CSK vs KKR, IPL 2021: ಸಿಡಿದ ಜಡ್ಡು: ಸಿಎಸ್​ಕೆ ತಂಡಕ್ಕೆ ರೋಚಕ ಜಯ

| Updated By: ಝಾಹಿರ್ ಯೂಸುಫ್

Updated on: Sep 26, 2021 | 7:33 PM

Chennai Super Kings vs Kolkata Knight Riders: ಉಭಯ ತಂಡಗಳು ಇದುವರೆಗೆ ಒಟ್ಟು 23 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆಲುವು ದಾಖಲಿಸಿದರೆ, ಕೋಲ್ಕತ್ತಾ ನೈಟ್ ರೈಡರ್ಸ್ 8 ಪಂದ್ಯಗಳನ್ನು ಗೆದ್ದುಕೊಂಡಿದೆ.

CSK vs KKR, IPL 2021: ಸಿಡಿದ ಜಡ್ಡು: ಸಿಎಸ್​ಕೆ ತಂಡಕ್ಕೆ ರೋಚಕ ಜಯ
CSK vs KKR

ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ನ 38ನೇ  ಪಂದ್ಯದಲ್ಲಿ ಎಂ. ಎಸ್. ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಯಾನ್ ಮೊರ್ಗನ್ (Eion Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ವಿರುದ್ದ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕೆಕೆಆರ್​ ನಾಯಕ ಇಯಾನ್ ಮೊರ್ಗನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲ ಬ್ಯಾಟ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್​ನಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್​ಗಳನ್ನು ಪೇರಿಸಿತು.

172 ರನ್​ಗಳ ಟಾರ್ಗೆಟ್ ಬೆನ್ನತ್ತಿದ ಸಿಎಸ್​ಕೆ ತಂಡವು ಒಂದು ಹಂತದಲ್ಲಿ ಸೋಲುವ ಭೀತಿ ಎದುರಿಸಿತ್ತು. ಆದರೆ ಕೊನೆಯ 2 ಓವರ್​ನಲ್ಲಿ 26 ರನ್​ಗಳ ಅವಶ್ಯಕತೆ ಪಡೆದಿತ್ತು. ಇದೇ ವೇಳೆ ಕಣಕ್ಕಿಳಿದ ಜಡೇಜಾ 8 ಎಸೆತಗಳಲ್ಲಿ 22 ರನ್ ಬಾರಿಸುವ ಮೂಲಕ ಸಿಎಸ್​ಕೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮ ಓವರ್​ನಲ್ಲಿ 4 ರನ್​ಗಳ ಅವಶ್ಯಕತೆ ಪಡೆದ ಸಿಎಸ್​ಕೆಯನ್ನು ಕಟ್ಟಿಹಾಕುವಲ್ಲಿ ನರೈನ್ ಯಶಸ್ವಿಯಾದರು. ಇದಾಗ್ಯೂ ಅಂತಿಮ ಎಸೆತದಲ್ಲಿ 1 ರನ್ ಬಾರಿಸುವ ಮೂಲಕ ದೀಪಕ್ ಚಹರ್ ಸಿಎಸ್​ಕೆ ತಂಡಕ್ಕೆ 1 ರನ್​ಗಳ ರೋಚಕ ಜಯ ತಂದುಕೊಟ್ಟರು.

KKR 171/6 (20)

CSK 172/8 (20)

 

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮೊರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ , ಆಂಡ್ರೆ ರಸೆಲ್, ಸುನಿಲ್ ನರೈನ್, ಲೂಕಿ ಫರ್ಗುಸನ್, ವರುಣ್ ಚಕರವರ್ತಿ, ಪ್ರಸಿದ್ ಕೃಷ್ಣ

LIVE NEWS & UPDATES

The liveblog has ended.
  • 26 Sep 2021 07:33 PM (IST)

    ಸಿಎಸ್​ಕೆ ತಂಡಕ್ಕೆ 2 ವಿಕೆಟ್​ಗಳ ರೋಚಕ ಜಯ

  • 26 Sep 2021 07:27 PM (IST)

    ಸಿಎಸ್​ಕೆ ತಂಡಕ್ಕೆ ರೋಚಕ ಜಯ

    ಕೊನೆಯ ಎಸೆತದಲ್ಲಿ 1 ರನ್​ ಬಾರಿಸಿ ಜಯ ತಂದುಕೊಟ್ಟ ದೀಪಕ್ ಚಹರ್.

    KKR 171/6 (20)

    CSK 172/8 (20)

     


  • 26 Sep 2021 07:25 PM (IST)

    ಜಡೇಜಾ ಔಟ್

    ಸುನೀಲ್ ನರೈನ್ ಎಸೆತದಲ್ಲಿ ಜಡೇಜಾ ಎಲ್​ಬಿಡಬ್ಲ್ಯೂ..ಅಂಪೈರ್ ತೀರ್ಪು ಔಟ್..ಡಿಆರ್​ಎಸ್ ಮೊರೆ ಹೋದ ಜಡೇಜಾ…ಥರ್ಡ್​ ಅಂಪೈರ್ ತೀರ್ಪು ಕೂಡ ಔಟ್

     

    ಸಿಎಸ್​ಕೆಗೆ ಕೊನೆಯ ಎಸೆತದಲ್ಲಿ 1 ರನ್​ ಅವಶ್ಯಕತೆ

  • 26 Sep 2021 07:20 PM (IST)

    ಅಂತಿಮ ಓವರ್​ನಲ್ಲಿ 4 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಜಡೇಜಾ ಹಾಗೂ ಸ್ಯಾಮ್ ಕರನ್

    ಸುನೀಲ್ ನರೈನ್ ಬೌಲಿಂಗ್

    ಮೊದಲ ಎಸೆತದಲ್ಲಿ ಸ್ಯಾಮ್ ಕರನ್ ಭರ್ಜರಿ ಹೊಡೆತ…ಬೌಂಡರಿ ಲೈನ್​ನಲ್ಲಿ ಕ್ಯಾಚ್.

    5 ಎಸೆತಗಳಲ್ಲಿ 4 ರನ್​ಗಳ ಅವಶ್ಯಕತೆ

  • 26 Sep 2021 07:19 PM (IST)

    ಪಂದ್ಯದ ಚಿತ್ರಣ ಬದಲಿಸಿದ ಡೇಂಜರಸ್ ಜಡೇಜಾ

    ಪ್ರಸಿದ್ದ್ ಕೃಷ್ಣ ಎಸೆದ 19ನೇ ಓವರ್​ನಲ್ಲಿ 2 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್​ನೊಂದಿಗೆ 22 ರನ್​ ಬಾರಿಸಿದ ಜಡೇಜಾ

     

    CSK 168/6 (19)

     

  • 26 Sep 2021 07:17 PM (IST)

    ಜಡೇಜಾ……..!

