IPL 2021: ರಾಜಸ್ಥಾನ ತಂಡಕ್ಕೆ ಬಿಗ್ ಶಾಕ್! ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಜೊತೆಗೆ ಬೌಲರ್ ಕೂಡ ಪಂದ್ಯಾವಳಿಗೆ ಗೈರು
IPL 2021: ಫ್ರಾಂಚೈಸಿ ಬಟ್ಲರ್ ಬದಲಿಗೆ ನ್ಯೂಜಿಲೆಂಡ್ನ ಗ್ಲೆನ್ ಫಿಲಿಪ್ಸ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಅವರು ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಾರ್ಬಡೋಸ್ ರಾಯಲ್ಸ್ ಫ್ರಾಂಚೈಸ್‌ನ ಭಾಗವಾಗಿದ್ದಾರೆ.
ಸೆಪ್ಟೆಂಬರ್ 19 ರಿಂದ ಐಪಿಎಲ್ 14 ನೇ (ಐಪಿಎಲ್ -14) ಸೀಸನ್ ಆರಂಭಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಉಳಿದ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಫ್ರ್ಯಾಂಚೈಸ್ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಬಟ್ಲರ್ ಹೊರಗಿರುವ ಕಾರಣವೆಂದರೆ ಅವರ ಹೆಂಡತಿ ಇನ್ನೊಂದು ಮಗುವಿಗೆ ಜನ್ಮ ನೀಡಲಿದ್ದಾರೆ. ಅಂತಹ ಸಮಯದಲ್ಲಿ ಅವರು ತನ್ನ ಹೆಂಡತಿಯೊಂದಿಗೆ ಇರಲು ಬಯಸುತ್ತಿರುವುದರಿಂದ ಅವರು ಪಂದ್ಯಾವಳಿಗೆ ಅಲಭ್ಯರಾಗಲಿದ್ದಾರೆ. ಐಪಿಎಲ್ -14 ರ ಮೊದಲಾರ್ಧದಲ್ಲಿ ರಾಜಸ್ಥಾನ ಪರ ಬಟ್ಲರ್ ಏಳು ಪಂದ್ಯಗಳನ್ನು ಆಡಿ 254 ರನ್ ಗಳಿಸಿದರು. ಈ ಸಮಯದಲ್ಲಿ, ಅವರು ಶತಕವನ್ನೂ ಗಳಿಸಿದರು, ಇದು ಅವರ ಐಪಿಎಲ್ ವೃತ್ತಿಜೀವನದ ಮೊದಲ ಶತಕವಾಗಿದೆ.
ಫ್ರಾಂಚೈಸಿ ಬಟ್ಲರ್ ಬದಲಿಗೆ ನ್ಯೂಜಿಲೆಂಡ್ನ ಗ್ಲೆನ್ ಫಿಲಿಪ್ಸ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಅವರು ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಾರ್ಬಡೋಸ್ ರಾಯಲ್ಸ್ ಫ್ರಾಂಚೈಸ್‌ನ ಭಾಗವಾಗಿದ್ದಾರೆ. ಫಿಲಿಪ್ಸ್ 2017 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಐ ಸರಣಿಯೊಂದಿಗೆ ಅಂತರಾಷ್ಟ್ರೀಯ ಪಾದಾರ್ಪಣೆ ಮಾಡಿದರು. ಅವರು 25 ಟಿ 20 ಪಂದ್ಯಗಳಲ್ಲಿ 506 ರನ್ ಗಳಿಸಿದ್ದಾರೆ ಮತ್ತು ಈ ಅವಧಿಯಲ್ಲಿ 149.70 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಪ್ರಸ್ತುತ ರಾಜಸ್ಥಾನ ಐದನೇ ಸ್ಥಾನದಲ್ಲಿದೆ. ಏಳು ಪಂದ್ಯಗಳಲ್ಲಿ, ಅವರು ಮೂರರಲ್ಲಿ ಗೆದ್ದಿದ್ದಾರೆ ಮತ್ತು ನಾಲ್ಕರಲ್ಲಿ ಸೋತಿದ್ದಾರೆ.
