CSK vs MI Highlights IPL 2023: ಮುಂಬೈ ಎದುರು ಸುಲಭವಾಗಿ ಗೆದ್ದ ಚೆನ್ನೈ; ರೋಹಿತ್ ಪಡೆಗೆ 5ನೇ ಸೋಲು

ಪೃಥ್ವಿಶಂಕರ
|

Updated on:May 06, 2023 | 7:09 PM

Chennai Super Kings vs Mumbai Indians IPL 2023 Highlights in Kannada: ಐಪಿಎಲ್​​ನ 49 ನೇ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಎದುರಿಸಿದ್ದ, ರೋಹಿತ್ ಶರ್ಮಾ ನೇತೃತ್ವದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್​​ಗಳ ಹೀನಾಯ ಸೋಲು ಅನುಭವಿಸಿದೆ.

CSK vs MI Highlights IPL 2023: ಮುಂಬೈ ಎದುರು ಸುಲಭವಾಗಿ ಗೆದ್ದ ಚೆನ್ನೈ; ರೋಹಿತ್ ಪಡೆಗೆ 5ನೇ ಸೋಲು
ಚೆನ್ನೈ- ಮುಂಬೈ ಮುಖಾಮುಖಿ

ಐಪಿಎಲ್​​ನ 49 ನೇ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಎದುರಿಸಿದ್ದ, ರೋಹಿತ್ ಶರ್ಮಾ ನೇತೃತ್ವದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್​​ಗಳ ಹೀನಾಯ ಸೋಲು ಅನುಭವಿಸಿದೆ.ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ನಷ್ಟಕ್ಕೆ ಕೇವಲ 139 ರನ್ ಗಳಿಸಿ ಸುಲಭ ಸ್ಕೋರ್ ದಾಖಲಿಸಿತು. ಈ ಗುರಿ ಬೆನ್ನಟ್ಟಿದ ಚೆನ್ನೈ ಆರಂಭಿಕರ ಉತ್ತಮ ಆಟದಿಂದಾಗಿ ಕೇವಲ 18ನೇ ಓವರ್​​ನಲ್ಲೇ ಗೆಲುವಿನ ದಡ ಸೇರಿತು.

LIVE NEWS & UPDATES

The liveblog has ended.
  • 06 May 2023 07:05 PM (IST)

    ಗೆಲುವಿನ ರನ್ ಬಾರಿಸಿದ ಧೋನಿ

    18ನೇ ಓವರ್​​ನ 2ನೇ ಎಸೆತದಲ್ಲಿ ದುಬೆ ಸಿಕ್ಸರ್ ಬಾರಿಸಿದರೆ, ಆ ಬಳಿಕ ಬಂದ ಧೋನಿ ಸಿಂಗಲ್ ಬಾರಿಸಿ ಮುಂಬೈ ವಿರುದ್ಧ ಸುಲಭ ಜಯ ತಂದುಕೊಟ್ಟರು.

  • 06 May 2023 06:55 PM (IST)

    ಕಾನ್ವೇ ಔಟ್

    42 ಎಸೆತಗಳಲ್ಲಿ 44 ರನ್ ಬಾರಿಸಿದ್ದ ಕಾನ್ವೇ 17ನೇ ಓವರ್​​ನ 3ನೇ ಎಸೆತದಲ್ಲಿ ಎಲ್​ಬಿ ಬಲೆಗೆ ಬಿದ್ದರು. ಚೆನ್ನೈ ಗೆಲವಿಗೆ 10 ರನ್ ಬೇಕಿದೆ.

  • 06 May 2023 06:39 PM (IST)

    ಶಿವಂ ಸಿಕ್ಸರ್

    14ನೇ ಓವರ್​​ನಲ್ಲಿ ದುಬೆ 2 ಸಿಕ್ಸರ್ ಹೊಡೆದರು. ಈ ಎರಡೂ ಸಿಕ್ಸರ್​ಗಳು ಮಿಡ್ ವಿಕೆಟ್ ಮೇಲೆ ಬಂದವು.

  • 06 May 2023 06:35 PM (IST)

    ರಾಯುಡು ಔಟ್

    13ನೇ ಓವರ್​​ನ ಕೊನೆಯ ಎಸೆತದಲ್ಲಿ ರಾಯುಡು ಕ್ಯಾಚಿತ್ತು ಔಟಾದರು.

