2019ರ ನಂತರ ತವರು ಮೈದಾನವಾದ ಚೆಪಾಕ್‌ನಲ್ಲಿ ಪಂದ್ಯವನ್ನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ನಾಲ್ಕು ಬಾರಿ ವಿಜೇತ ತಂಡ ತನ್ನ ಗೆಲುವಿನ ಖಾತೆ ತೆರೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ, ರುತುರಾಜ್ ಗಾಯಕ್ವಾಡ್ ಅವರ 57 ರನ್ ಮತ್ತು ಡೆವೊನ್ ಕಾನ್ವೆ ಅವರ 47 ರನ್‌ಗಳ ಆಧಾರದ ಮೇಲೆ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 217 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಉತ್ತಮ ಆರಂಭದ ನಂತರವೂ ಈ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಮೊಯಿನ್ ಅಲಿ ಅವರ ಸ್ಪಿನ್ ಎದುರು ಸಂಪೂರ್ಣ 20 ಓವರ್‌ಗಳನ್ನು ಆಡಿದ ಲಕ್ನೋ ಏಳು ವಿಕೆಟ್‌ಗಳನ್ನು ಕಳೆದುಕೊಂಡು 205 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೊನೆಯ ಓವರ್‌ನಲ್ಲಿ ಲಖನೌದ ಏಳನೇ ವಿಕೆಟ್ ಕೂಡ ಬಿದ್ದಿದೆ. ತುಷಾರ್ ದೇಶಪಾಂಡೆ ಆಯುಷ್ ಬಡೋನಿ ವಿಕೆಟ್ ಪಡೆಯುವ ಮೂಲಕ ಚೆನ್ನೈ ಗೆಲುವನ್ನು ಖಚಿತಪಡಿಸಿದ್ದಾರೆ.
ಎಲ್‌ಎಸ್‌ಜಿ 18 ಓವರ್‌ಗಳಲ್ಲಿ 181 ರನ್ ಗಳಿಸಿದೆ. ಈಗ ಕೇವಲ 2 ಓವರ್‌ಗಳು ಉಳಿದಿದ್ದು, ಇದರಲ್ಲಿ ಗೆಲುವಿಗೆ 37 ರನ್‌ಗಳ ಅಗತ್ಯವಿದೆ. ಕೃಷ್ಣಪ್ಪ ಗೌತಮ್ ಮತ್ತು ಆಯುಷ್ ಬಡೋನಿ ಕ್ರೀಸ್‌ನಲ್ಲಿದ್ದಾರೆ.
17ನೇ ಓವರ್‌ನಲ್ಲಿ ದೀಪಕ್ ಚಹಾರ್ 3 ವೈಡ್‌ಗಳನ್ನು ಎಸೆದರು. ನಂತರ ಕೃಷ್ಣಪ್ಪ ಡೀಪ್ ಮಿಡ್ ವಿಕೆಟ್ ಮೇಲೆ ಸುದೀರ್ಘ ಸಿಕ್ಸರ್ ಬಾರಿಸಿದರು.
ಲಕ್ನೋದ ಕೊನೆಯ ದೊಡ್ಡ ಭರವಸೆಯಾಗಿದ್ದ ನಿಕೋಲಸ್ ಪುರನ್ ಕೂಡ ಔಟಾಗಿದ್ದಾರೆ. 16ನೇ ಓವರ್‌ನಲ್ಲಿ ತುಷಾರ್ ದೇಶಪಾಂಡೆ ಅವರ ಕೊನೆಯ ಎಸೆತವನ್ನು ಲಾಂಗ್ ಆಫ್ ಬೌಂಡರಿ ಬಾರಿಸುವ ಯತ್ನದಲ್ಲಿ ಪೂರನ್, ಬೆನ್ ಸ್ಟೋಕ್ಸ್ಗೆ ಕ್ಯಾಚ್ ನೀಡಿದರು. ಪುರನ್ 18 ಎಸೆತಗಳಲ್ಲಿ 32 ರನ್ ಗಳಿಸಿದರು.