    ಪ್ರಸಿದ್ ಕೃಷ್ಣ ಎಸೆತದಲ್ಲಿ ಮತ್ತೊಂದು ಬೌಂಡರಿ…ಕೇವಲ 3 ಎಸೆತಗಳಲ್ಲಿ 16 ರನ್​ ಚಚ್ಚಿದ ಜಡೇಜಾ

  • 26 Sep 2021 07:15 PM (IST)

    ವಾಟ್ ಎ ಶಾಟ್…

    ಬ್ಯಾಕ್ ಟು ಬ್ಯಾಕ್ ಸಿಕ್ಸ್​ ಸಿಡಿಸಿದ ಜಡೇಜಾ…ಪ್ರಸಿದ್ ಕೃಷ್ಣ ಎಸೆತದಲ್ಲಿ ಬಿಗ್ ಸಿಕ್ಸ್​

     

    CSK 160/6 (18.4)

     

  • 26 Sep 2021 07:14 PM (IST)

    ಡೇಂಜರಸ್ ಜಡ್ಡು

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದ ರವೀಂದ್ರ ಜಡೇಜಾ

  • 26 Sep 2021 07:11 PM (IST)

    CSK 146/6 (18)

    ಸಿಎಸ್​ಕೆಗೆ 12 ಎಸೆತಗಳಲ್ಲಿ 26 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಜಡೇಜಾ ಹಾಗೂ ಸ್ಯಾಮ್ ಕರನ್ ಬ್ಯಾಟಿಂಗ್

  • 26 Sep 2021 07:08 PM (IST)

    ಗೂಗ್ಲಿ….ಧೋನಿ ಕ್ಲೀನ್ ಬೌಲ್ಡ್

    ವರುಣ್ ಚಕ್ರವರ್ತಿ ಗೂಗ್ಲಿಗೆ ಬಲಿಯಾದ ಮಹೇಂದ್ರ ಸಿಂಗ್ ಧೋನಿ (1)

     

  • 26 Sep 2021 07:06 PM (IST)

    ಸುರೇಶ್ ರೈನಾ ರನೌಟ್

    2 ರನ್ ಕದಿಯುವ ಆತುರ…ಸುರೇಶ್ ರೈನಾ ರನೌಟ್…

    CSK 142/5 (17.1)

     

  • 26 Sep 2021 07:01 PM (IST)

    ಮೊಯೀನ್ ಅಲಿ ಔಟ್

    ಲಾಕಿ ಫರ್ಗುಸನ್ ಎಸೆತದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ಆಗಿ ಹೊರ ನಡೆದ ಮೊಯೀನ್ ಅಲಿ

  • 26 Sep 2021 06:59 PM (IST)

    ವಾಟ್ ಎ ಫೀಲ್ಡಿಂಗ್

    ಮೊಯೀನ್ ಅಲಿ ಬಾರಿಸಿದ ಭರ್ಜರಿ ಹೊಡೆತವನ್ನು ಅದ್ಭುತವಾಗಿ ಹಿಡಿದು ಬೌಂಡರಿ ತಪ್ಪಿಸಿದ ಆಂಡ್ರೆ ರಸೆಲ್.

    ಗಾಯಗೊಂಡಿರುವ ರಸೆಲ್​ ಮೈದಾನದಿಂದ ಹೊರಕ್ಕೆ

    CSK 138/3 (16.3)

     

  • 26 Sep 2021 06:58 PM (IST)

    ಫ್ರೀ ಹಿಟ್​

    ನೋ ಬಾಲ್ ಎಸೆದ ಲಾಕಿ ಫರ್ಗುಸನ್…ಸಿಕ್ಕ ಫ್ರಿಹಿಟ್​ ಬಳಸಿಕೊಳ್ಳುವಲ್ಲಿ ಸುರೇಶ್ ರೈನಾ ವಿಫಲ…ಕೇವಲ 1 ರನ್​ ಮಾತ್ರ.

  • 26 Sep 2021 06:54 PM (IST)

    ಸಿಎಸ್​ಕೆಗೆ 24 ಎಸೆತಗಳಲ್ಲಿ 40 ರನ್​ಗಳ ಅವಶ್ಯಕತೆ

    CSK 132/3 (16)

     

     

    ಕ್ರೀಸ್​ನಲ್ಲಿ ಮೊಯೀನ್ ಅಲಿ ಹಾಗೂ ಸುರೇಶ್ ರೈನಾ ಬ್ಯಾಟಿಂಗ್

  • 26 Sep 2021 06:50 PM (IST)

    15 ಓವರ್ ಮುಕ್ತಾಯ

    CSK 127/3 (15)

      ಸಿಎಸ್​ಕೆಗೆ 30 ಎಸೆತಗಳಲ್ಲಿ 45 ರನ್​ಗಳ ಅವಶ್ಯಕತೆ

  • 26 Sep 2021 06:48 PM (IST)

    ರೈನಾ ರಾಕೆಟ್

    ನರೈನ್​ನ ಮೊದಲ ಎಸೆತದಲ್ಲೇ ಸುರೇಶ್ ರೈನಾ ಭರ್ಜರಿ ಬೌಂಡರಿ…ಫೋರ್

  • 26 Sep 2021 06:45 PM (IST)

    ನರೈನ್ ಮ್ಯಾಜಿಕ್- ರಾಯುಡು ಬೌಲ್ಡ್

    ಸುನೀಲ್ ನರೈನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಅಂಬಾಟಿ ರಾಯುಡು…ಚೆಂಡು ನೇರವಾಗಿ ವಿಕೆಟ್​ಗೆ…ಕ್ಲೀನ್ ಬೌಲ್ಡ್

     

    CSK 119/3 (14.2)

      

  • 26 Sep 2021 06:44 PM (IST)

    ವೆಲ್ಕಂ ಬೌಂಡರಿ

    ಸುನೀಲ್ ನರೈನ್ ಎಸೆತದಲ್ಲಿ ಮುನ್ನುಗ್ಗಿ ಬಾರಿಸಿದ ಅಂಬಾಟಿ ರಾಯುಡು…ಫೋರ್

  • 26 Sep 2021 06:39 PM (IST)