  • 06 May 2023 06:32 PM (IST)

    ಚೆನ್ನೈ ಶತಕ ಪೂರ್ಣ

    13ನೇ ಓವರ್​​ನ 4ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಾಯುಡು ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು.

  • 06 May 2023 06:29 PM (IST)

    10 ಓವರ್‌ಗಳಲ್ಲಿ CSK 84/2

    ಚೆನ್ನೈ 10 ಓವರ್‌ಗಳ ಅಂತ್ಯಕ್ಕೆ 2 ವಿಕೆಟ್‌ಗೆ 84 ರನ್ ಗಳಿಸಿದೆ. ಗೆಲುವಿಗೆ 60 ಎಸೆತಗಳಲ್ಲಿ 56 ರನ್ ಅಗತ್ಯವಿದೆ. ಅಂಬಟಿ ರಾಯುಡು ಮತ್ತು ಡೆವೊನ್ ಕಾನ್ವೇ ಕ್ರೀಸ್‌ನಲ್ಲಿದ್ದಾರೆ.

  • 06 May 2023 06:14 PM (IST)

    ರಹಾನೆ ಔಟ್

    9ನೇ ಓವರ್​​ನ ಕೊನೆಯ ಎಸೆತದಲ್ಲಿ ರಹಾನೆ ಎಲ್​ಬಿ ಬಲೆಗೆ ಬಿದ್ದರು. ಚೆನ್ನೈ 2ನೇ ವಿಕೆಟ್ ಕಳೆದುಕೊಂಡಿದೆ.

  • 06 May 2023 06:10 PM (IST)

    ರಹಾನೆ ಸಿಕ್ಸ್

    ಚಾವ್ಲಾ ಬೌಲ್ ಮಾಡಿದ 9ನೇ ಓವರ್​​ನ 2ನೇ ಎಸೆತದಲ್ಲೇ ರಹಾನೆ ಲಾಂಗ್​​ ಆನ್​​ನಲ್ಲಿ ಸಿಕ್ಸರ್ ಬಾರಿಸಿದರು.

  • 06 May 2023 06:05 PM (IST)

    ರಾಘವ್​ಗೆ ಬೌಂಡರಿ

    ರಾಘವ್ ಬೌಲ್ ಮಾಡಿದ 8ನೇ ಓವರ್​​ನ 2ನೇ ಎಸೆತವನ್ನು ಎಕ್ಸ್​​ಟ್ರಾ ಕವರ್​​ನಲ್ಲಿ ಕಾನ್ವೇ ಬೌಂಡರಿಗಟ್ಟಿದರು.

  • 06 May 2023 05:59 PM (IST)

    ಪವರ್ ಪ್ಲೇ ಅಂತ್ಯ

    6 ಓವರ್​ಗಳ ಈ ಪವರ್ ಪ್ಲೇಯಲ್ಲಿ ಚೆನ್ನೈ ತಂಡ 1 ವಿಕೆಟ್ ಕಳೆದುಕೊಂಡು 54 ರನ್ ಕಲೆಹಾಕಿದೆ. ಕಾನ್ವೇ ಹಾಗೂ ರಹಾನೆ ಬ್ಯಾಟಿಂಗ್​​ನಲ್ಲಿದ್ದಾರೆ.

  • 06 May 2023 05:51 PM (IST)

    ಗಾಯಕ್ವಾಡ್ ಔಟ್, ಚೆನ್ನೈ 46/1

    ಚಾವ್ಲಾ ಬೌಲ್ ಮಾಡಿದ 5ನೇ ಓವರ್​​ನ ಮೊದಲ ಎಸೆತದಲ್ಲೇ ರುತುರಾಜ್ ಕ್ಯಾಚಿತ್ತು ಔಟಾದರು.

  • 06 May 2023 05:48 PM (IST)

    ಆರ್ಚರ್ ಕೂಡ ದುಬಾರಿ

    4ನೇ ಓವರ್ ಬೌಲ್ ಮಾಡಿದ ಆರ್ಚರ್ ಕೂಡ ಕೊಂಚ ದುಬಾರಿಯಾದರು. ಈ ಓವರ್​​ನಲ್ಲಿ ಕಾನ್ವೇ 2 ಬೌಂಡರಿ ಹೊಡೆದರು.

