- Kannada News Photo gallery Cricket photos Faf Duplessis and Rohit Sharma in Post Match presentation afer RCB vs MI IPL 20233 Match Kannada News
Faf Duplessis: ಪಂದ್ಯ ಮುಗಿದ ಬಳಿಕ ಆರ್ಸಿಬಿ ಗೆಲುವಿನ ಬಗ್ಗೆ ನಾಯಕ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ
RCB vs MI, IPL 2023: ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ಬಳಿಕ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರೋಹಿತ್ ಶರ್ಮಾ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.
Updated on:Apr 03, 2023 | 7:37 AM

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2023ರ ಐದನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಗೆಲುವು ಕಂಡಿತು. ಬ್ಯಾಟಿಂಗ್ನಲ್ಲಿ ಮಿಂಚಿದ ವಿರಾಟ್ ಕೊಹ್ಲಿ-ಫಾಫ್ ಡುಪ್ಲೆಸಿಸ್ ತಂಡಕ್ಕೆ 8 ವಿಕೆಟ್ಗಳ ಜಯ ತಂದುಕೊಟ್ಟರು.

ಪಂದ್ಯ ಮುಗಿದ ಬಳಿಕ ತಂಡದ ಗೆಲುವಿನ ಬಗ್ಗೆ ಮಾತನಾಡಿದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬೌಲಿಂಗ್ನಲ್ಲಿ ನಮ್ಮ ಆರಂಭ ಉತ್ತಮವಾಗಿತ್ತು. ಮುಖ್ಯವಾಗಿ ಪವರ್ ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ ಎದುರಾಳಿಗರನ್ನು ಕಟ್ಟು ಹಾಕಿದರು. ಕೊನೆಯ 2-3 ಓವರ್ಗಳಲ್ಲಿ ಇನ್ನೂ ಚೆನ್ನಾಗಿ ಬೌಲಿಂಗ್ ಮಾಡಬಹುದಿತ್ತು ಎಂದು ಹೇಳಿದ್ದಾರೆ.

ಎರಡನೇ ಇನ್ನಿಂಗ್ಸ್ನಲ್ಲಿ ನಮಗೆ ಹೇಗೆ ರನ್ ಚೇಸ್ ಮಾಡಬೇಕು ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದಿತ್ತು. ಅಂದುಕೊಂಡ ರೀತಿಯಲ್ಲೇ ಅದನ್ನು ಮಾಡಿದೆವು ಕೂಡ. ಬೌಲರ್ಗಳು ಫೇಸ್ ತೆಗೆದು ಬೌಲಿಂಗ್ ಮಾಡಿದರೆ ಬ್ಯಾಟರ್ಗಳಿಗೆ ಕಷ್ಟವಾಗುತ್ತಿತ್ತು. ಸ್ಪಿನ್ನರ್ಗಳು ಇಲ್ಲಿ ಕೊಂಚ ಯಶಸ್ಸು ಸಾಧಿಸಿದರು - ಫಾಫ್ ಡುಪ್ಲೆಸಿಸ್.

ತವರಿನಲ್ಲಿ ಇದು ನನ್ನ ಮೊದಲ ಪಂದ್ಯ,, ಅದುಕೂಡ ವಿರಾಟ್ ಕೊಹ್ಲಿ ಯಂತಹ ಸ್ಪೆಷಲ್ ಪ್ಲೇಯರ್ ಜೊತೆ ಆಡಿದ್ದು ಖುಷಿ ನೀಡಿದೆ. ಅವರ ಎನರ್ಜಿ ಅದ್ಭುತ. ನೀವು ಯಂಗ್ಸ್ಟಾರ್ಸ್ ಜೊತೆ ಇದ್ದರೆ ನಮಗೂ ಒಂದು ಶಕ್ತಿ ಬಂದಂತೆ ಆಗುತ್ತದೆ. ನಾವೆಲ್ಲ ಆತ್ಮವಿಶ್ವಾಸದಿಂದ ಇದ್ದೇವೆ. ಈ ಗೆಲುವು ನಮಗೆ ದೊಡ್ಡದು ಎಂಬುದು ಫಾಫ್ ಮಾತು.

