CPL 2021: ಡ್ರೆಸಿಂಗ್ ಕೋಣೆಯ ಕಿಟಕಿ ಗಾಜು ಒಡೆದ ಕ್ರಿಸ್ ಗೇಲ್ ಸಿಡಿಲಬ್ಬರದ ಸಿಕ್ಸರ್! ವಿಡಿಯೋ ನೋಡಿ

CPL 2021: ನ್ನಿಂಗ್ಸ್ನ ಐದನೇ ಓವರ್‌ನ ಐದನೇ ಎಸೆತದಲ್ಲಿ,ಜೇಸನ್ ಹೋಲ್ಡರ್ ಎಸೆತವನ್ನು ಎದುರಿಸಿದ ಗೇಲ್ ಲಾಂಗ್ ಆನ್ನಲ್ಲಿ ನೇರ ಸಿಕ್ಸರ್ ಬಾರಿಸಿದರು.

CPL 2021: ಡ್ರೆಸಿಂಗ್ ಕೋಣೆಯ ಕಿಟಕಿ ಗಾಜು ಒಡೆದ ಕ್ರಿಸ್ ಗೇಲ್ ಸಿಡಿಲಬ್ಬರದ ಸಿಕ್ಸರ್! ವಿಡಿಯೋ ನೋಡಿ
ಕಿಟಕಿ ಗಾಜು ಒಡೆದ ಕ್ರಿಸ್ ಗೇಲ್ ಸಿಡಿಲಬ್ಬರದ ಸಿಕ್ಸರ್
Edited By:

Updated on: Aug 27, 2021 | 4:40 PM

ಗೇಲ್ ಯೂನಿವರ್ಸಲ್ ಬಾಸ್ ಎಂದು ಕರೆಸಿಕೊಳ್ಳಲು ಒಂದು ಕಾರಣವಿದೆ, ಏಕೆಂದರೆ ಕ್ರಿಸ್ ಗೇಲ್ ಅವರು ಕ್ರಿಕೆಟ್ ಜಗತ್ತನ್ನು ಆಟದ ಕಡಿಮೆ ರೂಪದಲ್ಲಿ ಅಕ್ಷರಶಃ ಆಳಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2021 ರಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಫ್ರಾಂಚೈಸ್‌ನ ಭಾಗವಾಗಿರುವ ವೆಸ್ಟ್ ಇಂಡಿಯನ್ ಆಟಗಾರ ಗೇಲ್ ತನ್ನ ಬಿರುಗಾಳಿಯ ಸಿಕ್ಸರ್ನಿಂದ ಡ್ರೆಸಿಂಗ್ ಕೋಣೆಯ ಕಿಟಕಿ ಗಾಜು ಒಡೆದಿರುವ ಘಟನೆ ನಡೆದಿದೆ

ಸೇಂಟ್ ಕಿಟ್ಸ್‌ನ ವಾರ್ನರ್ ಪಾರ್ಕ್‌ನಲ್ಲಿ ಗುರುವಾರ ನಡೆದ ಡಬಲ್‌ಹೆಡರ್‌ನ ಎರಡನೇ ಪಂದ್ಯದಲ್ಲಿ ಬಾರ್ಬಡೋಸ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ, ಗೇಲ್ ಒಂಬತ್ತು ಎಸೆತಗಳಲ್ಲಿ 1 ಬೌಂಡರಿ ಮತ್ತು ಬೃಹತ್ ಸಿಕ್ಸರ್‌ಗಳನ್ನು ಒಳಗೊಂಡಂತೆ 12 ರನ್ ಗಳಿಸಿದರು. ಆದರೆ ಬೃಹತ್ ಮೊತ್ತ ಕಲೆ ಹಾಕುವ ಮೊದಲೇ ಗೇಲ್ ಓಶಾನೆ ಥಾಮಸ್‌ಗೆ ಬಲಿಯಾದರುದರು.

ಲಾಂಗ್ ಆನ್ನಲ್ಲಿ ನೇರ ಸಿಕ್ಸರ್
ಆದಾಗ್ಯೂ, ಅವರ ಅಲ್ಪಾವಧಿಯ ಅವಧಿಯಲ್ಲಿ, ಎಡಗೈ ಬ್ಯಾಟ್ಸ್‌ಮನ್ ತನ್ನ ಸಾಮಥ್ಯ್ರ ಏನೆಂಬುದನ್ನು ಸಾಭೀತುಪಡಿಸಿದರು. ಇನ್ನಿಂಗ್ಸ್ನ ಐದನೇ ಓವರ್‌ನ ಐದನೇ ಎಸೆತದಲ್ಲಿ,ಜೇಸನ್ ಹೋಲ್ಡರ್ ಎಸೆತವನ್ನು ಎದುರಿಸಿದ ಗೇಲ್ ಲಾಂಗ್ ಆನ್ನಲ್ಲಿ ನೇರ ಸಿಕ್ಸರ್ ಬಾರಿಸಿದರು. ಗೇಲ್ ಬಾರಿಸಿದ ಚೆಂಡು ನೇರ ಡ್ರೆಸಿಂಗ್ ಕೊಠಡಿಗೆ ಅಳವಡಿಸಿದ್ದ ಕಿಟಕಿಯ ಗಾಜಿಗೆ ಹಾನಿ ಮಾಡಿತ್ತು.

ಸೇಂಟ್ ಕಿಟ್ಸ್ ಪಂದ್ಯವನ್ನು ಗೆದ್ದರು. ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಕಿಟ್ಸ್ 20 ಓವರ್ಗಳಲ್ಲಿ 5 ವಿಕೆಟ್ಗೆ 175 ರನ್ ಗಳಿಸಿತು. ಟಪಾರ್ಡರ್ ವೈಫಲ್ಯದ ಹೊರತಾಗಿಯೂ, ಶ್ರೇಫನ್ ರುದರ್‌ಫೋರ್ಡ್ ಔಟಾಗದೆ 53 ಮತ್ತು ಡ್ವೇನ್ ಬ್ರಾವೋ ಔಟಾಗದೆ 47 ರನ್ ಗಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಬಾರ್ಬಡೋಸ್ ರಾಯಲ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 154 ರನ್ ಗಳಿಸಿತು. ಶೈ ಹೋಪ್ 44 ರನ್ ಗಳಿಸಿ ಅಗ್ರ ಸ್ಕೋರರ್ ಆಗಿ ಉಳಿದರು. ಆದರೆ ಪಂದ್ಯ ಗೆಲ್ಲಿಸುವಲ್ಲಿ ವಿಫಲರಾದರು. ಸೇಂಟ್ ಕಿಟ್ಸ್ ಬೌಲಿಂಗ್ ನಲ್ಲಿ ಶೆಲ್ಡನ್ ಕಾಟ್ರೆಲ್, ಡೊಮಿನಿಕ್ ಡ್ರೇಕ್ಸ್ ಚೆರೋ ಎರಡು ವಿಕೆಟ್ ಪಡೆದರು ಮತ್ತು ಫ್ಯಾಬಿಯನ್ ಅಲೆನ್ ಒಂದು ವಿಕೆಟ್ ಪಡೆದರು.