AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇವರೇನು ಶಾಲಾ ಮಕ್ಕಳಲ್ಲ, ಮಿಲಿಯನೇರ್‌ಗಳು’: ಕೋಚ್ ದ್ರಾವಿಡ್​ ಬೆವರಳಿಸಿದ ರವಿಶಾಸ್ತ್ರಿ

ಫಿಟ್‌ನೆಸ್‌ಗೆ ಒತ್ತು ನೀಡುವುದು ಬಹಳ ನಿರ್ಣಾಯಕವಾಗಿದೆ. ನನ್ನ ಕಾಲದಲ್ಲಿ ನಾವು ಯೋ-ಯೋ ಟೆಸ್ಟ್​ಗೆ ಹೆಚ್ಚು ಒತ್ತು ನೀಡುತ್ತಿದ್ದೇವು. ಬಹಳಷ್ಟು ಜನರು ಅದನ್ನು ನೋಡಿ ನಕ್ಕರು. ನಾವು ಪ್ರಮುಖವಾಗಿ ಈ ಟೆಸ್ಟ್​ ಮಾಡುತ್ತಿದ್ದಿದ್ದು, ಆಟಗಾರರು ಸದಾ ಜಾಗೃತರಾಗಿರಲಿ ಎಂದು.

‘ಇವರೇನು ಶಾಲಾ ಮಕ್ಕಳಲ್ಲ, ಮಿಲಿಯನೇರ್‌ಗಳು’: ಕೋಚ್ ದ್ರಾವಿಡ್​ ಬೆವರಳಿಸಿದ ರವಿಶಾಸ್ತ್ರಿ
ರವಿಶಾಸ್ತ್ರಿ, ಟೀಂ ಇಂಡಿಯಾ
TV9 Web
| Edited By: |

Updated on:Oct 14, 2022 | 12:34 PM

Share

ಟಿ20 ವಿಶ್ವಕಪ್‌ (T20 World Cup) ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್​ಗಳ ಕಳಪೆ ಪ್ರದರ್ಶನವನ್ನು ಕಂಡು ತಂಡದ ಮಾಜಿ ಕೋಚ್ ರವಿಶಾಸ್ತ್ರಿ (Ravi Shastri ) ತಮ್ಮ ಅಸಮಾದಾನವನ್ನು ಹೊರಹಾಕಿದ್ದಾರೆ. ವಾಸ್ತವವಾಗಿ ರವಿಶಾಸ್ತ್ರಿ ಅವರು ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದಾಗ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿತ್ತು. ಶಾಸ್ತ್ರಿ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಸಂಯೋಜನೆಯು ತಂಡದ ಬೌಲಿಂಗ್​ ವಿಭಾಗವನ್ನು ಬೇರೆ ಹಂತಕ್ಕೆ ಕೊಂಡೊಯ್ದಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ತಂಡದ ಬೌಲರ್​ಗಳು ತವರಿನ ಹೊರಗೂ ಟೆಸ್ಟ್ ಪಂದ್ಯಗಳಲ್ಲಿ ನಿಯಮಿತವಾಗಿ 20 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದರು. ಏಕದಿನ ಹಾಗೂ ಟಿ20 ಕ್ರಿಕೆಟ್​ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದರು. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್‌ಗಳಾದ ಯುಜ್ವೇಂದ್ರ ಚಾಹಲ್, ರವೀಂದ್ರ ಜಡೇಜಾ ಸೇರಿದಂತೆ ತಂಡದ ಬೌಲಿಂಗ್ ವಿಭಾಗದ ಭಾರತಕ್ಕೆ ಹಲವು ಜಯಗಳನ್ನು ತಂದುಕೊಟ್ಟಿತ್ತು.