  • 06 May 2023 05:44 PM (IST)

    ಅರ್ಷದ್ ದುಬಾರಿ

    3ನೇ ಓವರ್ ಬೌಲ್ ಮಾಡಿದ ಅರ್ಷದ್ ಅವರ ಓವರ್​​ನಲ್ಲಿ ಬರೋಬ್ಬರಿ 20 ರನ್ ಬಂದವು. ಈ ಓವರ್​​ನಲ್ಲಿ ರುತುರಾಜ್ 2 ಸಿಕ್ಸರ್ ಹಾಗೂ 2 ಬೌಂಡರಿ ಹೊಡೆದರು.

  • 06 May 2023 05:38 PM (IST)

    ಚೇಸ್ ಪ್ರಾರಂಭ

    ಗ್ರೀನ್ ಬೌಲ್ ಮಾಡಿದ ಮೊದಲ ಓವರ್​​ನಲ್ಲೇ ರುತುರಾಜ್ 2 ಬೌಂಡರಿ ಹೊಡೆದರು.

  • 06 May 2023 05:12 PM (IST)

    140 ರನ್ ಟಾರ್ಗೆಟ್

    ಚೆನ್ನೈ ಭಿಗಿ ಬೌಲಿಂಗ್ ಮುಂದೆ ಮಂಕಾದ ಮುಂಬೈ ನಿಗಧಿತ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 139 ರನ್ ಕಲೆಹಾಕಿದೆ.

  • 06 May 2023 05:08 PM (IST)

    ಅರ್ಷದ್ ಔಟ್

    20ನೇ ಓವರ್​​ನ ಮೊದಲ ಎಸೆತದಲ್ಲಿ ಅರ್ಷದ್ ಕ್ಯಾಚಿತ್ತು ಔಟಾದರು.

  • 06 May 2023 05:07 PM (IST)

    ಸ್ಟಬ್ಸ್ ಬೌಂಡರಿ

    19ನೇ ಓವರ್​ನ ಕೊನೆಯ 2 ಎಸೆತಗಳಲ್ಲಿ ಸ್ಟಬ್ಸ್ ಬೌಂಡರಿ ಹೊಡೆದರು.

  • 06 May 2023 05:06 PM (IST)

    ಡೇವಿಡ್ ಔಟ್

    19ನೇ ಓವರ್​​ನ 3ನೇ ಎಸೆತದಲ್ಲಿ ದೇಶಪಾಂಡೆ, ಟಿಮ್ ಡೇವಿಡ್ ವಿಕೆಟ್ ಉರುಳಿಸಿದರು.

  • 06 May 2023 04:57 PM (IST)

    ವದೇರಾ ಔಟ್

    ಪತಿರಾನ ಬೌಲ್ ಮಾಡಿದ 18ನೇ ಓವರ್​​ನ 3ನೇ ಎಸೆತದಲ್ಲಿ ಅರ್ಧಶತಕ ಬಾರಿಸಿದ್ದ ವದೇರಾ ಕ್ಲೀನ್ ಬೌಲ್ಡ್ ಆದರು.

  • 06 May 2023 04:52 PM (IST)

    ವದೇರಾ ಚೊಚ್ಚಲ ಅರ್ಧಶತಕ

    16ನೇ ಓವರ್​ನ ಮೊದಲ ಎಸೆತದಲ್ಲಿ ಡಬಲ್ ರನ್ ಪಡೆದ ವದೇರಾ ಐಪಿಎಲ್​​ನ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ. ಆ ನಂತರದ ಎಸೆತದಲ್ಲಿ ವದೇರಾ ಬ್ಯಾಟ್​ನಿಂದ ಬೌಂಡರಿ ಕೂಡ ಬಂತು. ಈ ಓವರ್​​ನಲ್ಲಿ 3 ಬೌಂಡರಿ ಬಂದವು.

  • 06 May 2023 04:48 PM (IST)

    ಮುಂಬೈ ಶತಕ ಪೂರ್ಣ

    16ನೇ ಓವರ್​​ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ವದೇರಾ ಮುಂಬೈ ಮೊತ್ತವನ್ನು 100ರ ಗಡಿ ದಾಟಿಸಿದರು. ಹಾಗೆಯೇ ಓವರ್​​ನ 3ನೇ ಎಸೆತದಲ್ಲಿ ಸ್ಟಬ್ಸ್ ಬೌಂಡರಿ ಕೂಡ ಹೊಡೆದರು.