ರವೀಂದ್ರ ಜಡೇಜಾ ಎಸೆದ ಮೊದಲ ಓವರ್‌ನಲ್ಲಿ 2 ಸಿಕ್ಸರ್ ತಿಂದರು. ಆ ಓವರ್‌ನ ಮೂರನೇ ಮತ್ತು ಐದನೇ ಎಸೆತಗಳಲ್ಲಿ ನಿಕೋಲಸ್ ಪೂರನ್ 2 ಸಿಕ್ಸರ್ ಬಾರಿಸಿದರು. ಆ ಓವರ್‌ನಲ್ಲಿ 14 ರನ್‌ಗಳು ಬಂದವು.
ಎಲ್‌ಎಸ್‌ಜಿ ಇನ್ನಿಂಗ್ಸ್ ತತ್ತರಿಸುತ್ತಿದೆ. ತಂಡದ ಐದನೇ ವಿಕೆಟ್ ಕೂಡ ಬಿದ್ದಿದೆ. ಆಫ್ ಸ್ಪಿನ್ನರ್ ಮೊಯಿನ್ ಅಲಿ, ಮಾರ್ಕಸ್ ಸ್ಟೊಯಿನಿಸ್ ಅವರನ್ನು ಬೌಲ್ಡ್ ಮಾಡಿದರು. ಇದು ಮೊಯಿನ್ ಅಲಿ ಅವರ ನಾಲ್ಕನೇ ವಿಕೆಟ್.
ಹಂಗರ್ಗೇಕರ್ ಎಸೆದ 12ನೇ ಓವರ್‌ನಲ್ಲಿ ಪೂರನ್ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. 4 ವಿಕೆಟ್ಗಳ ನಂತರ ಲಕ್ನೋಗೆ ಇದು ಉತ್ತಮ ಓವರ್ ಆಯಿತು.
10ನೇ ಓವರ್‌ನ ಆರಂಭದಲ್ಲಿ ಸ್ಟೊಯಿನಿಸ್ ಮೊಯಿನ್ ಅಲಿಗೆ ಸಿಕ್ಸರ್ ಬಾರಿಸಿದರು. ಆದರೆ, ಕೊನೆಯ ಎಸೆತದಲ್ಲಿ ವಿಕೆಟ್ ಪಡೆದ ಅಲಿ, ಕೃನಾಲ್ ಪಾಂಡ್ಯ ಅವರನ್ನು ಔಟ್ ಮಾಡಿದರು. 9 ರನ್ ಗಳಿಸಿದ ನಂತರ ಕೃನಾಲ್ ವಾಪಸಾದರು.
ಮಿಚೆಲ್ ಸ್ಯಾಂಟ್ನರ್ 9ನೇ ಓವರ್‌ನಲ್ಲಿ ಕೃನಾಲ್ ಪಾಂಡ್ಯ ಓವರ್‌ನ ಮೂರನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.
ಚೆನ್ನೈ ದೊಡ್ಡ ವಿಕೆಟ್ ಪಡೆದಿದೆ. ಕೆಎಲ್ ರಾಹುಲ್ ಔಟಾಗಿದ್ದಾರೆ. ಎಂಟನೇ ಓವರ್ ಎಸೆದ ಮೊಯಿನ್ ಅಲಿ ಅವರ ಎರಡನೆ ಎಸೆತದಲ್ಲಿ ರಾಹುಲ್ ಡೀಪ್ ಮಿಡ್ ವಿಕೆಟ್ನಲ್ಲಿ ದೊಡ್ಡ ಶಾಟ್ ಆಡಲು ಬಯಸಿದ್ದರು ಆದರೆ ಚೆಂಡು ಅಲ್ಲಿಯೇ ನಿಂತಿದ್ದ ರಿತುರಾಜ್ ಗಾಯಕ್ವಾಡ್ ಕೈ ಸೇರಿತು.
