ಲಾರ್ಡ್ಸ್ ಮೈದಾನದಲ್ಲಿ ನಿಜಕ್ಕೂ ದೊರೆಗಳಂತೆ ಆಡಿದ್ದ ಟೀಮ್ ಇಂಡಿಯ ಲೀಡ್ಸ್ ನಲ್ಲಿ ಅದಕ್ಕೆ ತದ್ವಿರುದ್ಧವಾದ ಪ್ರದರ್ಶನ ನೀಡುತ್ತಿದೆ. ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ವಿರಾಟ್ ಕೊಹ್ಲಿ ಪಡೆಗೆ ಕೆಟ್ಟ ದಿನವಾಗಿತ್ತು. ಎಲ್ಲ ಬ್ಯಾಟ್ಸ್ಮನ್ ವಿಫಲರಾಗಿ ತಂಡ ಕೇವಲ 78 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ತನ್ನ ಓಪನಿಂಗ್ ಸ್ಪೆಲ್ನಲ್ಲಿ ಅಪ್ರತಿಮ ಬೌಲಿಂಗ್ ಪ್ರದರ್ಶನ ನೀಡಿದ ಜೇಮ್ಸ್ ಆಂಡರ್ಸನ್ ಕೊಹ್ಲಿ ಸೇರಿದಂತೆ ಮೂರು ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಮರ್ಮಾಘಾತ ನೀಡಿದರು. ಅಲ್ಲಿಂದ ಭಾರತ ಚೇತರಿಸಿಕೊಳ್ಳುವ ಚಾನ್ಸೇ ಇರಲಿಲ್ಲ.
ಸರಿ, ಬ್ಯಾಟಿಂಗ್ ವೈಫಲ್ಯ ಟೆಸ್ಟ್ ಕ್ರಿಕೆಟ್ ನಲ್ಲಿ ಸಾಮಾನ್ಯ ಎಂದು ಭಾವಿಸಿ ಭಾರತ 78 ರನ್ ಮೊತ್ತಕ್ಕೆ ಅಲೌಟ್ ಆಗಿದ್ದನ್ನು ಅಂಗೀಕರಿಸಿದರೂ ಫೀಲ್ಡಿಂಗ್ ಮಾಡುವಾಗ ಭಾರತದ ಕಳಪೆ ಪ್ರದರ್ಶನ ಮುಂದುವರೆಯಿತು. ತಮ್ಮೆಡೆ ಸಿಡಿದ ಕ್ಯಾಚ್ಗಳನ್ನು ಭಾರತೀಯರು ನೆಲಸಮಗೊಳಿಸಿದರು. ಜಸ್ಪ್ರೀತ್ ಬುಮ್ರಾ ದಾಳಿಯಲ್ಲಿ ಇಂಗ್ಲೆಂಡ್ ಆರಂಭ ಆಟಗಾರ ಹಸೀಬ್ ಹಮೀದ್ ನೀಡಿದ ಕ್ಯಾಚನ್ನು ಸ್ಲಿಪ್ಸ್ನಲ್ಲಿದ್ದ ರೋಹಿತ್ ಶರ್ಮ ಕೈ ಚೆಲ್ಲಿದರು. ಅದೇನು ಅಷ್ಟು ಕಷ್ಟಕರ ಚಾನ್ಸ್ ಆಗಿರಲಿಲ್ಲ, ಹಿಡಿಯಬಹುದಿತ್ತು. ಟೆಸ್ಟ್ ಕ್ರಿಕೆಟ್ ನಲ್ಲಿ ಹಾಫ್ ಚಾನ್ಸ್ ಸಹ ಕ್ಯಾಚ್ನಲ್ಲಿ ಪರಿವರ್ತಿಸಬೇಕಾಗುತ್ತದೆ. ಆದರೆ ಟೀಮ್ ಇಂಡಿಯ ಸದಸ್ಯರು ಸಿಂಪಲ್ ಚಾನ್ಸ್ಗಳನ್ನೂ ಹಾಳು ಮಾಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ.
ಹಮೀದ್ ನೀಡಿದ ಕ್ಯಾಚನ್ನು ರೋಹಿತ್ ಹಿಡಿದಿದ್ದರೆ ಮೊದಲ ದಿನದಾಟದ ಅಂತ್ಯದಲ್ಲಿ ಪಂದ್ಯದ ಸ್ಥಿತಿ ಬೇರೆ ಇರುತ್ತಿತ್ತು ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಮೊದಲು ರೋಹಿತ್ ಹಿಡಿಯಲಾಗದ ಕ್ಯಾಚನ್ನು ನೋಡಿರಿ.
Fifty for @HaseebHameed97! ?
