AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cheteshwar Pujara: 60 ಬೌಂಡರಿ, 11 ಸಿಕ್ಸ್​: ಕೊಹ್ಲಿ, ಬಾಬರ್ ದಾಖಲೆ ಮುರಿದ ಪೂಜಾರ

Cheteshwar Pujara: ವಾರ್ವಿಕ್‌ಶೈರ್ ವಿರುದ್ಧದ ಪಂದ್ಯದಲ್ಲಿ ಕೇವಲ 73 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿದ್ದರು. ಈ ಮೂಲಕ ರಾಯಲ್ ಲಂಡನ್ ಕಪ್‌ನಲ್ಲಿ 500 ರನ್‌ಗಳ ಗಡಿ ದಾಟಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

Cheteshwar Pujara: 60 ಬೌಂಡರಿ, 11 ಸಿಕ್ಸ್​:  ಕೊಹ್ಲಿ, ಬಾಬರ್ ದಾಖಲೆ ಮುರಿದ ಪೂಜಾರ
Babar-Pujara-Kohli
TV9 Web
| Edited By: |

Updated on: Aug 25, 2022 | 1:55 PM

Share

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಕಪ್​ನಲ್ಲಿ ಟೀಮ್ ಇಂಡಿಯಾ (Team India) ಆಟಗಾರ ಚೇತೇಶ್ವರ ಪೂಜಾರ (Cheteshwar Pujara) ಅವರ ಭರ್ಜರಿ ಫಾರ್ಮ್ ಮುಂದುವರೆದಿದೆ. ಸಸೆಕ್ಸ್ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿರುವ ಪೂಜಾರ ಶತಕದ ಮೇಲೆ ಶತಕ ಸಿಡಿಸುತ್ತಾ ಅಬ್ಬರಿಸುತ್ತಿದ್ದಾರೆ. ವಿಶೇಷ ಎಂದರೆ ಟೆಸ್ಟ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಪೂಜಾರ ಕಡಿಮೆ ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚುತ್ತಿದ್ದಾರೆ.

ಈ ಬಾರಿ ಟೂರ್ನಿಯಲ್ಲಿ ಒಟ್ಟಾರೆ 3 ಭರ್ಜರಿ ಶತಕ ಹಾಗೂ 2 ಅರ್ಧಶತಕ ದಾಖಲಿಸುವ ಮೂಲಕ ಪೂಜಾರ ಸಸೆಕ್ಸ್ ತಂಡವನ್ನು ಸೆಮಿಫೈನಲ್​ಗೆ ಕೊಂಡೊಯ್ದಿದ್ದಾರೆ. ಅದರಲ್ಲೂ ಸರ್ರೆ ವಿರುದ್ಧದ ಪಂದ್ಯದಲ್ಲಿ 131 ಎಸೆತಗಳಲ್ಲಿ 20 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 174 ರನ್ ಗಳಿಸಿ ಟೀಮ್ ಇಂಡಿಯಾ ಆಟಗಾರ ಮಿಂಚಿದ್ದರು. ಇನ್ನು ಮಿಡ್ಲ್‌ಸೆಕ್ಸ್ ವಿರುದ್ಧದ ಪಂದ್ಯದಲ್ಲಿ 90 ಎಸೆತಗಳಲ್ಲಿ 132 ರನ್ ಬಾರಿಸಿದ್ದರು.

ವಾರ್ವಿಕ್‌ಶೈರ್ ಕ್ಲಬ್ ವಿರುದ್ಧದ ಪಂದ್ಯದಲ್ಲಿ ಕೇವಲ 73 ಎಸೆತಗಳಲ್ಲಿ ಸ್ಪೋಟಕ ಶತಕ ಸಿಡಿಸಿದ್ದರು. ಈ ಮೂಲಕ ರಾಯಲ್ ಲಂಡನ್ ಕಪ್‌ನಲ್ಲಿ 500 ರನ್‌ಗಳ ಗಡಿ ದಾಟಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಸದ್ಯ 8 ಇನಿಂಗ್ಸ್ ಆಡಿರುವ ಚೇತೇಶ್ವರ ಒಟ್ಟು 614 ರನ್ ಗಳಿಸಿದ್ದಾರೆ. ಈ ವೇಳೆ 60 ಫೋರ್, 11 ಸಿಕ್ಸ್​ನೊಂದಿಗೆ 3 ಶತಕ ಹಾಗೂ 2 ಅರ್ಧ ಶತಕಗಳಿರುವುದು ವಿಶೇಷ.

