AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವ ಅಂಡರ್-20 ಅಥ್ಲೆಟಿಕ್ಸ್​​​ನಲ್ಲಿ ಸತತವಾಗಿ ಎರಡು ವಿಶ್ವ ದಾಖಲೆ ಸ್ಥಾಪಿಸಿ 110 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಜೋಯಾ

19 ವರ್ಷ ವಯಸ್ಸಿನ ಜೋಯಾ ಆಸ್ಟ್ರೇಲಿಯನ್ ತಾಯಿ ಮತ್ತು ಜಿಂಬಾಬ್ವೇ ತಂದೆಯ ಸಂತಾನವಾಗಿದ್ದು 12.72 ಸೆಕೆಂಡ್​​ಗಳಲ್ಲಿ ಓಟ ಪೂರೈಸಿ ಚಿನ್ನದ ಪದಕ ತನ್ನದಾಗಿಸಿಕೊಂಡರು. ಸೆಮಿಫೈನಲ್​​ನಲ್ಲಿ ಅವರು ಈ ಸಮಯಕ್ಕಿಂತ 0.21 ಸೆಕೆಂಡ್ ಹೆಚ್ಚಿನ ಸಮಯದೊಂದಿಗೆ ಓಡಿ ವಿಶ್ವದಾಖಲೆ ಸ್ಥಾಪಿಸಿದ್ದರು.

ವಿಶ್ವ ಅಂಡರ್-20 ಅಥ್ಲೆಟಿಕ್ಸ್​​​ನಲ್ಲಿ ಸತತವಾಗಿ ಎರಡು ವಿಶ್ವ ದಾಖಲೆ ಸ್ಥಾಪಿಸಿ 110 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಜೋಯಾ
ಸಾಶಾ ಜೋಯಾ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Aug 22, 2021 | 12:59 AM

Share

ಕ್ರಿಕೆಟ್​ನಲ್ಲಿ  ಬ್ಯಾಟ್ಸ್​ಮನ್​ಗಳು ಬ್ಯಾಕ್ ಟು ಬ್ಯಾಕ್ ಶತಕ ಬಾರಿಸುವುದನ್ನು ನಾವು ನೋಡಿದ್ದೇವೆ. ಆದರೆ ಟ್ರ್ಯಾಕ್ ಅಂಡ್ ಫೀಲ್ಡ್ ಈವೆಂಟ್ಗಳಲ್ಲಿ ಬ್ಯಾಕ್ ಟು ಬ್ಯಾಕ್ ವಿಶ್ವದಾಖಲೆಗಳನ್ನು ಸ್ಥಾಪಿಸುವುದು ಅಪರೂಪಕ್ಕೊಮ್ಮೆ ನಡೆಯುವ ಸಂಗತಿ. ಫ್ರಾನ್ಸ್ ನ ಸಾಶಾ ಜೋಯಾ ಪುರುಷರ 20 ವರ್ಷದೊಳಗಿನವರ 110 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಕೇವಲ 24 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ವಿಶ್ವ ದಾಖಲೆ ಸ್ಥಾಪಿಸುವ ಮೂಲಕ ವಿಕ್ರಮ ಮೆರೆದಿದ್ದಾರೆ. ಕೀನ್ಯಾದಲ್ಲಿ ನಡೆಯುತ್ತಿರುವ ಏಜ್ ಗ್ರೂಪ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಜೋಯಾ ಎರಡು ಬಾರಿ ವಿಶ್ವ ದಾಖಲೆ ಸ್ಥಾಪಿಸಿ ಚಿನ್ನದ ಪದಕ ಗೆದ್ದಿದ್ದಾರೆ.

19 ವರ್ಷ ವಯಸ್ಸಿನ ಜೋಯಾ ಆಸ್ಟ್ರೇಲಿಯನ್ ತಾಯಿ ಮತ್ತು ಜಿಂಬಾಬ್ವೇ ತಂದೆಯ ಸಂತಾನವಾಗಿದ್ದು 12.72 ಸೆಕೆಂಡ್​​ಗಳಲ್ಲಿ ಓಟ ಪೂರೈಸಿ ಚಿನ್ನದ ಪದಕ ತನ್ನದಾಗಿಸಿಕೊಂಡರು. ಸೆಮಿಫೈನಲ್​​ನಲ್ಲಿ ಅವರು ಈ ಸಮಯಕ್ಕಿಂತ 0.21 ಸೆಕೆಂಡ್ ಹೆಚ್ಚಿನ ಸಮಯದೊಂದಿಗೆ ಓಡಿ ವಿಶ್ವದಾಖಲೆ ಸ್ಥಾಪಿಸಿದ್ದರು. ಒಂದು ದಿನದೊಳಗೆ ತನ್ನ ದಾಖಲೆಯನ್ನೇ ಮುರಿದು ಹೊಸ ದಾಖಲೆಯನ್ನು ಅವರು ನಿರ್ಮಿಸಿದ್ದಾರೆ.

