ಟ್ರ್ಯಾಕ್ ಮತ್ತು ಫೀಲ್ಡ್ ಲೆಜೆಂಡ್ನ 35 ನೇ ಹುಟ್ಟುಹಬ್ಬಕ್ಕೆ ಭಾರತೀಯ ಕ್ರಿಕೆಟ್ ಲೆಜೆಂಡ್ ವಿಶ್ ಮಾಡಿದರು!
ಭಾರತಕ್ಕೆ ಬೇಟಿ ನೀಡಿದಾಗ ಪ್ರಾಯೋಜಿತ ಕ್ರಿಕೆಟ್ ಪಂದ್ಯಗಳಲ್ಲಿ ಬೋಲ್ಟ್ ಕಾಣಿಸಿಕೊಂಡಿದ್ದಾರೆ. ಯುವಿ ಜೊತೆ ಕ್ರಿಕೆಟ್ ಆಡಿದ ಬೋಲ್ಟ್ ನಂತರ ಭಾರತೀಯನನ್ನು ಟ್ರ್ಯಾಕ್ಗೆ ಕರೆದೊಯ್ದು ತಮ್ಮ ಜೊತೆ ಓಡುವಂತೆ ಮಾಡಿದ್ದರು.
ಮಹೇಂದ್ರಸಿಂಗ್ ಧೋನಿ ನೇತೃತ್ವದ ಭಾರತ 2011 ರ ವಿಶ್ವಕಪ್ ಗೆಲ್ಲುವಲ್ಲಿ ಚಾಂಪಿಯನ್ ಆಲ್-ರೌಂಡರ್ ಯುವರಾಜ ಸಿಂಗ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಯುವಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದರೆ ಇವರು ಮಾತ್ರ ವಿಖ್ಯಾತ ಸ್ಪ್ರಿಂಟರ್ ಜಮೈಕಾದ ಉಸೇನ್ ಬೋಲ್ಟ್ ಅವರ ಕಟ್ಟಾಭಿಮಾನಿ. 100 ಮತ್ತು 200 ಮೀಟರ್ ಓಟದಲ್ಲಿ ವಿಶ್ವದಾಖಲೆ ತನ್ನ ಹೆಸರಿಗೆ ಬರೆದುಕೊಂಡು ಟ್ರ್ಯಾಕ್ ಮತ್ತು ಫೀಲ್ಡ್ ಗೆ ವಿದಾಯ ಹೇಳಿದ ಬೋಲ್ಟ್ ಶನಿವಾರ 35 ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಯುವಿ ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಬೋಲ್ಟ್ ಜೊತೆಗಿನ ಪೋಟೋ ಪೋಸ್ಟ್ ಮಾಡಿ ಅದಕ್ಕೆ ಮೋಜಿನ ಕ್ಯಾಪ್ಶನ್ ನೀಡಿದ್ದಾರೆ. ಬೋಲ್ಟ್ ಅವರನ್ನು ‘ವೇಗದ ದೊರೆ’ ಎಂದು ಹೇಳಿ, ‘ಕಿಂಗ್ ಆಫ್ ಸ್ಪೀಡ್ @usainbolt! ಗೆ ಹುಟ್ಟುಹಬ್ಬದ ಶುಭಾಷಯಗಳು. ಬೆಳಕು ನಿಮ್ಮೊಂದಿಗೆ ಸ್ಪರ್ಧಿಸಲು ಅಣಿಯಾಗುತ್ತಿದೆಯೇ #Legend,’ ಅಂತ ಬರೆದಿದ್ದಾರೆ. ಚಿತ್ರದಲ್ಲಿ ಬೋಲ್ಟ್ ಅವರು ತಮ್ಮ ಸ್ನಾಯುಗಳನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಲೆಜೆಂಡ್ಗಳಿಬ್ಬರು ನಗುತ್ತಿದ್ದಾರೆ.
Happy birthday to the king of speed @usainbolt! How's the light catching up with you? ⚡️⚡️#Legend pic.twitter.com/8dJ2pwU61H
— Yuvraj Singh (@YUVSTRONG12) August 21, 2021
ಭಾರತಕ್ಕೆ ಬೇಟಿ ನೀಡಿದಾಗ ಪ್ರಾಯೋಜಿತ ಕ್ರಿಕೆಟ್ ಪಂದ್ಯಗಳಲ್ಲಿ ಬೋಲ್ಟ್ ಕಾಣಿಸಿಕೊಂಡಿದ್ದಾರೆ. ಯುವಿ ಜೊತೆ ಕ್ರಿಕೆಟ್ ಆಡಿದ ಬೋಲ್ಟ್ ನಂತರ ಭಾರತೀಯನನ್ನು ಟ್ರ್ಯಾಕ್ಗೆ ಕರೆದೊಯ್ದು ತಮ್ಮ ಜೊತೆ ಓಡುವಂತೆ ಮಾಡಿದ್ದರು.
