ವಿಶ್ವ ಎಡಚರ ದಿನ ಗಾಲ್ಫ್ ಕೋರ್ಸ್​ನಲ್ಲಿ  ಸಚಿನ್ ತೆಂಡೂಲ್ಕರ್ ಅವರು ಯುವರಾಜ ಸಿಂಗ್​ರಿಂದ ಸಲಹೆ ಪಡೆದ ಪ್ರಸಂಗ

ಆದರೆ ವಿಶ್ವ ಎಡಚರ ದಿನದಂದು (ಆಗಸ್ಟ್ 13) ಅವರಿಗೆ ಗಾಲ್ಫ್ ಎಡಗೈಯಿಂದ ಆಡಬೇಕಿನಿಸಿದೆ. ಆದರೆ ಅದಕ್ಕೆ ಎಡಚನೇ ಆಗಿರುವ ಒಬ್ಬ ಗುರು, ಕೋಚ್ ಬೇಕಲ್ಲ? ಅವರು ಅಂತಿಂಥ ಎಡಚನನ್ನು ಹುಡುಕಿಲ್ಲ

ವಿಶ್ವ ಎಡಚರ ದಿನ ಗಾಲ್ಫ್ ಕೋರ್ಸ್​ನಲ್ಲಿ  ಸಚಿನ್ ತೆಂಡೂಲ್ಕರ್ ಅವರು ಯುವರಾಜ ಸಿಂಗ್​ರಿಂದ ಸಲಹೆ ಪಡೆದ ಪ್ರಸಂಗ
ಯುವರಾಜ್ ಸಿಂಗ್ ಜೊತೆ ಸಚಿನ್​ ತೆಂಡೂಲ್ಕರ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 14, 2021 | 12:36 AM

ಕ್ರೀಡಾಪಟುಗಳು ಒಂದು ಕ್ರೀಡೆಯಲ್ಲಿ ಪರಿಣಿತಿ ಸಾಧಿಸಿದ್ದರೂ ಅವರಿಗೆ ಬೇರೆ ಕ್ರೀಡೆಗಳ ಬಗ್ಗೆ ಅಭಿರುಚಿ ಇರುತ್ತದೆ ಮತ್ತು ಅವುಗಳಲ್ಲಿ ಕೆಲವನ್ನು ಆಡುವ ಪ್ರಯತ್ನ ಸಹ ಅವರು ಮಾಡುತ್ತಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗಾಲ್ಫ್ ಬಗ್ಗೆ ತಮಗಿರುವ ವ್ಯಾಮೋಹವನ್ನು ಅಗಾಗ ಹೇಳಿದ್ದಾರೆ. ಸಚಿನ್ ಎಡಚನಾದರೂ ಬಲಗೈಯಿಂದ ಬ್ಯಾಟ್ ಮಾಡುತ್ತಿದ್ದರು ಮತ್ತು ಬೌಲಿಂಗ್ ಸಹ. ಅವರೊಬ್ಬ ಅಂಬಿಡೆಕ್ಸ್ಡರ್ (ಉಭಯ ಹಸ್ತ ಕುಶಲ) ಅಂತ ಎಲ್ಲರಿಗೂ ಗೊತ್ತು. ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಅವರು ಗಾಲ್ಫ್ ಕೋರ್ಸ್​ಗಳಲ್ಲಿ ಜಾಸ್ತಿ ಕಾಣಿಸಿಕೊಳ್ಳುತ್ತಿದ್ದಾರೆ.

ಆದರೆ ವಿಶ್ವ ಎಡಚರ ದಿನದಂದು (ಆಗಸ್ಟ್ 13) ಅವರಿಗೆ ಗಾಲ್ಫ್ ಎಡಗೈಯಿಂದ ಆಡಬೇಕಿನಿಸಿದೆ. ಆದರೆ ಅದಕ್ಕೆ ಎಡಚನೇ ಆಗಿರುವ ಒಬ್ಬ ಗುರು, ಕೋಚ್ ಬೇಕಲ್ಲ? ಅವರು ಅಂತಿಂಥ ಎಡಚನನ್ನು ಹುಡುಕಿಲ್ಲ ಮಾರಾಯ್ರೇ. ಭಾರತದ ಕಂಡ ಅತ್ಯುತ್ತಮ ಆಲ್-ರೌಂಡರ್ ಯಾರಂತ ನಿಮಗೆ ಗೊತ್ತಲ್ಲ… ಹೌದು, ತಾನು ಯುವರಾಜ್ ಸಿಂಗ್ ಅವರ ನೆರವು ಪಡೆದೆ ಎಂದು ಸಚಿನ್ ಹೇಳಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರು ಯುವರಾಜ ಜೊತೆ ಗಾಲ್ಫ್ ಆಡುತ್ತಿರುವ ಮತ್ತು ಇದನ್ನೆಲ್ಲ ಮಾತಾಡಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

‘ಮಾಸ್ಟರ್ ಬ್ಲಾಸ್ಟರ್​ನಂತೆ ಬಾರಿಸಿರಿ’ ಎಂದು ಯುವಿ ಹೇಳುತ್ತಿರುವುದು ವಿಡಿಯೋನಲ್ಲಿ ಕೇಳಿಸುತ್ತದೆ.

