AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಚ್​ ನೀಡಿದ ಬ್ಯಾಟರ್​: ಫೀಲ್ಡರ್ ತಪ್ಪಿನಿಂದ ನೋಬಾಲ್!

ಕ್ರಿಕೆಟ್ ಮೈದಾನದಲ್ಲಿ ಕೇವಲ ರನ್ ಮತ್ತು ವಿಕೆಟ್‌ಗಳು ಮಾತ್ರವಲ್ಲ, ನಿಯಮಗಳ ಸಣ್ಣದೊಂದು ಮರೆವು ಕೂಡ ಪಂದ್ಯದ ಹಣೆಬರಹವನ್ನು ಹೇಗೆ ಬದಲಿಸಬಲ್ಲದು ಎಂಬುದಕ್ಕೆ ಟಾಂಟನ್‌ನಲ್ಲಿ ನಡೆದ ಸೋಮರ್‌ಸೆಟ್ ಮತ್ತು ಗ್ಲಾಮೋರ್ಗನ್ ನಡುವಿನ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯವೇ ಸಾಕ್ಷಿ! ಈ ಪಂದ್ಯದಲ್ಲಿ ಎದುರಾಳಿ ನಾಯಕ ಎಸಗಿದ ಒಂದು ಸಣ್ಣ ಪ್ರಮಾದವೇ, ಸೋಮರ್‌ಸೆಟ್ ಬ್ಯಾಟರ್ ಪಾಲಿಗೆ ಅದೃಷ್ಟವಾಗಿ ಪರಿಣಮಿಸಿತು.

ಕ್ಯಾಚ್​ ನೀಡಿದ ಬ್ಯಾಟರ್​: ಫೀಲ್ಡರ್ ತಪ್ಪಿನಿಂದ ನೋಬಾಲ್!
ಕೌಂಟಿ ಕ್ರಿಕೆಟ್Image Credit source: GettyImages
ಝಾಹಿರ್ ಯೂಸುಫ್
|

Updated on: Sep 05, 2026 | 1:07 PM

Share

ಕೌಂಟಿ ಚಾಂಪಿಯನ್‌ಶಿಪ್​ನಲ್ಲಿ ಸೋಮರ್‌ಸೆಟ್ ತಂಡವು ಮತ್ತೊಂದು ಸ್ಮರಣೀಯ ಗೆಲುವನ್ನು ದಾಖಲಿಸಿದೆ. ಟಾಂಟನ್‌ನಲ್ಲಿ ನಡೆದ ರೋಮಾಂಚಕ ಪಂದ್ಯದಲ್ಲಿ ಗ್ಲಾಮೋರ್ಗನ್ ವಿರುದ್ಧ ಸೋಮರ್‌ಸೆಟ್ ತಂಡವು ಇನ್ನಿಂಗ್ಸ್ ಮತ್ತು 64 ರನ್‌ಗಳ ಬೃಹತ್ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಅದೃಷ್ಟದೊಂದಿಗೆ ಅದ್ಭುತ ಆಟ ಪ್ರದರ್ಶಿಸಿದ ಆರಂಭಿಕ ಆಟಗಾರ ಟಾಮ್ ಲ್ಯಾಮನ್‌ಬಿ ಪ್ರಮುಖ ಆಕರ್ಷಣೆಯಾಗಿದ್ದರು.

ಲ್ಯಾಮನ್‌ಬಿ ಅದೃಷ್ಟ!

ಮೊದಲ ಇನ್ನಿಂಗ್ಸ್‌ನಲ್ಲಿ ಸೋಮರ್‌ಸೆಟ್ ಪರ ಅತ್ಯುತ್ತಮ ಬ್ಯಾಟಿಂಗ್ ನಡೆಸಿದ ಟಾಮ್ ಲ್ಯಾಮನ್‌ಬಿ 95 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರು. ಆದರೆ ಅವರ ಈ ಇನ್ನಿಂಗ್ಸ್‌ನ ಮಧ್ಯೆ ಪಂದ್ಯವು ಅತ್ಯಂತ ನಾಟಕೀಯ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಗ್ಲಾಮೋರ್ಗನ್ ಬೌಲರ್ ಡಾನ್ ಡೌತ್‌ವೈಟ್ ಎಸೆದ ಚೆಂಡಿನಲ್ಲಿ ಲ್ಯಾಮನ್‌ಬಿ ಕೀಪರ್​ಗೆ ಕ್ಯಾಚ್ ನೀಡಿ ಔಟಾಗಿದ್ದರು.