    ಕೆಕೆಆರ್ ಉತ್ತಮ ಬೌಲಿಂಗ್

    CSK 112/2 (13)

      ಸಿಎಸ್​ಕೆಗೆ  7 ಓವರ್​ನಲ್ಲಿ 60 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಮೊಯೀನ್ ಅಲಿ ಹಾಗೂ ಅಂಬಾಟಿ ರಾಯುಡು ಬ್ಯಾಟಿಂಗ್

  • 26 Sep 2021 06:34 PM (IST)

    8 ಓವರ್​ನಲ್ಲಿ 66 ರನ್​ಗಳ ಅವಶ್ಯಕತೆ

    ಕ್ರೀಸ್​ನಲ್ಲಿ ಮೊಯೀನ್ ಅಲಿ ಹಾಗೂ ಅಂಬಾಟಿ ರಾಯುಡು ಬ್ಯಾಟಿಂಗ್

    CSK 106/2 (12)

  • 26 Sep 2021 06:33 PM (IST)

    12 ಓವರ್ ಮುಕ್ತಾಯ

    CSK 106/2 (12)

    KKR 171/6 (20)

  • 26 Sep 2021 06:30 PM (IST)

    ಫರ್ಫೆಕ್ಟ್ ಕ್ಯಾಚ್ ಫರ್ಗುಸನ್

    ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಫಾಫ್ ಡುಪ್ಲೆಸಿಸ್​ ಭರ್ಜರಿ ಹೊಡೆತ..ಲಾಕಿ ಫರ್ಗುಸಲ್ ಅತ್ಯುತ್ತಮ ಕ್ಯಾಚ್. ಡುಪ್ಲೆಸಿಸ್ (43) ಇನಿಂಗ್ಸ್​ ಅಂತ್ಯ.

    CSK 102/2 (11.3)

      

  • 26 Sep 2021 06:26 PM (IST)

    ಜಸ್ಟ್​ ಮಿಸ್

    ರಸೆಲ್ ಎಸೆತದಲ್ಲಿ ಡುಪ್ಲೆಸಿಸ್​ ಬ್ಯಾಟ್ ಸವರಿ ವಿಕೆಟ್ ಕೀಪರ್​ನತ್ತ ಚಿಮ್ಮಿದ ಚೆಂಡು… ಎಡ ಭಾಗಕ್ಕೆ ದಿನೇಶ್ ಕಾರ್ತಿಕ್ ಉತ್ತಮ ಡೈವಿಂಗ್..ಜಸ್ಟ್​ ಮಿಸ್…ಚೆಂಡು ಬೌಂಡರಿಗೆ

    CSK 101/1 (11)

      

     

     

  • 26 Sep 2021 06:24 PM (IST)

    ವಾಟ್ ಎ ಗ್ಯಾಪ್ ಶಾಟ್

    ರಸೆಲ್ ಎಸೆತದಲ್ಲಿ ಎಕ್ಸ್​ಟ್ರಾ ಕವರ್ ಹಾಗೂ ಮಿಡ್​ ಆಫ್  ನಡುವೆ ಮೊಯೀನ್ ಅಲಿ ಬ್ಯೂಟಿಫುಲ್ ಫೋರ್

  • 26 Sep 2021 06:23 PM (IST)

    10 ಓವರ್​ನಲ್ಲಿ 83 ರನ್​ಗಳ ಟಾರ್ಗೆಟ್

    ಸಿಎಸ್​ಕೆ ಗೆಲ್ಲಲು 60 ಎಸೆತಗಳಲ್ಲಿ 83 ರನ್​ಗಳ ಅವಶ್ಯಕತೆ

  • 26 Sep 2021 06:22 PM (IST)

    ಹತ್ತು ಓವರ್ ಮುಕ್ತಾಯ: ಉತ್ತಮ ಸ್ಥಿತಿಯಲ್ಲಿ ಸಿಎಸ್​ಕೆ

    CSK 89/1 (10)

      ಕ್ರೀಸ್​ನಲ್ಲಿ ಮೊಯೀನ್ ಅಲಿ ಹಾಗೂ ಡುಪ್ಲೆಸಿಸ್​ ಬ್ಯಾಟಿಂಗ್

  • 26 Sep 2021 06:15 PM (IST)

    ಕೆಕೆಆರ್​ಗೆ ಮೊದಲ ಯಶಸ್ಸು

    ರಸೆಲ್ ಎಸೆತದಲ್ಲಿ ಫ್ರಂಟ್ ಫೀಲ್ಡರ್​ಗೆ ಕ್ಯಾಚ್ ನೀಡಿ ಹೊರನಡೆದ ರುತುರಾಜ್ (40)

    CSK 74/1 (8.2)

      

  • 26 Sep 2021 06:14 PM (IST)

    ರಸೆಲ್​ ಟು ರುತುರಾಜ್

    ಆಂಡ್ರೆ ರಸೆಲ್ ಎಸೆತದಲ್ಲಿ ಲಾಂಗ್​ ಆಫ್​ನತ್ತ ಭರ್ಜರಿ ಶಾಟ್…ರುತುರಾಜ್ ಗಾಯಕ್ವಾಡ್ ಬ್ಯಾಟ್​ನಿಂದ ಸಿಕ್ಸ್​

  • 26 Sep 2021 06:12 PM (IST)

    8 ಓವರ್ ಮುಕ್ತಾಯ

    CSK 68/0 (8)

      ಕ್ರೀಸ್​ನಲ್ಲಿ ಫಾಫ್ ಡುಪ್ಲೆಸಿಸ್​ ಹಾಗೂ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್.

  • 26 Sep 2021 06:07 PM (IST)

    ಡೀಪ್​-ಡುಪ್ಲೆಸಿಸ್​

    ಡೀಪ್ ಮಿಡ್ ವಿಕೆಟ್​ನತ್ತ ಪಾಫ್​ ಡುಪ್ಲೆಸಿಸ್​ ಭರ್ಜರಿ ಸಿಕ್ಸ್​. ಸುನೀಲ್ ನರೈನ್ ಬೌಲಿಂಗ್​ನಲ್ಲಿ ಡುಪ್ಲೆಸಿಸ್​ ಸೂಪರ್ ಬ್ಯಾಟಿಂಗ್

     

  • 26 Sep 2021 06:03 PM (IST)

    ಪವರ್​ಪ್ಲೇ ಮುಕ್ತಾಯ

    CSK 52/0 (6)

    KKR 171/6 (20)

  • 26 Sep 2021 06:02 PM (IST)

