T20 World Cup 2022: ತ್ರಿಕೋನ ಸರಣಿ ಗೆಲ್ಲುವುದರೊಂದಿಗೆ ಟೀಂ ಇಂಡಿಯಾ ಮುಂದೆ 4 ಸವಾಲಿಟ್ಟ ಪಾಕಿಸ್ತಾನ..!

T20 World Cup 2022: ತ್ರಿಕೋನ ಸರಣಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಪರಿಪೂರ್ಣ ಪ್ರದರ್ಶನ ನೀಡಿತು. ವಿಶೇಷವಾಗಿ ಅದರ ಮಧ್ಯಮ ಕ್ರಮಾಂಕದ ಕೊಡುಗೆಯಿಂದ ಈ ಪಂದ್ಯವನ್ನು ಪಾಕ್ ಗೆಲ್ಲುವಲ್ಲಿ ಯಶಸ್ವಿಯಾಯಿತು.

T20 World Cup 2022: ತ್ರಿಕೋನ ಸರಣಿ ಗೆಲ್ಲುವುದರೊಂದಿಗೆ ಟೀಂ ಇಂಡಿಯಾ ಮುಂದೆ 4 ಸವಾಲಿಟ್ಟ ಪಾಕಿಸ್ತಾನ..!
ಪಾಕ್ ತಂಡ
Follow us
TV9 Web
| Updated By: ಪೃಥ್ವಿಶಂಕರ

Updated on: Oct 14, 2022 | 1:41 PM

2022ರ ಟಿ20 ವಿಶ್ವಕಪ್‌ (T20 World Cup 2022) ಆರಂಭಕ್ಕೂ ಮುನ್ನ ಪಾಕಿಸ್ತಾನ (Pakistan) ಅದ್ಭುತ ಸಾಧನೆ ಮಾಡಿದ್ದು, ನ್ಯೂಜಿಲೆಂಡ್​ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಕಿವೀಸ್ ತಂಡವನ್ನು ತವರಿನಲ್ಲೇ ಸೋಲಿಸುವ ಮೂಲಕ ಸರಣಿ ಎತ್ತಿ ಹಿಡಿದಿದೆ. ಶುಕ್ರವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್‌ಗಳಿಂದ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 163 ರನ್ ಗಳಿಸಿತು, ಉತ್ತರವಾಗಿ ಪಾಕಿಸ್ತಾನ ತಂಡವು 3 ಎಸೆತಗಳು ಬಾಕಿ ಇರುವಂತೆಯೇ ಗುರಿ ಸಾಧಿಸಿತು. ಪಾಕಿಸ್ತಾನದ ಈ ಗೆಲುವಿನ ನಂತರ ಇದೀಗ ಟೀಂ ಇಂಡಿಯಾಗೆ (Team India) 4 ದೊಡ್ಡ ಸವಾಲುಗಳು ಎದುರಾಗಿವೆ. ಅಕ್ಟೋಬರ್ 23 ರಂದು ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳ ನಡುವೆ ಪಂದ್ಯವಿದ್ದು, ಪಾಕಿಸ್ತಾನ ಇದೀಗ ಮೆಲ್ಬೋರ್ನ್ ಮೈದಾನದಲ್ಲಿ ಟೀಮ್ ಇಂಡಿಯಾವನ್ನು ಸದೆಬಡಿಯುವ ಉತ್ಸಾಹದಲ್ಲಿ ಬೀಗುತ್ತಿದೆ.

