The Hundred Final: ಚೊಚ್ಚಲ ದಿ ಹಂಡ್ರೆಡ್ ಸೀಸನ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸೌಥರ್ನ್ ಬ್ರೇವ್ ತಂಡ

BPH vs SOB: ಅಂತಿಮ ಹಂತದಲ್ಲಿ ರಾಸ್ ವೈಟ್ಲೆ ಕೇವಲ 19 ಎಸೆತಗಳಲ್ಲಿ ತಲಾ 4 ಬೌಂಡರಿ, ಸಿಕ್ಸರ್ ಸಿಡಿಸಿ ಅಜೇಯ 44 ರನ್ ಗಳಿಸಿದ ಪರಿಣಾಮ ಸೌಥರ್ನ್ ಬ್ರೇವ್ ತಂಡ ನಿಗದಿತ 100 ಎಸೆತಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿತು.

The Hundred Final: ಚೊಚ್ಚಲ ದಿ ಹಂಡ್ರೆಡ್ ಸೀಸನ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸೌಥರ್ನ್ ಬ್ರೇವ್ ತಂಡ
The Hundred Final
Updated By: Vinay Bhat

Updated on: Aug 22, 2021 | 8:24 AM

ದಿ ಹಂಡ್ರೆಡ್ (The Hundred) ಪುರುಷರ ಕಾಂಪಿಟೇಶ್ 2021 ರಲ್ಲಿ ಜೇಮ್ಸ್ ವಿನ್ಸ್ ನಾಯಕತ್ವದ ಸೌಥರ್ನ್ ಬ್ರೇವ್ (Southern Brave) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಬರ್ಮಿಂಗ್​​ಹ್ಯಾಮ್ ಫಿನಿಕ್ಸ್ ವಿರುದ್ಧದ ಅಂತಿಮ ಫೈನಲ್ ಪಂದ್ಯದಲ್ಲಿ ಸೌಥರ್ನ್ ಬ್ರೇವ್ 32 ರನ್​ಗಳ ಭರ್ಜರಿ ಜಯ ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟಿತು. ಲೀಗ್ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ತೋರಿದ್ದ ಬರ್ಮಿಂಗ್​ಹ್ಯಾಮ್ (Birmingham) ಫೈನಲ್​ನಲ್ಲಿ ಎಡವಿತು.

ಫೈನಲ್ ಕದನದಲ್ಲಿ ಮೊದಲ ಬ್ಯಾಟ್ ಮಾಡಿದ ಸೌಥರ್ನ್ ಬ್ರೇವ್ ತಂಡ ಉತ್ತಮ ಆರಂಭ ಪಡೆದುಕೊಂಡಿಲ್ಲ. ಕ್ವಿಂಟನ್ ಡಿಕಾಕ್ ಕೇವಲ 7 ರನ್​ಗೆ ಔಟ್ ಆದರೆ, ನಾಯಕ ಜೇಮ್ಸ್ ವಿನ್ಸ್ 4 ರನ್​ಗೆ ಬ್ಯಾಟ್ ಕೆಳಗಿಟ್ಟರು. ಈ ಸಂದರ್ಭ ಪೌಲ್ ಸ್ಟಿರ್ಲಿಂಗ್ ಹಾಗೂ ಅಲೆಕ್ಸ್ ಡೆವಿಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಡೆವಿಸ್ 27 ರನ್ ಬಾರಿಸಿದರೆ, ಪೌಲ್ ಕೇವಲ 36 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್ ಬಾರಿಸಿ 61 ರನ್ ಚಚ್ಚಿದರು.

ಅಂತಿಮ ಹಂತದಲ್ಲಿ ರಾಸ್ ವೈಟ್ಲೆ ಕೇವಲ 19 ಎಸೆತಗಳಲ್ಲಿ ತಲಾ 4 ಬೌಂಡರಿ, ಸಿಕ್ಸರ್ ಸಿಡಿಸಿ ಅಜೇಯ 44 ರನ್ ಗಳಿಸಿದ ಪರಿಣಾಮ ಸೌಥರ್ನ್ ಬ್ರೇವ್ ತಂಡ ನಿಗದಿತ 100 ಎಸೆತಗಳಲ್ಲಿ 5 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿತು.

ಕಠಿಣ ಟಾರ್ಗೆಟ್ ಬೆನ್ನಟ್ಟಿದ ಬರ್ಮಿಂಗ್​ಹ್ಯಾಮ್ ತಂಡ ಮೊದಲ ಓವರ್​ನಲ್ಲೇ ವಿಕೆಟ್ ಕಳೆದುಕೊಂಡಿತು. ನಾಯಕ ಮೊಯೀನ್ ಅಲಿ 30 ಎಸೆತಗಳಲ್ಲಿ 36 ರನ್ ಗಳಿಸಿ ನಿರ್ಗಮಿಸಿದರು. ಪ್ರತಿಬಾರಿ ತಂಡಕ್ಕೆ ಆಸರೆಯಾಗುತ್ತಿದ್ದ ಲಿವಿಂಗ್​ಸ್ಟನ್ 19 ಎಸೆತಗಳಲ್ಲಿ 46 ರನ್ ಚಚ್ಚಿ ರನೌಟ್​ಗೆ ಬಲಿಯಾದರು.

ಕೊನೆಯಲ್ಲಿ ಕ್ರಿಸ್ ಬೆಂಜಮಿನ್ 23 ಹಾಗೂ ಬೆನ್ ಹೊವೆಲ್ 20 ರನ್ ಗಳಿಸಿ ಅಜೇಯರಾಗಿ ಉಳಿದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಲಿಲ್ಲ. ಪರಿಣಾಮ ಬರ್ಮಿಂಗ್​ಹ್ಯಾಮ್ ತಂಡ 100 ಎಸೆತಗಳಲ್ಲಿ 5 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲುಕಂಡಿತು.

 

32 ರನ್​ಗಳ ಅಮೋಘ ಜಯದೊಂದಿಗೆ ಸೌಥರ್ನ್ ಬ್ರೇವ್ ತಂಡ ಚೊಚ್ಚಲ ದಿ ಹಂಡ್ರೆಡ್ ಸೀಸನ್​ನಲ್ಲಿ ಟ್ರೋಫಿ ಗೆದ್ದಿದೆ. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಪೌಲ್ ಸ್ಟಿರ್ಲಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರೆ, ಟೂರ್ನಿಯಿದ್ದಕ್ಕೂ ತಂಡದ ಗೆಲುವಿಗೆ ಹೋರಾಡಿದ ಲಿವಿಂಗ್​ಸ್ಟನ್ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.

Wanindu Hasaranga: ಆರ್​ಸಿಬಿ ತಂಡ ಸೇರಿದ ತಕ್ಷಣ ವನಿಂದು ಹಸರಂಗ ನೀಡಿದ ಪ್ರತಿಕ್ರಿಯೆ ನೋಡಿ

Formula 4 India: ಭಾರತೀಯ ಫಾರ್ಮುಲಾ ರೇಸಿಂಗ್ ಚಾಂಪಿಯನ್‌ಶಿಪ್​ಗೆ ಚಾಲನೆ

(BPH vs SOB The Hundred Mens Final Southern Brave beat Birmingham Phoenix by 32 runs to clinch first ever title of The Hundred)