AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Faf Duplessis: ಪಂದ್ಯ ಮುಗಿದ ಬಳಿಕ ಆರ್​ಸಿಬಿ ಗೆಲುವಿನ ಬಗ್ಗೆ ನಾಯಕ ಡುಪ್ಲೆಸಿಸ್ ಏನು ಹೇಳಿದ್ರು ನೋಡಿ

RCB vs MI, IPL 2023: ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರೋಹಿತ್ ಶರ್ಮಾ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

Vinay Bhat
|

Updated on:Apr 03, 2023 | 7:37 AM

Share
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 2023ರ ಐದನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಮೋಘ ಗೆಲುವು ಕಂಡಿತು. ಬ್ಯಾಟಿಂಗ್​ನಲ್ಲಿ ಮಿಂಚಿದ ವಿರಾಟ್ ಕೊಹ್ಲಿ-ಫಾಫ್ ಡುಪ್ಲೆಸಿಸ್ ತಂಡಕ್ಕೆ 8 ವಿಕೆಟ್​ಗಳ ಜಯ ತಂದುಕೊಟ್ಟರು.

1 / 8
ಪಂದ್ಯ ಮುಗಿದ ಬಳಿಕ ತಂಡದ ಗೆಲುವಿನ ಬಗ್ಗೆ ಮಾತನಾಡಿದ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬೌಲಿಂಗ್​ನಲ್ಲಿ ನಮ್ಮ ಆರಂಭ ಉತ್ತಮವಾಗಿತ್ತು. ಮುಖ್ಯವಾಗಿ ಪವರ್ ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ ಎದುರಾಳಿಗರನ್ನು ಕಟ್ಟು ಹಾಕಿದರು. ಕೊನೆಯ 2-3 ಓವರ್​ಗಳಲ್ಲಿ ಇನ್ನೂ ಚೆನ್ನಾಗಿ ಬೌಲಿಂಗ್ ಮಾಡಬಹುದಿತ್ತು ಎಂದು ಹೇಳಿದ್ದಾರೆ.

2 / 8
ಎರಡನೇ ಇನ್ನಿಂಗ್ಸ್​ನಲ್ಲಿ ನಮಗೆ ಹೇಗೆ ರನ್ ಚೇಸ್ ಮಾಡಬೇಕು ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದಿತ್ತು. ಅಂದುಕೊಂಡ ರೀತಿಯಲ್ಲೇ ಅದನ್ನು ಮಾಡಿದೆವು ಕೂಡ. ಬೌಲರ್​ಗಳು ಫೇಸ್ ತೆಗೆದು ಬೌಲಿಂಗ್ ಮಾಡಿದರೆ ಬ್ಯಾಟರ್​ಗಳಿಗೆ ಕಷ್ಟವಾಗುತ್ತಿತ್ತು. ಸ್ಪಿನ್ನರ್​ಗಳು ಇಲ್ಲಿ ಕೊಂಚ ಯಶಸ್ಸು ಸಾಧಿಸಿದರು - ಫಾಫ್ ಡುಪ್ಲೆಸಿಸ್.

3 / 8
ತವರಿನಲ್ಲಿ ಇದು ನನ್ನ ಮೊದಲ ಪಂದ್ಯ,, ಅದುಕೂಡ ವಿರಾಟ್ ಕೊಹ್ಲಿ ಯಂತಹ ಸ್ಪೆಷಲ್ ಪ್ಲೇಯರ್ ಜೊತೆ ಆಡಿದ್ದು ಖುಷಿ ನೀಡಿದೆ. ಅವರ ಎನರ್ಜಿ ಅದ್ಭುತ. ನೀವು ಯಂಗ್​ಸ್ಟಾರ್ಸ್ ಜೊತೆ ಇದ್ದರೆ ನಮಗೂ ಒಂದು ಶಕ್ತಿ ಬಂದಂತೆ ಆಗುತ್ತದೆ. ನಾವೆಲ್ಲ ಆತ್ಮವಿಶ್ವಾಸದಿಂದ ಇದ್ದೇವೆ. ಈ ಗೆಲುವು ನಮಗೆ ದೊಡ್ಡದು ಎಂಬುದು ಫಾಫ್ ಮಾತು.

