
ಐಪಿಎಲ್ನ 59 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 31 ರನ್ಗಳಿಂದ ಮಣಿಸಿದ ಪಂಜಾಬ್ ಕಿಂಗ್ಸ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉಭಯ ತಂಡಗಳ ಆಟಗಾರರು ಅಮೋಘ ಆಟ ಪ್ರದರ್ಶಿಸಿದರು. 20 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ ತಂಡ ಪ್ರಭ್ಸಿಮ್ರಾನ್ರ ಅಬ್ಬರದ ಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 167 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. 168 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಶಕ್ತವಾಯಿತು.
ಆರಂಭದಲ್ಲಿ ಸುಲಭವಾಗಿ ಗುರಿ ಬೆನ್ನಟ್ಟುತ್ತಿದ್ದ ಡೆಲ್ಲಿ ಮಧ್ಯಮ ಓವರ್‌ಗಳಲ್ಲಿ ಗಣನೀಯವಾಗಿ ವಿಕೆಟ್ ಕಳೆದುಕೊಂಡ ಫಲವಾಗಿ ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 136 ರನ್ ಗಳಿಸಲಷ್ಟೇ ಶಕ್ತವಾಗಿ 31 ರನ್ಗಳಿಂದ ಸೋಲೊಪ್ಪಿಕೊಂಡಿತು.
ಡೆಲ್ಲಿ ಇನ್ನಿಂಗ್ಸ್ನ 17 ಓವರ್ ಮುಗಿದಿದ್ದು ತಂಡದ ಗೆಲುವಿಗೆ 18 ಎಸೆತಗಳಲ್ಲಿ 47 ರನ್ ಬೇಕು
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಏಳನೇ ವಿಕೆಟ್ ಪತನಗೊಂಡಿದೆ. ಅಮನ್ ಖಾನ್ ಔಟಾದರು.16ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅಮನ್ ಕ್ಯಾಚ್ ನೀಡಿದರು.
ಅಮನ್ ಖಾನ್ – 16 ರನ್, 18 ಎಸೆತಗಳು 1×4 1×6
14ನೇ ಓವರ್‌ನ ಕೊನೆಯ ಎಸೆತವನ್ನು ಬೌಂಡರಿಗಟ್ಟಿದ ಅಮನ್ ಡೆಲ್ಲಿ ಮೊತ್ತವನ್ನು 100ರ ಗಡಿ ದಾಟಿಸಿದರು.
ಚಹರ್ ಬೌಲ್ ಮಾಡಿದ 11ನೇ ಓವರ್‌ನ ಮೊದಲ ಎಸೆತದಲ್ಲೇ ಅಮನ್ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಬೌಂಡರಿ ಬಾರಿಸಿದರು.
ಡೆಲ್ಲಿಯ ಮತ್ತೊಂದು ವಿಕೆಟ್ ಬಿದ್ದಿದೆ. ಮನೀಶ್ ಪಾಂಡೆ ಔಟಾಗಿದ್ದಾರೆ. ಹರ್‌ಪ್ರೀತ್ 11ನೇ ಓವರ್‌ನ ಮೊದಲ ಎಸೆತದಲ್ಲಿ ಮನೀಷ್ ಬೌಲ್ಡ್ ಆದರು.
ದೆಹಲಿಯ ಐದನೇ ವಿಕೆಟ್ ಪತನಗೊಂಡಿದೆ. ಅಕ್ಷರ್ ಪಟೇಲ್ ಕೂಡ ಔಟಾಗಿದ್ದಾರೆ. 10ನೇ ಓವರ್‌ನ ಮೊದಲ ಎಸೆತದಲ್ಲಿ ರಾಹುಲ್ ಚಹಾರ್ ಅವರನ್ನು ಎಲ್‌ಬಿಡಬ್ಲ್ಯೂ ಮಾಡಿದರು.
