ಮೊನ್ನೆಯಷ್ಟೆ ಭದ್ರತಾ ಕಾರಣ ನೀಡಿ ನ್ಯೂಜಿಲೆಂಡ್ ಪರುಷರ ಕ್ರಿಕೆಟ್ ತಂಡ (New Zealand Cricket Team) ಪಾಕಿಸ್ತಾನ (Pakistan) ಪ್ರವಾಸ ರದ್ದುಗೊಳಿಸಿದ ಬೆನ್ನಲ್ಲೇ, ಇದೀಗ ಕಿವೀಸ್ ಮಹಿಳಾ ಕ್ರಿಕೆಟ್ ತಂಡಕ್ಕೆ ಬಾಂಬ್ ಬೆದರಿಕೆ (Bomb threats) ಬಂದಿದೆ. ನ್ಯೂಜಿಲೆಂಡ್ ಮಹಿಳಾ ತಂಡ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಹೀಗಿರುವಾಗ ಬಾಂಬ್ ಬೆದರಿಕೆ ಇಮೇಲ್ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ (England Cricket) ಮೇಲ್ಗೆ ಬಂದಿದ್ದು, ಇದನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ (NZC) ಮಾಹಿತಿ ನೀಡಿದೆ.
ನಿರ್ದಿಷ್ಟವಾಗಿ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡವನ್ನೇ ಉಲ್ಲೇಖಿಸದಿದ್ದರೂ ಈ ಬೆದರಿಕೆ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ನ್ಯೂಜಿಲೆಂಡ್ ತಂಡ ಹೇಳಿದೆ. ಈ ಬಗ್ಗೆ ತನಿಖೆ ನಡೆಸಿ ಇದೊಂದು ನಂಬಲಾರ್ಹವಲ್ಲ ಎಂಬ ತೀರ್ಮಾನಕ್ಕೂ ಬರಲಾಗಿದೆ. ಇದು ಏನೇ ಆದರೂ ಲಿಸೇಸ್ಟರ್ ನಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಹೇಳಿದೆ.
ಕ್ರೀಡಾ ಮಾಧ್ಯಮವೊಂದರ ಪ್ರಕಾರ, ನ್ಯೂಜಿಲೆಂಡ್ ತಂಡದ ಮ್ಯಾನೇಜ್ಮೆಂಟ್ ಸದಸ್ಯರನ್ನ ಸಂಪರ್ಕಿಸಿದ ಅನಾಮಧೇಯರು, ತಂಡ ಉಳಿದುಕೊಂಡಿರುವ ಹೋಟೆಲ್ನಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲ ನೀವು ಪ್ರಯಾಣ ಬೆಳಸುವ ವಿಮಾನದಲ್ಲೂ ಬಾಂಬ್ ಇರಿಸುವುದಾಗಿಯೂ ಬೆದರಿಸಲಾಗಿತ್ತು ಎಂದು ವರದಿಯಾಗಿದೆ. ಈ ಬೆದರಿಕೆ ಕರೆ ಬಗ್ಗೆ ಮಂಡಳಿ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳಕ್ಕೆ ಮಾಹಿತಿ ಮುಟ್ಟಿಸಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ.
ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕಾಗಿ ಲಿಸೇಸ್ಟರ್ಗೆ ಬಂದಿಳಿದಿದೆ. ಈ ಬಾಂಬ್ ಬೆದರಿಕೆಯಿಂದಾಗಿ ಆಟಗಾರರು ಅಭ್ಯಾಸದಲ್ಲೂ ಪಾಲ್ಗೊಂಡಿಲ್ಲ ಎಂದು ವರದಿಯಾಗಿದೆ.
ನ್ಯೂಜಿಲೆಂಡ್ ತಂಡ ಐತಿಹಾಸಿಕ ಪಾಕಿಸ್ತಾನ ಪ್ರವಾಸ ರದ್ದುಗೊಳಿಸಿದ ಬೆನ್ನಲ್ಲೇ, ಇಂಗ್ಲೆಂಡ್ ಕೂಡ ಪಾಕ್ ಪ್ರವಾಸ ರದ್ದುಗೊಳಿಸಿ ಮತ್ತೊಂದು ಶಾಕ್ ನೀಡಿದೆ. ಇಂಗ್ಲೆಂಡ್ ಪುರಷರು ಮತ್ತು ವನಿತೆಯರ ತಂಡಗಳೆರಡರ ಮುಂಬರುವ ಪಾಕಿಸ್ತಾನ ಪ್ರವಾಸವನ್ನು ರದ್ದುಗೊಳಿಸಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರ ಪ್ರಕಟಿಸಿದೆ.
‘ಪಾಕಿಸ್ತಾನಕ್ಕೆ ಪ್ರಯಾಣಿಸುವುದರ ಬಗ್ಗೆ ಆತಂಕ ವ್ಯಕ್ತವಾಗಿರುವುದು ನಮಗೆ ತಿಳಿದಿದೆ. ಕೋವಿಡ್ ಪರಿಸರದಲ್ಲೂ ಈಗಾಗಲೇ ದೀರ್ಘಾವಧಿಯ ಕಾರ್ಯಾಚರಣೆಯನ್ನು ನಿಭಾಯಿಸಿದ ತಂಡಕ್ಕೆ ಮುಂದಿನ ಪ್ರವಾಸವು ಮತ್ತಷ್ಟು ಒತ್ತಡವನ್ನು ನೀಡುತ್ತದೆ ಎಂದು ನಾವು ನಂಬಿದ್ದೇವೆ,’ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಹೇಳಿಕೆಯಲ್ಲಿ ತಿಳಿಸಿದೆ.
IPL 2021, KKR vs RCB: ಹೀನಾಯ ಪ್ರದರ್ಶನದ ಬಳಿಕ ಕೆಕೆಆರ್ ಸ್ಫೋಟಕ ಬ್ಯಾಟ್ಸ್ಮನ್ಗೆ ಕೊಹ್ಲಿ ಬ್ಯಾಟಿಂಗ್ ಟಿಪ್ಸ್
Virat Kohli: ಆರ್ಸಿಬಿ ಹೀನಾಯ ಸೋಲಿನ ಬಳಿಕ ನಾಯಕ ವಿರಾಟ್ ಕೊಹ್ಲಿ ಅಚ್ಚರಿಯ ಹೇಳಿಕೆ
(Bomb threats New Zealand womens team receives bomb threats in England NZC confirmed)