ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ (IPL 2021) ರೋಚಕ ಘಟ್ಟದತ್ತ ಸಾಗುತ್ತಿದೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ (CSK) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಪ್ಲೇ ಆಫ್ ಸುತ್ತು ಪ್ರವೇಶಿಸಿದ್ದು ಅಧಿಕೃತ ಘೋಷಣೆಯಾಗಬೇಕಷ್ಟೆ. ಸದ್ಯ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಎಲ್ಲಿಲ್ಲದ ಪೈಪೋಟಿ ಏರ್ಪಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 12 ಅಂಕ ಸಂಪಾದಿಸಿದ್ದರೆ, ಕೆಕೆಆರ್ (KKR), ಪಂಜಾಬ್ (PBKS), ಆರ್ಆರ್ (RR) ಮತ್ತು ಮುಂಬೈ (Mumbai Indians) 8 ಅಂಕಗಳಲ್ಲಿದ್ದು ಮುಂದಿನ ಪಂದ್ಯಗಳು ಕುತೂಹಲ ಕೆರಳಿಸಿವೆ. ಇದರ ನಡುವೆ ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಹೀಗಿರುವಾಗ ಕೇನ್ ವಿಲಿಯಮ್ಸನ್ ಪಡೆ ಶಾಕಿಂಗ್ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಇದರಿಂದ ಎಸ್ಆರ್ಹೆಚ್ (SRH) ಅಭಿಮಾನಿಗಳಿಗೆ ತುಂಬಾನೇ ಬೇಸರವಾಗಿದೆ.
ಹೌದು, ಸನ್ರೈಸರ್ಸ್ ತಂಡದ ಸ್ಟಾರ್ ಹಿರಿಯ ಆಟಗಾರರಾದ ಡೇವಿಡ್ ವಾರ್ನರ್, ಕನ್ನಡಿಗ ಮನೀಶ್ ಪಾಂಡೆ ಮತ್ತು ಕೇದರ್ ಜಾಧವ್ ಇನ್ನುಂದೆ ಐಪಿಎಲ್ 2021 ರಲ್ಲಿ ಹೈದರಾಬಾದ್ ಪರ ಕಾಣಿಸಿಕೊಳ್ಳುವುದು ಅನುಮಾನ. ಎಸ್ಆರ್ಹೆಚ್ ಪರ ಈ ಮೂವರು ಆಟಗಾರರ ಆಟ ಅಂತ್ಯವಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ತಂಡದ ಕೋಚ್ ಕೂಡ ಸುಳಿವು ನೀಡಿದ್ದಾರೆ.
ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ವಾರ್ನರ್, ಮನೀಶ್ ಮತ್ತು ಜಾಧವ್ಗೆ ಆಡುವ ಬಳಗದಲ್ಲಿ ಸ್ಥಾನ ನೀಡಲಾಗಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ಆಡಿದ 10 ಪಂದ್ಯಗಳ ಪೈಕಿ ಹೈದರಾಬಾದ್ ಗೆದ್ದಿರುವುದು ಕೇವಲ ಎರಡು ಪಂದ್ಯವನ್ನು ಮಾತ್ರ ಎಂಟು ಮ್ಯಾಚ್ನಲ್ಲಿ ಸೋಲು ಕಂಡಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲೂ ಪಾಂಡೆ, ವಾರ್ನರ್ ಹಾಗೂ ಜಾಧವ್ ಹಿರಿಯ ಅನುಭವಿ ಆಟಗಾರರಾಗಿ ತಮ್ಮ ಕರ್ತವ್ಯ ನಿಭಾಯಿಸಿಲ್ಲ.