4 / 8
ಸೋತ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿ, ಮೊದಲ ಆರು ಓವರ್​ಗಳಲ್ಲಿ ನಮ್ಮ ಆರಂಭ ಅದ್ಭುತ ಎಂಬಂತಿರಲಿಲ್ಲ. ಆದರೆ, ನಂತರದಲ್ಲಿ ತಿಲಕ್ ರ್ಮಾ ಮತ್ತು ಕೆಲ ಬ್ಯಾಟರ್​ಗಳು ಸಾಕಷ್ಟು ಪ್ರಯತ್ನ ಪಟ್ಟರು. ಬೌಲಿಂಗ್​ನಲ್ಲಿ ನಾವು ಅಂದುಕೊಂಡ ಯೋಜನೆಯಂತೆ ಸಾಗಲಿಲ್ಲ ಎಂದು ಹೇಳಿದ್ದಾರೆ.

5 / 8
ಈ ಪಿಚ್ ಬ್ಯಾಟರ್​ಗಳಿಗೆ ಹೆಚ್ಚು ಸಹಕಾರಿ ನೀಡಿತು. ತಿಲಕ್ ವರ್ಮಾ ಪಾಸಿಟಿವ್ ಪ್ಲೇಯರ್, ಪ್ರತಿಭಾವಂತ ಆಟಗಾರ. ಅವರು ಹೊಡೆದ ಕೆಲವು ಶಾಟ್ ಅದ್ಭುತವಾಗಿತ್ತು. ನಾವು ಸವಾಲಿನ ಮೊತ್ತ ಕಲೆಹಾಕಲು ನೆರವಾದ ತಿಲಕ್​ಗೆ ಹ್ಯಾಟ್ಸ್​ ಹಾಫ್. ಈ ಪಿಚ್​ಗೆ ತಕ್ಕಂತೆ ನಾವು ಟಾರ್ಗೆಟ್ ಸೆಟ್ ಮಾಡಲಿಲ್ಲ. ನಮ್ಮ ಶಕ್ತಿಗೆ ತಕ್ಕಂತೆ ಅರ್ಧದಷ್ಟು ಕೂಡ ಆಡಲಿಲ್ಲ - ರೋಹಿತ್ ಶರ್ಮಾ.

6 / 8
ಕಳೆದ 6-8 ತಿಂಗಳುಗಳಿಂದ ನಾನು ಜಸ್​ಪ್ರೀತ್ ಬುಮ್ರಾ ಇಲ್ಲದೆ ಆಟವಾಡಲು ಪ್ರಯತ್ನಿಸುತ್ತಿದ್ದೇನೆ. ಇಂಜುರಿಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ನಮಗೆ ಅದರ ಬಗ್ಗೆ ಏನು ಮಾಡಲೂ ಸಾಧ್ಯವಿಲ್ಲ. ಇತರೆ ಆಟಗಾರರು ಕೂಡ ಪ್ರತಿಭಾವಂತರಿದ್ದಾರೆ. ಅವರಿಗೆ ಸಪೋರ್ಟ್ ಮಾಡಬೇಕು. ಇದು ಸೀಸನ್​ನ ಮೊದಲ ಪಂದ್ಯವಷ್ಟೆ. ಮುಂದೆ ಇನ್ನೂ ಅನೇಕ ಪಂದ್ಯಗಳಿದ್ದು ಎದುರು ನೋಡುತ್ತಿದ್ದೇವೆ ಎಂದು ರೋಹಿತ್ ಹೇಳಿದ್ದಾರೆ.

7 / 8
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯ್ಸ್ ತಿಲಕ್ ವರ್ಮಾ ಅವರ ಅಜೇಯ 84 ರನ್​ಗಳ ನೆರವಿನಿಂದ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ವಿರಾಟ್ ಕೊಹ್ಲಿ ಅವರ ಅಜೇಯ 82 ಹಾಗೂ ಫಾಪ್ ಡುಪ್ಲೆಸಿಸ್ ಅವರ 73 ರನ್​ಗಳ ನೆರವಿನಿಂದ 16.2 ಓವರ್​ನಲ್ಲಿ 2 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿ 8 ವಿಕೆಟ್​ಗಳ ಜಯ ಸಾಧಿಸಿತು.

8 / 8

Published On - 7:37 am, Mon, 3 April 23

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!

ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ

ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ

ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್

ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?

ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?

ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್

ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