  • 06 May 2023 04:39 PM (IST)

    ವದೇರಾ ಬೌಂಡರಿ

    ತೀಕ್ಷಣ ಎಸೆದ 14ನೇ ಓವರ್​​ನ 4ನೇ ಎಸೆತವನ್ನು ವದೇರಾ ಶಾರ್ಟ್​ ಫೈನ್​​ ಲೆಗ್​​ನಲ್ಲಿ ಬೌಂಡರಿಗಟ್ಟಿದರು.

  • 06 May 2023 04:28 PM (IST)

    ಸೂರ್ಯ ಕೂಡ ಔಟ್

    11ನೇ ಓವರ್​​ನ 3ನೇ ಎಸೆತದಲ್ಲಿ ಜಡೇಜಾ, ಡೇಂಜರಸ್ ಬ್ಯಾಟರ್ ಸೂರ್ಯರನ್ನು ಕ್ಲೀನ್ ಬೌಲ್ಡ್ ಮಾಡಿದರು. ಮುಂಬೈ 71/4

  • 06 May 2023 04:21 PM (IST)

    ಮುಂಬೈಗೆ ಸೂರ್ಯ ಆಸರೆ

    ಮುಂಬೈ ಇನ್ನಿಂಗ್ಸ್​​ನ 10 ಓವರ್​ ಮುಗಿದಿದ್ದು ಈ 10 ಓವರ್​​ಗಳಲ್ಲಿ ಮುಂಬೈ 3 ವಿಕೆಟ್ ಕಳೆದುಕೊಂಡು 64 ರನ್ ಬಾರಿಸಿದೆ. ತೀಕ್ಷಣ ಎಸೆದ ಈ ಓವರ್​​ನಲ್ಲಿ ಸೂರ್ಯ ಬೌಂಡರಿ ಹೊಡೆದರು.

  • 06 May 2023 04:12 PM (IST)

    ಅಲಿ ದುಬಾರಿ

    8ನೇ ಓವರ್ ಬೌಲ್ ಮಾಡಿದ ಮೋಯಿನ್ ಅಲಿ 2 ಬೌಂಡರಿ ಸೇರಿದಂತೆ 11 ರನ್ ಬಿಟ್ಟುಕೊಟ್ಟರು. ಇದೇ ಓವರ್​ನಲ್ಲಿ ಮುಂಬೈ 50 ರನ್ ಸಹ ಪುರ್ನಗೊಳಿಸಿತು.

  • 06 May 2023 04:03 PM (IST)

    ಸೂರ್ಯ ಫೋರ್

    ಪವರ್ ಪ್ಲೇಯ ಕೊನೆಯ ಓವರ್​​ನ 4ನೇ ಎಸೆತದಲ್ಲಿ ಸೂರ್ಯ ಬ್ಯಾಕ್ವರ್ಡ್​ ಸ್ಕ್ವೇರ್​ ಲೆಗ್​ನಲ್ಲಿ ಬೌಂಡರಿ ಹೊಡೆದರು.

    6 ಓವರ್​​ ಅಂತ್ಯಕ್ಕೆ 33/3

  • 06 May 2023 03:56 PM (IST)

    ವದೇರಾ ಬೌಂಡರಿ

    ಚಹರ್ ಬೌಲ್ ಮಾಡಿದ 5ನೇ ಓವರ್​​ನ 2ನೇ ಎಸೆತವನ್ನು ವದೇರಾ ಡೀಪ್ ಮಿಡ್ ವಿಕೆಟ್ ಮೇಲೆ ಬೌಂಡರಿ ಹೊಡೆದರು.

  • 06 May 2023 03:48 PM (IST)

    ಮತ್ತೆ ಶೂನ್ಯಕ್ಕೆ ರೋಹಿತ್ ಔಟ್

    ಸತತ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ರೋಹಿತ್ ಈ ಪಂದ್ಯದಲ್ಲೂ ಸೊನ್ನೆ ಸುತ್ತಿ ವಿಕೆಟ್ ಒಪ್ಪಿಸಿದ್ದಾರೆ. ಚಹರ್ ಬೌಲ್ ಮಾಡಿದ 3ನೇ ಓವರ್​​ನಲ್ಲಿ 2 ವಿಕೆಟ್​ ಉರುಳಿಸಿದರು.