ಅಕ್ಷರ್ ಪಟೇಲ್ – 1 ರನ್, 2 ಎಸೆತಗಳು
ದೆಹಲಿಗೆ ದೊಡ್ಡ ಹೊಡೆತ ಬಿದ್ದಿದೆ. ಡೇವಿಡ್ ವಾರ್ನರ್ ಔಟಾಗಿದ್ದಾರೆ. ಒಂಬತ್ತನೇ ಓವರ್‌ನ ಕೊನೆಯ ಎಸೆತದಲ್ಲಿ ಹರ್‌ಪ್ರೀತ್ ವಾರ್ನರ್ ಅವರನ್ನು ಎಲ್ಬಿ ಬಲೆಗೆ ಬೀಳಿಸಿದರು.
ಡೇವಿಡ್ ವಾರ್ನರ್ – 54 ರನ್, 27 ಎಸೆತಗಳು 10×4 1×6
ದೆಹಲಿಯ ಮೂರನೇ ವಿಕೆಟ್ ಪತನವಾಯಿತು. ರಿಲೆ ರುಸ್ಸೋ ಅವರನ್ನು ಹರ್‌ಪ್ರೀತ್ ಬ್ರಾರ್ ಔಟ್ ಮಾಡಿದರು.
ಒಂಬತ್ತನೇ ಓವರ್‌ನ ಮೊದಲ ಎಸೆತದಲ್ಲಿ ರುಸ್ಸೋ ಸಿಕಂದರ್ ರಜಾ ಕೈಗೆ ಕ್ಯಾಚಿತ್ತು ಔಟಾದರು.
ರಿಲೆ ರುಸ್ಸೋ – 5 ರನ್, 5 ಎಸೆತಗಳು 1×4
ಡೆಲ್ಲಿ 2ನೇ ವಿಕೆಟ್ ಕಳೆದುಕೊಂಡಿದೆ
ಸ್ಫೋಟಕ ಬ್ಯಾಟರ್ ಮಿಚೆಲ್ ಮಾರ್ಷ್ ಕೇವಲ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರು
ಡೆಲ್ಲಿ 75/2
8ನೇ ಓಬರ್ನ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡ ವಾರ್ನರ್ ತಮ್ಮ ಅರ್ಧಶತಕ ಪೂರೈಸಿದರು.
ಬ್ರಾರ್ ಬೌಲ್ ಮಾಡಿದ 7ನೇ ಓವರ್‌ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ಸಾಲ್ಟ್ ನಂತರದ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು.
ಡೆಲ್ಲಿ 73/1
ಅರ್ಶ್‌ದೀಪ್ ಬೌಲ್ ಮಾಡಿದ 6ನೇ ಓವರ್‌ನ 2ನೇ ಎಸೆತವನ್ನು ಬೌಂಡರಿಗಟ್ಟಿದ ವಾರ್ನರ್, 3ನೇ ಎಸೆತವನ್ನು ಮಿಡ್ ವಿಕೆಟ್ ಕಡೆ ಸಿಕ್ಸರ್ಗಟ್ಟಿದರು
ಈ ಓವರ್ನಲ್ಲಿ 12 ರನ್ ಬಂದವು
6 ಓವರ್ ಅಂತ್ಯಕ್ಕೆ 65/0
5ನೇ ಓವರ್ನಲ್ಲೇ ಡೆಲ್ಲಿ ಅರ್ಧಶತಕ ಪೂರೈಸಿತು
ಈ ಓವರ್ನಲ್ಲಿ ವಾರ್ನರ್ 2 ಬೌಂಡರಿ ಬಾರಿಸಿದರು
5 ಓವರ್ ಅಂತ್ಯಕ್ಕೆ 53/0
ಬೌಂಡರಿಗಳಲ್ಲೇ ರನ್ ಕಲೆಹಾಕುತ್ತಿರುವ ವಾರ್ನರ್ 4ನೇ ಓವರ್ನಲ್ಲೂ 2 ಬೌಂಡರಿ ಹೊಡೆದರು.
ಈ ಓವರ್ನಲ್ಲಿ 12 ರನ್ ಬಂದವು
4 ಓವರ್ ಅಂತ್ಯಕ್ಕೆ 41/0
ಬ್ರಾರ್ ಬೌಲ್ ಮಾಡಿದ 3ನೇ ಓವರ್ನಲ್ಲಿ ವಾರ್ನರ್ 3 ಬೌಂಡರಿ ಬಾರಿಸಿದರು.