ತ್ರಿಕೋನ ಸರಣಿಯ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಪರಿಪೂರ್ಣ ಪ್ರದರ್ಶನ ನೀಡಿತು. ವಿಶೇಷವಾಗಿ ಅದರ ಮಧ್ಯಮ ಕ್ರಮಾಂಕದ ಕೊಡುಗೆಯಿಂದ ಈ ಪಂದ್ಯವನ್ನು ಪಾಕ್ ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ ಪಾಕ್ ತಂಡದಲ್ಲಿ ನಿರಂತರವಾಗಿ ಕೇಳಿಬರುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಂತ್ತಾಗಿದೆ. ಈ ಸರಣಿಗೂ ಮೊದಲು ಬಾಬರ್ ಮತ್ತು ರಿಜ್ವಾನ್ ಒಂದು ವೇಳೆ ಬ್ಯಾಟಿಂಗ್​ನಲ್ಲಿ ವಿಫಲವಾದರೆ ಪಾಕಿಸ್ತಾ ಗೆಲ್ಲುವುದು ಕಷ್ಟ ಎಂಬ ಪ್ರಶ್ನೆ ಎದುರಾಗಿತ್ತು. ಆದರೆ ಇಂತಹ ಎಲ್ಲ ಪ್ರಶ್ನೆಗಳಿಗೆ ಉತ್ತರವೆಂಬಂತೆ ಈ ಸರಣಿ ಮುನ್ನೆಲೆಗೆ ಬಂದಿದೆ. ಇದರೊಂದಿಗೆ ರೋಹಿತ್​ ಪಡೆಗೆ ಪಾಕಿಸ್ತಾನ ಪ್ರಮುಖ 4 ಸವಾಲುಗಳನ್ನು ಒಡ್ಡಿದೆ.

ಬಾಬರ್-ರಿಜ್ವಾನ್ ಜೋಡಿ

2023 ರ ಟಿ 20 ವಿಶ್ವಕಪ್‌ನಲ್ಲಿ ಭಾರತಕ್ಕೆ ದೊಡ್ಡ ಸಮಸ್ಯೆ ಎಂದರೆ ಬಾಬರ್ ಮತ್ತು ರಿಜ್ವಾನ್ ಜೋಡಿ. ಈ ಇಬ್ಬರೂ ಆಟಗಾರರಿಗೆ ವಿಕೆಟ್‌ನಲ್ಲಿ ಹೇಗೆ ಹೆಚ್ಚು ಸಮಯ ನಿಲ್ಲಬೇಕು ಎಂಬುದು ಚೆನ್ನಾಗಿಯೆ ತಿಳಿದಿದೆ. ಹೀಗಾಗಿ ಬಾಬರ್-ರಿಜ್ವಾನ್ ಅವರನ್ನು ಔಟ್ ಮಾಡುವುದು ಟೀಮ್ ಇಂಡಿಯಾಕ್ಕೆ ಬಹಳ ಮುಖ್ಯವಾಗಿದೆ. ನ್ಯೂಜಿಲೆಂಡ್‌ನಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ಬಾಬರ್-ರಿಜ್ವಾನ್ ಎರಡು ಬಾರಿ 50ಕ್ಕೂ ಹೆಚ್ಚು ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಅದರಲ್ಲಿ ಶತಕದ ಜೊತೆಯಾಟವೂ ಒಂದು. ಹೀಗಾಗಿ ಮೆಲ್ಬೋರ್ನ್‌ನ ಬ್ಯಾಟಿಂಗ್ ವಿಕೆಟ್‌ನಲ್ಲಿ ಬಾಬರ್-ರಿಜ್ವಾನ್ ಅವರನ್ನು ಔಟ್ ಮಾಡುವುದು ರೋಹಿತ್​ ಪಡೆಗೆ ದೊಡ್ಡ ಸವಾಲಾಗಿದೆ.