  • 06 May 2023 03:44 PM (IST)

    ಆರಂಭಿಕರಿಬ್ಬರೂ ಔಟ್

    2ನೇ ಓವರ್​​ನಲ್ಲಿ ಗ್ರೀನ್ ಔಟಾದರೆ, 3ನೇ ಓವರ್​​ನ 2ನೇ ಎಸೆತದಲ್ಲಿ ಕಿಶನ್ ಮಿಡ್ ಆಫ್​​ನಲ್ಲಿ ಕ್ಯಾಚಿತ್ತು ಔಟಾದರು. ಚಹರ್​​ ಈ ವಿಕೆಟ್ ಉರುಳಿಸಿದರು.

  • 06 May 2023 03:39 PM (IST)

    ಗ್ರೀನ್ ಔಟ್

    ದೇಶಪಾಂಡೆ ಬೌಲ್ ಮಾಡಿದ 2ನೇ ಓವರ್​​ನ 4ನೇ ಎಸೆತದಲ್ಲಿ ಗ್ರೀನ್ ಬೌಲ್ಡ್ ಆದರು. ಮುಂಬೈ 13/1

  • 06 May 2023 03:34 PM (IST)

    ಮುಂಬೈ ಬ್ಯಾಟಿಂಗ್ ಆರಂಭ

    ಮುಂಬೈ ಇನ್ನಿಂಗ್ಸ್ ಆರಂಭವಾಗಿದ್ದು, ಚಹರ್ ಬೌಲ್ ಮಾಡಿದ ಮೊದಲ ಓವರ್​​ನಲ್ಲಿ ಕಿಶನ್ ಡೀಪ್ ಸ್ಕ್ವೇರ್​​ ಲೆಗ್​​ನಲ್ಲಿ ಬೌಂಡರಿ ಹೊಡೆದರೆ, ಕೊನೆಯ ಎಸೆತದಲ್ಲಿ ಗ್ರೀನ್ ಕೂಡ ಬೌಂಡರಿ ಹೊಡೆದರು.

  • 06 May 2023 03:18 PM (IST)

    ಚೆನ್ನೈ ಸೂಪರ್ ಕಿಂಗ್ಸ್

    ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ (ನಾಯಕ), ದೀಪಕ್ ಚಹಾರ್, ತುಷಾರ್ ದೇಶಪಾಂಡೆ, ಮತಿಶಾ ಪತಿರಾನ ಮತ್ತು ಮಹೇಶ್ ತೀಕ್ಷಣ.

  • 06 May 2023 03:16 PM (IST)

    ತಿಲಕ್ ವರ್ಮಾಗೆ ಇಂಜುರಿ

    ತಿಲಕ್ ವರ್ಮಾ ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಪರ ಆಡುತ್ತಿಲ್ಲ. ಟಾಸ್ ಬಳಿಕ ಈ ಬಗ್ಗೆ ಮಾತನಾಡಿದ ಮುಂಬೈ ತಂಡದ ನಾಯಕ ರೋಹಿತ್, ಗಾಯದ ಸಮಸ್ಯೆಯಿಂದ ತಿಲಕ್ ಇಂದು ಆಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

  • 06 May 2023 03:15 PM (IST)

    ಮುಂಬೈ ಇಂಡಿಯನ್ಸ್

    ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವದೇರಾ, ಟ್ರಿಸ್ಟಾನ್ ಸ್ಟಬ್ಸ್, ಅರ್ಷದ್ ಖಾನ್, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್.

  • 06 May 2023 03:02 PM (IST)

    ಟಾಸ್ ಗೆದ್ದ ಚೆನ್ನೈ

    ಟಾಸ್ ಗೆದ್ದ ಚೆನ್ನೈ ನಾಯಕ ಧೋನಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.

  • Published On - May 06,2023 3:01 PM

    Follow us
    ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
    ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
    ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
    ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
    ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
    ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
    ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
    ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
    ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
    ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
    ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
    ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
    ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
    ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
    ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
    ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
    ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
    ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
    ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
    ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