ಈ ಓವರ್ನಿಂದ 13 ರನ್ ಬಂದವು
3 ಓವರ್ ಅಂತ್ಯಕ್ಕೆ 29/0
ಕರನ್ ಬೌಲ್ ಮಾಡಿದ 2ನೇ ಓವರ್‌ನ 3ನೇ ಎಸೆತವನ್ನು ವಾರ್ನರ್ ಫೈನ್ ಲೆಗ್ ಮೇಲೆ ಬೌಂಡರಿ ಬಾರಿಸಿದರು.
ರಿಷಿ ಬೌಲ್ ಮಾಡಿದ ಮೊದಲ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ವಾರ್ನರ್ 2 ಬೌಂಡರಿ ಬಾರಿಸಿದರು.
ಪ್ರಭ್ಸಿಮ್ರಾನ್ ಚೊಚ್ಚಲ ಶತಕದ ನೆರವಿನಿಂದಾಗಿ ಪಂಜಾಬ್ 29 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ ಬಾರಿಸಿದೆ. 20ನೇ ಓವರ್ನಲ್ಲಿ ರಜಾ 1 ಸಿಕ್ಸರ್ ಕೂಡ ಬಾರಿಸಿದರು.
18ನೇ ಓವರ್ನಲ್ಲಿ ಶತಕ ಸಿಡಿಸಿದ ಪ್ರಭ್ಸಿಮ್ರಾನ್ 19ನೇ ಓವರ್‌ನ 2ನೇ ಎಸೆತದಲ್ಲಿ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಕ್ಯಾಚಿತ್ತು ಔಟಾದರು.
ಖಲೀಲ್ ಬೌಲ್ ಮಾಡಿದ 18ನೇ ಓವರ್‌ನ 3 ಮತ್ತು 4ನೇ ಎಸೆತವನ್ನು ಬೌಂಡರಿಗಟ್ಟಿದ ಪ್ರಭ್ಸಿಮ್ರಾನ್ ತಮ್ಮ ಐಪಿಎಲ್ ವೃತ್ತಿ ಜೀವನದ ಮೊದಲ ಶತಕ ಸಿಡಿಸಿದರು
ಪ್ರಭ್ಸಿಮ್ರಾನ್ ಕೇವಲ 61 ಎಸೆತಗಳಲ್ಲಿ ಈ ಶತಕ ಸಿಡಿಸಿದ್ದಾರೆ.
ಪಂಜಾಬ್ 154/5
ಕರನ್ ವಿಕೆಟ್ ಬಳಿಕ ಬಂದಿದ್ದ ಬ್ರಾರ್ ಕೂಡ ಕೇವಲ 2 ರನ್ಗಳಿಗೆ ವಿಕೆಟ್ ಒಪ್ಪಿಸಿದರು
ಎಕ್ಸ್ಟ್ರಾ ಕವರ್ನಲ್ಲಿ ಕ್ಯಾಚಿತ್ತು ಬ್ರಾರ್ ಔಟಾದರು
ಪಂಜಾಬ್ 141/5
ಇಶಾಂತ್ ಬೌಲ್ ಮಾಡಿದ 16ನೇ ಓವರ್‌ನ ಮೊದಲ ಮತ್ತು ಕೊನೆಯ ಎಸೆತದಲ್ಲಿ ಪ್ರಭ್ಸಿಮ್ರಾನ್ ಬೌಂಡರಿ ಬಾರಿಸಿದರು
ಈ ಓವರ್ನಲ್ಲಿ 12 ರನ್ ಬಂದವು.
ಪ್ರವೀಣ್ ದುಬೆ ಬೌಲ್ ಮಾಡಿದ 15ನೇ ಓವರ್ನಲ್ಲಿ ಪಂಜಾಬ್ 4ನೇ ವಿಕೆಟ್ ಪತನವಾಗಿದೆ
ಓವರ್‌ನ 4ನೇ ಎಸೆತದಲ್ಲಿ ಕರನ್ ಕ್ಯಾಚಿತ್ತು ಔಟಾದರು.