ರಾಹುಲ್ – 20 ರನ್, 18 ಎಸೆತಗಳು 2×4
7ನೇ ಓವರ್‌ನ ಕೊನೆಯ ಎಸೆತದಲ್ಲಿ ಮಿಚೆಲ್ ಸ್ಯಾಂಟ್ನರ್ ದೀಪಕ್ ಹೂಡಾ ಅವರ ವಿಕೆಟ್ ಪಡೆದು ಲಖನೌ ತಂಡಕ್ಕೆ ಆಘಾತ ನೀಡಿದರು. ದೀಪಕ್ ಕೇವಲ 2 ರನ್ ಗಳಿಸಿ ಮರಳಿದ್ದಾರೆ. ಹೀಗಾಗಿ ಲಕ್ನೋ ಎರಡನೇ ವಿಕೆಟ್ ಕಳೆದುಕೊಂಡಿದೆ.
ಮೇಯರ್ಸ್ ಪವರ್‌ಪ್ಲೇನಲ್ಲಿ ಅರ್ಧಶತಕ ಗಳಿಸಿದ ನಂತರ ತಮ್ಮ ವಿಕೆಟ್ ಕಳೆದುಕೊಂಡರು. ದೊಡ್ಡ ಹೊಡೆತವನ್ನು ಆಡಲು ಯತ್ನಿಸಿದ ಮೇಯರ್ಸ್ ಕಾನ್ವೇ ಕೈಗೆ ಸಿಕ್ಕಿಬಿದ್ದರು. ಮೇಯರ್ಸ್ 22 ಎಸೆತಗಳಲ್ಲಿ 53 ರನ್ ಗಳಿಸಿ ಮರಳಿದರು.
ಕೈಲ್ ಮೇಯರ್ಸ್ ಆರನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಇದಕ್ಕಾಗಿ ಅವರು 21 ಎಸೆತಗಳನ್ನು ತೆಗೆದುಕೊಂಡರು. ಇದು ಈ ಎಡಗೈ ಬ್ಯಾಟ್ಸ್‌ಮನ್‌ನ ಸತತ ಎರಡನೇ ಅರ್ಧಶತಕವಾಗಿದೆ. ಡೆಲ್ಲಿ ವಿರುದ್ಧದ ಮೊದಲ ಪಂದ್ಯದಲ್ಲಿಯೂ ಅರ್ಧಶತಕ ಗಳಿಸಿದ್ದರು.
5 ಓವರ್ ಅಂತ್ಯಕ್ಕೆ ಲಕ್ನೋ ತಂಡ 73 ರನ್ ಬಾರಿಸಿದೆ. ಚಹರ್ ಎಸೆದ ಈ ಓವರ್‌ನಲ್ಲಿ 2 ಬೌಂಡರಿ ಬಂದವು.
4ನೇ ಓವರ್ ಎಸೆದ ದೇಶಪಾಂಡೆ 2 ನೋ ಬಾಲ್ ಸೇರಿದಂತೆ ಈ ಓವರ್‌ನಲ್ಲಿ ಬರೋಬ್ಬರಿ 12 ಬಾಲ್ ಎಸೆದರು. ಈ ಓವರ್‌ನಲ್ಲಿ ಬೌಂಡರಿ, ಸಿಕ್ಸರ್ ಸೇರಿದಂತೆ ಒಟ್ಟು 18 ರನ್ ನೀಡಿದರು.
3ನೇ ಓವರ್ ಎಸೆದ ಚಹರ್ ಈ ಓವರ್‌ನಲ್ಲಿ 3 ಬೌಂಡರಿ ನೀಡಿದರು. ಅಷ್ಟೂ ಬೌಂಡರಿಗಳನ್ನು ಮೇಯರ್ಸ್ ಬಾರಿಸಿದರು. ಈ ಓವರ್ನಿಂದ 13 ರನ್ ಬಂದವು.
2ನೇ ಓವರ್‌ನಲ್ಲಿ ಮೇಯರ್ಸ್ 2 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. 2 ಓವರ್ ಅಂತ್ಯಕ್ಕೆ ಲಕ್ನೋ 25 ರನ್ ಗಳಿಸಿದೆ.
