World U20 Athletics Championships: ಭಾರತಕ್ಕೆ ಮತ್ತೊಂದು ಪದಕ.. 10,000 ಮೀಟರ್ ಕಾಲ್ನಡಿಗೆಯಲ್ಲಿ ಬೆಳ್ಳಿ ಗೆದ್ದ ಅಮಿತ್

World U20 Athletics Championships: ಸ್ತುತ ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ಅಂಡರ್ -20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಓಟಗಾರ ಅಮಿತ್ ಖಾತ್ರಿ ಪದಕ ಗೆದ್ದಿದ್ದಾರೆ.

World U20 Athletics Championships: ಭಾರತಕ್ಕೆ ಮತ್ತೊಂದು ಪದಕ.. 10,000 ಮೀಟರ್ ಕಾಲ್ನಡಿಗೆಯಲ್ಲಿ ಬೆಳ್ಳಿ ಗೆದ್ದ ಅಮಿತ್
ಅಮಿತ್ ಖಾತ್ರಿ
Follow us
TV9 Web
| Updated By: ಪೃಥ್ವಿಶಂಕರ

Updated on: Aug 21, 2021 | 4:15 PM

ಪ್ರಸ್ತುತ ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ಅಂಡರ್ -20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಓಟಗಾರ ಅಮಿತ್ ಖಾತ್ರಿ ಪದಕ ಗೆದ್ದಿದ್ದಾರೆ. ಪುರುಷರ 10,000 ಮೀಟರ್ ನಡಿಗೆಯಲ್ಲಿ ಅಮಿತ್ ಬೆಳ್ಳಿ ಪದಕ ಗೆದ್ದಿದ್ದಾರೆ. ಅಮಿತ್ 42 ನಿಮಿಷ 17.94 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿದರು. ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಇದು ಎರಡನೇ ಪದಕವಾಗಿದೆ. ಈ ಮೊದಲು ಭಾರತವು ಮಿಶ್ರ ರಿಲೇ ತಂಡ 4×400 ಮೀಟರ್ ಓಟದಲ್ಲಿ ಕಂಚಿನ ಪದಕ ಗೆದ್ದಿತ್ತು. ಅಮಿತ್ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಐದನೇ ಭಾರತೀಯ ಆಟಗಾರ.

ಓಟದ ನಡಿಗೆಯಲ್ಲಿ ಅಮಿತ್ ಮುಂಚೂಣಿಯಲ್ಲಿದ್ದರು. ಆದರೆ ಅವರು ನೀರು ಕುಡಿಯುವ ವೇಳೆ ಸ್ವಲ್ಪ ಹೊತ್ತು ವಿಶ್ರಮಿಸಿದರು. ಈ ಮಧ್ಯೆ ಕೀನ್ಯಾದ ಹೆರಿಸ್ಟೋನ್ ವನ್ಯೋನಿ ಅಮಿತ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದರು. ನಂತರ ಹೆರಿಸ್ಟೋನ್, ಅಮಿತ್​ಗೆ ಮುಂದೆ ಸಾಗುವ ಯಾವುದೇ ಅವಕಾಶವನ್ನು ನೀಡಲಿಲ್ಲ. ಹೀಗಾಗಿ ಹೆರಿಸ್ಟೋನ್ ಚಿನ್ನದ ಪದಕವನ್ನು ಪಡೆದರು. ಸ್ಪೇನ್‌ನ ಪಾಲ್ ಮೆಕ್‌ಗ್ರಾತ್ 42: 26.11 ಸೆಕೆಂಡುಗಳಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