ಆದರೆ, ಶಾಸ್ತ್ರಿ ಅವರ ಅಧಿಕಾರಾವಧಿ ಮುಗಿಯುತ್ತಿದ್ದಂತೆ ಬೌಲಿಂಗ್​ ವಿಭಾಗದಲ್ಲಿದ್ದ ಆ ಕಿಡಿ ನಾಪತ್ತೆಯಾದಂತಿದೆ. ಸಾಗರೋತ್ತರ ಟೆಸ್ಟ್‌ಗಳಲ್ಲಿ ಭಾರತೀಯ ಬೌಲರ್‌ಗಳು ಬಿಗ್ ಸ್ಕೋರ್ ಮುಂದೆಯೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾಗಿದ್ದಾರೆ. ಉದಾಹರಣೆಗೆ ಈ ವರ್ಷದ ಆರಂಭದಲ್ಲಿ ಜೋಹಾನ್ಸ್‌ಬರ್ಗ್​ನಲ್ಲಿ ನಡೆದ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ 242 ರನ್ ಮತ್ತು ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 370 ಕ್ಕೂ ಅಧಿಕ ಟಾರ್ಗೆಟ್​ ಅನ್ನು ಸೇವ್​ ಮಾಡುವಲ್ಲಿ ವೇಗಿಗಳು ವಿಫಲರಾಗಿದ್ದರು. ಅಲ್ಲದೆ ಇತ್ತೀಚಿಗೆ ಟೀಂ ಇಂಡಿಯಾ ವೇಗಿಗಳು ದಾರಾಳವಾಗಿ ರನ್​ ಬಿಟ್ಟುಕೊಡುತ್ತಿದ್ದಾರೆ. ವಾಸ್ತವವಾಗಿ 2022 ರಲ್ಲಿ ಆಡಿರುವ ಆರು ಟಿ20 ಪಂದ್ಯಗಳಲ್ಲಿ ಬರೋಬ್ಬರಿ 200 ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಶಾಸ್ತ್ರಿ, ಭಾರತದ ಬೌಲಿಂಗ್​ ವಿಭಾಗ ಇಷ್ಟು ಹೀನಾಯ ಸ್ಥಿತಿಗೆ ತಲುಪಲು ಕಾರಣವೆನ್ನೆಂಬುದನ್ನು ಬಹಿರಂಗಪಡಿಸಿದ್ದು, ಇದಕ್ಕೆ ಮ್ಯಾನೇಜ್‌ಮೆಂಟ್ ಮೇಲೆ ನೇರ ಆರೋಪ ಮಾಡಿದ್ದಾರೆ.

ಹೌದು ತಂಡದ ಪ್ರಮುಖ ನಿರ್ವಾಹಣೆಯಲ್ಲಿ ಮ್ಯಾನೇಜ್‌ಮೆಂಟ್ ಪಾತ್ರ ಮುಖ್ಯವಾಗಿರುತ್ತದೆ. ಟೀಂ ಇಂಡಿಯಾ ವೇಗಿಗಳು ಇನ್ನು ಶಾಲಾ ಮಕ್ಕಳಲ್ಲ, ಅವರು ಮಿಲಿಯನೇರ್‌ಗಳು, ಪ್ರತಿಯೊಬ್ಬರೂ ತಮ್ಮದೇ ಆದ ಮನಸ್ಥಿತಿಯನ್ನು ಹೊಂದಿದ್ದಾರೆ. ಹೀಗಾಗಿ ನೀಮಗೆ ಆ ಆಟಗಾರರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದು ಗೊತ್ತಿರಬೇಕು. ಜೊತೆಗೆ ಈ ವಿಭಾಗದಲ್ಲಿ ಕಂಡುಬರುವ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದು ನಿಮಗೆ ಗೊತ್ತಿರಬೇಕು ಎಂದಿದ್ದಾರೆ.