ಓಟಕ್ಕೆ ವಿದಾಯ ಹೇಳುವ ಮೊದಲು ಒಲಂಪಿಕ್ಸ್ ಕ್ರೀಡಾಕೂಟದ 100 ಮೀಟರ್ ಓಟದಲ್ಲಿ ಸತತ ಎರಡು ಚಿನ್ನದ ಪದಕಗಳು ಸೇರಿದಂತೆ ಒಟ್ಟು 8 ಚಿನ್ನದ ಪದಕಗಳನ್ನು ಬೋಲ್ಟ್ ಗೆದ್ದಿದ್ದಾರೆ.
1984 ಲಾಸ್ ಏಂಜೆಲಿಸ್ ಒಲಂಪಿಕ್ಸ್ನಲ್ಲಿ ಅಮೆರಿಕದ ಕಾರ್ಲ್ ಲೂಯಿಸ್ 100 ಮತ್ತು 200 ಮೀಟರ್ಗಳ ಓಟದಲ್ಲಿ ಚಿನ್ನದ ಪದಕಗಳನ್ನು ಗೆದ್ದ ನಂತರ ಕೇವಲ ಬೋಲ್ಟ್ ಮಾತ್ರ ಆ ಸಾಧನೆಯನ್ನು ಒಲಂಪಿಕ್ಸ್ ನಲ್ಲಿ ಪುನರಾವರ್ತಿಸಿದ್ದಾರೆ.
2012 ರ ಬೀಜಿಂಗ್ ಒಲಂಪಿಕ್ಸ್ನಲ್ಲಿ ಅವರು 100 ಮತ್ತು 200 ಮೀಟರ್ಗಳ ಒಟವನ್ನು ಕ್ರಮವಾಗಿ 9.58 ಸೆಕೆಂಡ್ ಮತ್ತು 19.19 ಸೆಕೆಂಡುಗಳಲ್ಲಿ ಓಡಿ ವಿಶ್ವ ದಾಖಲೆಗಳನ್ನು ಅಳಿಸಿಹಾಕಿದ್ದರು.
ಟ್ರ್ಯಾಕ್ ಮತ್ತು ಫೀಲ್ಡ್ ಗೆ ಗುಡ್ ಬೈ ಹೇಳಿದ ಬಳಿಕ ಒಬ್ಬ ಪ್ರೊಫೆಶನಲ್ ಫುಟ್ಬಾಲ್ ಆಟಗಾರನಾಗ ಬಯಸಿ ಹಲವಾರು ಪ್ರಮುಖ ಕ್ಲಬ್ಗಳ ಟ್ರಯಲ್ನಲ್ಲಿ ಭಾಗವಹಿಸಿದ್ದರು.
ಆಸ್ಟ್ರೇಲಿಯಾ ಎ-ಲೀಗ್ ತಂಡದ ಸೆಂಟ್ರಲ್ ಕೋಸ್ಟ್ ಮರೀನರ್ಸ್ ಪರ ಆಡಿ ಒಂದೆರಡು ಗೋಲು ಗಳಿಸಿದರೂ ಆ ಕ್ಲಬ್ನ ಕಾಂಟ್ರ್ಯಾಕ್ಟ್ ಪಡೆದುಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ.
ಬೋಲ್ಟ್ ದಕ್ಷಿಣ ಆಫ್ರಿಕಾದಲ್ಲಿ ಮಮೆಲೊಡಿ ಸನ್ಡೌನ್ಸ್ ಮತ್ತು ಬುಂಡೆಸ್ಲಿಗಾನಲ್ಲಿ ಆಡುವ ಬೊರಷ್ಯಾ ಡಾರ್ಟ್ಮುಂಡ್ ಮತ್ತು ನಾರ್ವೆಯ ಸ್ಟ್ರಾಮ್ಸ್ಗಾಡ್ಸೆಟ್ ಕ್ಲಬ್ಗಳೊಂದಿಗೂ ತರಬೇತಿ ಹೊಂದಿದರು.
ನಂತರ ಅವರು ಮಾಲ್ಟಾದ ವೆಲೆಟ್ಟಾ ಕ್ಲಬ್ ಆಫರ್ ಮಾಡಿದ ಎರಡು ವರ್ಷಗಳ ಕಾಂಟ್ರ್ಯಾಕ್ಟ್ ಅನ್ನು ತಿರಸ್ಕರಿಸಿದರು.
ಇದನ್ನೂ ಓದಿ: ವಿಶ್ವ ಎಡಚರ ದಿನ ಗಾಲ್ಫ್ ಕೋರ್ಸ್ನಲ್ಲಿ ಸಚಿನ್ ತೆಂಡೂಲ್ಕರ್ ಅವರು ಯುವರಾಜ ಸಿಂಗ್ರಿಂದ ಸಲಹೆ ಪಡೆದ ಪ್ರಸಂಗ
Published On - 10:34 pm, Sat, 21 August 21