
ಕೆರಿಬಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಗೆ ಚಾಲನೆ ದೊರೆತಿದೆ. ಅದು ಸಹ ರಣರೋಚಕ ಪಂದ್ಯದೊಂದಿಗೆ ಎಂಬುದು ವಿಶೇಷ. ಕಿಂಗ್ಸ್ಟೌನ್ನ ಅರ್ನೋಸ್ ವೇಲ್ ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಜಮೈಕಾ ಕಿಂಗ್ಸ್ಮೆನ್ ಹಾಗೂ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡದ ನಾಯಕ ಫ್ಯಾಬಿಯನ್ ಅಲೆನ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಜಮೈಕಾ ಕಿಂಗ್ಸ್ಮೆನ್ ತಂಡದ ಪರ ಆರಂಭಿಕ ದಾಂಡಿಗ ರೀಝ ಹೆಂಡ್ರಿಕ್ಸ್ 25 ಎಸೆತಗಳಲ್ಲಿ 42 ರನ್ ಚಚ್ಚಿದರು. ಇನ್ನು ನಾಯಕ ರೋವ್‌ಮನ್ ಪೊವೆಲ್ 47 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಜಮೈಕಾ ಕಿಂಗ್ಸ್ ಪಡೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು.
168 ರನ್ಗಳ ಗುರಿ ಬೆನ್ನತ್ತಿದ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪರ ಟಿಮ್ ರಾಬಿನ್ಸನ್ 40 ರನ್ ಬಾರಿಸಿದರೆ, ತಜಿಂದರ್ ದಿಲ್ಲೋನ್ 37 ಎಸೆತಗಳಲ್ಲಿ 62 ರನ್ ಚಚ್ಚಿದರು. ಈ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡವು 19 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.
ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ಕೊನೆಯ ಓವರ್ನಲ್ಲಿ ಗೆಲ್ಲಲು ಬೇಕಿದದ್ದು ಕೇವಲ 6 ರನ್ಗಳು ಮಾತ್ರ. ಆದರೆ ಅಂತಿಮ ಓವರ್ ಎಸೆದ ಹುನೈನ್ ಶಾ ಪಂದ್ಯವನ್ನು ರೋಚಕದತ್ತ ಕೊಂಡೊಯ್ದರು. ಮಾರಕ ದಾಳಿ ಸಂಘಟಿಸಿದ ಹುನೈನ್ ಮೊದಲೆರಡು ಎಸೆತಗಳಲ್ಲಿ ನೀಡಿದ್ದು ಕೇವಲ 3 ರನ್ಗಳು ಮಾತ್ರ.
ಮೂರನೇ ಎಸೆತದಲ್ಲಿ ಜಹ್ಮರ್ ಹ್ಯಾಮಿಲ್ಟನ್ (3) ವಿಕೆಟ್ ಪಡೆದರು. ನಾಲ್ಕನೇ ಎಸೆತದಲ್ಲಿ ಉಸಾಮ ಮಿರ್ (0) ವಿಕೆಟ್ ಕಬಳಿಸಿದರು. ಪರಿಣಾಮ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ತಂಡಕ್ಕೆ ಕೊನೆಯ 2 ಎಸೆತಗಳಲ್ಲಿ 3 ರನ್ಗಳು ಬೇಕಿದ್ದವು.
ಐದನೇ ಎಸೆತದಲ್ಲಿ ಹುನೈನ್ ಶಾ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟರು. ಆದರೆ ಅಂತಿಮ ಓವರ್ನ ಕೊನೆಯ ಎಸೆತದಲ್ಲಿ ಶಮರ್ ಸ್ಪ್ರಿಂಗರ್ 2 ರನ್ ಕಲೆಹಾಕುವ ಮೂಲಕ ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ರೋಚಕ ಗೆಲುವು ದಾಖಲಿಸಿತು. ಇತ್ತ ಜಮೈಕಾ ಕಿಂಗ್ಸ್ಮೆನ್ ತಂಡವು ವಿರೋಚಿತ ಹೋರಾಟದೊಂದಿಗೆ ಕೇವಲ 2 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿತು.
ಜಮೈಕಾ ಕಿಂಗ್ಸ್ಮೆನ್ ಪ್ಲೇಯಿಂಗ್ 11 : ಶಯಾನ್ ಜಹಾಂಗೀರ್ (ವಿಕೆಟ್ ಕೀಪರ್) , ರೀಝ ಹೆಂಡ್ರಿಕ್ಸ್ ,
ಶಕ್ಕೆರೆ ಪ್ಯಾರಿಸ್ , ಕೀಸಿ ಕಾರ್ಟಿ , ರೋವ್‌ಮನ್ ಪೊವೆಲ್ (ನಾಯಕ) , ಆ್ಯಂಡ್ರೆ ರಸೆಲ್ , ಹಸನ್ ಖಾನ್ , ಕೀಮೊ ಪಾಲ್ , ಹುನೈನ್ ಶಾ , ವಿಟೆಲ್ ಲಾವೆಸ್ , ಜೀವರ್ ರಾಯಲ್.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಹೊಸ ಚಿಂತೆ: NCA ಸೇರಿದ 13 ಆಟಗಾರರು!
ಅಂಟಿಗುವಾ ಅ್ಯಂಡ್ ಬಾರ್ಬುಡಾ ಫಾಲ್ಕನ್ಸ್ ಪ್ಲೇಯಿಂಗ್ 11: ಎವಿನ್ ಲೆವಿಸ್ , ರಹಕೀಮ್ ಕಾರ್ನ್‌ವಾಲ್ ,
ಟಿಮ್ ರಾಬಿನ್ಸನ್ , ಜಹ್ಮರ್ ಹ್ಯಾಮಿಲ್ಟನ್ (ವಿಕೆಟ್ ಕೀಪರ್ ), ತಜಿಂದರ್ ಧಿಲ್ಲೋನ್ , ಕರೀಮಾ ಗೋರ್ , ಫ್ಯಾಬಿಯನ್ ಅಲೆನ್ (ನಾಯಕ) , ಶಮರ್ ಸ್ಪ್ರಿಂಗರ್ , ಉಸಾಮಾ ಮೀರ್ , ಅಲ್ಜಾರಿ ಜೋಸೆಫ್ , ಜೇಡನ್ ಸೀಲ್ಸ್.