IND vs ENG: ಮೊದಲ ಟೆಸ್ಟ್​ಗೆ ಮಳೆ ಅಡ್ಡಿಯಾಗದಿದ್ದರೆ ಭಾರತ ಆ ಪಂದ್ಯವನ್ನೂ ಗೆದ್ದು ಬಿಡುತ್ತಿತ್ತು; ಮೈಕೆಲ್ ಅಥರ್ಟನ್

IND vs ENG: ಭಾರತದ ಆಡುವ ರೀತಿ, ಗೆಲ್ಲುವ ಇಚ್ಛೆ ಮತ್ತು ಕಷ್ಟದ ಸಮಯದಲ್ಲಿ ತಮ್ಮನ್ನು ತಾವು ನಿಭಾಯಿಸುವ ಸಾಮರ್ಥ್ಯವನ್ನು ನೋಡಿದ ನಂತರ, ನಾಟಿಂಗ್ಹ್ಯಾಮ್ ಟೆಸ್ಟ್​ನಲ್ಲಿಯೂ ಭಾರತ ಗೆಲ್ಲಬಹುದೆಂದು ಎಲ್ಲರಿಗೂ ಅನಿಸಿತ್ತು.

IND vs ENG: ಮೊದಲ ಟೆಸ್ಟ್​ಗೆ ಮಳೆ ಅಡ್ಡಿಯಾಗದಿದ್ದರೆ ಭಾರತ ಆ ಪಂದ್ಯವನ್ನೂ ಗೆದ್ದು ಬಿಡುತ್ತಿತ್ತು; ಮೈಕೆಲ್ ಅಥರ್ಟನ್
ಸಂಕ್ಷಿಪ್ತ ಸ್ಕೋರ್ ವಿವರ: ಭಾರತ ಮೊದಲ ಇನ್ನಿಂಗ್ಸ್: 191/10 (61.3) (ಶಾರ್ದೂಲ್ ಠಾಕೂರ್ 57). ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: 290/10 (84) (ಓಲಿ ಪೋಪ್ 81, ಉಮೇಶ್ ಯಾದವ್ 76/3). ಭಾರತ ಎರಡನೇ ಇನ್ನಿಂಗ್ಸ್: 466/10 (148.2) (ರೋಹಿತ್ ಶರ್ಮಾ 127, ಶಾರ್ದೂಲ್ ಠಾಕೂರ್ 60). ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್: 210/10 (92.2) (ಹಸೀಬ್ ಹಮೀದ್ 63, ಉಮೇಶ್ ಯಾದವ್ 60/3, ಜಸ್​ಪ್ರೀತ್ ಬುಮ್ರಾ 27/2)
Follow us
TV9 Web
| Updated By: ಪೃಥ್ವಿಶಂಕರ

Updated on: Aug 21, 2021 | 7:19 PM

ಭಾರತ ತಂಡ ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಸರಣಿಯ ಎರಡು ಪಂದ್ಯಗಳು ಮುಗಿದಿದ್ದು, ಭಾರತ 1-0 ಮುನ್ನಡೆ ಸಾಧಿಸಿದೆ. ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಈ ಮುನ್ನಡೆ ಸಾಧಿಸಿದೆ, ಆದರೆ ಮಳೆ ಅಡ್ಡಿಯಾಗದಿದ್ದರೆ ಈ ಮುನ್ನಡೆ 2-0 ಆಗಿರುತ್ತಿತ್ತು. ಟ್ರೈಟ್ ಬ್ರಿಡ್ಜ್​ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಕೊನೆಯ ದಿನ ಭಾರತಕ್ಕೆ ಗೆಲ್ಲಲು 157 ರನ್​ಗಳ ಅಗತ್ಯವಿತ್ತು ಮತ್ತು ಒಂಬತ್ತು ವಿಕೆಟುಗಳು ಭಾರತದ ಕೈಲಿತ್ತು. ಆದರೆ ಮಳೆಯಿಂದಾಗಿ ದಿನದ ಪಂದ್ಯವನ್ನು ಆಡಲಾಗಲಿಲ್ಲ. ಹೀಗಾಗಿ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ, ಈ ಸಮಯದಲ್ಲಿ ಇಂಗ್ಲೆಂಡ್ ವಿರುದ್ಧ 2-0 ಮುನ್ನಡೆ ಸಾಧಿಸುತ್ತಿತ್ತು. ಇಂಗ್ಲೆಂಡಿನ ಮಾಜಿ ನಾಯಕ ಮೈಕೆಲ್ ಅಥರ್ಟನ್ ಕೂಡ ಇದನ್ನೇ ಹೇಳಿದ್ದಾರೆ. ಅವರು ಇಂಗ್ಲೆಂಡ್ ತಂಡದ ಬಗ್ಗೆ ತಮ್ಮ ಅಭಿಪ್ರಾಯವನ್ನೂ ನೀಡಿದ್ದಾರೆ.

ಭಾರತ ಗೆಲ್ಲುವ ಅವಕಾಶವಿತ್ತು ಈ ಬಗ್ಗೆ ಮಾತನಾಡಿರುವ ಅಥರ್ಟನ್ ಭಾರತದ ಆಡುವ ರೀತಿ, ಗೆಲ್ಲುವ ಇಚ್ಛೆ ಮತ್ತು ಕಷ್ಟದ ಸಮಯದಲ್ಲಿ ತಮ್ಮನ್ನು ತಾವು ನಿಭಾಯಿಸುವ ಸಾಮರ್ಥ್ಯವನ್ನು ನೋಡಿದ ನಂತರ, ನಾಟಿಂಗ್ಹ್ಯಾಮ್ ಟೆಸ್ಟ್​ನಲ್ಲಿಯೂ ಭಾರತ ಗೆಲ್ಲಬಹುದೆಂದು ಎಲ್ಲರಿಗೂ ಅನಿಸಿತ್ತು. ಆದರೆ ಮಳೆ ಅದಕ್ಕೆ ಅವಕಾಶ ಕೊಡಲಿಲ್ಲ. ಮಳೆಯಾಗದಿದ್ದರೆ ಭಾರತ ಮೊದಲ ಟೆಸ್ಟ್​ನಲ್ಲೂ ಜಯ ಸಾಧಿಸುತ್ತಿತ್ತು ಎಂದು ಅಥರ್ಟನ್ ಹೇಳಿದ್ದಾರೆ.

ಇಂಗ್ಲೆಂಡ್ ಬಗ್ಗೆ ಹೇಳಿದ್ದಿದು ಇಂಗ್ಲೆಂಡಿಗೆ ಸಂಬಂಧಿಸಿದಂತೆ, ಇಂಗ್ಲೆಂಡ್ ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದೆ ಆದರೆ ಕೆಲವು ಶ್ರೇಷ್ಠ ಕ್ರಿಕೆಟಿಗರಾದ – ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್, ಕ್ರಿಸ್ ವೋಕ್ಸ್ ಇವರುಗಳಿಲ್ಲದೆ ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ ಎಂದಿದ್ದಾರೆ.

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