Ravindra Jadeja: ಜಡೇಜಾ ಅಲಭ್ಯತೆಯು ಟೀಮ್ ಇಂಡಿಯಾ ಪಾಲಿಗೆ ದೊಡ್ಡ ಹಿನ್ನಡೆ, ಏಕೆಂದರೆ…

| Updated By: ಝಾಹಿರ್ ಯೂಸುಫ್

Updated on: Sep 13, 2022 | 5:32 PM

T20 World Cup 2022: ಜಡೇಜಾ ಅವರನ್ನು ಮೀರಿಸುವ ಮತ್ತೋರ್ವ ಆಟಗಾರನಿಲ್ಲ. ಇದೇ ಕಾರಣದಿಂದಾಗಿ ಟಿ20 ವಿಶ್ವಕಪ್‌ನಲ್ಲಿ ಜಡೇಜಾ ಅನುಪಸ್ಥಿತಿಯು ಟೀಮ್ ಇಂಡಿಯಾ ಪಾಲಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಬಹುದು.

Ravindra Jadeja: ಜಡೇಜಾ ಅಲಭ್ಯತೆಯು ಟೀಮ್ ಇಂಡಿಯಾ ಪಾಲಿಗೆ ದೊಡ್ಡ ಹಿನ್ನಡೆ, ಏಕೆಂದರೆ...
Ravindra Jadeja
Follow us on

ಟಿ20 ವಿಶ್ವಕಪ್​ಗಾಗಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ. 15 ಸದಸ್ಯರ ಈ ಬಳಗದಲ್ಲಿ ಕಾಣ ಸಿಗದ ಸ್ಟಾರ್ ಆಟಗಾರನ ಹೆಸರೆಂದರೆ ರವೀಂದ್ರ ಜಡೇಜಾ (Ravindra Jadeja). ಟೀಮ್ ಇಂಡಿಯಾದ ಅತ್ಯುತ್ತಮ ಆಲ್​ರೌಂಡರ್ ಎನಿಸಿಕೊಂಡಿರುವ ಜಡೇಜಾ ಏಷ್ಯಾಕಪ್​ನಲ್ಲಿ ಗಾಯಗೊಂಡಿದ್ದರು. ಇದೀಗ ಮೊಣಕಾಲಿನ ಸರ್ಜರಿಗೆ ಒಳಗಾಗಿರುವ ಕಾರಣ ಅವರು 6 ವಾರಗಳ ವಿಶ್ರಾಂತಿ ಪಡೆಯಬೇಕಿದೆ. ಇದೇ ಕಾರಣದಿಂದಾಗಿ ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್​ ತಂಡದಲ್ಲಿ ಜಡೇಜಾ ಅವರನ್ನು ಆಯ್ಕೆಗೆ ಪರಿಗಣಿಸಿಲ್ಲ. ಇತ್ತ ರವೀಂದ್ರ ಜಡೇಜಾ ಅವರ ಸ್ಥಾನವನ್ನು ತುಂಬಬಲ್ಲ ಮತ್ತೋರ್ವ ಆಟಗಾರ ಕೂಡ ಆಯ್ಕೆಯಾಗಿಲ್ಲ ಎಂಬುದೇ ಸತ್ಯ.

ಏಕೆಂದರೆ ಜಡ್ಡು ಪ್ರತಿಯೊಂದು ವಿಭಾಗದಲ್ಲೂ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದರು. ಅವರು ಸರಿಸಾಟಿಯಿಲ್ಲದ ಎಡಗೈ ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಪಡೆಯುವ ಪರಿಣಿತ ಬೌಲರ್ ಕೂಡ ಹೌದು. ಇದಲ್ಲದೆ ಫೀಲ್ಡಿಂಗ್​ನಲ್ಲಿ ಜಡೇಜಾ ಅವರನ್ನು ಮೀರಿಸುವ ಮತ್ತೋರ್ವ ಆಟಗಾರನಿಲ್ಲ. ಇದೇ ಕಾರಣದಿಂದಾಗಿ ಟಿ20 ವಿಶ್ವಕಪ್‌ನಲ್ಲಿ ಜಡೇಜಾ ಅನುಪಸ್ಥಿತಿಯು ಟೀಮ್ ಇಂಡಿಯಾ ಪಾಲಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಬಹುದು.

