ಚಂಡೀಗಢದಲ್ಲಿ ತಯಾರಾಯಿತು ಮನಮೋಹಕ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ: ಹೇಗಿದೆ ನೋಡಿ

ಚಂಡೀಗಢದಲ್ಲಿ ತಯಾರಾಯಿತು ಮನಮೋಹಕ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ: ಹೇಗಿದೆ ನೋಡಿ

Vinay Bhat
|

Updated on: Dec 03, 2023 | 12:43 PM

Maharaja Yadavindra Singh Punjab Cricket Association: ಮಹಾರಾಜ ಯಾದವೀಂದ್ರ ಸಿಂಗ್ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ​​(ಪಿಸಿಎ) ಸ್ಟೇಡಿಯಂನಲ್ಲಿ 33,000 ಪ್ರೇಕ್ಷಕರ ಸಾಮರ್ಥ್ಯವಿರುವ ಆಸನ ವ್ಯವಸ್ಥೆ ಇದೆ. ಕ್ರೀಡಾಂಗಣವು ಸುಸಜ್ಜಿತ ಹೆರಿಂಗ್‌ಬೋನ್ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದೆ. ಇದು ಮಳೆ ನಿಂತ ನಂತರ 25-30 ನಿಮಿಷಗಳಲ್ಲಿ ನೀರನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

2010ರಲ್ಲಿ ಘೋಷಣೆಯಾದ ಮುಲ್ಲನ್‌ಪುರದ ಅಂತರರಾಷ್ಟ್ರೀಯ ಕ್ರೀಡಾಂಗಣದ ಕೆಲಸ ಇದೀಗ ಬಹುತೇಕ ಪೂರ್ಣಗೊಂಡಿದೆ. ಮಹಾರಾಜ ಯಾದವೀಂದ್ರ ಸಿಂಗ್ ಪಂಜಾಬ್ ಕ್ರಿಕೆಟ್ (Punjab Cricket) ಅಸೋಸಿಯೇಷನ್ ​​(ಪಿಸಿಎ) ಸ್ಟೇಡಿಯಂ ಹಲವಾರು ಅಡೆತಡೆಗಳನ್ನು ದಾಟಿ ಮನಮೋಹಕವಾಗಿ ರೂಪುಗೊಂಡಿದೆ. ಈ ಕ್ರೀಡಾಂಗಣವು ಅಕ್ಟೋಬರ್‌ನಿಂದ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲು ಸಿದ್ಧವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಪೂರ್ಣ ಕೆಲಸ ಆಗದ ಕಾರಣ ವಿಶ್ವಕಪ್ ಆಯೋಜನೆ ಮಾಡಲಾಗಿಲ್ಲ. ಇಲ್ಲಿ 33,000 ಪ್ರೇಕ್ಷಕರ ಸಾಮರ್ಥ್ಯವಿರುವ ಆಸನ ವ್ಯವಸ್ಥೆ ಇದೆ. ಏಳು ಪಿಚ್‌ಗಳನ್ನು ಹೊಂದಿರುವ ಕ್ರೀಡಾಂಗಣದಲ್ಲಿ ಈಗಾಗಲೇ ಅಂಡರ್-16, ಅಂಡರ್-19, ಅಂಡರ್-25 ಪಂದ್ಯಗಳು ನಡೆದಿವೆ. ಕ್ರೀಡಾಂಗಣವು ಸುಸಜ್ಜಿತ ಹೆರಿಂಗ್‌ಬೋನ್ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದೆ. ಇದು ಮಳೆ ನಿಂತ ನಂತರ 25-30 ನಿಮಿಷಗಳಲ್ಲಿ ನೀರನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸಾಂಪ್ರದಾಯಿಕ ಮಣ್ಣನ್ನು ಬಳಸುವ ಬದಲು, ನೆಲವನ್ನು ಮರಳಿನಿಂದ ತಯಾರಿಸಲಾಗಿದೆ. ಎರಡು ಅಂತರರಾಷ್ಟ್ರೀಯ ಗುಣಮಟ್ಟದ ಡ್ರೆಸ್ಸಿಂಗ್ ಕೊಠಡಿಗಳನ್ನು ಹೊಂದಿದ್ದು, ವಿಶ್ವ ದರ್ಜೆಯ ಜಿಮ್ ಅನ್ನು ಸಹ ಸ್ಥಾಪಿಸಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