ಸಚಿನ್ ರ ವಿಡಯೋಗೆ ಎಂದಿನ ಹಾಗೆ ಲಕ್ಷಾಂತರ ವ್ಯೂಗಳು ಬಂದಿವೆ. ಅವರ ಅಭಿಮಾನಿಗಳು ಹೃದಯಾಕಾರದ ಇಮೋಜಿಗಳೊಂದಿಗೆ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಕೊರೊನಾವೈರಸ್ ಪಿಡುಗು ಶುರುವಾದಾಗಿನಿಂದ ಸಚಿನ್ ಸೋಶಿಯಲ್ ಜಾಲತಾಣಗಳಲ್ಲಿ ಬಗೆಬಗೆಯ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅದರಲ್ಲಿ ಅಡುಗೆ ರೆಸಿಪಿಗಳು ಸಹ ಸೇರಿರುತ್ತವೆ ಎನ್ನವುದು ವಿಶೇಷ,

ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ 100 ಶತಕಗಳನ್ನು ಬಾರಿಸಿರುವ 48 ರ ಪ್ರಾಯದ ಸಚಿನ್ ಇತ್ತೀಚಿಗೆ ಒಂದು ನಾಯಮರಿಯನ್ನು ದತ್ತು ಪಡೆದು ಅದಕ್ಕೆ ಸ್ಪೈಕ್ ಅಂತ ಹೆಸರಿಟ್ಟಿದ್ದಾರೆ. ಅದು ಹೇಗೆ ಸಿಕ್ಕಿತೆಂದು ತಾನು ವಿವರಿಸುತ್ತಿರುವ ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ.

ಇಲ್ಲಿದೆ ಆ ವಿಡಿಯೋ, ನೀವೂ ನೋಡಿ.

2011 ರಲ್ಲಿ ಐಸಿಸಿ ವಿಶ್ವಕಪ್ ಗೆದ್ದ ಭಾರತೀಯ ಟೀಮಿನ ಸದಸ್ಯರಾಗಿದ್ದ ಸಚಿನ್ ಸುಮಾರು 32 ವರ್ಷಗಳ ಹಿಂದೆ (ನವೆಂಬರ್ 15,1989) ಪಾಕಿಸ್ತಾನದ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಅದಾದ ಒಂದು ತಿಂಗಳ ನಂತರ ಡಿಸೆಂಬರ್ 18, 1989 ರಂದು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್ಗೂ ಪ್ರವೇಶ ಮಾಡಿದ್ದರು.

2011 ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಾಗ ಅ ಟೂರ್ನಿಯಲ್ಲಿ ಸಚಿನ್ ಉತ್ತಮ ಪ್ರದರ್ಶನಗಳನ್ನು ನೀಡಿದ್ದರು. 2 ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ ಅವರು 482 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದವರ ಲಿಸ್ಟ್ನಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಷಾನ್ (500) ನಂತರ ಎರಡನೇ ಸ್ಥಾನದಲ್ಲಿದ್ದರು.

2013 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾಗುವ ಮೊದಲು ಅವರು ಟೆಸ್ಟ್ ಮತ್ತು ಒಡಿಐಗಳಲ್ಲಿ ಅತಿಹೆಚ್ಚು ರನ್ ಗಳಿಸಿದ ಕೀರ್ತಿಗೆ ಪಾತ್ರರಾದರು. ಇಂದಿಗೂ ಈ ದಾಖಲೆಗಳು ಅವರ ಹೆಸರಿನಲ್ಲೇ ಇವೆ.

ಇದನ್ನೂ ಓದಿ:  ಲಾರ್ಡ್ಸ್ ಮೈದಾನದಲ್ಲಿ ಕನ್ನಡಿಗ ರಾಹುಲ್​ರಂತೆ ಲಾರ್ಡ್ ಅನಿಸಿಕೊಳ್ಳುವುದು ಕ್ರಿಕೆಟ್ ದಿಗ್ಗಜರಿಗೂ ಸಾಧ್ಯವಾಗಿಲ್ಲ!

Published On - 12:31 am, Sat, 14 August 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