ಚಿನ್ನದ ಹುಡುಗ ನೀರಜ್ ಮುಂದೆ ಮೈಮರೆತು ಬಳುಕಿದ ನೀರೆಯರು: ಇದು ಅಗೌರವ ಎಂದ ನೆಟ್ಟಿಗರು

Neeraj Chopra-RJ Malishka: ಆರ್​ಜೆ ಮಾಲಿಷ್ಕ ನಡೆಸಿಕೊಡುವ ಆನ್​ಲೈನ್​ ಸಂದರ್ಶನದಲ್ಲಿ ನೀರಜ್​ ಚೋಪ್ರಾ ಪಾಲ್ಗೊಂಡಿದ್ದರು. ಇದೇ ವೇಳೆ ನೀರಜ್​ರನ್ನು ಮೆಚ್ಚಿಸುವ ಸಲುವಾಗಿ ಆರ್​ಜೆ ಸ್ಟೇಷನ್ ಹುಡುಗಿಯರು 'ಉಡೆ ಜಬ್ ಜಬ್ ಜುಲ್ಫೆನ್ ತೆರಿ' ಹಾಡಿಗೆ ನೃತ್ಯ ಮಾಡಿದ್ದಾರೆ.

ಚಿನ್ನದ ಹುಡುಗ ನೀರಜ್ ಮುಂದೆ ಮೈಮರೆತು ಬಳುಕಿದ ನೀರೆಯರು: ಇದು ಅಗೌರವ ಎಂದ ನೆಟ್ಟಿಗರು
Neeraj Chopra

ಟೋಕಿಯೊ ಒಲಿಂಪಿಕ್ಸ್​ನಲ್ಲಿ (Tokyo Olympics) ಭಾರತಕ್ಕಾಗಿ ಚಿನ್ನ ಗೆದ್ದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿದ್ದು ತಮ್ಮ ಪ್ರದರ್ಶನದಿಂದಲ್ಲ. ಬದಲಾಗಿ ಇಂಟರ್​ವ್ಯೂಗೆ ಕರೆದ ರೆಡಿಯೋ ಜಾಕಿಗಳ ಸಲುವಾಗಿ ಎಂಬುದು ವಿಶೇಷ. ಹೌದು, 100 ವರ್ಷಗಳ ಒಲಿಂಪಿಕ್ಸ್​ ಇತಿಹಾಸದಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ ಭಾರತಕ್ಕಾಗಿ ಮೊದಲ ಬಾರಿ ಚಿನ್ನ ತಂದುಕೊಟ್ಟ ನೀರಜ್ ಚೋಪ್ರಾ ಇತ್ತೀಚೆಗೆ ರೆಡಿಯೋ ಚಾನೆಲ್​ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ಸಂದರ್ಶನ ಆರಂಭಕ್ಕೂ ಮುನ್ನ ಜಾವೆಲಿನ್ ಎಸೆತಗಾರನಿಗೆ ಅಲ್ಲಿನ ಆರ್​ಜೆ ತಂಡ (RJ Malishka) ಸರ್​ಪ್ರೈಸ್ ನೀಡುವ ಪ್ಲ್ಯಾನ್ ಮಾಡಿಕೊಂಡಿತು. ಅದರಂತೆ ಇಂಟರ್​ವ್ಯೂ ಆರಂಭದ ಮುನ್ನ ಆರ್​ಜೆ ಸ್ಟೇಷನ್ ಹುಡುಗಿಯರು ನೀರಜ್ ಮುಂದೆ ಬಳುಕಿದ್ದಾರೆ. ಇದುವೇ ಈಗ ವಿವಾದಕ್ಕೆ ಕಾರಣವಾಗಿದೆ.

ಆರ್​ಜೆ ಮಾಲಿಷ್ಕ (RJ Malishka) ನಡೆಸಿಕೊಡುವ ಆನ್​ಲೈನ್​ ಸಂದರ್ಶನದಲ್ಲಿ ನೀರಜ್​ ಚೋಪ್ರಾ ಪಾಲ್ಗೊಂಡಿದ್ದರು. ಇದೇ ವೇಳೆ ನೀರಜ್​ರನ್ನು ಮೆಚ್ಚಿಸುವ ಸಲುವಾಗಿ ಆರ್​ಜೆ ಸ್ಟೇಷನ್ ಹುಡುಗಿಯರು ‘ಉಡೆ ಜಬ್ ಜಬ್ ಜುಲ್ಫೆನ್ ತೆರಿ’ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ಹುಡುಗಿಯರ ನೃತ್ಯವನ್ನು ನೋಡಿ, ನೀರಜ್ ಚೋಪ್ರಾ ಕೂಡ ಮುಗುಳ್ನಕ್ಕರು.