    50 ರನ್ ಪೂರೈಸಿದ ಸಿಎಸ್​ಕೆ

    ವಾಟ್..ಎ ಶಾಟ್…ಫರ್ಗುಸನ್ ಎಸೆತದಲ್ಲಿ ಸೂಪರ್ ಸ್ಟ್ರೈಟ್ ಶಾಟ್…ಬೌಂಡರಿ

    CSK 52/0 (5.5)

      

  • 26 Sep 2021 06:00 PM (IST)

    ಡುಪ್ಲೆಸಿಸ್​ ಅಬ್ಬರ

    ಫರ್ಗುಸನ್ ಎಸೆತದಲ್ಲಿ ಸೂಪರ್ ಶಾಟ್…ಡುಪ್ಲೆಸಿಸ್​ ಬ್ಯಾಟ್​ನಿಂದ ಮತ್ತೊಂದು ಫೋರ್

  • 26 Sep 2021 05:58 PM (IST)

    5 ಓವರ್ ಮುಕ್ತಾಯ

    CSK 42/0 (5)

      

  • 26 Sep 2021 05:57 PM (IST)

    ಫಾಫ್ ಫೆಟಾಂಸ್ಟಿಕ್ ಸಿಕ್ಸ್​

    ಸುನೀಲ್ ನರೈನ್​ ಎಸೆತದಲ್ಲಿ ಲಾಂಗ್ ಆಫ್​ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಫಾಫ್​ ಡುಪ್ಲೆಸಿಸ್

    CSK 41/0 (4.5)

     

  • 26 Sep 2021 05:53 PM (IST)

    ಫಾಪ್ ಡುಪ್ಲೆಸಿಸ್​ ಕವರ್ ಡ್ರೈವ್

    ವರುಣ್ ಚಕ್ರವರ್ತಿ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಕವರ್​ ಡ್ರೈವ್—-ಡುಪ್ಲೆಸಿಸ್​ ಬ್ಯಾಟ್​ನಿಂದ ಸತತ ಎರಡು ಫೋರ್​

  • 26 Sep 2021 05:51 PM (IST)

    CSK 18/0 (3)

  • 26 Sep 2021 05:48 PM (IST)

    ಮತ್ತೊಂದು ಬೌಂಡರಿ

    ಪ್ರಸಿದ್ಧ್ ಕೃಷ್ಣ ಲೆಂಗ್ತ್​ ಬಾಲ್​ ಅನ್ನು ಮಿಡ್​ ಆನ್​ನತ್ತ ಬಾರಿಸಿದ ಡುಪ್ಲೆಸಿಸ್​- ಫೋರ್

  • 26 Sep 2021 05:47 PM (IST)

    ಫಾಫ್ ಫೋರ್

    ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಮಿಡ್​ ವಿಕೆಟ್​ನತ್ತ ಬೌಂಡರಿ ಬಾರಿಸಿದ ಡುಪ್ಲೆಸಿಸ್​

  • 26 Sep 2021 05:45 PM (IST)

    2 ಓವರ್ ಮುಕ್ತಾಯ

    ಫಾಫ್ ಡುಪ್ಲೆಸಿಸ್ ಹಾಗೂ ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್

    CSK 9/0 (2)

    KKR 171/6 (20)

      

  • 26 Sep 2021 05:43 PM (IST)

    ಕೆಕೆಆರ್ ಉತ್ತಮ ಆರಂಭ

    ಮೊದಲ ಓವರ್​ನಲ್ಲಿ ಕೇವಲ 5 ರನ್​ ನೀಡಿದ ಕೆಕೆಆರ್ ವೇಗಿ ಪ್ರಸಿದ್ಧ್ ಕೃಷ್ಣ

    CSK 5/0 (1)

  • 26 Sep 2021 05:27 PM (IST)

    ಸಿಎಸ್​ಕೆ ಪರ ಶಾರ್ದೂಲ್ ಠಾಕೂರ್​ಗೆ 2 ವಿಕೆಟ್

  • 26 Sep 2021 05:26 PM (IST)

    ಕೆಕೆಆರ್ ಪರ ರಾಹುಲ್ ತ್ರಿಪಾಠಿ 45 ರನ್

  • 26 Sep 2021 05:22 PM (IST)

    ಕೆಕೆಆರ್ ಇನಿಂಗ್ಸ್​ ಅಂತ್ಯ

    KKR 171/6 (20)

      

  • 26 Sep 2021 05:20 PM (IST)

    ಡಿಕೆ ಔಟ್

    ಹ್ಯಾಝಲ್​ವುಡ್​ ಎಸೆತದಲ್ಲಿ ಚೆಂಡು ದಿನೇಶ್ ಕಾರ್ತಿಕ್ ಬ್ಯಾಟ್​ ಅನ್ನು ಸವರಿ ವಿಕೆಟ್​ ಕೀಪರ್​ ಕೈಗೆ…ಧೋನಿ ಕ್ಯಾಚ್​…11 ಎಸೆತಗಳಲ್ಲಿ 26 ರನ್​ ಬಾರಿಸಿದ್ದ ದಿನೇಶ್ ಕಾರ್ತಿಕ್ ಔಟ್

  • 26 Sep 2021 05:18 PM (IST)

    ಡಿಕೆ-ಫೋರ್

    ಹ್ಯಾಝಲ್​ವುಡ್ ಎಸೆತದಲ್ಲಿ ಬ್ಯಾಟ್ ಎಡ್ಜ್​ ಆಗಿ ಥರ್ಡ್​ಮ್ಯಾನ್​ನತ್ತ ಚಿಮ್ಮಿದ ಚೆಂಡು- ದಿನೇಶ್ ಕಾರ್ತಿಕ್ ಬ್ಯಾಟ್​ನಿಂದ ಮತ್ತೊಂದು ಬೌಂಡರಿ

  • 26 Sep 2021 05:16 PM (IST)

    ಅಂತಿಮ ಓವರ್​- ಜೋಶ್ ಹ್ಯಾಝಲ್​ವುಡ್

    KKR 160/5 (19.1)

      

  • 26 Sep 2021 05:15 PM (IST)

    ದಿನೇಶ್ ಕಾರ್ತಿಕ್ ಬಿರುಸಿನ ಬ್ಯಾಟಿಂಗ್

    ಸ್ಯಾಮ್​ ಕರನ್ ಒಂದೇ ಓವರ್​ನಲ್ಲಿ 19 ರನ್​ ಕಲೆಹಾಕಿದ ದಿನೇಶ್ ಕಾರ್ತಿಕ್

    2 ಬೌಂಡರಿ ಹಾಗೂ 1 ಸಿಕ್ಸರ್​ನೊಂದಿಗೆ ಸ್ಯಾಮ್ ಬೆಂಡೆತ್ತಿದ ಡಿಕೆ

    KKR 158/5 (19)