ಪಂಜಾಬ್ 117/4
ಕುಲ್ದೀಪ್ ಬೌಲ್ ಮಾಡಿದ 13ನೇ ಓವರ್‌ನ 3ನೇ ಎಸೆತವನ್ನು ಪ್ರಭ್ಸಿಮ್ರಾನ್ ಡೀಪ್ ಮಿಡ್ ವಿಕೆಟ್ನಲ್ಲಿ ಸಿಕ್ಸರ್ಗಟ್ಟಿದರು.
ಹಾಗೆಯೇ ಈ ಓವರ್ನಲ್ಲಿ ಪಂಜಾಬ್ ತಂಡದ ಶತಕ ಕೂಡ ಪೂರ್ಣಗೊಂಡಿತು.
ಪಂಜಾಬ್ 109/3
13ನೇ ಓವರ್‌ನ 3ನೇ ಎಸೆತದಲ್ಲಿ ಸಿಂಗಲ್ ಬಾರಿಸಿದ ಪ್ರಭ್ಸಿಮ್ರಾನ್ ತಮ್ಮ ಅರ್ಧಶತಕ ಪೂರೈಸಿದರು.
ಇದರೊಂದಿಗೆ ಕರನ್ ಹಾಗೂ ಪ್ರಭ್ಸಿಮ್ರಾನ್ ನಡುವೆ ಅರ್ಧಶತಕದ ಜೊತೆಯಾಟ ಕೂಡ ಪೂರ್ಣಗೊಂಡಿತು.
13 ಓವರ್ ಅಂತ್ಯಕ್ಕೆ 99/3
ಮಾರ್ಷ್ ಬೌಲ್ ಮಾಡಿದ 11ನೇ ಓವರ್‌ನ 2ಮತ್ತು 3ನೇ ಎಸೆತದಲ್ಲಿ ಪ್ರಭ್ಸಿಮ್ರಾನ್ ಸಿಕ್ಸರ್ ಸಿಡಿಸಿದರು
ಮೊದಲನೇಯದ್ದು ಡೀಪ್ ಸ್ಕ್ವೇರ್ ಲೆಗ್ನಲ್ಲಿ ಬಂದರೆ 2ನೇಯದ್ದು ಲಾಂಗ್ ಆನ್ನಲ್ಲಿ ಬಂತು.
ಆ ಬಳಿಕ ಬೌಂಡರಿ ಕೂಡ ಬಂತು.
ಪಂಜಾಬ್ ಇನ್ನಿಂಗ್ಸ್ನ 10 ಓವರ್ ಮುಗಿದಿದೆ
ಇದರಲ್ಲಿ ಪಂಜಾಬ್ 3 ವಿಕೆಟ್ ಕಳೆದುಕೊಂಡು 66 ರನ್ ಬಾರಿಸಿದೆ.
ಪ್ರವೀಣ್ ದುಬೆ ಬೌಲ್ ಮಾಡಿದ 9ನೇ ಓವರ್‌ನ 2ನೇ ಎಸೆತವನ್ನು ಕರನ್ ಎಕ್ಸ್ಟ್ರಾ ಕವರ್ನಲ್ಲಿ ಬೌಂಡರಿ ಬಾರಿಸಿದರು.
7ನೇ ಓವರ್‌ನ 5ನೇ ಎಸೆತದಲ್ಲಿ ಸಿಂಗಲ್ ಬಾರಿಸಿದ ಪ್ರಭ್ಸಿಮ್ರಾನ್ ಪಂಜಾಬ್ ತಂಡದ ಮೊತ್ತವನ್ನು 50ರ ಗಡಿ ದಾಟಿಸಿದರು.
ಜಿತೇಶ್ ಶರ್ಮಾ ಔಟಾಗಿದ್ದಾರೆ. ಇದರೊಂದಿಗೆ ಪಂಜಾಬ್ ಮೂರನೇ ವಿಕೆಟ್ ಕಳೆದುಕೊಂಡಿದೆ. ಅಕ್ಷರ್ ಪಟೇಲ್ ಜಿತೇಶ್ರನ್ನು ಬೌಲ್ಡ್ ಮಾಡಿದರು. ಆರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅವರ ವಿಕೆಟ್ ಪತನವಾಯಿತು.
