ಬಚ್ಚನ್ ಪಾಂಡೆ ಅವತಾರದಲ್ಲಿ ಕಾಣಿಸಿಕೊಂಡ ವಾರ್ನರ್-ಬ್ರಾವೋ

David Warner and Dwayne Bravo: ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಮುಂಬರುವ ಚಿತ್ರ ಬಚ್ಚನ್ ಪಾಂಡೆಯ ಹಾಡಿಗೆ ಡೇವಿಡ್ ವಾರ್ನರ್ ನೃತ್ಯ ಮಾಡಿದ್ದಾರೆ.

ಬಚ್ಚನ್ ಪಾಂಡೆ ಅವತಾರದಲ್ಲಿ ಕಾಣಿಸಿಕೊಂಡ ವಾರ್ನರ್-ಬ್ರಾವೋ
David Warner and Dwayne Bravo
Updated By: ಝಾಹಿರ್ ಯೂಸುಫ್

Updated on: Mar 02, 2022 | 3:22 PM

ಭಾರತೀಯ ಚಿತ್ರಗೀತೆಗಳಿಗೆ ವಿದೇಶಿ ಕ್ರಿಕೆಟಿಗರು ಮಾರು ಹೋಗಿರುವುದು ಗೊತ್ತೇ ಇದೆ. ಅದರಲ್ಲೂ ಇತ್ತೀಚೆಗೆಷ್ಟೇ ಬಿಡುಗಡೆಯಾಗಿದ್ದ ಪುಷ್ಫ ಸಿನಿಮಾ ಕ್ರಿಕೆಟಿಗರಲ್ಲಿ ಹೊಸ ಕ್ರೇಜ್ ಹುಟ್ಟುಹಾಕಿತ್ತು. ಮೈದಾನದಲ್ಲೇ ಆಟಗಾರರು ಪುಷ್ಫ ಚಿತ್ರದ ಹಾಡಿನ ಸ್ಟೆಪ್​ಗಳನ್ನು ಹಾಕಿ ಮೋಡಿ ಮಾಡಿದ್ದರು. ಇಂತಹದೊಂದು ಟ್ರೆಂಡ್ ಹುಟ್ಟುಹಾಕಿದ್ದು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ (David Warner) ಎಂದರೆ ತಪ್ಪಾಗಲಾರದು. ಏಕೆಂದರೆ ವಾರ್ನರ್ ಈ ಹಿಂದೆ ಎಸ್​ಆರ್​ಹೆಚ್ ತಂಡದಲ್ಲಿದ್ದ ವೇಳೆ ತೆಲುಗು ಹಾಡುಗಳಿಗೆ ಸ್ಟೆಪ್ ಹಾಕುವ ಮೂಲಕ ಗಮನ ಸೆಳೆದಿದ್ದರು. ಇದೀಗ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ಇದರೊಂದಿಗೆ ಹಾಡುಗಳು ಕೂಡ ಬದಲಾಗಿದೆ. ಏಕೆಂದರೆ ಈ ಬಾರಿ ವಾರ್ನರ್ ಬಚ್ಚನ್ ಪಾಂಡೆ (Bachchhan Paandey) ಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಮುಂಬರುವ ಚಿತ್ರ ಬಚ್ಚನ್ ಪಾಂಡೆಯ ಹಾಡಿಗೆ ಡೇವಿಡ್ ವಾರ್ನರ್ ನೃತ್ಯ ಮಾಡಿದ್ದಾರೆ. ಈ ವಿಡಿಯೋವನ್ನು ವಾರ್ನರ್ ಇನ್‌ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು, ಮಾರ್ ಖಯೇಗಾ ಹಾಡಿನ ಹುಕ್ ಸ್ಟೆಪ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿನ ಅಕ್ಷಯ್ ಪಾತ್ರದಂತೆಯೇ ತಮ್ಮ ಕಣ್ಣುಗಳಿಗೆ ಫಿಲ್ಟರ್ ಎಫೆಕ್ಟ್ ನೀಡಿರುವ ವಾರ್ನರ್ ಭಯಾನಕವಾಗಿ ರಂಜಿಸಿದ್ದಾರೆ. ಈಗಾಗಲೇ ಈ ವೀಡಿಯೊಮೂರು ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಮತ್ತೊಂದೆಡೆ ಇದೇ ಹಾಡಿಗೆ ವೆಸ್ಟ್ ಇಂಡೀಸ್​ ಆಲ್​ರೌಂಡರ್ ಡ್ವೇನ್ ಬ್ರಾವೋ ಕೂಡ ಸ್ಟೆಪ್ ಹಾಕಿದ್ದಾರೆ. “ಚಾಂಪಿಯನ್ ಅಕ್ಷಯ್ ಕುಮಾರ್ ಅವರನ್ನು ಎದುರಿಸಲು ಸಿದ್ಧವಾಗಿದ್ದೇನೆ. ಈ ಪವರ್ ಹಿಟ್ ಅನ್ನು ಸ್ವಲ್ಪ ಆನಂದಿಸಿದೆ!” ಎಂದು ಬ್ರಾವೊ ಶೀರ್ಷಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಡೇವಿಡ್ ವಾರ್ನರ್ ಹಾಗೂ ಬ್ರಾವೋ ಮಾಡಿರುವ ಬಚ್ಚನ್ ಪಾಂಡೆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(David Warner and Dwayne Bravo dance to Akshay Kumar’s Bachchhan Paandey song)