ಬಾಂಗ್ಲಾ ವಿರುದ್ಧ ಅತ್ಯಲ್ಪ ಮೊತ್ತಕ್ಕೆ ಆಲೌಟ್; ಅವಮಾನಕರ ದಾಖಲೆ ಬರೆದ ಆಸ್ಟ್ರೇಲಿಯಾ

Australia vs Bangladesh Test: ಡಾರ್ವಿನ್‌ನಲ್ಲಿ ನಡೆದ ಆಸ್ಟ್ರೇಲಿಯಾ-ಬಾಂಗ್ಲಾದೇಶ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ ಕೇವಲ 198 ರನ್‌ಗಳಿಗೆ ಆಲೌಟ್ ಆಗಿ ಅಚ್ಚರಿ ಮೂಡಿಸಿದೆ. ವೇಗಿ ಹಸನ್ ಮಹಮೂದ್ 6 ವಿಕೆಟ್ ಪಡೆದು ಐತಿಹಾಸಿಕ ಸಾಧನೆ ಮಾಡಿದರು. ಇದು ಬಾಂಗ್ಲಾದೇಶ ವಿರುದ್ಧ ಆಸೀಸ್ ಗಳಿಸಿದ ಕನಿಷ್ಠ ಸ್ಕೋರ್ ಆಗಿದ್ದು, ತವರು ನೆಲದಲ್ಲಿ ಏಷ್ಯಾ ತಂಡದ ವಿರುದ್ಧದ ನಾಲ್ಕನೇ ಕನಿಷ್ಠ ಸ್ಕೋರ್ ಆಗಿದೆ. ಆಸ್ಟ್ರೇಲಿಯಾಕ್ಕೆ ಇದು ದೊಡ್ಡ ಆಘಾತ.

ಬಾಂಗ್ಲಾ ವಿರುದ್ಧ ಅತ್ಯಲ್ಪ ಮೊತ್ತಕ್ಕೆ ಆಲೌಟ್; ಅವಮಾನಕರ ದಾಖಲೆ ಬರೆದ ಆಸ್ಟ್ರೇಲಿಯಾ
Aus Vs Ban

Updated on: Aug 13, 2026 | 4:05 PM

ಡಾರ್ವಿನ್‌ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಆಸ್ಟ್ರೇಲಿಯಾ (Australia vs Bangladesh) ತಂಡಕ್ಕೆ ಬಾಂಗ್ಲಾದೇಶ ತಂಡದ ವೇಗಿಗಳು ಬಿಗ್ ಶಾಕ್ ನೀಡಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ಯಾಟ್ ಕಮ್ಮಿನ್ಸ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 198 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಸ್ಟೀವ್ ಸ್ಮಿತ್ 71 ರನ್​ಗಳ ಇನ್ನಿಂಗ್ಸ್ ಆಡಿದ್ದನ್ನು ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರಲಿಲ್ಲ. ಇತ್ತ ಬಾಂಗ್ಲಾದೇಶ ಪರ ಬೌಲಿಂಗ್​ನಲ್ಲಿ ಮಿಂಚಿದ ವೇಗಿ ಹಸನ್ ಮಹಮೂದ್ (Hasan Mahmud) ಬರೋಬ್ಬರಿ 6 ವಿಕೆಟ್​ಗಳ ಗೊಂಚಲು ಪಡೆದರು.

ಅತ್ಯಂತ ಕಡಿಮೆ ಸ್ಕೋರ್

ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ ಕಲೆಹಾಕಿದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. 2017 ರಲ್ಲಿ ಮಿರ್ಪುರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 217 ರನ್‌ ಕಲೆಹಾಕಿದ್ದು ಈ ಹಿಂದಿನ ಕನಿಷ್ಠ ಸ್ಕೋರ್ ಆಗಿತ್ತು. ಅಂದರೆ ಬರೋಬ್ಬರಿ 9 ವರ್ಷಗಳ ನಂತರ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶ ವಿರುದ್ಧ 200 ಕ್ಕೂ ಅಂದರೆ 198 ರನ್‌ಗೆ ಆಲೌಟ್ ಆಗುವ ಮೂಲಕ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಆಸ್ಟ್ರೇಲಿಯಾ 200 ರನ್‌ಗಳನ್ನು ಗಳಿಸಲು ವಿಫಲವಾಗಿರುವುದು ಇದೇ ಮೊದಲು.

