AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AUS vs IND: ಆಸಿಸ್ ವನಿತೆಯರ ತಂಡದ ದಾಖಲೆಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತದ ವನಿತೆಯರ ತಂಡ!

AUS vs IND: ಭಾರತದ ವನಿತೆಯರ ಬಳಗ ಕಳೆದ 26 ಏಕದಿನ ಪಂದ್ಯಗಳಿಂದ ಸೋಲಿಲ್ಲದ ಸರದಾರರಾಗಿ ಮೆರೆಯುತ್ತಿದ್ದ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಗೆಲುವಿನ ಓಟಕ್ಕೆ ಬ್ರೇಕಾ ಹಾಕಿದ್ದಾರೆ.

AUS vs IND: ಆಸಿಸ್ ವನಿತೆಯರ ತಂಡದ ದಾಖಲೆಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಭಾರತದ ವನಿತೆಯರ ತಂಡ!
ಭಾರತದ ವನಿತೆಯರ ತಂಡ
TV9 Web
| Updated By: ಪೃಥ್ವಿಶಂಕರ|

Updated on: Sep 26, 2021 | 4:18 PM

Share

ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ ಭಾರತದ ಮಹಿಳಾ ಕ್ರಿಕೆಟ್ ತಂಡವು ಏಕದಿನ ಸರಣಿಯನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಿತು. ಆದಾಗ್ಯೂ 3 ಏಕದಿನ ಪಂದ್ಯಗಳ ಸರಣಿಯನ್ನು ವಶಪಡಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಆದರೆ ಒಂದು ದೊಡ್ಡ ಕೆಲಸ ಮಾಡಲಾಗಿದೆ. ಅದೆನೆಂದರೆ ಭಾರತದ ವನಿತೆಯರ ಬಳಗ ಕಳೆದ 26 ಏಕದಿನ ಪಂದ್ಯಗಳಿಂದ ಸೋಲಿಲ್ಲದ ಸರದಾರರಾಗಿ ಮೆರೆಯುತ್ತಿದ್ದ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಗೆಲುವಿನ ಓಟಕ್ಕೆ ಬ್ರೇಕಾ ಹಾಕಿದ್ದಾರೆ. ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದ ಭಾರತ ತಂಡ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿತ್ತು. ಮೊದಲು ಆಡಿದ ಆತಿಥೇಯರು 9 ವಿಕೆಟ್​ಗೆ 264 ರನ್ ಗಳಿಸಿದರು ಮತ್ತು ಭಾರತದ ಗೆಲುವಿಗೆ 265 ರನ್​ಗಳ ಗುರಿ ನೀಡಿದರು.

ಪಂದ್ಯದಲ್ಲಿ ಆಸ್ಟ್ರೇಲಿಯಾ ಕಳಪೆ ಆರಂಭ ಹೊಂದಿತ್ತು. ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರು ರಸೆಲ್ ಮತ್ತು ಲೆನ್ನಿಂಗ್ ಅವರ ವಿಕೆಟ್ಗಳನ್ನು ಬೇಗನೆ ಬೀಳಿಸಿದರು. 100 ರನ್‌ಗಳ ಒಳಗೆ, ಅಲಿಸಾ ಹೀಲಿ ಮತ್ತು ಎಲಿಸ್ ಪೆರಿಯಂತಹ ಬ್ಯಾಟರ್​ಗಳ ಹೆಸರನ್ನು ಒಳಗೊಂಡಂತೆ ಅವರ ಅಗ್ರ 4 ಆಟಗಾರರ ವಿಕೆಟ್ ಪತನಗೊಂಡಿತು. ಆದಾಗ್ಯೂ, ಇದರ ನಂತರ ಮುನೆ ಮತ್ತು ಗಾರ್ಡ್ನರ್ ಒಟ್ಟಿಗೆ ಆಸ್ಟ್ರೇಲಿಯಾದ ಕುಸಿಯುತ್ತಿರುವ ಇನ್ನಿಂಗ್ಸ್ ಅನ್ನು ನಿಭಾಯಿಸಿದರು. ಇಬ್ಬರ ನಡುವೆ ರೂಪುಗೊಂಡ ಪಾಲುದಾರಿಕೆ ಭಾರತಕ್ಕೆ ಅಪಾಯಕಾರಿ ಎಂದು ಸಾಬೀತಾಯಿತು, ಇದನ್ನು ಸ್ನೇಹ ರಾಣಾ ಮುರಿಯುವ ಕೆಲಸ ಮಾಡಿದರು. 52 ವೈಯಕ್ತಿಕ ಸ್ಕೋರ್ ಗಳಿಸಿದ್ದ ಮುನೆ ಬೇಲ್ ವಿಕೆಟ್ ಪಡೆದರು. ಇದರ ನಂತರ, ಗಾರ್ಡ್ನರ್ ಕೂಡ ಪೂಜಾಗೆ ಬಲಿಯಾದರು. ಕೆಳ ಕ್ರಮಾಂಕದಲ್ಲಿ, ಮೆಕ್‌ಗ್ರಾತ್ 32 ಎಸೆತಗಳಲ್ಲಿ 47 ರನ್ ಗಳಿಸಿದರು. ಜೂಲನ್ ಗೋಸ್ವಾಮಿ ಭಾರತದ ಅತ್ಯಂತ ಆರ್ಥಿಕ ಬೌಲರ್ ಆದರು.

