ಐಪಿಎಲ್ 2024ರ ಈ ಆವೃತ್ತಿಯ 13ನೇ ಪಂದ್ಯದಲ್ಲಿ ಭಾನುವಾರ ವಿಶಾಖಪಟ್ಟಣಂ ಮೈದಾನದಲ್ಲಿ ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾದವು. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಪಂದ್ಯದ ಕೆಲವು ಕ್ಷಣಗಳು ಇದೀಗ ಭಾರಿ ಚರ್ಚೆ ಹುಟ್ಟುಹಾಕಿವೆ. ಅದರಲ್ಲೂ ಇಂದಿನ ಪಂದ್ಯದಲ್ಲಿ ಸಿಎಸ್‌ಕೆಯ ವೇಗಿ ಮಥೀಶ ಪತಿರಾನ (Matheesha Pathirana) ಅವರು ಒಂದೇ ಕೈಯಿಂದ ಹಿಡಿದ ಅದೊಂದು ಅದ್ಭುತವಾದ ಕ್ಯಾಚ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಸದ್ಯ ಪತಿರಾನ ಅವರ ಕ್ಯಾಚ್ ಈ ಆವೃತ್ತಿಯಲ್ಲಿನ ಇದುವರೆಗಿನ ‘ಅತ್ಯುತ್ತಮ ಕ್ಯಾಚ್’ ಎಂದು ಹೇಳಲಾಗುತ್ತಿದೆ.
ಬ್ಯಾಟಿಂಗ್ ಆರಂಭಿಸಿದ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಜೋಡಿಯು ಮೊದಲಿಗೆ ಉತ್ತಮ ಪ್ರದರ್ಶನ ನೀಡಿದರು. ಇಬ್ಬರೂ ಬ್ಯಾಟಿಂಗ್ ಪವರ್‌ಪ್ಲೇ ಒಳಗೆ 62 ರನ್ ಗಳಿಸುವಲ್ಲಿ ಯಶಸ್ವಿಯಾದರು. ಹಾಫ್ ಸೆಂಚುರಿ ಹೊಡೆದ ಡೇವಿಡ್ ವಾರ್ನರ್ ಮುಸ್ತಾಫಿಜುರ್ ಎಸೆದ ಚೆಂಡನ್ನು ಹಿಂಬದಿಗೆ ಹೊಡೆದರು. ಈ ವೇಳೆ ಅಲ್ಲೇ ಇದ್ದ ಪತಿರಾನ ಗಾಳಿಯಲ್ಲಿ ಹಾರಿ ಒಂದೇ ಕೈಯಿಂದ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ವಾರ್ನರ್ ಅವರ ವಿಕೆಟ್ ಪತನಗೊಳಿಸಿದರು.
𝗦𝗧𝗨𝗡𝗡𝗘𝗥 🤩
Matheesha Pathirana takes a one hand diving catch to dismiss David Warner who was on song tonight
Watch the match LIVE on @JioCinema and @StarSportsIndia 💻📱#TATAIPL | #DCvCSK | @ChennaiIPL pic.twitter.com/sto5tnnYaj
— IndianPremierLeague (@IPL) March 31, 2024
ಮಥೀಶ ಪತಿರಾನ ಹಿಡಿದ ಕ್ಯಾಚ್ಗೆ ಎಂಎಸ್ ಧೋನಿ ಚಪ್ಪಾಳೆ ತಟ್ಟುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಅವರ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: IPL 2024: ವಾರ್ನರ್ ಸಿಡಿಲಬ್ಬರಕ್ಕೆ ಹಳೆಯ ದಾಖಲೆಗಳೆಲ್ಲ ಉಡೀಸ್..!
9 ಓವರಗಳಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡ ಕೇವಲ ಒಂದು ವಿಕೆಟ್ ನಷ್ಟಕ್ಕೆ 90 ರನ್ಗಳನ್ನು ಗಳಿಸಿತ್ತು. ಇತ್ತ ಡೇವಿಡ್ ವಾರ್ನರ್ 32 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ, ಮುಂದಿನ ಓವರ್‌ನಲ್ಲಿ ಪತಿರಾನ ಅವರ ಅದ್ಭುತ ಕ್ಯಾಚ್‌ನಿಂದ ವಾರ್ನರ್ ಔಟಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.