ವಿರಾಟ್ ಕೊಹ್ಲಿ-ಬಾಬರ್ ದಾಖಲೆ ಉಡೀಸ್:

ರಾಯಲ್ ಲಂಡನ್ ಕಪ್​ನಲ್ಲಿ ಅಬ್ಬರಿಸುವ ಮೂಲಕ ಪೂಜಾರ ಲೀಸ್ ಎ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅದು ಕೂಡ ವಿರಾಟ್ ಕೊಹ್ಲಿ, ಬಾಬರ್ ಆಜಂನಂತಹ ಬ್ಯಾಟ್ಸ್​ಮನ್​ಗಳನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

ಲೀಸ್ಟ್ ಎ ಕ್ರಿಕೆಟ್​ನಲ್ಲಿ 100 ಇನಿಂಗ್ಸ್​ನಲ್ಲಿ ಅತೀ ಹೆಚ್ಚು ಬ್ಯಾಟಿಂಗ್ ಸರಾಸರಿ ಹೊಂದಿರುವ ವಿಶ್ವದ 2ನೇ ಬ್ಯಾಟ್ಸ್​ಮನ್ ಎಂಬ ದಾಖಲೆ ಇದೀಗ ಚೇತೇಶ್ವರ ಪೂಜಾರ ಪಾಲಾಗಿದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ಶ್ರೇಷ್ಠ ಮೈಕೆಲ್ ಬೆವನ್ (385 ಇನ್ನಿಂಗ್ಸ್‌ಗಳಲ್ಲಿ 57.86) ಅಗ್ರಸ್ಥಾನದಲ್ಲಿದ್ದಾರೆ. ಇದೀಗ 109 ಲೀಸ್ಟ್​ ಎ ಪಂದ್ಯಗಳ ಇನ್ನಿಂಗ್ಸ್‌ಗಳಲ್ಲಿ 57.48 ಸರಾಸರಿಯಲ್ಲಿ ರನ್ ಕಲೆಹಾಕುವ ಮೂಲಕ ಪೂಜಾರ 2ನೇ ಸ್ಥಾನ ಅಲಂಕರಿಸಿದ್ದಾರೆ.

ಈ ಹಿಂದೆ 153 ಇನ್ನಿಂಗ್ಸ್‌ಗಳಲ್ಲಿ 56.56 ಸರಾಸರಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದ ಬಾಬರ್ ಆಜಂ ಹಾಗೂ 286 ಇನ್ನಿಂಗ್ಸ್‌ಗಳಲ್ಲಿ 56.60. ಸರಾಸರಿಯೊಂದಿಗೆ ರನ್ ಕಲೆಹಾಕಿದ್ದ ವಿರಾಟ್ ಕೊಹ್ಲಿಯನ್ನು ಇದೀಗ ಚೇತೇಶ್ವರ ಪೂಜಾರ ಹಿಂದಿಕ್ಕುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಸದ್ಯ ರಾಯಲ್ ಲಂಡನ್ ಕಪ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಪೂಜಾರ ನಾಯಕತ್ವ ಸಸೆಕ್ಸ್ ತಂಡವು ಚಾಂಪಿಯನ್ ಆಗಲಿದೆಯಾ ಕಾದು ನೋಡಬೇಕಿದೆ.

Follow Us
TV9 Web
TV9 Web

TV9 Kannada

Read More
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ಸೌಜನ್ಯ ಪ್ರಕರಣ: ತನಿಖೆಗಾಗಿ ಎಸ್​ಐಟಿಯಿಂದ ಮೆಡಿಕಲ್ ಬೋರ್ಡ್ ರಚನೆ
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ದೆಹಲಿಯಲ್ಲಿ ತಮಿಳುನಾಡು ಸಿಎಂ ವಿಜಯ್​ ಜೊತೆ ಸಿಎಂ ಡಿಕೆಶಿ ಚರ್ಚಿಸಿದ್ದೇನು?
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
ಬೇಲೂರಿನ ಕೋಗಿಲಮನೆ ಬಳಿ 30ಕ್ಕೂ ಹೆಚ್ಚು ಕಾಡಾನೆಗಳು ಪ್ರತ್ಯಕ್ಷ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
19 ವರ್ಷದ ಇಬ್ಬರು ವಿದ್ಯಾರ್ಥಿನಿಯರು ರಸ್ತೆ ಅಪಘಾತದಲ್ಲಿ ಬಲಿ
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಚಳ್ಳಕೆರೆ ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಸಾರಿಗೆ ಬಸ್: 42 ಮಂದಿ ಪಾರು
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಸ್ಟಿಂಗ್ ಪ್ರಕರಣ: ಪೊಲೀಸರಿಗೆ ಮೊಬೈಲ್ ನೀಡಲು ಕೃಪಾ ಆಳ್ವ ನಿರಾಕರಣೆ!
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ಪ್ರಧಾನಿ ಮೋದಿ ಆಡಳಿತದ ಯಶೋಗಾಥೆ, ಯೋಜನೆಗಳ ಅಧ್ಯಯನ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
ವೀರಾಂಜನೇಯ ವಿಗ್ರಹಕ್ಕೆ ಲೇಪಿಸಿದ ಬೆಣ್ಣೆ 17 ದಿನ ಕಳೆದರೂ ಕರಗಿಲ್ಲ
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್
‘ಮಾಡಿರೋದೇ ಒಂದು ಸಿನಿಮಾ, ಗಂಡಸರ ಹಾಗೆ ನಡೆದುಕೋ; ಜಗ್ಗುಗೆ ಮಂಜು ಅವಾಜ್