David Warner: ಡೇವಿಡ್ ವಾರ್ನರ್ ವಿದಾಯಕ್ಕೆ ಮುನ್ನುಡಿ: ಮೊದಲ ಟೆಸ್ಟ್​ಗೆ ಆಯ್ಕೆ

| Updated By: ಝಾಹಿರ್ ಯೂಸುಫ್

Updated on: Dec 03, 2023 | 3:48 PM

Australia vs Pakistan: ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ಆಸ್ಟ್ರೇಲಿಯಾ ತಂಡದಲ್ಲಿ ಬಲಿಷ್ಠ ಆಟಗಾರರೇ ದಂಡೇ ಇದೆ. ಈ ತಂಡವನ್ನು ಆಲ್​ರೌಂಡರ್ ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದಾರೆ. ಇನ್ನು ಆರಂಭಿಕರಾಗಿ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಕಣಕ್ಕಿಳಿಯುವ ಸಾಧ್ಯತೆಯಿದೆ.

David Warner: ಡೇವಿಡ್ ವಾರ್ನರ್ ವಿದಾಯಕ್ಕೆ ಮುನ್ನುಡಿ: ಮೊದಲ ಟೆಸ್ಟ್​ಗೆ ಆಯ್ಕೆ
David Warner
Follow us on

ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ (Australia vs Pakistan) ನಡುವಣ ಟೆಸ್ಟ್ ಸರಣಿಯು ಡಿಸೆಂಬರ್ 14 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್​ಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದೆ. 14 ಸದಸ್ಯರ ಈ ತಂಡದಲ್ಲಿ ಹಿರಿಯ ಆರಂಭಿಕ ಆಟಗಾರ ಡೇವಿಡ್ ವಾರ್ನರ್​ಗೆ (David Warner) ಅವಕಾಶ ನೀಡಲಾಗಿದೆ. ಇದರೊಂದಿಗೆ ಈ ಸರಣಿ ಮೂಲಕ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳುವುದು ಖಚಿತವಾಗಿದೆ.

ಈ ಸರಣಿಯ ಮೊದಲ ಪಂದ್ಯವು ಪರ್ತ್​ನಲ್ಲಿ ನಡೆಯಲಿದ್ದು, ಇದಾದ ಬಳಿಕ ಮೆಲ್ಬೋರ್ನ್​ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಜರುಗಲಿದೆ. ಇನ್ನು ಮೂರನೇ ಟೆಸ್ಟ್ ಪಂದ್ಯಕ್ಕೆ ಸಿಡ್ನಿಯ ಎಸ್​ಸಿಜಿ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಜನವರಿ 3 ರಿಂದ ತವರಿನಲ್ಲಿ ಶುರುವಾಗಲಿರುವ ಮೂರನೇ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್​ ವಿದಾಯ ಹೇಳುವ ಇರಾದೆಯಲ್ಲಿದ್ದಾರೆ ಡೇವಿಡ್ ವಾರ್ನರ್. ಇದೇ ಕಾರಣದಿಂದಾಗಿ ಇದೀಗ ಸ್ಟಾರ್ ಆಟಗಾರನಿಗೆ ಮೊದಲ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಲಾಗಿದೆ. ಅಲ್ಲದೆ ಸಿಡ್ನಿ ಟೆಸ್ಟ್​ನಲ್ಲೂ ವಾರ್ನರ್ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.

ಬಲಿಷ್ಠ ಆಸೀಸ್ ಪಡೆ:

ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಲಾದ ಆಸ್ಟ್ರೇಲಿಯಾ ತಂಡದಲ್ಲಿ ಬಲಿಷ್ಠ ಆಟಗಾರರೇ ದಂಡೇ ಇದೆ. ಈ ತಂಡವನ್ನು ಆಲ್​ರೌಂಡರ್ ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದಾರೆ. ಇನ್ನು ಆರಂಭಿಕರಾಗಿ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖ್ವಾಜಾ ಕಣಕ್ಕಿಳಿಯುವ ಸಾಧ್ಯತೆಯಿದೆ. ಹಾಗೆಯೇ ತಂಡದಲ್ಲಿ ವೇಗಿಗಳಾಗಿ ಮಿಚೆಲ್ ಸ್ಟಾರ್ಕ್​, ಜೋಶ್ ಹ್ಯಾಝಲ್​ವುಡ್, ಸ್ಕಾಟ್​ ಬೋಲ್ಯಾಂಡ್​ ಇದ್ದರೆ, ಸ್ಪಿನ್ನರ್ ಆಗಿ ನಾಥನ್ ಲಿಯಾನ್ ಕಾಣಿಸಿಕೊಂಡಿದ್ದಾರೆ. ಅದರಂತೆ ಆಸ್ಟ್ರೇಲಿಯಾ ತಂಡ ಹೀಗಿದೆ.

ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಹ್ಯಾಝಲ್​ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಲ್ಯಾನ್ಸ್ ಮೋರಿಸ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.

ಇದನ್ನೂ ಓದಿ: 8ನೇ ಬಾರಿ ರನ್ ಸರದಾರ…ಸಚಿನ್ ವಿಶ್ವ ದಾಖಲೆ ಮುರಿದ ಕಿಂಗ್ ಕೊಹ್ಲಿ

ಆಸ್ಟ್ರೇಲಿಯಾ-ಪಾಕಿಸ್ತಾನ್ ಟೆಸ್ಟ್ ಸರಣಿ ವೇಳಾಪಟ್ಟಿ:

  1. ಮೊದಲ ಟೆಸ್ಟ್ ಪಂದ್ಯ- ಡಿಸೆಂಬರ್ 14 ರಿಂದ 18 (ಪರ್ತ್​)
  2. ಎರಡನೇ ಟೆಸ್ಟ್ ಪಂದ್ಯ- ಡಿಸೆಂಬರ್ 26 ರಿಂದ 30 (ಪರ್ತ್​)
  3. ಮೂರನೇ ಟೆಸ್ಟ್ ಪಂದ್ಯ- ಜನವರಿ 3 ರಿಂದ 7 (ಪರ್ತ್​)