ಕೆಎಲ್ ರಾಹುಲ್ ಮತ್ತು ಕೈಲ್ ಮೇಯರ್ಸ್ ಜೋಡಿ ಮೈದಾನಕ್ಕಿಳಿದಿದ್ದಾರೆ. ದೀಪಕ್ ಚಹಾರ್ ಚೆನ್ನೈ ಪರ ಮೊದಲ ಓವರ್ ಎಸೆದರು.
ಚೆನ್ನೈ ಇನ್ನಿಂಗ್ಸ್ ಮುಗಿದಿದೆ. ಮೊದಲು ಬ್ಯಾಟ್ ಮಾಡಿದ ಈ ತಂಡ ಏಳು ವಿಕೆಟ್ ಕಳೆದುಕೊಂಡು 217 ರನ್ ಗಳಿಸಿದೆ. ತಂಡದ ಪರ ರುತುರಾಜ್ ಗಾಯಕ್ವಾಡ್ 57 ರನ್, ಡೆವೊನ್ ಕಾನ್ವೆ 47 ರನ್‌ಗಳ ಇನಿಂಗ್ಸ್ ಆಡಿದರು.
2 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್ ಬಾರಿಸಿದ ಧೋನಿ 3ನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಮೂರನೇ ಬಿಗ್ ಶಾಟ್ ಆಡಲು ಯತ್ನಿಸಿ ವಿಕೆಟ್ ಕಳೆದುಕೊಂಡರು.
ಕ್ರೀಸ್‌ಗೆ ಬಂದ ತಕ್ಷಣ ತಾವು ಎದುರಿಸಿದ ಮೊದಲ ಎರಡು ಎಸೆತಗಳಲ್ಲಿ ಧೋನಿ ಎರಡು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ಧೋನಿ ಐಪಿಎಲ್‌ನಲ್ಲಿ 5 ಸಾವಿರ ರನ್ ಪೂರೈಸಿದ್ದಾರೆ.
20ನೇ ಓವರ್‌ನ ಮೊದಲ ಎಸೆತದಲ್ಲಿ ಮಾರ್ಕ್ವುಡ್ಗೆ 3 ರನ್ ಗಳಿಸಿ ಜಡೇಜಾ ಬಲಿಯಾದರು.
ಅಂಬಟಿ ರಾಯುಡು 18ನೇ ಓವರ್‌ನಲ್ಲಿ ಎರಡು ಸಿಕ್ಸರ್ ಬಾರಿಸಿದರು. ಮಾರ್ಕ್ ವುಡ್ ಅವರನ್ನು ಓವರ್‌ನ ಮೊದಲ ಎಸೆತದಲ್ಲಿ ಸಿಕ್ಸರ್ ಮೂಲಕ ಸ್ವಾಗತಿಸಲಾಯಿತು. ಓವರ್‌ನ ನಾಲ್ಕನೇ ಎಸೆತದಲ್ಲಿ ರಾಯುಡು ಸೈಟ್ ಸ್ಕ್ರೀನ್ ಕಡೆಗೆ ಸಿಕ್ಸರ್ ಬಾರಿಸಿದರು.
ಎರಡನೇ ಪಂದ್ಯದಲ್ಲೂ ಬೆನ್ ಸ್ಟೋಕ್ಸ್ ಕೇವಲ 8 ರನ್ ಗಳಿಸಿ ಅವೇಶ್ ಖಾನ್ಗೆ ಬಲಿಯಾದರು.
ರವಿ ಬಿಷ್ಣೋಯ್ ಅದ್ಭುತ ಬೌಲಿಂಗ್ ಮಾಡಿ ಮೊಯಿನ್ ಅಲಿಯನ್ನು ಬಲಿಪಶು ಮಾಡಿದ್ದಾರೆ. ಬಿಗ್ ಶಾಟ್ ಹೊಡೆಯುವ ಯತ್ನದಲ್ಲಿ ಅಲಿ ಸ್ಟಂಪ್ ಔಟ್ ಆದರು.
ಅವೇಶ್ ಖಾನ್ ಎಸೆದ 15ನೇ ಓವರ್‌ನಲ್ಲಿ ಮೊಯಿನ್ ಅಲಿ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ಸತತ ಮೂರು ಬೌಂಡರಿಗಳನ್ನು ಬಾರಿಸಿದರು.
