ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ರೋಚಕತೆ ತುತ್ತ ತುದಿ ತಲುಪಿದೆ. ಅದರಲ್ಲೂ ರೋಹಿತ್ ಪಡೆ ಸೆಮಿಫೈನಲ್ಗೆ ಎಂಟ್ರಿಕೊಟ್ಟಿರುವುದು ಟೀಂ ಇಂಡಿಯಾದ (Team India) ಅಭಿಮಾನಿಗಳ ಸಂತಸವನ್ನು ಇನ್ನಷ್ಟು ಹೆಚ್ಚಿಸಿದೆ. ಇತ್ತ ಗ್ರೂಪ್ ಎರಡಲ್ಲಿ ಟೇಬಲ್ ಟಾಪರ್ ಆಗಿರುವ ರೋಹಿತ್ ಪಡೆ ಟಿ20 ವಿಶ್ವಕಪ್ ನಿಯಮಗಳ ಪ್ರಕಾರ ಗ್ರೂಪ್ 1 ರಲ್ಲಿ ಎರಡನೇ ಸ್ಥಾನ ಗಳಿಸಿರುವ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಈ ಹಿಂದೆ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿರುವ ಟೀಂ ಇಂಡಿಯಾ ಈ ಪಂದ್ಯದಲ್ಲೂ ಆಂಗ್ಲರನ್ನು ಮಣಿಸಿ ಫೈನಲ್ಗೆ ಲಗ್ಗೆ ಇಡಲಿದೆ ಎಂಬುದು ಅಭಿಮಾನಿಗಳ ಆಶಯವಾಗಿದೆ. ಹೀಗಾಗಿ ನ.13 ರ ಭಾನುವಾರದಂದು ನಡೆಯಲಿರುವ ವಿಶ್ವಕಪ್ ಫೈನಲ್ಗಾಗಿ ವಿಶ್ವದೆಲ್ಲೆಡೆ ಅಭಿಮಾನಿಗಳು ಕಾಯುತ್ತ ಕುಳಿತಿದ್ದಾರೆ. ರಜಾ ದಿನದಂದು ವಿಶ್ವಕಪ್ ಫೈನಲ್ ನೋಡುತ್ತ ಮೋಜು ಮಸ್ತಿ ಮಾಡಬೇಕೆಂದುಕೊಂಡಿದ್ದ ಬೆಂಗಳೂರಿಗರಿಗೆ, ನಗರದ ಪೊಲೀಸರು (Bengaluru City Police) ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಈಗಾಗಲೇ ಭಾರತ ಸೆಮಿಫೈನಲ್ಗೆ ತಲುಪಿರುವುದರಿಂದ ಅಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಫೈನಲ್ಗೆ ಲಗ್ಗೆ ಇಡುತ್ತದೆ ಎಂಬುದು ಟೀಂ ಇಂಡಿಯಾ ಅಭಿಮಾನಿಗಳ ಆಶಯವಾಗಿದೆ. ಹೀಗಾಗಿ ಭಾನುವಾರ ಟಿ20 ವಿಶ್ವಕಪ್ ಫೈನಲ್ ನಡೆಯಲಿದ್ದು, ಅಂದು ರಜಾ ದಿನವಾಗಿರುವುದರಿಂದ ಬೆಂಗಳೂರಿನ ಬಹುತೇಕ ಕೆಫೆಗಳು, ಬಾರ್‌ಗಳು ಮತ್ತು ಪಬ್‌ಗಳು ಪಂದ್ಯದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲು ತಯಾರಿ ನಡೆಸಿವೆ. ಹೀಗಾಗಿ ಪಂದ್ಯ ವೀಕ್ಷಣೆಯ ಜೊತೆಗೆ ಅತಿಯಾಗಿ ಮದ್ಯಸೇವಿಸಿ, ಅನಂತರ ಮನೆಗೆ ತೆರಳಲು ರಸ್ತೆಗಿಳಿಯುವ ವಾಹನ ಸವಾರರಿಗೆ ಪೊಲೀಸರು ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಉಡುಪಿ ಹೋಟೆಲ್ ಮಾಣಿಯೊಬ್ಬರು ಅಂತಾರಾಷ್ಟ್ರೀಯ ಮ್ಯಾರಥಾನ್ ಓಟಗಾರರಾದ ಕಥೆಯಿದು..!
ವಾಹನ ಸವಾರರು ಮದ್ಯಪಾನ ಮಾಡಿ
ಬೆಂಗಳೂರು ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮನವಿಯೊಂದನ್ನು ಮಾಡಿದ್ದು, ಅದರಲ್ಲಿ ಟಿ20 ವಿಶ್ವಕಪ್ ಫೈನಲ್ ಪಂದ್ಯ ಮುಂದಿನ ಭಾನುವಾರ ನಡೆಯಲಿದೆ. ಹೀಗಾಗಿ ಆ ದಿನ ವಾಹನ ಸವಾರರು ಮದ್ಯಪಾನ ಮಾಡಿ, ವಾಹನ ಚಾಲನೆ ಮಾಡಬೇಡಿ. ಮುಂದಿನ ಭಾನುವಾರವಂತಲ್ಲ, ಯಾವ ದಿನವೂ ಕುಡಿದು ವಾಹನ ಚಲಾಯಿಸಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
The World Cup final is next Sunday. We repeat, it’s next Sunday so DONOT drink & drive today.
Or next Sunday. Or any day. Nope ❌#T20WorldCup
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) November 6, 2022
ಆದಾಗ್ಯೂ, ಬೆಂಗಳೂರು ಪೊಲೀಸರ ಈ ಟ್ವೀಟ್ಗೆ ರೀ ಟ್ವೀಟ್ ಮಾಡಿರುವ ನೆಟ್ಟಿಗರೊಬ್ಬರು. ಚಿಂತಿಸಬೇಡಿ ಸರ್. ಕುಡಿದರೂ, ಕುಡಿಯದಿದ್ದರೂ ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವವರು ಎಂದಿಗೂ ಸುರಕ್ಷಿತವಾಗಿರುವುದಿಲ್ಲ. ದಂಡವನ್ನು ವಸೂಲಿ ಮಾಡುವ ಮೊದಲು ಗುಂಡಿಗಳನ್ನು ಮುಚ್ಚುವಂತೆ ಸರ್ಕಾರಕ್ಕೆ ತಿಳಿಸಿ ಎಂದು ಟ್ವೀಟ್ ಮಾಡಿದ್ದಾರೆ.
Don’t worry sir. Drunk or without drunk, nobody is safe while traveling in Bangalore. Ask government to fix potholes before collecting fine because you “care” for our safety.
— Chirag (@AbcLmn12) November 6, 2022
ಅಲ್ಲದೆ ಇನ್ನೂ ಕೆಲವರು, ಬೆಂಗಳೂರು ಪೊಲೀಸ್ ಆಯುಕ್ತರು ಯಾವುದೇ ನಿಯಮಗಳನ್ನು ಉಲ್ಲಂಘಿಸದ ಹೊರತು ವಾಹನಗಳನ್ನು ನಿಲ್ಲಿಸಬೇಡಿ ಎಂದು ಪೊಲೀಸರಿಗೆ ಸೂಚಿಸಿದ ನಂತರವೂ ನಿಯಮಿತ ತಪಾಸಣೆಗಾಗಿ ವಾಹನಗಳನ್ನು ಅನಗತ್ಯವಾಗಿ ನಿಲ್ಲಿಸಲಾಗುತ್ತಿದೆ ಎಂದು ಪೊಲೀಸರನ್ನು ದೂರಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