ಮಿಶ್ರ ತಂಡ ಇತಿಹಾಸ ಸೃಷ್ಟಿಸಿದೆ ಈ ಹಿಂದೆ, ಆಗಸ್ಟ್ 18 ರಂದು, ಭಾರತ 4*400 ಮೀಟರ್ ಮಿಶ್ರ ರಿಲೇ ಓಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತು. ಭಾರತದ ಭರತ್, ಕಪಿಲ್, ಸುಮಿ ಮತ್ತು ಪ್ರಿಯಾ ಮೋಹನ್ 3.20.60 ನಿಮಿಷಗಳ ಸಮಯದೊಂದಿಗೆ ಮೂರನೇ ಸ್ಥಾನ ಪಡೆದರು. ಭಾರತೀಯ ಕ್ರೀಡಾಪಟುಗಳು ಋತುವಿನ ಅತ್ಯುತ್ತಮ ಪ್ರದರ್ಶನ ನೀಡಿದರು. ನೈಜೀರಿಯಾ ಈ ಸ್ಪರ್ಧೆಯಲ್ಲಿ ಚಿನ್ನ ಪದಕವನ್ನು ಪಡೆದುಕೊಂಡಿತು ಮತ್ತು ಪೋಲೆಂಡ್ ಬೆಳ್ಳಿ ಪದಕವನ್ನು ಪಡೆಯಿತು. ನೈಜೀರಿಯಾ 3: 19.70 ನಿಮಿಷಗಳು ಮತ್ತು ಪೋಲೆಂಡ್ 3: 19.80 ನಿಮಿಷಗಳಲ್ಲಿ ಮೊದಲ ಮತ್ತು ಎರಡನೇ ಸ್ಥಾನ ಪಡೆದುಕೊಂಡಿದೆ. ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ 4*400 ಮೀಟರ್ ಮಿಶ್ರ ರಿಲೇ ರೇಸ್ ಅನ್ನು ಸೇರಿಸಲಾಯಿತು. ಇದರಲ್ಲಿ ಭಾರತ ಮೊದಲ ಬಾರಿಗೆ ಪದಕ ಗೆದ್ದಿತು. ಅಲ್ಲದೆ, ಭಾರತ ಮೊದಲ ದಿನವೇ ಪದಕದೊಂದಿಗೆ ತನ್ನ ಖಾತೆಯನ್ನು ತೆರೆದಿದೆ.

ಇದು ಅಂಡರ್ -20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ ಭಾರತದ ಐದನೇ ಪದಕವಾಗಿದೆ. ಎರಡನೇ ಅತ್ಯುತ್ತಮ ಸಮಯದೊಂದಿಗೆ ಭಾರತ ಫೈನಲ್‌ಗೆ ಪ್ರವೇಶಿಸಿತ್ತು. ಭಾರತೀಯ ಕ್ರೀಡಾಪಟುಗಳು ಮೊದಲ ಸುತ್ತಿನಲ್ಲಿ 3: 23.36 ನಿಮಿಷಗಳನ್ನು ತೆಗೆದುಕೊಳ್ಳುವ ಮೂಲಕ ಗುರಿ ಮುಟ್ಟಿದರು. ಇದರೊಂದಿಗೆ ಭಾರತ ಚಾಂಪಿಯನ್‌ಶಿಪ್ ದಾಖಲೆಯನ್ನು ಮುರಿಯಿತು. ಆದಾಗ್ಯೂ, ನೈಜೀರಿಯಾ ನಂತರ ಎರಡನೇ ಸುತ್ತಿನಲ್ಲಿ 3: 21.66 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ಭಾರತದ ದಾಖಲೆಯನ್ನು ಮುರಿಯಿತು. ಮಿಶ್ರ ರಿಲೇ ತಂಡದಲ್ಲಿ ಸೇರಿಸಲಾದ ಇಬ್ಬರೂ ಮಹಿಳಾ ಕ್ರೀಡಾಪಟುಗಳು ಅಂತಿಮ ಓಟದ ಮೊದಲು ದಿನಕ್ಕೆ ಎರಡು ಬಾರಿ 400 ಮೀಟರ್ ಓಟದಲ್ಲಿ ಭಾಗವಹಿಸಿದ್ದರು ಎಂಬ ಅರ್ಥದಲ್ಲಿ ಭಾರತೀಯ ತಂಡದ ಪ್ರದರ್ಶನವೂ ಮುಖ್ಯವಾಗಿದೆ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