ಈ ಪಂದ್ಯದಲ್ಲಿ ರವಿ ಬಿಷ್ಣೋಯ್ ಮತ್ತೊಂದು ಯಶಸ್ಸು ಗಳಿಸಿದ್ದಾರೆ. 2 ಸಿಕ್ಸರ್ ಬಾರಿಸಿ ಅಬ್ಬರಿಸುತ್ತಿದ್ದ ಶಿವಂ ದುಬೆ ಅವರನ್ನು ಔಟ್ ಮಾಡಿದ್ದಾರೆ. ದುಬೆ 16 ಎಸೆತಗಳಲ್ಲಿ 27 ರನ್ ಗಳಿಸಿ ಮರಳಿದರು.
14ನೇ ಓವರ್ ಎಸೆದ ರವಿ ಬಿಷ್ಣೋಯ್ ಅವರ ಎರಡನೇ ಮತ್ತು ಮೂರನೇ ಎಸೆತಗಳಲ್ಲಿ ಶಿವಂ ದುಬೆ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿದರು.
11ನೇ ಓವರ್‌ನ ಎರಡನೇ ಎಸೆತದಲ್ಲಿ ಮಾರ್ಕ್ ವುಡ್ ಕಾನ್ವೇ ಅವರನ್ನು ಔಟ್ ಮಾಡಿದರು. ಕಾನ್ವೇ ಅಮೋಘ ಶಾಟ್ ಆಡಿದರು ಆದರೆ ಕೃನಾಲ್ ಪಾಂಡ್ಯ ಅತ್ಯುತ್ತಮ ಕ್ಯಾಚ್ ಹಿಡಿದರು.
ರವಿ ಬಿಷ್ಣೋಯ್, ರುತುರಾಜ್ ಗಾಯಕ್ವಾಡ್ ಅವರನ್ನು ಮೊದಲ ಎಸೆತದಲ್ಲಿಯೇ ಔಟ್ ಮಾಡಿದರು. 31 ಎಸೆತಗಳಲ್ಲಿ 57 ರನ್ ಗಳಿಸಿದ ರುತುರಾಜ್, ಮಾರ್ಕ್ವುಡ್ಗೆ ಕ್ಯಾಚಿತ್ತು ಔಟಾದರು.
8ನೇ ಓವರ್‌ನ ನಾಲ್ಕನೇ ಎಸೆತದಲ್ಲಿ, ಡೆವೊನ್ ಕಾನ್ವೇ ವೈಡ್ ಲಾಂಗ್ ಆನ್‌ನಲ್ಲಿ 85 ಮೀಟರ್‌ಗಳ ಸಿಕ್ಸರ್ ಅನ್ನು ಹೊಡೆದರು. ಕೊನೆಯ ಎಸೆತದಲ್ಲಿ ಸ್ಲಾಗ್ ಸ್ವೀಪ್ ಮಾಡಿ ಮತ್ತೊಂದು ಸಿಕ್ಸ್ ಹೊಡೆದರು.
ರುತುರಾಜ್ ಗಾಯಕ್ವಾಡ್ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆರಂಭದಿಂದಲೇ ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ಅಬ್ಬರಿಸಿದ ರುತುರಾಜ್, 2ನೇ ಪಂದ್ಯದಲ್ಲಿ ಸತತ 2ನೇ ಅರ್ಧಶತಕ ಪೂರೈಸಿದರು.
ಪವರ್‌ಪ್ಲೇಯ ಅಂತಿಮ ಓವರ್ ಎಸೆದ ಮಾರ್ಕ್ ವುಡ್ ಅವರ ಓವರ್‌ನ ಮೊದಲ ಮತ್ತು ಮೂರನೇ ಎಸೆತಗಳಲ್ಲಿ ಕಾನ್ವೆ ಎರಡು ಬೌಂಡರಿ ಬಾರಿಸಿದರು. ಐದನೇ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ಗಾಯಕ್ವಾಡ್ ಫ್ಲಿಕ್ ಮಾಡಿ, ಸ್ಕೇವರ್ ಲೆಗ್‌ನ ಮೇಲೆ ಸಿಕ್ಸರ್ ಹೊಡೆದರು.