      

  • 26 Sep 2021 05:14 PM (IST)

    19 ಓವರ್ ಮುಕ್ತಾಯ

    KKR 158/5 (19)

      

    ಕ್ರೀಸ್​ನಲ್ಲಿ ದಿನೇಶ್ ಕಾರ್ತಿಕ್ ಹಾಗೂ ನಿತೀಶ್ ರಾಣಾ ಬ್ಯಾಟಿಂಗ್

  • 26 Sep 2021 05:11 PM (IST)

    ದಿನೇಶ್ ಕಾರ್ತಿಕ್ ಅಬ್ಬರ ಶುರು

    ಸಿಕ್ಸ್​ ಬಳಿಕ ಸ್ಯಾಮ್​ ಎಸೆತದಲ್ಲಿ ಶಾರ್ಟ್​ ಥರ್ಡ್​ಮ್ಯಾನ್​​ನತ್ತ ಸೂಪರ್ ಫೋರ್

  • 26 Sep 2021 05:10 PM (IST)

    ಡಿಕೆ ಬಾಸ್

    ದಿನೇಶ್ ಕಾರ್ತಿಕ್ ಸೂಪರ್ ಶಾಟ್….ಸ್ಯಾಮ್ ಕರನ್ ಎಸೆತದಲ್ಲಿ ಡೀಪ್​ ಮಿಡ್ ವಿಕೆಟ್​ನತ್ತ ಸಖತ್ ಸಿಕ್ಸ್ ಸಿಡಿಸಿದ ದಿನೇಶ್ ಕಾರ್ತಿಕ್

  • 26 Sep 2021 05:07 PM (IST)

    ರಾಣಾ ರಾಕೆಟ್ ಶಾಟ್

    ದೀಪಕ್ ಚಹರ್ ಎಸೆತದಲ್ಲಿ ನಿತೀಶ್ ರಾಣಾ ಬ್ಯಾಕ್ ಟು ಬ್ಯಾಕ್ ಬೌಂಡರಿ

    KKR 139/5 (18)

      

  • 26 Sep 2021 05:03 PM (IST)

    17 ಓವರ್ ಮುಕ್ತಾಯ

    KKR 127/5 (17)

    ಕ್ರೀಸ್​ನಲ್ಲಿ ದಿನೇಶ್ ಕಾರ್ತಿಕ್ ಹಾಗೂ ನಿತೀಶ್ ರಾಣಾ ಬ್ಯಾಟಿಂಗ್

      

  • 26 Sep 2021 05:01 PM (IST)

    ಶಾರ್ದೂಲ್​ಲ್​ಲ್​ಲ್​- ಬೌಲ್ಡ್​

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಆಂಡ್ರೆ ರಸೆಲ್ ಬ್ಯಾಟ್ ಎಡ್ಜ್ ಆಗಿ ಬೌಲ್ಡ್​. 15 ಎಸೆತಗಳಲ್ಲಿ 20 ರನ್​ಗಳಿಸಿ ಹೊರನಡೆದ ರಸೆಲ್

    KKR 126/5 (16.5)

      

  • 26 Sep 2021 04:56 PM (IST)

    16 ಓವರ್ ಮುಕ್ತಾಯ

    KKR 121/4 (16)

      

  • 26 Sep 2021 04:51 PM (IST)

    ರಸೆಲ್ ಅಬ್ಬರ ಶುರು

    ಸ್ಯಾಮ್ ಕರನ್ ಎಸೆತದಲ್ಲಿ  ಮಸಲ್ ಪವರ್​ ತೋರಿಸಿದ ಆಂಡ್ರೆ ರಸೆಲ್…ನೇರವಾಗಿ ಸಿಕ್ಸ್​

    KKR 118/4 (15)

      

  • 26 Sep 2021 04:50 PM (IST)

    ಮತ್ತೊಂದು ಬೌಂಡರಿ

    ಸ್ಯಾಮ್ ಕರನ್ ವೈಡ್ ಆಫ್​ ಡೆಲಿವರಿ…ಆಫ್​ ಸೈಡ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ರಸೆಲ್

    KKR 118/4 (15)

      

  • 26 Sep 2021 04:49 PM (IST)

    ರಸೆಲ್ ಬ್ಯಾಟ್​ನಿಂದ ಬೌಂಡರಿ

    ಸ್ಯಾಮ್ ಕರನ್​ ಎಸೆತದಲ್ಲಿ ಶಾರ್ಟ್​ ಲೆಗ್​ನತ್ತ ಬೌಂಡರಿ ಬಾರಿಸಿದ ಆಂಡ್ರೆ ರಸೆಲ್

  • 26 Sep 2021 04:44 PM (IST)

    14 ಓವರ್ ಮುಕ್ತಾಯ

    KKR 104/4 (14)

     

    ಕ್ರೀಸ್​ನಲ್ಲಿ ರಾಣಾ-ರಸೆಲ್ ಬ್ಯಾಟಿಂಗ್

  • 26 Sep 2021 04:43 PM (IST)

    ರಾಣಾ ರಾಕೆಟ್

    ಹ್ಯಾಝಲ್​ವುಡ್​ ಎಸೆತದಲ್ಲಿ ರಾಕೆಟ್​ ಶಾಟ್…ಮಿಡ್ ವಿಕೆಟ್​ನತ್ತ ಭರ್ಜರಿ ಸಿಕ್ಸರ್ ಸಿಡಿಸಿದ ನಿತೀಶ್ ರಾಣಾ

  • 26 Sep 2021 04:39 PM (IST)

    ಕ್ರೀಸ್​ನಲ್ಲಿ ಡೇಂಜರಸ್ ರಸೆಲ್

    ಕೆಕೆಆರ್ ಪರ ರಾಣಾ-ರಸೆಲ್ ಬ್ಯಾಟಿಂಗ್

    KKR 94/4 (13.1)

     

  • 26 Sep 2021 04:35 PM (IST)

    ರಾಹುಲ್ ತ್ರಿಪಾಠಿ ಔಟ್

    ಜಡೇಜಾ ಎಸೆತದಲ್ಲಿ ರಿವರ್ಸ್​ ಸ್ವೀಪ್​ ಮಾಡಲು ಯತ್ನ…ರಾಹುಲ್ ತ್ರಿಪಾಠಿ ಕ್ಲೀನ್ ಬೌಲ್ಡ್​. 33 ಎಸೆತಗಳಲ್ಲಿ 45 ರನ್​ ಬಾರಿಸಿ ಇನಿಂಗ್ಸ್​ ಅಂತ್ಯಗೊಳಿಸಿದ ತ್ರಿಪಾಠಿ