ಬಟ್ಲರ್ ಹೊರತಾಗಿ, ಆರ್ಚರ್ ಕೂಡ ಔಟ್ ಅದೇ ಸಮಯದಲ್ಲಿ, ಫ್ರಾಂಚೈಸಿ ಬಟ್ಲರ್ ಜೊತೆಗೆ ಜೊಫ್ರಾ ಆರ್ಚರ್ ಕೂಡ ಐಪಿಎಲ್‌ನ ಉಳಿದ ಪಂದ್ಯಗಳನ್ನು ಆಡುವುದಿಲ್ಲ ಎಂದು ಹೇಳಿದೆ. ಆರ್ಚರ್ ಗಾಯದಿಂದಾಗಿ ಐಪಿಎಲ್‌ನಲ್ಲಿ ಆಡುವುದಿಲ್ಲ. ಅವರು ಪ್ರಸ್ತುತ ಭಾರತದ ವಿರುದ್ಧ ಆಡುತ್ತಿರುವ ಟೆಸ್ಟ್ ಸರಣಿಯ ಒಂದು ಭಾಗವಾಗಿದ್ದಾರೆ. ಆರ್ಚರ್ ಉತ್ತಮ ಆರೋಗ್ಯ ಮತ್ತು ಗಾಯದಿಂದ ಚೇತರಿಸಿಕೊಳ್ಳಬೇಕೆಂದು ಫ್ರಾಂಚೈಸ್ ಹಾರೈಸಿದೆ. ಹಾಗೆಯೇ, ಜೋಸ್ ಬಟ್ಲರ್ ಮತ್ತು ಅವರ ಪತ್ನಿಗೆ ಅವರ ಎರಡನೇ ಮಗುವಿಗೆ ಶುಭಾಶಯ ತಿಳಿಸಿದೆ.
Jos Buttler will not be part of the remainder of #IPL2021, as he and Louise are expecting a second child soon.
We wish them well, and can't wait for the newest member of the #RoyalsFamily. ? pic.twitter.com/rHfeQTmvvg
— Rajasthan Royals (@rajasthanroyals) August 21, 2021
ಕೋವಿಡ್‌ನಿಂದಾಗಿ ಐಪಿಎಲ್ ನಿಲ್ಲಿಸಲಾಯಿತು ಐಪಿಎಲ್‌ನ 14 ನೇ ಸೀಸನ್ ಅನ್ನು ಭಾರತದ ಆರು ನಗರಗಳಲ್ಲಿ ಆಡಲಾಗುತ್ತಿತ್ತು. ಆದರೆ ಮೇ ಮೊದಲ ವಾರದಲ್ಲಿ, ಆಟಗಾರರಿಗೆ ಸೋಂಕು ತಗುಲಿದ ನಂತರ ಪಂದ್ಯಾವಳಿಯನ್ನು ಮಧ್ಯದಲ್ಲಿ ನಿಲ್ಲಿಸಬೇಕಾಯಿತು. ಕೋಲ್ಕತ್ತಾ ನೈಟ್ ರೈಡರ್ಸ್‌ನ ವರುಣ್ ಚಕ್ರವರ್ತಿ ಮತ್ತು ಸಂದೀಪ್ ವಾರಿಯರ್ ಈ ವೈರಸ್ ಸೋಂಕಿಗೆ ಒಳಗಾಗಿದ್ದರು. ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು. ಅದಕ್ಕಾಗಿಯೇ ಪಂದ್ಯಾವಳಿಯನ್ನ ನಿಲ್ಲಿಸಲಾಯಿತು. ಈಗ ಲೀಗ್‌ನ ಉಳಿದ ಪಂದ್ಯಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಲೀಗ್‌ನ ಫೈನಲ್ ಅಕ್ಟೋಬರ್ 15 ರಂದು ನಡೆಯಲಿದೆ.