Tilak Varma: ತಿಲಕ್ ವರ್ಮಾ ಸಿಡಿಸಿದ ಹೆಲಿಕಾಫ್ಟರ್ ಶಾಟ್​ಗೆ ಸ್ತಬ್ಧವಾದ ಚಿನ್ನಸ್ವಾಮಿ ಸ್ಟೇಡಿಯಂ: ರೋಚಕ ವಿಡಿಯೋ ನೋಡಿ

|

Updated on: Apr 03, 2023 | 9:30 AM

RCB vs MI, IPL 2023: 16ನೇ ಓವರ್ ವರೆಗೂ ಆರ್​ಸಿಬಿ ಹಿಡಿತದಲ್ಲೇ ಇದ್ದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅನ್ನು ಕಡಿಮ ಮೊತ್ತಕ್ಕೆ ಕಟ್ಟು ಹಾಕುವ ಪ್ಲಾನ್​ನಲ್ಲಿತ್ತು. ಆದರೆ, ಕೊನೆಯ ಮೂರು ಓವರ್​ಗಳಲ್ಲಿ ಆರ್​ಸಿಬಿ ಬೌಲರ್​ಗಳ ಬೆವರಿಳಿಸಿದ್ದು ತಿಲಕ್ ವರ್ಮಾ.

Tilak Varma: ತಿಲಕ್ ವರ್ಮಾ ಸಿಡಿಸಿದ ಹೆಲಿಕಾಫ್ಟರ್ ಶಾಟ್​ಗೆ ಸ್ತಬ್ಧವಾದ ಚಿನ್ನಸ್ವಾಮಿ ಸ್ಟೇಡಿಯಂ: ರೋಚಕ ವಿಡಿಯೋ ನೋಡಿ
Tilak Varma helicopter shot
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (IPL 2023) ಮುಂಬೈ ಇಂಡಿಯನ್ಸ್ ತಂಡದ ಸೋಲಿನ ಆರಂಭ ಈ ಬಾರಿ ಕೂಡ ಮುಂದುವರೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮುಂಬೈ (RCB vs MI) 8 ವಿಕೆಟ್​ಗಳ ಸೋಲು ಕಂಡಿತು. ಈ ಮೂಲಕ ಕಳೆದ 11 ಸೀಸನ್​ಗಳಲ್ಲಿ ತಾನು ಆಡಿದ ಎಲ್ಲ ಮೊದಲ ಪಂದ್ಯದಲ್ಲಿ ಸೋತ ಕೆಟ್ಟ ದಾಖಲೆ ಬರೆಯಿತು. 50 ರನ್​ಗು ಮೊದಲೇ ಪ್ರಮುಖ 4 ವಿಕೆಟ್ ಕಳೆದುಕೊಂಡ ರೋಹಿತ್ ಶರ್ಮಾ ಪಡೆಯ ಮೊತ್ತ 100 ದಾಟುವುದು ಕಷ್ಟವಾಗಿತ್ತು. ಆದರೆ, 20ನೇ ಓವರ್ ವರೆಗೂ ಟೊಂಕ ಕಟ್ಟಿ ಕ್ರೀಸ್​ನಲ್ಲಿ ನಿಂತ ಯುವ ಬ್ಯಾಟರ್ ತಿಲಕ್ ವರ್ಮಾ (Tilak Varma) 171 ರನ್​ಗಳ ಸವಾಲಿನ ಮೊತ್ತ ಕಲೆಹಾಕಲು ನೆರವಾದರು. 46 ಎಸೆತಗಳಲ್ಲಿ 9 ಫೋರ್ ಹಾಗೂ 4 ಸಿಕ್ಸರ್​ನೊಂದಿಗೆ ಇವರು ಅಜೇಯ 84 ರನ್ ಸಿಡಿಸಿದರು.

16ನೇ ಓವರ್ ವರೆಗೂ ಆರ್​ಸಿಬಿ ಹಿಡಿತದಲ್ಲೇ ಇದ್ದ ಪಂದ್ಯದಲ್ಲಿ ಮುಂಬೈ ಅನ್ನು ಕಡಿಮ ಮೊತ್ತಕ್ಕೆ ಕಟ್ಟು ಹಾಕುವ ಪ್ಲಾನ್​ನಲ್ಲಿತ್ತು. ಆದರೆ, ಕೊನೆಯ ಮೂರು ಓವರ್​ಗಳಲ್ಲಿ ಆರ್​ಸಿಬಿ ಬೌಲರ್​ಗಳ ಬೆವರಿಳಿಸಿದ್ದು ತಿಲಕ್ ವರ್ಮಾ. ಮನಬಂದಂತೆ ಬ್ಯಾಟ್ ಬೀಸಿದ ಇವರು ಫೋರ್-ಸಿಕ್ಸರ್​ಗಳ ಮಳೆ ಸುರಿಸಿದರು. ಅದರಲ್ಲೂ ಕೊನೆಯ 20ನೇ ಓವರ್​ನ ಹರ್ಷಲ್ ಪಟೇಲ್ ಬೌಲಿಂಗ್ ಅನ್ನು ಧೂಳಿಪಟ ಮಾಡಿಬಿಟ್ಟರು.