ಫಾರ್ಮ್​ಗೆ ಬಂದ ಮಧ್ಯಮ ಕ್ರಮಾಂಕ

ಪಾಕಿಸ್ತಾನದ ಮಧ್ಯಮ ಕ್ರಮಾಂಕ ತಂಡಕ್ಕೆ ಇಷ್ಟು ದಿನ ದೊಡ್ಡ ಸಮಸ್ಯೆಯಾಗಿತ್ತು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್​ಗಳೇ ಗೆಲುವಿನ ಇನ್ನಿಂಗ್ಸ್ ಆಡಿದ್ದಾರೆ. ಈ ಸರಣಿಯಲ್ಲಿ ಮೊಹಮ್ಮದ್ ನವಾಜ್ ಅವರನ್ನು ಎರಡು ಬಾರಿ 4 ನೇ ಸ್ಥಾನದಲ್ಲಿ ಆಡಿಸಿದ ಪಾಕಿಸ್ತಾನ ಎರಡೂ ಬಾರಿಯೂ ಯಶಸ್ವಿಯಾಯಿತು. ನವಾಜ್ ಅಂತಿಮ ಪಂದ್ಯದಲ್ಲಿ 22 ಎಸೆತಗಳಲ್ಲಿ ಅಜೇಯ 38 ರನ್ ಗಳಿಸಿದರೆ, ಅದಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧ ಆಡಿದ ಪಂದ್ಯದಲ್ಲಿ 20 ಎಸೆತಗಳಲ್ಲಿ 45 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ನವಾಜ್ ಪ್ರವೇಶವು ಇದೀಗ ಪಾಕಿಸ್ತಾನದ ದೌರ್ಬಲ್ಯವನ್ನು ಶಕ್ತಿಯಾಗಿ ಪರಿವರ್ತಿಸಿದೆ, ಇದು ಟೀಮ್ ಇಂಡಿಯಾಕ್ಕೆ ಟೆನ್ಶನ್ ಆಗಿದೆ.

ಹಾರಿಸ್ ರೌಫ್ ಫಾರ್ಮ್​ನಲ್ಲಿ

ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಕೂಡ ಅದ್ಭುತ ಲಯದಲ್ಲಿದ್ದು ಟೀಂ ಇಂಡಿಯಾಕ್ಕೆ ಆತಂಕ ತಂದಿದೆ. ತ್ರಿಕೋನ ಸರಣಿಯ ಫೈನಲ್‌ನಲ್ಲಿ ರೌಫ್ 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 2 ವಿಕೆಟ್ ಪಡೆದರು. ಇದರಲ್ಲಿ ದೊಡ್ಡ ವಿಷಯವೆಂದರೆ ಡೆತ್ ಓವರ್‌ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದ ರೌಫ್ 2 ಓವರ್‌ಗಳಲ್ಲಿ ಕೇವಲ 7 ರನ್ ನೀಡಿದ್ದರು. ರೌಫ್ ಅವರ ಉತ್ತಮ ಫಾರ್ಮ್ ಪಾಕಿಸ್ತಾನದ ಉತ್ಸಾಹವನ್ನು ಹೆಚ್ಚಿಸಲಿದೆ.

ಫಿಟ್ ಆದ ಶಾಹೀನ್ ಶಾ

ಇಷ್ಟು ದಿನ ಇಂಜುರಿಯಿಂದ ತಂಡದ ಹೊರಗಿದ್ದ ಪಾಕ್ ತಂಡದ ಪ್ರಮುಖ ವೇಗಿ ಶಾಹೀನ್ ಅಫ್ರಿದಿ ಭಾರತ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ವಾಪಸ್ಸಾಗುತ್ತಿದ್ದಾರೆ. ಈ ಆಟಗಾರ ಈಗ ಸಂಪೂರ್ಣ ಫಿಟ್ ಆಗಿದ್ದು, ಶಾಹೀನ್ ವಾಪಸಾತಿ ಟೀಂ ಇಂಡಿಯಾಕ್ಕೆ ಆತಂಕ ತಂದಿದೆ. ಹೊಸ ಚೆಂಡಿನಲ್ಲಿ ಅದ್ಭುತ ಬೌಲಿಂಗ್ ಮಾಡುವುದಕ್ಕೆ ಶಾಹೀನ್ ಹೆಸರುವಾಸಿಯಾಗಿದ್ದಾರೆ. ಅಲ್ಲದೆ ಎಡಗೈ ಬೌಲರ್​ಗಳ ಮುಂದೆ ಕೊಂಚ ಕಷ್ಟಪಡುವ ಟೀಂ ಇಂಡಿಯಾ ಆಟಗಾರರಿಗೆ ಎಡಗೈ ವೇಗದ ಬೌಲರ್ ಆಗಿರುವ ಶಾಹೀನ್ ಇನ್ನಷ್ಟು ತಲೆನೋವು ಹೆಚ್ಚಿಸಿದ್ದಾರೆ. ಇದೀಗ ಭಾರತ ತಂಡಕ್ಕೆ ಪಾಕಿಸ್ತಾನ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವುದು ಸ್ಪಷ್ಟವಾಗಿದೆ.

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