  • 26 Sep 2021 04:33 PM (IST)

    12 ಓವರ್ ಮುಕ್ತಾಯ

    KKR 89/3 (12)

    ಕ್ರೀಸ್​ನಲ್ಲಿ ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಬ್ಯಾಟಿಂಗ್

      

  • 26 Sep 2021 04:31 PM (IST)

    ಕ್ರೀಸ್​ನಲ್ಲಿ ನಿತೀಶ್ ರಾಣಾ

    ಕ್ರೀಸ್​ನಲ್ಲಿ ನಿತೀಶ್ ರಾಣಾ ಹಾಗೂ ರಾಹುಲ್ ತ್ರಿಪಾಠಿ ಬ್ಯಾಟಿಂಗ್

  • 26 Sep 2021 04:26 PM (IST)

    10 ಓವರ್​ ಮುಕ್ತಾಯ

    ಮೊದಲ ಹತ್ತು ಓವರ್​ನಲ್ಲಿ ಕೆಕೆಆರ್​ ಕಲೆಹಾಕಿದ್ದು 78 ರನ್​ಗಳು.

    KKR 78/3 (10)

  • 26 Sep 2021 04:24 PM (IST)

    ಟಾಪ್ ಶಾಟ್- ತ್ರಿಪಾಠಿ

    ಹ್ಯಾಝಲ್​ವುಡ್​ ಎಸೆತದಲ್ಲಿ ಸ್ಕ್ವೇರ್​ನತ್ತ ರಾಕೆಟ್ ಶಾಟ್​…ತ್ರಿಪಾಠಿ ಬ್ಯಾಟ್​ನಿಂದ ಬೌಂಡರಿ

  • 26 Sep 2021 04:22 PM (IST)

    ಮಿಸ್ಟರ್​ ಫರ್ಫೆಕ್ಟ್​-ಡುಪ್ಲೆಸಿಸ್​- ವಾಟ್ ಎ ಕ್ಯಾಚ್

    ಜೋಶ್ ಹ್ಯಾಝಲ್​ವುಡ್​ ಎಸೆತದಲ್ಲಿ ಮೊರ್ಗನ್ ಭರ್ಜರಿ ಹೊಡೆತ…ಚೆಂಡು ನೇರವಾಗಿ ಬೌಂಡರಿ ಲೈನ್​ನಲ್ಲಿದ್ದ ಡುಪ್ಲೆಸಿಸ್​ ಕೈಗೆ.. ಬೌಂಡರಿ ಲೈನ್ ದಾಟಿದರೂ ಅತ್ಯುತ್ತಮ ನಿಯಂತ್ರಣದೊಂದಿಗೆ ಚೆಂಡನ್ನು ಬಂಧಿಸಿದ ಫಾಫ್ ಡುಪ್ಲೆಸಿಸ್​. ಇಯಾನ್ ಮೊರ್ಗನ್ ಔಟ್

    KKR 70/3 (9.2)

      

  • 26 Sep 2021 04:17 PM (IST)

    9 ಓವರ್ ಮುಕ್ತಾಯ

    KKR 70/2 (9)

     

    ಕ್ರೀಸ್​ನಲ್ಲಿ ಇಯಾನ್ ಮೊರ್ಗನ್ ಹಾಗೂ ರಾಹುಲ್ ತ್ರಿಪಾಠಿ ಬ್ಯಾಟಿಂಗ್.

  • 26 Sep 2021 04:15 PM (IST)

    ಶುಭ್​ಮನ್ ಗಿಲ್ ರನೌಟ್ ವಿಡಿಯೋ

  • 26 Sep 2021 04:13 PM (IST)

    8 ಓವರ್ ಮುಕ್ತಾಯ

    KKR 64/2 (8)

      

  • 26 Sep 2021 04:12 PM (IST)

    ತ್ರಿಪಾಠಿ ಬೌಂಡರಿ

    ಶಾರ್ದೂಲ್ ಠಾಕೂರ್ ಎಸೆತದಲ್ಲಿ ಸ್ಕ್ವೇರ್​ನತ್ತ ಭರ್ಜರಿ ಬೌಂಡರಿ ಬಾರಿಸಿದ ರಾಹುಲ್ ತ್ರಿಪಾಠಿ

  • 26 Sep 2021 04:09 PM (IST)

    ಶಾರ್ದೂಲ್ ಠಾಕೂರ್ ಉತ್ತಮ ಬೌಲಿಂಗ್

  • 26 Sep 2021 04:08 PM (IST)

    KKR 55/2 (7)

    ಕ್ರೀಸ್​ನಲ್ಲಿ ರಾಹುಲ್ ತ್ರಿಪಾಠಿ ಹಾಗೂ ಇಯಾನ್ ಮೊರ್ಗನ್ ಬ್ಯಾಟಿಂಗ್.

  • 26 Sep 2021 04:06 PM (IST)

    ಶಾರ್ದೂಲ್ ಠಾಕೂರ್ ಮೇಡನ್ ಓವರ್

    ಪವರ್​ ಪ್ಲೇ ಮುಕ್ತಾಯ

    KKR 50/2 (6)

      

  • 26 Sep 2021 04:02 PM (IST)

    ವೆಂಕಟೇಶ್ ಅಯ್ಯರ್ ಔಟ್

    ಶಾರ್ದೂಲ್ ಠಾಕೂರ್ ಮೊದಲ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ಬ್ಯಾಟ್ ಎಡ್ಜ್…ಚೆಂಡು ನೇರವಾಗಿ ವಿಕೆಟ್ ಕೀಪರ್ ಕೈಗೆ..ಕ್ಯಾಚ್…18 ರನ್​ಗಳೊಂದಿಗೆ ಇನಿಂಗ್ಸ್​ ಅಂತ್ಯಗೊಳಿಸಿದ ವೆಂಕಟೇಶ್ ಅಯ್ಯರ್

  • 26 Sep 2021 04:00 PM (IST)

    ಕೆಕೆಆರ್​ ಭರ್ಜರಿ ಬ್ಯಾಟಿಂಗ್

    ಐದು ಓವರ್​ನಲ್ಲಿ 50 ರನ್​ ಪೂರೈಸಿದ ಕೊಲ್ಕತ್ತಾ ನೈಟ್​ ರೈಡರ್ಸ್​

    ಕ್ರೀಸ್​ನಲ್ಲಿ ವೆಂಕಟೇಶ್ ಅಯ್ಯರ್ ಹಾಗೂ ರಾಹುಲ್ ತ್ರಿಪಾಠಿ ಬ್ಯಾಟಿಂಗ್

    KKR 50/1 (5)

      

  • 26 Sep 2021 03:58 PM (IST)

    ವೆಂಕಿ ಬೆಂಕಿ

    ಜೋಶ್ ಹ್ಯಾಝಲ್​ವುಡ್​ ಓವರ್​ನಲ್ಲಿ ಎರಡು ಬೌಂಡರಿ.