ಹಸನ್ ಮಹಮೂದ್ ದಾಖಲೆ

ಇತ್ತ ಬೌಲಿಂಗ್‌ನಲ್ಲಿ ಮಿಂಚಿದ ಹಸನ್ ಮಹಮೂದ್ ಆಸ್ಟ್ರೇಲಿಯಾ ನೆಲದಲ್ಲಿ ಐದು ವಿಕೆಟ್ ಪಡೆದ ಮೊದಲ ಬಾಂಗ್ಲಾದೇಶ ಬೌಲರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು, ಮೊಹಮ್ಮದ್ ರಫೀಕ್ (5/62) ಮತ್ತು ಶಕೀಬ್ ಅಲ್ ಹಸನ್ (5/68) ಆಸೀಸ್ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದಿದ್ದರು. ಆದರೆ ಈ ದಾಖಲೆ ಬಾಂಗ್ಲಾ ನೆಲದಲ್ಲಿ ಸೃಷ್ಟಿಯಾಗಿತ್ತು. ಇದೀಗ ಆಸ್ಟ್ರೇಲಿಯಾದಲ್ಲಿ 6/55 ಪ್ರದರ್ಶನ ನೀಡುವ ಮೂಲಕ ಹಸನ್ ಮಹಮೂದ್ ಇತಿಹಾಸ ಸೃಷ್ಟಿಸಿದ್ದಾರೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಬಾಂಗ್ಲಾದೇಶದ ವೇಗದ ಬೌಲರ್‌ಗಳು ಟೆಸ್ಟ್‌ನಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು 2024 ರಲ್ಲಿ ರಾವಲ್ಪಿಂಡಿಯಲ್ಲಿ ನಡೆದ ಟೆಸ್ಟ್​ನಲ್ಲಿ ಪಾಕಿಸ್ತಾನ ವಿರುದ್ಧ ಈ ಸಾಧನೆ ಮಾಡಿದ್ದರು.

IND vs SL: ಟೆಸ್ಟ್‌ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸುವ ಹೊಸ್ತಿಲಲ್ಲಿ ಟೀಂ ಇಂಡಿಯಾ

ಏಷ್ಯಾದ ತಂಡಗಳ ವಿರುದ್ಧ 4ನೇ ಕನಿಷ್ಠ ಸ್ಕೋರ್

ಆಸ್ಟ್ರೇಲಿಯಾ ತವರು ನೆಲದಲ್ಲಿ ಬಲಿಷ್ಠ ತಂಡ ಎಂದು ಹೆಸರುವಾಸಿಯಾಗಿದೆ. ಆದಾಗ್ಯೂ ಏಷ್ಯಾ ಖಂಡದ ತಂಡಗಳ ವಿರುದ್ಧದ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ನಾಲ್ಕನೇ ಕನಿಷ್ಠ ಸ್ಕೋರ್ ಇದಾಗಿದೆ. 1981 ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ 83 ರನ್‌ಗೆ ಆಲೌಟ್ ಆಗಿತ್ತು. ಅದರ ನಂತರ, 2024 ರಲ್ಲಿ ಪರ್ತ್ ಪಂದ್ಯದಲ್ಲಿ ಅದೇ ಭಾರತದ ವಿರುದ್ಧ 104 ರನ್‌, 1973 ರಲ್ಲಿ ಸಿಡ್ನಿಯಲ್ಲಿ ಪಾಕಿಸ್ತಾನ ವಿರುದ್ಧ 184 ರನ್‌ಗೆ ಆಲೌಟ್ ಆಗಿತ್ತು. ಈಗ ಡಾರ್ವಿನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 198 ರನ್‌ಗೆ ಆಲೌಟ್ ಆಗುವ ಮೂಲಕ ಆಸ್ಟ್ರೇಲಿಯಾ ಹೊಸ ಅವಮಾನಕರ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Thu, 13 August 26

Loading...
Unable to load recommendations.
Follow Us