ಐದನೇ ಓವರ್‌ನಲ್ಲಿ ಗಾಯಕ್ವಾಡ್ ಮೂರು ಸಿಕ್ಸರ್‌ಗಳನ್ನು ಬಾರಿಸಿದರು. ಓವರ್‌ನ ಎರಡನೇ ಎಸೆತದಲ್ಲಿ ಸೈಟ್ ಸ್ಕ್ರೀನ್‌ಗೆ, ನಾಲ್ಕನೇ ಎಸೆತದಲ್ಲಿ ಮಿಡ್-ಆಫ್‌ಗೆ, ಅಂತಿಮ ಬಾಲ್‌ನಲ್ಲಿ ಎಕ್ಸ್ಟ್ರಾ ಕವರ್‌ನ ಮೇಲೆ ಸಿಕ್ಸರ್ ಬಾರಿಸಿದರು. 5ನೇ ಓವರ್‌ನಲ್ಲಿ 20 ರನ್‌ಗಳು ಬಂದವು.
100 ನೇ ಐಪಿಎಲ್ ಪಂದ್ಯವನ್ನು ಆಡುತ್ತಿರುವ ಕೃನಾಲ್ ಪಾಂಡ್ಯ ಅವ ಓವರ್‌ನಲ್ಲಿ ಗಾಯಕ್ವಾಡ್ ಓವರ್‌ನ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.
ಎರಡನೇ ಓವರ್ ಅನ್ನು ಅವೇಶ್ ವೈಡ್ ಬಾಲ್ನಿಂದ ಆರಂಭಿಸಿ 5 ರನ್ ನೀಡಿದರು. ಆ ಬಳಿಕ ಕಾನ್ವೆ ಓವರ್‌ನ ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದರು. ಈ ಓವರ್‌ನಲ್ಲಿ ಚೆನ್ನೈ 17 ರನ್ ಗಳಿಸಿತು.
ಚೆನ್ನೈ ಬ್ಯಾಟಿಂಗ್ ಆರಂಭಿಸಿದೆ. ತಂಡದ ಪರ ರುತುರಾಜ್ ಹಾಗೂ ಕಾನ್ವೇ ಬ್ಯಾಟಿಂಗ್ ಆರಂಭಿಸಿದ್ದಾರೆ. ಮೇಯರ್ಸ್ ಎಸೆದ ಮೊದಲ ಓವರ್‌ನಲ್ಲಿ 2 ರನ್ ಬಂದವು.
ಎಂಎಸ್ ಧೋನಿ (ನಾಯಕ) ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಬೆನ್ ಸ್ಟೋಕ್ಸ್, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಶಿವಂ ದುಬೆ, ಎಂಎಸ್ ಧೋನಿ, ದೀಪಕ್ ಚಾಹರ್, ಮಿಚೆಲ್ ಸ್ಯಾಂಟ್ನರ್, ರಾಜ್ಯವರ್ಧನ್ ಹಂಗೇರ್‌ಗೆಕರ್.
ಕೆಎಲ್ ರಾಹುಲ್ (ನಾಯಕ), ಕೈಲ್ ಮೈಯರ್ಸ್, ನಿಕೋಲಸ್ ಪೂರನ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ಆಯುಷ್ ಬಧೋನಿ, ಮಾರ್ಕ್ ವುಡ್, ಯಶ್ ಠಾಕೂರ್, ರವಿ ಬಿಷ್ಣೋಯ್, ಅವೇಶ್ ಖಾನ್.
ಟಾಸ್ ಗೆದ್ದ ಲಕ್ನೋ ನಾಯಕ ಕೆಎಲ್ ರಾಹುಲ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ ಚೆನ್ನೈ ಮೊದಲು ಬ್ಯಾಟಿಂಗ್ ಮಾಡಲಿದೆ.
Published On - 7:01 pm, Mon, 3 April 23