    ಬೌನ್ಸರ್ ಎಸೆತಕ್ಕೆ ಥರ್ಡ್​ಮ್ಯಾನ್​ನತ್ತ ಬಾರಿಸಿ ವೆಂಕಟೇಶ್ ಅಯ್ಯರ್

    KKR 49/1 (4.5)

      

  • 26 Sep 2021 03:54 PM (IST)

    ಫ್ರೀ ಹಿಟ್​

    ಸ್ಯಾಮ್ ಕರನ್ ಫ್ರೀ ಹಿಟ್​ ಎಸೆತದಲ್ಲಿ ಭರ್ಜರಿ ಹೊಡೆತ…ಎಕ್ಸ್​ಟ್ರಾ ಕವರ್​ ಮೂಲಕ ಸಿಕ್ಸರ್​ ಸಿಡಿಸಿದ ರಾಹುಲ್ ತ್ರಿಪಾಠಿ

  • 26 Sep 2021 03:53 PM (IST)

    ಎಸ್​…ಎಸ್​ ಎಂ.ಎಸ್​

    ಸ್ಯಾಮ್ ಕರನ್ ಎಸೆತದಲ್ಲಿ ಬೌನ್ಸರ್​ ಕೆಣಕಲು ಹೋದ ರಾಹುಲ್ ತ್ರಿಪಾಠಿ…ಬ್ಯಾಟ್ ತುದಿ ತಾಗಿ ಚೆಂಡು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಕೈಗೆ…ಅತ್ಯುತ್ತಮ ಕ್ಯಾಚ್. ಮೂರನೇ ಅಂಪೈರ್ ಪರಿಶೀಲನೆ ವೇಳೆ ನೋ ಬಾಲ್ ಎಂದು ಘೋಷಣೆ.

    KKR 33/1 (3.4)

      

  • 26 Sep 2021 03:50 PM (IST)

    ಫೋರ್​-ಪಾಠಿ

    ಸ್ಯಾಮ್ ಕರನ್ ಎಸೆತದಲ್ಲಿ ಕವರ್ಸ್​ನತ್ತ ಬ್ಯೂಟಿಫುಲ್ ಶಾಟ್…ಜೋಶ್ ಹ್ಯಾಝಲ್​ವುಡ್ ಮಿಸ್ ಫೀಲ್ಡಿಂಗ್…ರಾಹುಲ್ ತ್ರಿಪಾಠಿ ಬ್ಯಾಟ್​ನಿಂದ ಮತ್ತೊಂದು ಬೌಂಡರಿ

  • 26 Sep 2021 03:49 PM (IST)

    ವೆಂಕಿ ಬ್ಯೂಟಿಫುಲ್ ಶಾಟ್

    ದೀಪಕ್ ಚಹರ್ ಎಸೆತದಲ್ಲಿ ಡೆಫ್ಟ್​ ಟಚ್​ ಮೂಲಕ ಚೆಂಡನ್ನು ಬೌಂಡರಿಗಟ್ಟಿದ ವೆಂಕಟೇಶ್ ಅಯ್ಯರ್

  • 26 Sep 2021 03:45 PM (IST)

    ಲಕ್ಕಿ ಅಯ್ಯರ್

    ದೀಪಕ್ ಚಹರ್ ಎಸೆತದಲ್ಲಿ ಬ್ಯಾಟ್ ಎಡ್ಜ್​ ಆಗಿ ಆನ್​ ಸೈಡ್​ನತ್ತ ಚಿಮ್ಮಿದ ಚೆಂಡು…ಫಾಫ್ ಡುಪ್ಲೆಸಿಸ್​ ಅದ್ಭುತ ಪ್ರಯತ್ನ..ಕೂದಲೆಳೆಯ ಅಂತರದಲ್ಲಿ ಕೈ ತಪ್ಪಿದ ಕ್ಯಾಚ್…ವೆಂಕಟೇಶ್ ಅಯ್ಯರ್​ಗೆ ಮೊದಲ ಜೀವದಾನ.

  • 26 Sep 2021 03:42 PM (IST)

    ತ್ರಿಪಾಠಿ ಪಾರ್ಟಿ ಶುರು

    ಸ್ಯಾಮ್ ಕರನ್ ಎಸೆತವನ್ನು ರಾಹುಲ್​ ತ್ರಿಪಾಠಿ ಲೆಗ್​ಸೈಡ್​ನತ್ತ ಭರ್ಜರಿ ಹೊಡೆತ…ಬೌಂಡರಿ ಲೈನ್ ದಾಟಿದ ಚೆಂಡು…ಫೋರ್

    KKR 19/1 (2)

      

  • 26 Sep 2021 03:37 PM (IST)

    ರಾಯುಡು ರಾಕೆಟ್​

    ವೆಂಕಟೇಶ್ ಅಯ್ಯರ್ ಹಾಗೂ ಶುಭ್​ಮನ್ ಗಿಲ್​ ನಡುವೆ ಹೊಂದಾಣಿಕೆಯ ಕೊರತೆ… ರನ್​ ಕರೆ ನೀಡಿ ಬೇಡವೆಂದ ಅಯ್ಯರ್..ಅಂಬಾಟಿ ರಾಯುಡು ರಾಕೆಟ್​ ಥ್ರೋ- ನೇರವಾಗಿ ವಿಕೆಟ್​ಗೆ- ಶುಭ್​ಮನ್ ಗಿಲ್ ರನೌಟ್.