Scorecard/Clips: https://t.co/UakxjzUrcE@IGCom | #ENGvIND pic.twitter.com/TPayy5RQKv
— England Cricket (@englandcricket) August 25, 2021
ಒಬ್ಬ ಟ್ವಿಟರ್ ಯೂಸರ್ ರೋಹಿತ್ ಕ್ಯಾಚ್ ಬಿಟ್ಟಿದ್ದರಿಂದ ಹಮೀದ್ 50 ರನ್ ಪೂರೈಸಿದ್ದು ಎಲ್ಲ ಕತೆಯನ್ನು ಹೇಳುತ್ತದೆ. ಆಂಗ್ಲರು ಈ ಟೆಸ್ಟ್ನಲ್ಲಿ ನಿಸ್ಸಂದೇಹವಾಗಿ ಮೇಲುಗೈ ಸಾಧಿಸಿದ್ದಾರೆ, ಎಂದು ಹೇಳಿದ್ದಾರೆ.
@ImRo45 missing out in Haseeb Hameed’s catch getting past 50 says it all! Poms have rub of the green this test! #ENGvIND
— Sriram Gudipoodi (@ramgudipoodi) August 26, 2021
ಮತ್ತೊಬ್ಬ ಕ್ರಿಕೆಟ್ ಪ್ರೇಮಿ ರೋಹಿತ್ ಆ ಕ್ಯಾಚ್ ಹಿಡಿದಿದ್ದರೆ ಇಂಗ್ಲೆಂಡ್ ಮತ್ತೆರಡು ವಿಕೆಟ್ ಕಳೆದುಕೊಳ್ಳುವ ಸಾಧ್ಯತೆ ಇರುತಿತ್ತು ಎಂದು ಹಿಂದಿಯಲ್ಲಿ ಹೇಳಿದ್ದಾರೆ.
Agar kal Rohit se catch nhi chhuta hota to may be 1 ya do wicket gir gaya hota the worse day for India yesterday ??#INDvENG #INDvsEND #RohitSharma
— RAJAT N Singh (RIP SUSHANT SIR ????) (@RajatNarayanSi2) August 26, 2021
ಬುಮ್ರಾ ಬೌಲ್ ಮಾಡಿದ ನಂತರ ಬಾಲು ಹಮೀದ್ ಬ್ಯಾಟಿನ ಅಂಚನ್ನು ಸವರಿ ತಮ್ಮೆಡೆ ಬರುವ ಮೊದಲೇ ರೋಹಿತ್ ಶರ್ಮ ತಮ್ಮ ಬಲಗಡೆ ಮೂವ್ ಮಾಡಿದ್ದರು. ಬಾರತೀಯ ಆಟಗಾರರು ಬೆಳಗ್ಗೆ ಏನು ತಿಂದಿದ್ದರೋ? ಜಡೇಜಾ ಅವರಿಂದ ಮಿಸ್ ಫೀಲ್ಡ್ ಆಗುತ್ತೆ. ರೋಹಿರ್ ಕ್ಯಾಚ್ ಬಿಡುತ್ತಾರೆ. ಟೆರ್ರಿಬಲ್ ದಿನ ಮತ್ತು ಭಾರತೀಯರಿಂದ ಟೆರ್ರಿಬಲ್ ಪರ್ಫಾರ್ಮನ್ಸ್ ಅಂತ ಮತ್ತೊಬ್ಬರು ಹೇಳಿದ್ದಾರೆ.
Rohit Sharma was moving to his right just before Bumrah found the edge of Hameed's bat. What did India's players eat today morning? Jadeja misfielded. Rohit dropped a catch. Terrible day, terrible performance from India.
— Sreejith Mullappilli (@Mullappilli) August 25, 2021
ಜಿಮ್ಮಿ ತಮ್ಮ ಮ್ಯಾಜಿಕಲ್ ಓಪನಿಂಗ್ ಸ್ಪೆಲ್ನಲ್ಲಿ, ಕೆ ಎಲ್ ರಾಹುಲ್, ಚೇತೇಶ್ವರ್ ಪೂಜಾರಾ ಮತ್ತು ಕೊಹ್ಲಿ ಅವರ ವಿಕೆಟ್ಗಳನ್ನು ಪಡೆದಾಗ ಭಾರತದ ಸ್ಕೋರ್ 21/3 ಆಗಿತ್ತು. ಭಾರತದ ಮಿಡ್ಲ್ ಮತ್ತು ಲೋಯರ್ ಆರ್ಡರ್ ಬ್ಯಾಟ್ಸ್ಮನ್ಗಳನ್ನು ಆಂಗ್ಲರ ವೇಗಿಗಳಾದ ಸ್ಯಾಮ್ ಕರನ್, ಒಲ್ಲೀ ರಾಬಿನ್ಸನ್ ಮತ್ತು ಕ್ರೇಗ್ ಓವರ್ಟನ್ ತರಗೆಲೆಗಳಂತೆ ಉದುರಿಸಿದರು.