ರವೀಂದ್ರ ಜಡೇಜಾ ಅವರ ಬ್ಯಾಟಿಂಗ್ ಅಂಕಿ ಅಂಶಗಳನ್ನೇ ತೆಗೆದುಕೊಂಡರೆ, ಅವರು 2020 ರಿಂದ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ನಲ್ಲಿ 12 ಇನಿಂಗ್ಸ್​ ಆಡಿದ್ದಾರೆ. ಈ ವೇಳೆ 58.80 ಸರಾಸರಿ ಮತ್ತು 145.54 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 6.66 ಸರಾಸರಿಯಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂದರೆ ಪರಿಪೂರ್ಣ ಆಲ್​ರೌಂಡರ್ ಪ್ರದರ್ಶನ ನೀಡುವಲ್ಲಿ ಜಡೇಜಾ ಯಶಸ್ವಿಯಾಗಿದ್ದರು. ಇನ್ನು ಫೀಲ್ಡಿಂಗ್​ನಲ್ಲೂ ಜಡೇಜಾ ಮಹತ್ವದ ಪಾತ್ರವಹಿಸುತ್ತಿದ್ದರು.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಇದೀಗ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿರುವ ತಂಡದಲ್ಲಿ ರವೀಂದ್ರ ಜಡೇಜಾ ಬದಲಿ ಆಟಗಾರ ಯಾರು ಎಂಬ ಪ್ರಶ್ನೆ ಎದುರಾಗಿದೆ. ಈ ಪ್ರಶ್ನೆಗೆ ಸದ್ಯ ಎರಡು ಉತ್ತರಗಳು ಸಿಗುತ್ತವೆ. ಒಂದು ದೀಪಕ್ ಹೂಡಾ ಮತ್ತೊಂದು ಅಕ್ಷರ್ ಪಟೇಲ್. ಇಲ್ಲಿ ದೀಪಕ್ ಹೂಡಾ ಅವರ ಅಂಕಿ ಅಂಶಗಳನ್ನು ತೆಗೆದುಕೊಂಡರೆ, ಅವರು ಈ ವರ್ಷ 9 ಇನಿಂಗ್ಸ್​ಗಳಲ್ಲಿ 54.80 ಸರಾಸರಿಯೊಂದಿಗೆ ಮತ್ತು 161 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್​ ಬೀಸಿದ್ದಾರೆ. ಅಂದರೆ ಜಡೇಜಾ ಅವರ ಬ್ಯಾಟಿಂಗ್​ಗೆ ಸರಿಸಾಟಿಯಾಗಬಲ್ಲರು. ಆದರೆ ಇದೇ ವೇಳೆ 6 ಓವರ್ ಬೌಲಿಂಗ್ ಮಾಡಿರುವ ಹೂಡಾ ಪಡೆದಿರುವುದು ಕೇವಲ 1 ವಿಕೆಟ್ ಮಾತ್ರ.

ಇನ್ನು ಎಡಗೈ ಆಲ್​ರೌಂಡರ್ ಆಗಿರುವ ಅಕ್ಷರ್ ಪಟೇಲ್ ರವೀಂದ್ರ ಜಡೇಜಾಗೆ ಪರ್ಯಾಯ ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. 7ನೇ ಕ್ರಮಾಂಕದಲ್ಲಿ ಆಡುತ್ತಿರುವ ಅಕ್ಷರ್ ಅವರ ಸ್ಟ್ರೈಕ್ ರೇಟ್ ಕೂಡ 150 ಕ್ಕಿಂತ ಹೆಚ್ಚಿದೆ. ಇದಾಗ್ಯೂ ರವೀಂದ್ರ ಜಡೇಜಾ ಅವರಂತೆ ಅಕ್ಷರ್ ಪಟೇಲ್ ಅವರು ಗೇಮ್ ಚೇಂಜರ್​ ಅಲ್ಲ ಎಂಬುದು ಉಲ್ಲೇಖಾರ್ಹ. ಹೀಗಾಗಿಯೇ ರವೀಂದ್ರ ಜಡೇಜಾ ಅವರ ಅನುಪಸ್ಥಿತಿಯು ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯಾಗುವ ಸಾಧ್ಯತೆಯೇ ಹೆಚ್ಚು.