Rohit Sharma: ಟೀಂ ಇಂಡಿಯಾ ಜೆರ್ಸಿ ಬಣ್ಣದ ಐಷರಾಮಿ ಕಾರು ಖರೀದಿಸಿದ ರೋಹಿತ್; ಬೆಲೆ ಕೇಳಿದ್ರೆ ಪಕ್ಕ ಶಾಕ್ ಆಗ್ತೀರಾ?

Rohit Sharma: ಇದು 22-ಇಂಚಿನ ಡೈಮಂಡ್ ಕಟ್ ರಿಮ್‌ಗಳೊಂದಿಗೆ ಸ್ಪೋರ್ಟಿ ಲೆದರ್ ಒಳಾಂಗಣವನ್ನು ಹೊಂದಿದೆ. ಈ ಕಾರನ್ನು ಹೊಂದಿರುವ ದೇಶದ ಕೆಲವೇ ಜನರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ರೋಹಿತ್ ಶರ್ಮಾ ಕಾರಿನ ಒಳಭಾಗವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ.

Rohit Sharma: ಟೀಂ ಇಂಡಿಯಾ ಜೆರ್ಸಿ ಬಣ್ಣದ ಐಷರಾಮಿ ಕಾರು ಖರೀದಿಸಿದ ರೋಹಿತ್; ಬೆಲೆ ಕೇಳಿದ್ರೆ ಪಕ್ಕ ಶಾಕ್ ಆಗ್ತೀರಾ?
ರೋಹಿತ್ ಹೊಸ ಕಾರು
Follow us
TV9 Web
| Updated By: ಪೃಥ್ವಿಶಂಕರ

Updated on: Mar 02, 2022 | 4:32 PM

ರೋಹಿತ್ ಶರ್ಮಾ (Rohit Sharma) ಟೀಂ ಇಂಡಿಯಾದ ಪೂರ್ಣಾವಧಿ ನಾಯಕರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಭಾರತ ಗೆಲುವಿನ ನಾಗಾಲೋಟದಲ್ಲಿದೆ. ರೋಹಿತ್ ಶರ್ಮಾ ಈಗ ಭಾರತೀಯ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳ ನಾಯಕರಾಗಿದ್ದಾರೆ. ಈ ನಡುವೆ ಟೀಂ ಇಂಡಿಯಾದ ನೂತನ ನಾಯಕ ಹೊಸ ಐಷಾರಾಮಿ ಕಾರು ಖರೀದಿಸಿದ್ದಾರೆ. ಈ ಕಾರಿನ ಬೆಲೆ ಕೋಟಿಗಟ್ಟಲೆ ಇದೆ. ವರದಿಗಳ ಪ್ರಕಾರ, ರೋಹಿತ್ ಶರ್ಮಾ ಹೊಸ ಲಂಬೋರ್ಗಿನಿ ಉರಸ್ ಐಷಾರಾಮಿ ಕಾರನ್ನು (Lamborghini Urus luxury car) ಖರೀದಿಸಿದ್ದಾರೆ. ವಿಶೇಷವೆಂದರೆ ಈ ಕಾರಿನ ಬಣ್ಣ ಟೀಂ ಇಂಡಿಯಾ (Team India)ದ ಜೆರ್ಸಿಗೆ ಹೊಲಿಕೆಯಾಗುವ ನೀಲಿ ಬಣ್ಣ ಹೊಂದಿದೆ. ರೋಹಿತ್ ಶರ್ಮಾ ಅವರ ಹೊಸ ಐಷಾರಾಮಿ ಕಾರಿನ ಬೆಲೆ ಬರೋಬ್ಬರಿ 3.10 ಕೋಟಿ ರೂ. ಎಂದು ತಿಳಿದುಬಂದಿದೆ.

ರೋಹಿತ್ ಶರ್ಮಾಗೆ ಐಷರಾಮಿ ಕಾರುಗಳೆಂದರೆ ಎಂದರೆ ತುಂಬಾ ಇಷ್ಟ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇದೀಗ ಈ ಹೊಸ ಐಷಾರಾಮಿ ಕಾರು ಟೀಂ ಇಂಡಿಯಾ ನಾಯಕನ ಗ್ಯಾರೇಜ್‌ಗೂ ಬಂದಿದೆ. ರೋಹಿತ್ ಶರ್ಮಾ ತಮ್ಮ ಇಚ್ಛೆಯಂತೆ ಈ ಹೊಸ ಕಾರಿಗೆ ಕೆಲವು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದ್ದಾರೆ.

ಕಾರಿನ ವಿಶೇಷತೆ

ಇದು 22-ಇಂಚಿನ ಡೈಮಂಡ್ ಕಟ್ ರಿಮ್‌ಗಳೊಂದಿಗೆ ಸ್ಪೋರ್ಟಿ ಲೆದರ್ ಒಳಾಂಗಣವನ್ನು ಹೊಂದಿದೆ. ಈ ಕಾರನ್ನು ಹೊಂದಿರುವ ದೇಶದ ಕೆಲವೇ ಜನರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ರೋಹಿತ್ ಶರ್ಮಾ ಕಾರಿನ ಒಳಭಾಗವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ. ಕೆಂಪು-ಕಪ್ಪು ಕ್ಯಾಬಿನ್ ಸೇರಿದಂತೆ ವಾಹನದ ಡ್ಯಾಶ್‌ಬೋರ್ಡ್ ಕೂಡ ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಚಿತ್ರಿಸಲಾಗಿದೆ.

ರೋಹಿತ್ ನಾಯಕನಾದ ಬಳಿಕ

ರೋಹಿತ್ ಶರ್ಮಾ ಟಿ20 ನಂತರ ಇದೀಗ ಏಕದಿನ ಹಾಗೂ ಟೆಸ್ಟ್ ತಂಡಗಳಿಗೂ ನಾಯಕತ್ವ ವಹಿಸಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟಿ20 ಮತ್ತು ಏಕದಿನ ವಿಶ್ವಕಪ್ ಆಡಲಿದೆ. ಅವರು ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸಲಿದ್ದಾರೆ. ಟೀಂ ಇಂಡಿಯಾದ ಪೂರ್ಣಾವಧಿ ನಾಯಕನಾದ ನಂತರ ರೋಹಿತ್ ಶರ್ಮಾ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ.

ಇದನ್ನೂ ಓದಿ:Rohit Sharma: ಗೆಲುವಿನೊಂದಿಗೆ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್ ಶರ್ಮಾ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್