ಕೊನೆಯ ಏಕದಿನ ಪಂದ್ಯದಲ್ಲಿ ಭಾರತಕ್ಕೆ 2 ವಿಕೆಟ್ ಜಯ ಈ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಆರಂಭಿಕರು ಉತ್ತಮ ಜೊತೆಯಾಟ ಆಡಿದರು. ಮಂದನಾ ವಿಕೆಟ್ ಬಳಿಕ ಬಂದ ಯಾಸ್ತಿಕಾ ಭಾಟಿಯಾ, ಶೆಫಾಲಿಯೊಂದಿಗೆ ಉತ್ತಮ ಆಟ ತೋರಿಸಿದರು. ಇಬ್ಬರ ನಡುವೆ ಎರಡನೇ ವಿಕೆಟ್ ಗೆ 101 ರನ್​ಗಳ ಜೊತೆಯಾಟವಿತ್ತು, ಇದು ಭಾರತದ ಗೆಲುವಿಗೆ ನಾಂದಿ ಹಾಡಿತು. 56 ರನ್ ಗಳಿಸಿದ ಶೆಫಾಲಿ ಔಟಾಗುವ ಮೂಲಕ ಈ ಜೋಡಿ ಮುರಿಯಿತು. ಯಾಸ್ತಿಕಾ ಭಾಟಿಯಾ 69 ಎಸೆತಗಳಲ್ಲಿ 64 ರನ್ ಗಳಿಸಿದರು. ಇವರ ನಂತರ ದೀಪ್ತಿ 30 ಎಸೆತಗಳಲ್ಲಿ 31 ರನ್ ಗಳಿಸಿದರೆ ಸ್ನೇಹ್ ರಾಣಾ 27 ಎಸೆತಗಳಲ್ಲಿ 30 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದುಬಿಟ್ಟರು.

ಭಾರತದ ಗೆಲುವಿಗೆ ಕೊನೆಯ 4 ಎಸೆತಗಳಲ್ಲಿ 3 ರನ್ ಬೇಕಿತ್ತು. ಆದರೆ ಜೂಲನ್ ಗೋಸ್ವಾಮಿ ಒಂದು ಬೌಂಡರಿ ಹೊಡೆದು ಪಂದ್ಯವನ್ನು 3 ಎಸೆತಗಳು ಇರುವಾಗಲೇ 2 ವಿಕೆಟ್ಗಳಿಂದ ಭಾರತಕ್ಕೆ ವಿಜಯ ತಂದುಕೊಟ್ಟರು. ಚೆಂಡಿನೊಂದಿಗೆ 3 ವಿಕೆಟ್ ಪಡೆದ ಜೂಲನ್ ಗೋಸ್ವಾಮಿ ಈ ಗೆಲುವಿನಲ್ಲಿ ಪಂದ್ಯಶ್ರೇಷ್ಠ ಎನಿಸಿಕೊಂಡರು.

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು