Tokyo Paralympics: ಒಲಿಂಪಿಕ್ಸ್ ಆಯ್ತು.. ಈಗ ಪ್ಯಾರಾಲಿಂಪಿಕ್ಸ್ ಮೇಲು ಕೊರೊನಾ ವಕ್ರದೃಷ್ಟಿ! ಇಬ್ಬರು ಸಿಬ್ಬಂದಿಗೆ ಕೊರೊನಾ
Tokyo Paralympics: ಪ್ಯಾರಾಲಿಂಪಿಕ್ ಸಂಘಟನಾ ಸಮಿತಿಯ ಪ್ರಕಾರ, ಇಲ್ಲಿಯವರೆಗೆ ಯಾವುದೇ ಆಟಗಾರರಲ್ಲಿ ಕೊರೊನಾ ಕಂಡುಬಂದಿಲ್ಲ. ಆದರೆ ಸಿಬ್ಬಂದಿ ವರ್ಗದವರಲ್ಲಿ ಕೊರೊನಾ ಕಂಡುಬಂದಿದೆ.
ಕೊರೊನಾ ಬಿಕ್ಕಟ್ಟಿನಿಂದಾಗಿ ಒಂದು ವರ್ಷ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಅಂತಿಮವಾಗಿ ಈ ವರ್ಷ ಕೊನೆಗೊಂಡಿತು. ಅದರ ನಂತರ, ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಸಿದ್ಧತೆಗಳು ನಡೆಯುತ್ತಿವೆ (ಟೋಕಿಯೊ ಪ್ಯಾರಾಲಿಂಪಿಕ್ಸ್ 2020). ಆದರೆ ಈ ಆಟಗಳ ಮೇಲೂ ಸಹ ಕೊರೊನಾ ತನ್ನ ದಾಳಿ ಆರಂಭಿಸಿದೆ. ಆಗಸ್ಟ್ 24 ರಂದು ಆರಂಭವಾಗಲಿರುವ ಪಂದ್ಯಗಳಿಗಾಗಿ ಹಲವು ಆಟಗಾರರು ಟೋಕಿಯೊಗೆ ಆಗಮಿಸಿದ್ದಾರೆ. ಆದರೆ ಈ ಮಧ್ಯೆ, ಕೋವಿಡ್ -19 ರ ಎರಡು ಪ್ರಕರಣಗಳು ಬೆಳಕಿಗೆ ಬಂದಿವೆ.
ಉದ್ಘಾಟನಾ ಸಮಾರಂಭಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗ ಸಂಘಟಕರು ಆತಂಕದಲ್ಲಿದ್ದಾರೆ. ಪ್ಯಾರಾಲಿಂಪಿಕ್ ಸಂಘಟನಾ ಸಮಿತಿಯ ಪ್ರಕಾರ, ಇಲ್ಲಿಯವರೆಗೆ ಯಾವುದೇ ಆಟಗಾರರಲ್ಲಿ ಕೊರೊನಾ ಕಂಡುಬಂದಿಲ್ಲ. ಆದರೆ ಸಿಬ್ಬಂದಿ ವರ್ಗದವರಲ್ಲಿ ಕೊರೊನಾ ಕಂಡುಬಂದಿದೆ. ಸೋಂಕು ಪತ್ತೆಯಾದವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಟೋಕಿಯೊ ಒಲಿಂಪಿಕ್ಸ್ ಅನ್ನು ಪರಿಗಣಿಸಿ, ಜುಲೈ 1 ರಿಂದ 63,000 ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 54 ಕ್ರೀಡಾಪಟುಗಳು ಆಗಸ್ಟ್ 24 ರಿಂದ ಸೆಪ್ಟೆಂಬರ್ 5 ರ ವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾರತೀಯ ಆಟಗಾರರು ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 54 ಪ್ಯಾರಾ ಅಥ್ಲೀಟ್ಗಳು 9 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಇವರೆಲ್ಲರನ್ನೂ ನರೇಂದ್ರ ಮೋದಿಯವರಿಂದ ಹಿಡಿದು ಕ್ರೀಡಾ ಮಂತ್ರಿಯವರೆಗೆ ಎಲ್ಲಾ ಭಾರತೀಯರು ಅಭಿನಂದಿಸಿದ್ದಾರೆ.
ಪ್ಯಾರಾಲಿಂಪಿಕ್ಸ್ ಎಂದರೇನು? ಪ್ಯಾರಾಲಿಂಪಿಕ್ಸ್ ಅಂತರಾಷ್ಟ್ರೀಯ ಕ್ರೀಡಾಕೂಟ ಆಗಿದೆ. ಇದರಲ್ಲಿ ಒಲಿಂಪಿಕ್ಸ್‌ನಂತೆಯೇ ಆಟಗಳಿವೆ. ಇದು ತಂಡದ ಕ್ರೀಡೆಗಳನ್ನು ಒಳಗೊಂಡಂತೆ ವೈಯಕ್ತಿಕ ಸ್ಪರ್ಧೆಗಳನ್ನು ಒಳಗೊಂಡಿದೆ. ಈ ಸ್ಪರ್ಧೆಯಲ್ಲಿ ಆಡುವ ಆಟಗಾರರು ಯಾವುದಾದರೂ ದೇಹದ ನ್ಯೂನತೆಯಿಂದ ಬಳಲುತ್ತಿರುತ್ತಾರೆ. ಕ್ರೀಡಾಕೂಟವನ್ನು ಅಂತರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ (ಐಪಿಸಿ) ಆಯೋಜಿಸಿದೆ.