ಸದ್ಯ ಈ ಮೂವರು ಆಟಗಾರರನ್ನು ಹೈದರಾಬಾದ್ ತಂಡ ಮುಂದಿನ ಪಂದ್ಯಗಳಲ್ಲಿ ಕಣಕ್ಕಿಳಿಸುವುದಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ನಾಯಕ ಕೇನ್ ವಿಲಿಯಮ್ಸನ್ ಕೂಡ ರಾಜಸ್ಥಾನ್ ವಿರುದ್ಧದ ಪಂದ್ಯದ ವೇಳೆ ಒಂದು ಮಾತನ್ನು ಹೇಳಿದ್ದರು. ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡುವತ್ತ ನಾವು ಗಮನ ಹರಿಸುತ್ತಿದ್ದೇವೆ. ಅವರು ಕೂಡ ಆಡಲು ಕಾದು ಕುಳಿತಿದ್ದಾರೆ. ಹೀಗಾಗಿ ಪಾಂಡೆ, ವಾರ್ನರ್ ಮತ್ತು ಜಾಧವ್ರನ್ನು ತಂಡದ ಆಡುವ ಬಳಗದಿಂದ ಕೈಬಿಡಲಾಗಿದೆ ಎಂದು ಹೇಳಿದ್ದರು.
ಕಳೆದ ಎರಡು ಪಂದ್ಯಗಳಲ್ಲಿ 0 ಮತ್ತು 2 ರನ್ ಗಳಿಸಿದ್ದ ವಾರ್ನರ್ರನ್ನು ಕೈಬಿಟ್ಟು ರಾಜಸ್ಥಾನ್ ವಿರುದ್ಧ ಜೇಸನ್ ರಾಯ್ರನ್ನು ಕಣಕ್ಕಿಳಿಸಲಾಗಿತ್ತು. ಇವರು ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟು ಪಂದ್ರಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು. ಇನ್ನೂ ಪಾಂಡೆ ಬದಲು ಅಭಿಷೇಕ್ ಶರ್ಮಾ ಮತ್ತು ಕೇದರ್ ಜಾಧವ್ ಬದಲು ಪ್ರಿಯಂ ಗರ್ಗ್ಗೆ ಅವಕಾಶ ನೀಡಲಾಗಿತ್ತು.
ಐಪಿಎಲ್ 2021 ಟೂರ್ನಿಯಿಂದ ಹೊರಬೀಳಲಿರುವ ಹೈದರಾಬಾದ್ಗೆ ಇನ್ನು ನಾಲ್ಕು ಪಂದ್ಯಗಳು ಬಾಕಿ ಉಳಿದಿವೆ. ಸೋಮವಾರ ಆರ್ಆರ್ ವಿರುದ್ಧದ ಪಂದ್ಯದಲ್ಲಿ ಕೇನ್ ಪಡೆ ಗೆಲುವು ಸಾಧಿಸಿದೆ. ಹೀಗಾಗಿ ಮುಂದಿನ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡುವುದು ಅನುಮಾನ. ಇದರಿಂದ ಈ ಮೂವರು ಆಟಗಾರರು ಮೆಗಾ ಹರಾಜಿಗೂ ಮುನ್ನವೇ ತಂಡದಿಂದ ಹೊರಬಿದ್ದಂತಾಗಿದೆ. ಅದರಲ್ಲೂ ವಾರ್ನರ್ ಎಸ್ಆರ್ಹೆಚ್ ಫ್ರಾಂಚೈಸಿಯಿಂದ ಹೊರಬರುವುದು ಖಚಿತವಾಗಿದೆ.
India T20 World cup: ಭಾರತ ಟಿ-20 ವಿಶ್ವಕಪ್ ತಂಡದಲ್ಲಿ ದೊಡ್ಡ ಬದಲಾವಣೆ: ಹೊಸದಾಗಿ ಸೇರಲಿದ್ದಾರೆ ಈ ಆಟಗಾರರು?
MI vs PBKS, IPL 2021: ಗೆಲ್ಲಲೇ ಬೇಕಾದ ಪಂದ್ಯಕ್ಕೆ ಮುಂಬೈ ತಂಡದಲ್ಲಿ ಬದಲಾವಣೆ ಖಚಿತ: ಯಾವ ಆಟಗಾರ ಹೊಸ ಸೇರ್ಪಡೆ?
(David Warner Manish Pandey and Kedar Jadhav are unlikely to play in the SRH rest of IPL 2021)