ಆದರೆ ಗ್ಲಾಮೋರ್ಗನ್ ತಂಡವು ಫೀಲ್ಡಿಂಗ್ ನಿಯಮವನ್ನು ಉಲ್ಲಂಘಿಸಿ, ಲೆಗ್ ಸೈಡ್‌ನ ಬಿಹೈಂಡ್ ಸ್ಕ್ವೇರ್‌ನಲ್ಲಿ ಮೂವರು ಫೀಲ್ಡರ್‌ಗಳನ್ನು ನಿಲ್ಲಿಸಿತ್ತು. ನಿಯಮದ ಪ್ರಕಾರ ಇಬ್ಬರಿಗಿಂತ ಹೆಚ್ಚು ಇರುವಂತಿಲ್ಲ. ಈ ತಾಂತ್ರಿಕ ತಪ್ಪಿನಿಂದಾಗಿ ಜೀವದಾನ ಪಡೆದ ಲ್ಯಾಮನ್‌ಬಿ, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿ ತಂಡವನ್ನು ಬಲಿಷ್ಠ ಸ್ಥಿತಿಗೆ ತಲುಪಿಸಿದರು.

ಸೋಮರ್‌ಸೆಟ್ ಬೃಹತ್ ಮೊತ್ತ:

ಮೊದಲು ಬ್ಯಾಟ್ ಮಾಡಿದ ಗ್ಲಾಮೋರ್ಗನ್ ತಂಡವನ್ನು ಕೇವಲ 194 ರನ್‌ಗಳಿಗೆ ಆಲೌಟ್ ಮಾಡಿದ ಸೋಮರ್‌ಸೆಟ್, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 441 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಲ್ಯಾಮನ್‌ಬಿ (95) ಜೊತೆಗೆ ಆರ್ಚೀ ವಾನ್ (68), ಜೋಶ್ ಥಾಮಸ್ (59) ಮತ್ತು ಜೇಮ್ಸ್ ರೀವ್ (52) ಅರ್ಧಶತಕ ಬಾರಿಸಿ ಮಿಂಚಿದರು.

ಬೌಲರ್‌ಗಳ ಮಾರಕ ದಾಳಿ:

247 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಗ್ಲಾಮೋರ್ಗನ್, ಸೋಮರ್‌ಸೆಟ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 183 ರನ್‌ಗಳಿಗೆ ಸರ್ವಪತನ ಕಂಡಿತು. ಜ್ಯಾಕ್ ಲೀಚ್ (3-46), ಕ್ರೇಗ್ ಓವರ್ಟನ್ (3-29) ಮತ್ತು ಲೆವಿಸ್ ಗ್ರೆಗೊರಿ (3-68) ತಲಾ 3 ವಿಕೆಟ್ ಪಡೆದು ಸೋಮರ್‌ಸೆಟ್ ತಂಡಕ್ಕೆ ಗೆಲುವು ತಂದು ಕೊಟ್ಟರು.

ಇದನ್ನೂ ಓದಿ: ಹೀಗೇಕೆ ಮಾಡಿದೆ ನೀನು? ಧೋನಿ ರಿಯಾಕ್ಷನ್ ಬಹಿರಂಗಪಡಿಸಿದ ರೈನಾ

ಈ ಭರ್ಜರಿ ಗೆಲುವಿನೊಂದಿಗೆ ಸೋಮರ್‌ಸೆಟ್ ತಂಡವು 23 ಪ್ರಮುಖ ಪಾಯಿಂಟ್‌ಗಳನ್ನು ತನ್ನದಾಗಿಸಿಕೊಂಡಿದ್ದು, ತನ್ನ ಚೊಚ್ಚಲ ಕೌಂಟಿ ಚಾಂಪಿಯನ್‌ಶಿಪ್ ಪ್ರಶಸ್ತಿಯ ಕನಸನ್ನು ಮತ್ತಷ್ಟು ಜೀವಂತವಾಗಿರಿಸಿಕೊಂಡಿದೆ.

Follow Us