ಇದರ ಜೊತೆಗೆ ತಂಡದ ಫೀಲ್ಡಿಂಗ್‌ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಶಾಸ್ತ್ರಿ, ತಂಡದ ಮ್ಯಾನೇಜ್‌ಮೆಂಟ್, ಫೀಲ್ಡಿಂಗ್‌ ಮೇಲು ತಕ್ಷಣದ ಗಮನ ಹರಿಸುವ ಅಗತ್ಯವಿದೆ ಎಂದರು. ತಂಡದಲ್ಲಿ ಬೌಲಿಂಗ್ ಜೊತೆಗೆ, ಫೀಲ್ಡಿಂಗ್ ಮತ್ತು ಕ್ಯಾಚಿಂಗ್‌ನ ಗುಣಮಟ್ಟವು ಗಣನೀಯವಾಗಿ ಕುಸಿದಿದೆ. ಇದರಿಂದಲೇ ಎದುರಾಳಿ ತಂಡಗಳು ಸರಾಗವಾಗಿ 200 ಕ್ಕೂ ಅಧಿಕ ಸ್ಕೋರ್ ಕಲೆಹಾಕುತ್ತಿವೆ ಎಂದಿದ್ದಾರೆ.

ಹಾಗೆಯೇ “ಫಿಟ್‌ನೆಸ್‌ಗೆ ಒತ್ತು ನೀಡುವುದು ಬಹಳ ನಿರ್ಣಾಯಕವಾಗಿದೆ. ನನ್ನ ಕಾಲದಲ್ಲಿ ನಾವು ಯೋ-ಯೋ ಟೆಸ್ಟ್​ಗೆ ಹೆಚ್ಚು ಒತ್ತು ನೀಡುತ್ತಿದ್ದೇವು. ಬಹಳಷ್ಟು ಜನರು ಅದನ್ನು ನೋಡಿ ನಕ್ಕರು. ನಾವು ಪ್ರಮುಖವಾಗಿ ಈ ಟೆಸ್ಟ್​ ಮಾಡುತ್ತಿದ್ದಿದ್ದು, ಆಟಗಾರರು ಸದಾ ಜಾಗೃತರಾಗಿರಲಿ ಎಂದು. ಈ ಟೆಸ್ಟ್ ತಂಡದಲ್ಲಿ ಭಾರಿ ಬದಲಾವಣೆಯನ್ನು ಮಾಡಿತ್ತು. ಈ ಟೆಸ್ಟ್​ನಿಂದ ಆಟಗಾರರ ಆಟದಲ್ಲಿ ಬದಲಾವಣೆಯಾಗದಿದ್ದರೂ, ಮೈದಾನದಲ್ಲಿ ಅವರು ಸದಾ ಚೈತನ್ಯದಿಂದ ಇರಲು ಸಹಕಾರಿಯಾಗುತ್ತಿತ್ತು. “ಕಳೆದ ಕೆಲವು ತಿಂಗಳುಗಳಲ್ಲಿ ನೀವು ಎದುರಾಳಿ ತಂಡಕ್ಕೆ 200 ಕ್ಕೂ ಹೆಚ್ಚು ರನ್ ಗಳಿಸಲು ಎಷ್ಟು ಬಾರಿ ಅವಕಾಶ ನೀಡಿದ್ದೀರಿ ಎಂಬುದು ಈಗ ಆತಂಕಕಾರಿಯಾಗಿದೆ. ಇದಕ್ಕೆ ಹೆಚ್ಚಿನವರು ಬೌಲಿಂಗ್ ವಿಭಾಗವನ್ನು ದೂಷಿಸುತ್ತಾರೆ. ಆದರೆ ಇದರಲ್ಲಿ ಫೀಲ್ಡಿಂಗ್ ವೈಫಲ್ಯವೂ ಪ್ರಮುಖ ಪಾತ್ರವಹಿಸಿದೆ ಎಂದು ಶಾಸ್ರ್ತಿ ಹೇಳಿದ್ದಾರೆ.

Published On - 12:32 pm, Fri, 14 October 22

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!