ಸೋತ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿ, ಮೊದಲ ಆರು ಓವರ್ಗಳಲ್ಲಿ ನಮ್ಮ ಆರಂಭ ಅದ್ಭುತ ಎಂಬಂತಿರಲಿಲ್ಲ. ಆದರೆ, ನಂತರದಲ್ಲಿ ತಿಲಕ್ ರ್ಮಾ ಮತ್ತು ಕೆಲ ಬ್ಯಾಟರ್ಗಳು ಸಾಕಷ್ಟು ಪ್ರಯತ್ನ ಪಟ್ಟರು. ಬೌಲಿಂಗ್ನಲ್ಲಿ ನಾವು ಅಂದುಕೊಂಡ ಯೋಜನೆಯಂತೆ ಸಾಗಲಿಲ್ಲ ಎಂದು ಹೇಳಿದ್ದಾರೆ.

ಈ ಪಿಚ್ ಬ್ಯಾಟರ್ಗಳಿಗೆ ಹೆಚ್ಚು ಸಹಕಾರಿ ನೀಡಿತು. ತಿಲಕ್ ವರ್ಮಾ ಪಾಸಿಟಿವ್ ಪ್ಲೇಯರ್, ಪ್ರತಿಭಾವಂತ ಆಟಗಾರ. ಅವರು ಹೊಡೆದ ಕೆಲವು ಶಾಟ್ ಅದ್ಭುತವಾಗಿತ್ತು. ನಾವು ಸವಾಲಿನ ಮೊತ್ತ ಕಲೆಹಾಕಲು ನೆರವಾದ ತಿಲಕ್ಗೆ ಹ್ಯಾಟ್ಸ್ ಹಾಫ್. ಈ ಪಿಚ್ಗೆ ತಕ್ಕಂತೆ ನಾವು ಟಾರ್ಗೆಟ್ ಸೆಟ್ ಮಾಡಲಿಲ್ಲ. ನಮ್ಮ ಶಕ್ತಿಗೆ ತಕ್ಕಂತೆ ಅರ್ಧದಷ್ಟು ಕೂಡ ಆಡಲಿಲ್ಲ - ರೋಹಿತ್ ಶರ್ಮಾ.

ಕಳೆದ 6-8 ತಿಂಗಳುಗಳಿಂದ ನಾನು ಜಸ್ಪ್ರೀತ್ ಬುಮ್ರಾ ಇಲ್ಲದೆ ಆಟವಾಡಲು ಪ್ರಯತ್ನಿಸುತ್ತಿದ್ದೇನೆ. ಇಂಜುರಿಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ನಮಗೆ ಅದರ ಬಗ್ಗೆ ಏನು ಮಾಡಲೂ ಸಾಧ್ಯವಿಲ್ಲ. ಇತರೆ ಆಟಗಾರರು ಕೂಡ ಪ್ರತಿಭಾವಂತರಿದ್ದಾರೆ. ಅವರಿಗೆ ಸಪೋರ್ಟ್ ಮಾಡಬೇಕು. ಇದು ಸೀಸನ್ನ ಮೊದಲ ಪಂದ್ಯವಷ್ಟೆ. ಮುಂದೆ ಇನ್ನೂ ಅನೇಕ ಪಂದ್ಯಗಳಿದ್ದು ಎದುರು ನೋಡುತ್ತಿದ್ದೇವೆ ಎಂದು ರೋಹಿತ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯ್ಸ್ ತಿಲಕ್ ವರ್ಮಾ ಅವರ ಅಜೇಯ 84 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ವಿರಾಟ್ ಕೊಹ್ಲಿ ಅವರ ಅಜೇಯ 82 ಹಾಗೂ ಫಾಪ್ ಡುಪ್ಲೆಸಿಸ್ ಅವರ 73 ರನ್ಗಳ ನೆರವಿನಿಂದ 16.2 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿ 8 ವಿಕೆಟ್ಗಳ ಜಯ ಸಾಧಿಸಿತು.
Published On - 7:37 am, Mon, 3 April 23