ಇದನ್ನೂ ಓದಿ
Virat Kohli RCB: ಮುಂಬೈ ಸೋತ ತಕ್ಷಣ ವಿರಾಟ್ ಕೊಹ್ಲಿ ಬಳಿ ಬಂದು ರೋಹಿತ್ ಶರ್ಮಾ ಮಾಡಿದ್ದೇನು ನೋಡಿ
Faf Duplessis: ಪಂದ್ಯ ಮುಗಿದ ಬಳಿಕ ಆರ್​ಸಿಬಿ ಗೆಲುವಿನ ಬಗ್ಗೆ ನಾಯಕ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ
Virat Kohli Record: ಮೊದಲ ಪಂದ್ಯದಲ್ಲೇ ಭರ್ಜರಿ ದಾಖಲೆ ಬರೆದ ವಿರಾಟ್ ಕೊಹ್ಲಿ
IPL 2023: ಕ್ಯಾಚ್ ಹಿಡಿದು ವಿಶ್ವ ದಾಖಲೆ ನಿರ್ಮಿಸಿದ ದಿನೇಶ್ ಕಾರ್ತಿಕ್

IPL 2023: ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಸಂಜು ಸ್ಯಾಮ್ಸನ್

ಅಂತಿಮ ಓವರ್​ನಲ್ಲಿ ಮುಂಬೈ 21 ರನ್ ಕಲೆಹಾಕಿತು. ತಿಲಕ್ ಎರಡು ಸಿಕ್ಸರ್ ಹಾಗೂ ಒಂದು ಬೌಂಡರಿ ಚಚ್ಚಿದರು. ಅದರಲ್ಲೂ ಕಾಲಿನ ಬಳಿ ಬಿದ್ದ 6ನೇ ಎಸೆತವನ್ನು ಹೆಲಿಕಾಫ್ಟರ್ ಶಾಟ್ ಮೂಲಕ ಸಿಕ್ಸರ್ ಸಿಡಿಸಿದ್ದು ಅದ್ಭುತವಾಗಿತ್ತು. ಇವರ ಈ ಹೊಡೆತ ಕಂಡು ಒಂದು ಕ್ಷಣ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಶಾಕ್ ಆದರು. ಇಲ್ಲಿದೆ ನೋಡಿ ಆ ವಿಡಿಯೋ.

 

ತಿಲಕ್ ವರ್ಮಾ ಅವರ ಈ ಮನಮೋಹಕ ಆಟದ ನೆರವಿನಿಂದಲೇ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ತಿಲಕ್ ಅವರ ಆಟದ ಬಗ್ಗೆ ಆರ್​ಸಿಬಿ ನಾಯಕ ಫಾಪ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಕೂಡ ಹಾಡಿಹೊಗಳಿದ್ದಾರೆ. ”ಕೊನೆಯ 2-3 ಓವರ್​ಗಳಲ್ಲಿ ನಾವು ಇನ್ನೂ ಚೆನ್ನಾಗಿ ಬೌಲಿಂಗ್ ಮಾಡಬಹುದಿತ್ತು. ತಿಲಕ್ ವರ್ಮಾ ಈ ಸಂದರ್ಭ ಚೆನ್ನಾಗಿ ಆಡಿದರು,” ಎಂದು ಫಾಫ್ ಹೇಳಿದ್ದಾರೆ. ಅಂತೆಯೆ ಕೊಹ್ಲಿ ಅವರು ಮಾತನಾಡುತ್ತಾ, ”ಮೊದಲು 17 ಓವರ್ ನಮ್ಮ ಬೌಲಿಂಗ್ ಅದ್ಭುತವಾಗಿತ್ತು. ಕೊನೆಯ 3 ಓವರ್​ನ ಕ್ರೆಡಿಟ್ ತಿಲಕ್ ವರ್ಮಾಗೆ ಸಲ್ಲಬೇಕು,” ಎಂದು ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಕೂಡ ತಿಲಕ್ ವರ್ಮಾ ಆಟದ ಬಗ್ಗೆ ಮಾತನಾಡಿದ್ದು, ”ಮೊದಲ ಆರು ಓವರ್​ಗಳಲ್ಲಿ ನಮ್ಮ ಆರಂಭ ಅದ್ಭುತ ಎಂಬಂತಿರಲಿಲ್ಲ. ಆದರೆ, ನಂತರದಲ್ಲಿ ತಿಲಕ್ ರ್ಮಾ ಮತ್ತು ಕೆಲ ಬ್ಯಾಟರ್​ಗಳು ಸಾಕಷ್ಟು ಪ್ರಯತ್ನ ಪಟ್ಟರು. ಬೌಲಿಂಗ್​ನಲ್ಲಿ ನಾವು ಅಂದುಕೊಂಡ ಯೋಜನೆಯಂತೆ ಸಾಗಲಿಲ್ಲ. ಈ ಪಿಚ್ ಬ್ಯಾಟರ್​ಗಳಿಗೆ ಹೆಚ್ಚು ಸಹಕಾರಿ ನೀಡಿತು. ತಿಲಕ್ ವರ್ಮಾ ಪಾಸಿಟಿವ್ ಪ್ಲೇಯರ್, ಪ್ರತಿಭಾವಂತ ಆಟಗಾರ. ಅವರು ಹೊಡೆದ ಕೆಲವು ಶಾಟ್ ಅದ್ಭುತವಾಗಿತ್ತು. ನಾವು ಸವಾಲಿನ ಮೊತ್ತ ಕಲೆಹಾಕಲು ನೆರವಾದ ತಿಲಕ್​ಗೆ ಹ್ಯಾಟ್ಸ್​ ಹಾಫ್,” ಎಂದು ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