‘ನನಗೆ ಬಹಳ ಸಂತೋಷವಾಗಿದೆ. ಅಂದುಕೊಂಡಿದ್ದನ್ನು ಸಾಧಿಸಿದ ತೃಪ್ತಿ ನನಗಿದೆ. ಕಳೆದೊಂದು ವರ್ಷದಿಂದ ಇದೇ ನನ್ನ ಗುರಿಯಾಗಿತ್ತು. ಅದನ್ನು ಸಾಧಿಸಿದ್ದೇನೆ,’ ಎಂದು ಜೋಯಾ ಹೇಳಿದರು.

‘ಶನಿವಾರ ವಾರ್ಮ್ ಅಪ್ ಆಗುತ್ತಿದ್ದಾಗ ಹಿಪ್ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ನೋವು ಕೊಂಚ ಜಾಸ್ತಿಯೇ ಇತ್ತು, ಆದರೆ ಇಂಥ ನೋವುಗಳನ್ನು ಮೆಟ್ಟಿ ನಿಲ್ಲುವುದರ ಮೇಲೆಯೇ ಒಬ್ಬ ಆಥ್ಲೀಟ್ನ ಬದುಕು ನಿರ್ಭರಗೊಂಡಿರುತ್ತದೆ,’ ಎಂದು ಜೋಯಾ ಹೇಳಿದರು.

ಜಮೈಕಾದ ವಶೌನ್ ವಸಿಯಾನಾ 13.2 ಸೆಕೆಂಡ್ಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಎರಡನೇ ಸ್ಥಾನ ಗಿಟ್ಟಿಸಿದರೆ 13.43 ಸೆಕೆಂಡ್ಗಳಲ್ಲಿ ಓಡಿದ ಪೋಲೆಂಡ್​ನ ಜಾಕುಬ್ ಜಿಮನ್​ಸ್ಕಿ ಮೂರನೇಯವರಾದರು. ಇವರಿಬ್ಬರೂ ತಮ್ಮ ವೈಯಕ್ತಿಕ ದಾಖಲೆಗಳನ್ನು ಉತ್ತಮಪಡಿಸಿಕೊಂಡಿದ್ದು ವಿಶೇಷ.

ಗುರುವಾರ ಮಹಿಳೆಯರ 100 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಗೆದ್ದ ನಮೀಬಿಯಾದ ಬೀಟ್ರೈಸ್ ಮಸಿಲಿಂಗಿ ಅವರು 200 ಮೀಟರ್ ಓಟದ ಸೆಮಿಫೈನಲ್ ನಲ್ಲಿ 22.19 ಸೆಕೆಂಡ್ಗಳಲ್ಲಿ ಓಡಿ ಚಾಂಪಿಯನ್​ಶಿಪ್​ ದಾಖಲೆ ಸ್ಥಾಪಿಸಿದರು. ಮಸಿಲಿಂಗಿ ಮತ್ತು ಅವರ ದೇಶದವರೇ ಆಗಿರುವ ಕ್ರಿಸ್ಟೀನ್ ಎಮ್ಬೊಮಾ ಅವರು ಡಿಫರೆನ್ಸಸ್ ಇನ್ ಸೆಕ್ಸುಯಲ್ ಡೆವೆಲಪ್​ಮೆಂಟ್ (ಡಿಎಸ್ಡಿ) ಕಾರಣದಿಂದಾಗಿ ಇವರಿಬ್ಬರೂ ಕೆಲ ನಿರ್ದಿಷ್ಟ ಈವೆಂಟ್ ಭಾಗವಹಿಸಲಾರರು. ಇವರ ದೇಹದಲ್ಲಿ ನೈಸರ್ಗಿಕವಾಗಿ ಟೆಸ್ಟೊಸ್ಟಿರೋನ್ ಪ್ರಮಾಣ ಅಧಿಕವಾಗಿದ್ದು ಇಂಥ ಆಥ್ಲೀಟ್ಗಳನ್ನು ಇಂಟರ್ಸೆಕ್ಸ್ ಅಥ್ಲೀಟ್ಗಳೆಂದು ಕರೆಯುತ್ತಾರೆ.

ವಿಶ್ವ ಅಥ್ಲೆಟಿಕ್ಸ್ ನಿಯಮಾವಳಿಗಳ ಪ್ರಕಾರ ಇಬ್ಬರು ಸ್ಪ್ರಿಂಟರ್​ಗಲ ಅಪರೂಪದ ದೈಹಿಕ ರಚನೆಯು 400 ಮೀಟರ್ ಮತ್ತು ಅದಕ್ಕಿಂತ ಹೆಚ್ಚಿನ ಅಂತರದ ಓಟದ ಸ್ಪರ್ಧೆಗಳಲ್ಲಿ ಬೇರೆ ಅಥ್ಲೀಟ್ಗಳಿಗೆ ಹೋಲಿಸಿದರೆ ಅಸಹಜವೆನಿಸುವ ಪ್ರಯೋಜನ ಸಿಗುವುದರಿಂದ ಅವರಿಗೆ ಈ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶವಿಲ್ಲ.

ಇದನ್ನೂ ಓದಿ:  Esports | ಜಿಯೋ ಗೇಮಿಂಗ್ ಮಾಸ್ಟರ್ಸ್​​ಗೆ ಉತ್ತಮ ಪ್ರತಿಕ್ರಿಯೆ: 70 ದಿನದ ಟೂರ್ನಮೆಂಟ್‌, 10 ಮಿಲಿಯನ್ ವೀಕ್ಷಣೆ!