
ಅಬುಧಾಬಿ: ಶ್ರೀಲಂಕಾ ಲೆಗ್ ಸ್ಪಿನ್ನರ್ ಕೆವಿನ್ ಕೊಥಿಗೋಡ ತಮ್ಮ ಹೊಸರೀತಿಯ ಬೌಲಿಂಗ್ ಶೈಲಿಯಿಂದ ಕ್ರಿಕೆಟ್ ಜಗತ್ತನ್ನು ತಮ್ಮತ್ತ ಸೆಳೆದಿದ್ದಾರೆ. ಮಲೇಷ್ಯಾದಲ್ಲಿ ನಡೆದ ಯೂತ್ ಏಷ್ಯಾ ಕಪ್ನಲ್ಲಿ ಕೆವಿನ್ ಕೊಥಿಗೋಡ ಬೌಲಿಂಗ್ ಮಾಡುವ ವಿಡಿಯೋಗಳು ಈಗ ಫುಲ್ ವೈರಲ್ ಆಗಿದೆ. ಅಬುಧಾಬಿ ಟಿ 10 ಲೀಗ್ನಲ್ಲಿ ಬ್ಯಾಟ್ಸ್ಮನ್ಗಳು, ಕೊಥಿಗೋಡ ಅವರ ವಿಲಕ್ಷಣ ಬೌಲಿಂಗ್ ಶೈಲಿಯಿಂದ ಗೊಂದಲಕ್ಕೊಳಗಾಗಿದ್ದಾರೆ. ಈಗ ಕೊಥಿಗೋಡಾದ ಬೌಲಿಂಗ್ ಶೈಲಿಯನ್ನು ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಪಾಲ್ ಆಡಮ್ಸ್ ಅವರೊಂದಿಗೆ ಹೋಲಿಸಲಾಗಿದೆ.
ಮಾರ್ಥಾ ಅರೇಬಿಯನ್ಸ್ ಮತ್ತು ಖಲಂದರ್ ತಂಡಗಳ ನಡುವಿನ ಅಬುಧಾಬಿ ಟಿ 10 ಪಂದ್ಯದ ಸಮಯದಲ್ಲಿ, ಕೊಥಿಗೋಡ ಬೌಲಿಂಗ್ ಎದುರಿಸಿದ ಎದುರಾಳಿ ತಂಡದ ದಾಂಡಿಗ ಬ್ಯಾಂಟನ್ ತಾವು ಎದುರಿಸಿದ ಮೊದಲ ಎಸೆತದಲ್ಲಿ ಗೊಂದಲಕ್ಕಿಡಾದರು. ಬ್ಯಾಟ್ಸ್ಮನ್ ಮತ್ತು ಕಾಮೆಂಟೆಟರ್ಗಳು ಆರಂಭದಲ್ಲಿ, ಲೆಗ್-ಸ್ಪಿನ್ನರ್ ಕೊಥಿಗೋಡ ಬೌಲಿಂಗ್ ರನ್-ಅಪ್ನಲ್ಲಿ ಎಡವಟ್ಟಾಗಿರಬಹುದು, ಹೀಗಾಗಿ ಈ ರೀತಿ ಬೌಲಿಂಗ್ ಮಾಡಿದ್ದಾರೆ ಎಂದು ಬಾವಿಸಿದ್ದರು. ಆದರೆ ಕೋಥಿಗೋಡ ತಮ್ಮ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯನ್ನು ಮುಂದಿನ ಎಸೆತದಲ್ಲೂ ಮುಂದುವರೆಸಿದರು. ಇದರಿಂದ ಎದುರಾಳಿ ತಂಡದ ದಾಂಡಿಗ ಬ್ಯಾಂಟನ್ ಹಾಗೂ ಕಾಮೆಂಟೆಟರ್ಗಳು ಅಕ್ಷರಶಃ ಆಶ್ಚರ್ಯಕ್ಕೊಳಗಾದರು.
India vs England Test Series | ಈ ಸರಣಿಯಲ್ಲೂ ನಿರ್ಣಾಯಕರಾಗುತ್ತಾರಾ ಎಡಗೈ ಸ್ಪಿನ್ನರ್ಗಳು