ಇಲ್ಲಿಗೆ ಮುಗಿದಿರಲಿಲ್ಲ. ಸಂದರ್ಶನದ ನಡುವೆ ಆರ್​ಜೆ ಮಾಲಿಷ್ಕ ನೀರಜ್ ಜೊತೆ ನನಗೆ ನಿಮ್ಮ ಅಪ್ಪುಗೆ ಬೇಕು ಎಂದು ಕೇಳಿದ್ದಳು. ಇದಕ್ಕೆ ನಯವಾಗಿ ನಮಸ್ತೆ ಎಂಬ ಉತ್ತರ ನೀಡಿದ್ದರು ನೀರಜ್. ಇನ್ನು ಮದುವೆ ವಿಚಾರದ ಸುತ್ತ ಪ್ರಶ್ನೆಗಳನ್ನು ಎಸೆದಾಗ, ನನಗೆ ಗರ್ಲ್​ಫ್ರೆಂಡ್ ಇಲ್ಲ. ಸದ್ಯಕ್ಕೆ ಮದುವೆಯಾಗುವ ಉದ್ದೇಶವಿಲ್ಲ ಎಂದು ಹೇಳಿದರು. ನನ್ನ ಗಮನವು ಸಂಪೂರ್ಣ ಆಟ ಮೇಲಿದೆ. ಹಾಗೆಯೇ ಮುಂಬರುವ ಸ್ಪರ್ಧೆಗಳ ಬಗ್ಗೆ ಹೆಚ್ಚು ಗಮನಹರಿಸಿದ್ದೇನೆ ಎಂದರು. ಈ ಮೂಲಕ ಅನಾವಶ್ಯಕ ಪ್ರಶ್ನೆಗಳಿಗೆ ನೀರಜ್ ಚೋಪ್ರಾ ಬ್ರೇಕ್ ಹಾಕಿದರು.

ಇತ್ತ ಮಾಲಿಷ್ಕ ಅ್ಯಂಡ್ ಟೀಮ್​ನ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದ ಕೀರ್ತಿಯನ್ನು ಮುಗಿಲೆತ್ತರಕ್ಕೇರಿಸಿದ ವ್ಯಕ್ತಿ ಮುಂದೆ ಕಪಿಯಾಟ ಆಡುತ್ತಿದ್ದೀರಾ? ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, ಹಲವರಿಗೆ ದೇಶದ ಯುವ ಜನರಿಗೆ ಸ್ಪೂರ್ತಿಯಾಗಿರುವ ವ್ಯಕ್ತಿ ಮುಂದೆ ಹೇಗೆ ವರ್ತಿಸಬೇಕೆಂಬುದು ತಿಳಿದಿಲ್ಲವೇ? ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಜನನಿ ಸಂಪತ್ ಎಂಬ ಬರಹಗಾರ್ತಿ ನಿಮ್ಮ ಡ್ಯಾನ್ಸ್ ನೋಡಿದ ನನ್ನ ಕಣ್ಣುಗಳನ್ನು ಡೆಟಾಲ್​ನಲ್ಲಿ ತೊಳೆಯಬೇಕು ಎಂದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ನಿಮ್ಮ ಡ್ಯಾನ್ಸ್​ ಇದೀಗ ನೀರಜ್ ಚೋಪ್ರಾ ಅವರಿಗೆ ತೋರಲಾದ ಅವಗೌರವ ಎಂದು ಹಲವರು ಟೀಕಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆರ್​ಜೆ ಹುಡುಗಿಯರ ವಿರುದ್ದ ಟೀಕಾ ಪ್ರಹಾರ ಮುಂದುವರೆದಿದೆ.

ಇದನ್ನೂ ಓದಿ: ICC Test Rankings: ನೂತನ ಟೆಸ್ಟ್​ ರ‍್ಯಾಂಕಿಂಗ್ ಪ್ರಕಟ‌: ಟಾಪ್​ 10 ರಲ್ಲಿ ಮೂವರು ಭಾರತೀಯರು

ಇದನ್ನೂ ಓದಿ: T20 World Cup: ಕೊಹ್ಲಿ ಹುಟ್ಟುಹಬ್ಬದಂದು ಟಿ20 ವಿಶ್ವಕಪ್‌ನಲ್ಲಿ ಭಾರತದ ಎದುರಾಳಿ ಯಾರು?

ಇದನ್ನೂ ಓದಿ: WTC Points Table: 12 ಅಂಕಗಳಿಸಿದ ತಂಡಕ್ಕೆ ಅಗ್ರಸ್ಥಾನ: 14 ಅಂಕ ಪಡೆದರೂ ಟೀಮ್ ಇಂಡಿಯಾಗಿಲ್ಲ ಪ್ರಥಮ ಸ್ಥಾನ

(RJ team dance to retro hit to begin Neeraj Chopra interview)

Read Full Article

Click on your DTH Provider to Add TV9 Kannada