ಭಾರತ ಎರಡೆರಡು ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಗಂಭೀರ್ಗೆ ಇಂದು 41ನೇ ಹುಟ್ಟುಹಬ್ಬ
Happy Birthday Gautam Gambhir: ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಇಂದು ತಮ್ಮ (ಅಕ್ಟೋಬರ್ 14, ಶುಕ್ರವಾರ) 41ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2000 ರ ದಶಕದ ಆರಂಭದಲ್ಲಿ ಟೀಂ ಇಂಡಿಯಾಕ್ಕೆ ಪಾದರ್ಪಣೆ ಮಾಡಿದ ಗಂಭೀರ್, ಕ್ರಿಕೆಟ್ನ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತದ ಪರ ಹಲವಾರು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ (Gautam Gambhir) ಇಂದು ತಮ್ಮ (ಅಕ್ಟೋಬರ್ 14, ಶುಕ್ರವಾರ) 41ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2000 ರ ದಶಕದ ಆರಂಭದಲ್ಲಿ ಟೀಂ ಇಂಡಿಯಾಕ್ಕೆ ಪಾದರ್ಪಣೆ ಮಾಡಿದ ಗಂಭೀರ್, ಕ್ರಿಕೆಟ್ನ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತದ ಪರ ಹಲವಾರು ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಇದರಲ್ಲಿ ಪ್ರಮುಖವಾದದ್ದು, 2007 ರ ಚೊಚ್ಚಲ ಟಿ20 ವಿಶ್ವಕಪ್. ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಗಂಭಿರ್ ತಂಡಕ್ಕೆ ಅಮೂಲ್ಯ 75 ರನ್‌ಗಳ ಕೊಡುಗೆ ನೀಡಿದ್ದರು. ಇದರ ಫಲವಾಗಿ ಟೀಂ ಇಂಡಿಯಾ ನಿಗಧಿತ 20 ಓವರ್ಗಳಲ್ಲಿ 157 ರನ್ ಗಳಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ಪಾಕಿಸ್ತಾನ 152 ರನ್ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ಭಾರತ ಚೊಚ್ಚಲ ಟಿ20 ವಿಶ್ವಕಪ್ನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
2009 ರಲ್ಲಿ ಫಾರ್ಮ್ನ ಉತ್ತುಂಗದಲ್ಲಿದ್ದ ಗಂಭೀರ್ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ.1 ಬ್ಯಾಟರ್ ಆಗಿದ್ದರು. ಆ ಬಳಿಕ 2011 ರಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಭಾರತ ಮತ್ತೊಮ್ಮೆ ಚಾಂಪಿಯನ್ ಆಗಲು ಗಂಭೀರ್ ಪ್ರಮುಖ ಕೊಡುಗೆ ನೀಡಿದ್ದರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಏಕದಿನ ವಿಶ್ವಕಪ್ನಲ್ಲಿ ಗಂಭೀರ್ 97 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದ್ದರು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಜಯವರ್ಧನೆ ಅವರ ಅಜೇಯ ಶತಕದ ನೆರವಿನಿಂದ ಭಾರತಕ್ಕೆ 274 ರನ್‌ಗಳ ಟಾರ್ಗೆಟ್ ನೀಡಿತ್ತು. ಇದಕ್ಕುತ್ತರವಾಗಿ ಗುರಿ ಬೆನ್ನಟ್ಟಿದ ಭಾರತ ಆರಂಭದಲ್ಲೇ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದೀಚೆಗೆ ತಂಡದ ಇನ್ನಿಂಗ್ಸ್ ಜವಬ್ದಾರಿವಹಸಿಕೊಂಡಿದ್ದ ಗಂಭೀರ್ ಮೈದಾನದಲ್ಲಿ ಹೆಚ್ಚು ನಿಲ್ಲುವುದರೊಂದಿಗೆ ತಂಡದ ಮೊತ್ತವನ್ನು ಹೆಚ್ಚಿಸಿದರು.
ಎರಡನೇ ಕ್ರಮಾಂಗದಲ್ಲಿ ಕಣಕ್ಕಿಳಿದು 122 ಎಸೆತಗಳನ್ನು ಎದುರಿಸಿದ ಗಂಭೀರ್, 9 ಬೌಂಡರಿಗಳ ನೆರವಿನಿಂದ 97 ರನ್ ಗಳಿಸಿದರು. ಮೊದಲಿಗೆ, ಅವರು ವಿರಾಟ್ ಕೊಹ್ಲಿಯೊಂದಿಗೆ 83 ರನ್‌ಗಳ ಜೊತೆಯಾಟವನ್ನು ಮಾಡಿದರು. ನಂತರ ಅವರು MS ಧೋನಿಯೊಂದಿಗೆ 109 ರನ್‌ಗಳ ಜೊತೆಯಾಟವನ್ನು ನಡೆಸಿದರು. ಆ ಬಳಿಕ 42ನೇ ಓವರ್‌ನಲ್ಲಿ ತಿಸಾರ ಪೆರೇರಾ ಗಂಭೀರ್ ಅವರನ್ನು ಔಟ್ ಮಾಡಿದರು, ಆದರೆ ಆ ವೇಳೆಗಾಗಲೇ ಭಾರತ ಡ್ರೈವಿಂಗ್ ಸೀಟಿನಲ್ಲಿತ್ತು. ಈ ಮೂವರ ನಡುವಿನ ಅದ್ಭುತ ಜೊತೆಯಾಟದಿಂದಾಗಿ ಟೀಂ ಇಂಡಿಯಾ 6 ವಿಕೆಟ್ಗಳಿಂದ ಪಂದ್ಯ ಗೆಲ್ಲುವುದರೊಂದಿಗೆ ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಯಿತು.
2018 ಡಿಸೆಂಬರ್ನಲ್ಲಿ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾದ ಗಂಭೀರ್, ಆ ಬಳಿಕ ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವವಹಿಸಿಕೊಂಡು 2012 ಮತ್ತು 2014 ರಲ್ಲಿ ತಂಡವನ್ನು ಕ್ರಮವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದರು. ಸದ್ಯ ಗಂಭೀರ್ ಎನ್ಡಿಎ ಸರ್ಕಾರದಲ್ಲಿ ಸಂಸದನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Daag ache hote hai,when you see this photo u will remember the wankhede,wc trophy ,97 and the pain will hit for thinking why did he try to hit Parera and not take singles to complete his century but then u remember that was not his game. Happy Birthday legend @GautamGambhir pic.twitter.com/EJ2tVl6W3V
— Sanjay Hinge (@SanjayHinge) October 14, 2022
God knows what went wrong after retiring but gautam Gambhir in big games for my country >>>>>Happy Birthday GG no one will forget your mud stained Wc final jersey❤
Happy Birthday Gautam Gambhir pic.twitter.com/uufGX58ei8
— Gauti Harshit Dhiman (@GautiDhiman) October 14, 2022
The innings was ?? He was ??#gautamgambhir #HappyBirthday https://t.co/4BJDn5fyoK
— Vinayak (@nandhuzsz) October 14, 2022
@GautamGambhir happy birthday champ. Many trophies like 2007 T20 & 2011 world cup won't be with us without you. #gautamgambhir man of big occasions
— Parag Priyank (@ParagPriyank) October 14, 2022
The unsung hero of world cup 2011 and T20 world cup 2007….also hero in real life… He deserve respect and a chance to play in Indian team once again…. Happy birthday hero#gautamgambhir @GautamGambhir pic.twitter.com/UbNwApiSNc
— Arun gugliya (@Akofficial4747) October 14, 2022