Cheteshwar Pujara: ಪೂಜಾರ 2.O; 9 ಸಿಕ್ಸ್, 16 ಫೋರ್.. 86 ಎಸೆತಗಳಲ್ಲಿ 159 ರನ್ ಜೊತೆಯಾಟ..!

| Updated By: ಪೃಥ್ವಿಶಂಕರ

Updated on: Oct 14, 2022 | 3:52 PM

Syed Mushtaq Ali Trophy: 35 ಎಸೆತಗಳಲ್ಲಿ 62 ರನ್ ಗಳಿಸಿದ ಚೇತೇಶ್ವರ ಪೂಜಾರ, 177.14 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ, 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ವೇಳೆ ಅವರು ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.

Cheteshwar Pujara: ಪೂಜಾರ 2.O; 9 ಸಿಕ್ಸ್, 16 ಫೋರ್.. 86 ಎಸೆತಗಳಲ್ಲಿ 159 ರನ್ ಜೊತೆಯಾಟ..!
ಚೇತೇಶ್ವರ್ ಪೂಜಾರ
Follow us on

ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ (Syed Mushtaq Ali Trophy) ಟೀಂ ಇಂಡಿಯಾದ ಟೆಸ್ಟ್ ಬ್ಯಾಟರ್ ಚೇತೇಶ್ವರ್ ಪೂಜಾರ (Cheteshwar Pujara) ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಅಕ್ಟೋಬರ್ 14 ರಂದು ಸೌರಾಷ್ಟ್ರ ಮತ್ತು ನಾಗಾಲ್ಯಾಂಡ್ ನಡುವೆ ನಡೆದ ಈ ಪಂದ್ಯದಲ್ಲಿ ಸೌರಾಷ್ಟ್ರ ಪರ ಕಣಕ್ಕಿಳಿದಿದ್ದ ಪೂಜಾರ ನಾಗಾಲ್ಯಾಂಡ್ ತಂಡದ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ್ದಾರೆ. ಸೌರಾಷ್ಟ್ರ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಚೇತೇಶ್ವರ್ ಪೂಜಾರ 35 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 62 ರನ್ ಚಚ್ಚಿದರು. ಇವರನ್ನು ಹೊರತುಪಡಿಸಿ ಸಮರ್ಥ್ ವ್ಯಾಸ್ ಕೂಡ ಅಬ್ಬರಿಸುವ ಮೂಲಕ ತಂಡಕ್ಕೆ ಬೃಹತ್ ಸ್ಕೋರ್ ಕಲೆಹಾಕಿದರು.

ನಾಗಾಲ್ಯಾಂಡ್ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಜೋಡಿ ಕೇವಲ 14 ರನ್‌ಗಳಿಗೆ ಮುರಿದುಬಿತ್ತು. ಆದರೆ, ಆ ಬಳಿಕ ಚೇತೇಶ್ವರ್ ಪೂಜಾರ ಮತ್ತು ಸಮರ್ಥ್ ವ್ಯಾಸ್ ಜೋಡಿಯನ್ನು ಮುರಿಯಲು ನಾಗಾಲ್ಯಾಂಡ್ ಬೌಲರ್‌ಗಳಿಗೆ ಕಷ್ಟವಾಯಿತು. ಸೌರಾಷ್ಟ್ರದ ಮೊದಲ ವಿಕೆಟ್ ಎರಡನೇ ಓವರ್‌ನಲ್ಲಿಯೇ ಪತನಗೊಂಡಿತು. ಆದರೆ ನಂತರದ 10 ಓವರ್‌ಗಳವರೆಗೆ ಮೈದಾನದಲ್ಲಿ ಕೇವಲ ಬೌಂಡರಿ, ಸಿಕ್ಸರ್​ಗಳ ಮಳೆ ಸುರಿಯಿತು.

ಪೂಜಾರ- ಸಮರ್ಥ್ 159 ರನ್ ಜೊತೆಯಾಟ

ಪೂಜಾರ ಮತ್ತು ಸಮರ್ಥ್ ಎರಡನೇ ವಿಕೆಟ್‌ಗೆ ಬೌಂಡರಿ ಮತ್ತು ಸಿಕ್ಸರ್‌ಗಳ ಸುರಿಮಳೆಗೈದರು. ಇಬ್ಬರ ನಡುವೆ 159 ರನ್‌ಗಳ ಜೊತೆಯಾಟವಿತ್ತು ಮತ್ತು ಈ ರನ್‌ಗಳು ಕೇವಲ 86 ಎಸೆತಗಳಲ್ಲಿ ಬಂದವು. ಈ ವೇಳೆ ಇಬ್ಬರೂ ಸೇರಿ ನಾಗಾಲ್ಯಾಂಡ್ ವಿರುದ್ಧ 9 ಸಿಕ್ಸರ್ ಹಾಗೂ 16 ಬೌಂಡರಿ ಬಾರಿಸಿದರು. ಅದೇನೆಂದರೆ 118 ರನ್‌ಗಳನ್ನು ಅವರಿಬ್ಬರೂ ಬೌಂಡರಿಗಳಿಂದ ಮಾತ್ರ ಗಳಿಸಿದರು.

ಪೂಜಾರ 35 ಎಸೆತಗಳಲ್ಲಿ 62 ರನ್, ಸಮರ್ಥ್ 51 ಎಸೆತಗಳಲ್ಲಿ 97 ರನ್

35 ಎಸೆತಗಳಲ್ಲಿ 62 ರನ್ ಗಳಿಸಿದ ಚೇತೇಶ್ವರ ಪೂಜಾರ, 177.14 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ, 9 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ವೇಳೆ ಅವರು ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದೇ ಸಮಯದಲ್ಲಿ ಸಮರ್ಥ್ ವ್ಯಾಸ್ 51 ಎಸೆತಗಳಲ್ಲಿ 7 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 97 ರನ್ ಗಳಿಸಿದರು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇದು ಸಮರ್ಥ್ ಮತ್ತು ಪೂಜಾರ ಅವರ ಮೊದಲ ಅರ್ಧಶತಕವಾಗಿದ್ದು, ಪೂಜಾರ ಮತ್ತು ಸಮರ್ಥ್ ಅವರ ಈ ಇನ್ನಿಂಗ್ಸ್‌ನಿಂದಾಗಿ ಸೌರಾಷ್ಟ್ರ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 203 ರನ್ ಗಳಿಸಿ ನಾಗಾಲ್ಯಾಂಡ್‌ಗೆ 204 ರನ್‌ಗಳ ಗುರಿಯನ್ನು ನೀಡಿತು.

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಚೇತೇಶ್ವರ್ ಪೂಜಾರ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿಲ್ಲ. ಆದರೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂತಹ ಇನ್ನಿಂಗ್ಸ್ ಆಡಿದ ನಂತರ, ಮುಂಬರುವ ಸೀಸನ್​ನಲ್ಲಿ ಪೂಜಾರರನ್ನು ಖರೀದಿಸಲು ಯಾವುದಾದರು ಫ್ರಾಂಚೈಸಿ ಮನಸ್ಸು ಮಾಡುವ ಸಾಧ್ಯತೆಗಳಿವೆ.

Published On - 3:52 pm, Fri, 14 October 22