    KKR 10/1 (1)

      

  • 26 Sep 2021 03:35 PM (IST)

    ನಾಟೌಟ್

    ದೀಪಕ್ ಚಹರ್ ಎಸೆತದಲ್ಲಿ ಶುಭ್​ಮನ್​ಗಿಲ್ ಪ್ಯಾಡ್​​ಗೆ ತಗುಲಿದ ಚೆಂಡು…ಬೌಲರ್ ಬಬಲವಾದ ಮನವಿ- ಅಂಪೈರ್ ಔಟ್ ಎಂದು ತೀರ್ಪು. ಡಿಆರ್​ಎಸ್ ಮೊರೆ ಹೋದ ಗಿಲ್​- ಮೂರನೇ ಅಂಪೈರ್​ ನಾಟೌಟ್​ ತೀರ್ಪು.

  • 26 Sep 2021 03:33 PM (IST)

    ಶುಭ್​ಮನ್ ಶುಭಾರಂಭ

    ಬ್ಯಾಕ್ ಟು ಬ್ಯಾಕ್ ಫೋರ್

    ದೀಪಕ್ ಚಹರ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ಶುಭ್​ಮನ್​ ಗಿಲ್

    ಕೆಕೆಆರ್​ ಆರಂಭಿಕರಾಗಿ ವೆಂಕಟೇಶ್ ಅಯ್ಯರ್-ಶುಭ್​ಮನ್ ಗಿಲ್ ಕಣದಲ್ಲಿ

  • 26 Sep 2021 03:12 PM (IST)

    ಕಣಕ್ಕಿಳಿಯುವ ಕಲಿಗಳು

     

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

    ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮೊರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ , ಆಂಡ್ರೆ ರಸೆಲ್, ಸುನಿಲ್ ನರೈನ್, ಲೂಕಿ ಫರ್ಗುಸನ್, ವರುಣ್ ಚಕರವರ್ತಿ, ಪ್ರಸಿದ್ ಕೃಷ್ಣ

  • 26 Sep 2021 03:12 PM (IST)

    ಟಾಸ್ ವಿಡಿಯೋ

  • 26 Sep 2021 03:05 PM (IST)

    ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್​

    ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ ಇಲೆವೆನ್): ರುತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಜೋಶ್ ಹ್ಯಾಝಲ್​ವುಡ್

    ಕೋಲ್ಕತ್ತಾ ನೈಟ್ ರೈಡರ್ಸ್ (ಪ್ಲೇಯಿಂಗ್ ಇಲೆವೆನ್): ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಇಯಾನ್ ಮೊರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ , ಆಂಡ್ರೆ ರಸೆಲ್, ಸುನಿಲ್ ನರೈನ್, ಲೂಕಿ ಫರ್ಗುಸನ್, ವರುಣ್ ಚಕರವರ್ತಿ, ಪ್ರಸಿದ್ ಕೃಷ್ಣ

  • 26 Sep 2021 03:01 PM (IST)

    ಟಾಸ್ ಗೆದ್ದ ಕೆಕೆಆರ್​: ಬ್ಯಾಟಿಂಗ್ ಆಯ್ಕೆ

    ಟಾಸ್ ಗೆದ್ದ ಕೆಕೆಆರ್​ ನಾಯಕ ಇಯಾನ್ ಮೊರ್ಗನ್​: ಬ್ಯಾಟಿಂಗ್ ಆಯ್ಕೆ

  • 26 Sep 2021 02:58 PM (IST)

    ಬ್ಯಾಟ್ ಝಳಪಳಿಸಲು ಜಡೇಜಾ ರೆಡಿ

  • 26 Sep 2021 02:56 PM (IST)

    ಫಾಫ್ ಡುಪ್ಲೆಸಿಸ್ (ಸಿಎಸ್​ಕೆ) ​- ಇಯಾನ್ ಮೊರ್ಗನ್ (ಕೆಕೆಆರ್​)

  • 26 Sep 2021 02:55 PM (IST)

    ಬ್ಯಾಝ್ ಮೀಟ್ಸ್​ ಮಿಂಗ್​​

     

    ಇಂದಿನ ಪಂದ್ಯದ ಮತ್ತೊಂದು ವಿಶೇಷ ಎಂದರೆ ಎರಡು ತಂಡಗಳ ಕೋಚ್ ನ್ಯೂಜಿಲೆಂಡ್​ ಕ್ರಿಕೆಟಿಗರು. ಸಿಎಸ್​ಕೆ ತಂಡಕ್ಕೆ ಸ್ಟೀಫನ್ ಫ್ಲೆಮಿಂಗ್ ತರಬೇತುದಾರರಾದರೆ, ಕೆಕೆಆರ್ ತಂಡದ ಕೋಚ್ ಬ್ರೆಂಡನ್ ಮೆಕಲಂ.

  • 26 Sep 2021 02:52 PM (IST)

    ಕೆಕೆಆರ್ ವಿರುದ್ದ ರೈನಾ ಉತ್ತಮ ದಾಖಲೆ

     

    ಕೆಕೆಆರ್ ವಿರುದ್ದ ರೈನಾ ಉತ್ತಮ ಬ್ಯಾಟಿಂಗ್ ದಾಖಲೆ. ಇದುವರೆಗೆ ರೈನಾ ಕೆಕೆಆರ್ ವಿರುದ್ದ 818 ರನ್​ ಬಾರಿಸಿದ್ದಾರೆ.

  • 26 Sep 2021 02:50 PM (IST)

    ಮಾಸ್ಟರ್​ ಪ್ಲ್ಯಾನ್: ಕೋಚ್ ಮೆಕಲಂ ಜೊತೆ ಸ್ಪಿನ್ ಮೋಡಿಗಾರ ವರುಣ್ ಚಕ್ರವರ್ತಿ

  • 26 Sep 2021 02:49 PM (IST)

    ಕದನ ಕಲಿಗಳು- ಬ್ರಾವೊ-ರೈನಾ-ಮೊಯೀನ್ ಅಲಿ

  • 26 Sep 2021 02:47 PM (IST)

    ಧೂಳ್​-ಮಗಾ-ಧೂಳ್–ಶಾರ್ದೂಲ್ ಠಾಕೂರ್

  • 26 Sep 2021 02:45 PM (IST)

    ಆಂಡ್ರೆ ರಸೆಲ್​ ಜೊತೆ ವೆಂಕಿ ಮೈಸೂರು ಚಿಟ್​ ಚಾಟ್

    ವೆಂಕಿ ಮೈಸೂರು- ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡದ ವ್ಯವಸ್ಥಾಪಕ ನಿರ್ದೇಶಕ

  • 26 Sep 2021 02:40 PM (IST)

    ಗೆಲುವಿನ ಕೇಕೆ ಹಾಕಲು ಸಜ್ಜಾಗಿರುವ ಕೆಕೆಆರ್

Published On - 2:33 pm, Sun, 26 September 21

Follow us on