ಜಿತೇಶ್ ಶರ್ಮಾ-5 ರನ್, 5 ಎಸೆತಗಳು 1×4
ಅಕ್ಷರ್ ಬೌಲ್ ಮಾಡಿದ 6ನೇ ಓವರ್‌ನ ಮೊದಲ ಎಸೆತದಲ್ಲೇ ಪ್ರಭ್ಸಿಮ್ರಾನ್ ಬ್ಯಾಕ್ವರ್ಡ್ ಪಾಯಿಂಟ್ನಲ್ಲಿ ಸಿಕ್ಸರ್ ಬಾರಿಸಿದರು.
5ನೇ ಓವರ್ ಮೊದಲ ಎಸೆತದಲ್ಲಿ ಇಶಾಂತ್ ಶರ್ಮಾ ಲಿವಿಂಗ್‌ಸ್ಟನ್ ವಿಕೆಟ್ ಉರುಳಿಸಿದ್ದಾರೆ.
ಪಂಜಾಬ್ 32/2
ಖಲೀಲ್ ಬೌಲ್ ಮಾಡಿದ 3ನೇ ಓವರ್‌ನ 3ನೇ ಎಸೆತದಲ್ಲಿ ಪ್ರಭ್ಸಿಮ್ರಾನ್ ಶಾರ್ಟ್ ಥರ್ಡ್ಮ್ಯಾನ್ನಲ್ಲಿ ಬೌಂಡರಿ ಬಾರಿಸಿದರು
ಹಾಗೆಯೇ 5ನೇ ಎಸೆತದಲ್ಲೂ ಮತ್ತೊಂದು ಬೌಂಡರಿ ಬಂತು.
ಪಂಜಾಬ್ 23/1
ನಾಯಕ ಧವನ್ 2ನೇ ಓವರ್‌ನ ಎರಡನೇ ಎಸೆತದಲ್ಲಿ ಔಟಾಗಿದ್ದಾರೆ.
ಇಶಾಂತ್ ಬೌಲ್ ಮಾಡಿದ ಈ ಎಸೆತದಲ್ಲಿ ಧವನ್ ಡೀಪ್ ಸ್ಕ್ವೇರ್ ಲೆಗ್ನಲ್ಲಿ ಕ್ಯಾಚಿತ್ತು ಔಟಾದರು.
ಪಂಜಾಬ್ ಮತ್ತು ದೆಹಲಿ ನಡುವಿನ ಪಂದ್ಯ ಆರಂಭವಾಗಿದೆ. ಪಂಜಾಬ್ ಪರ ಇನಿಂಗ್ಸ್ ಆರಂಭಿಸಲು ನಾಯಕ ಶಿಖರ್ ಧವನ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಬಂದಿದ್ದಾರೆ. ದೆಹಲಿ ಪರ ಖಲೀಲ್ ಅಹ್ಮದ್ ಮೊದಲ ಓವರ್ ಎಸೆಯುತ್ತಿದ್ದಾರೆ.
ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್, ಮಿಚೆಲ್ ಮಾರ್ಷ್, ರಿಲೆ ರುಸ್ಸೋ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಪ್ರವೀಣ್ ದುಬೆ, ಕುಲದೀಪ್ ಯಾದವ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್
ಶಿಖರ್ ಧವನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟನ್, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಸಿಕಂದರ್ ರಜಾ, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್
ಪೂರನ್ ಬಂದ ಬಳಿಕ ಲಕ್ನೋ ಇನ್ನಿಂಗ್ಸ್ನ ಗತಿಯೇ ಬದಲಾಯಿತು.
ಅಂತಿಮವಾಗಿ 20ನೇ ಓವರ್‌ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಮಂಕಾಡ್ ಲಕ್ನೋಗೆ ಗೆಲುವಿನ ಹಾರ ತೋಡಿಸಿದರು.
ಟಾಸ್ ಗೆದ್ದ ಡೆಲ್ಲಿ ನಾಯಕ ವಾರ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:03 pm, Sat, 13 May 23