಂಗ್ಲೆಂಡ್

(BCCI selection committee meeting likely on Tuesday and maybe announcing Rohit Sharma ODI and T20 Captaincy)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada